ಈ ದಿನ ಸಂಪಾದಕೀಯ | ಬಡವರನ್ನು ಸುಟ್ಟ ಬೆಲೆಯೇರಿಕೆ ಬಿಸಿ ಸರ್ಕಾರಗಳನ್ನೂ ಸುಟ್ಟೀತು

Date:

ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆ ನೀಡಿ, ಟಿಕೆಟ್‌ ದರ ಹೆಚ್ಚಿಸುವುದು ಪುರುಷರ ಸಿಟ್ಟಿಗೆ ಕಾರಣವಾಗಿದೆ. ಇನ್ನೂರು ಯೂನಿಟ್‌ ಉಚಿತ ವಿದ್ಯುತ್‌ ನೀಡಿ ವಿದ್ಯುತ್‌ ದರ ಹೆಚ್ಚಿಸುವುದು, ರೈತರಿಗೆ ಪ್ರೋತ್ಸಾಹ ಧನ ಎಂದು ಹಾಲಿನ ದರ ಪದೇ ಪದೇ ಹೆಚ್ಚಿಸುವುದು, ʼಒಂದು ಕಡೆಯಿಂದ ಕೊಟ್ಟು ಮತ್ತೊಂದು ಕಡೆಯಿಂದ ಕಿತ್ತುಕೊಳ್ಳುವ ಸರ್ಕಾರʼ ಎಂಬ ಆರೋಪಕ್ಕೆ ಕಾಂಗ್ರೆಸ್‌ ಸರ್ಕಾರ ತುತ್ತಾಗಿದೆ. ದರ ಏರಿಕೆ ಅನಿವಾರ್ಯ. ಆದರೆ, ಅದನ್ನು ವಿವೇಚನೆಯಿಂದ ಮಾಡಬೇಕಿದೆ.

- Advertisement -

ಈ ವರ್ಷದ ಮಾರ್ಚ್‌ನಲ್ಲಿ ಇರಾನ್ ಮೇಲೆ ಅಮೆರಿಕ- ಇಸ್ರೇಲ್ ಅನ್ಯಾಯವಾಗಿ ಸಾರಿದ ಯುದ್ಧದ ಕಾರಣದಿಂದ ದೇಶದಲ್ಲಿ ಪೆಟ್ರೋಲ್‌, ಡೀಸೆಲ್‌, ಆಟೋ ಗ್ಯಾಸ್‌, ಸಿಲಿಂಡರ್‌ ದರ ಏರಿಸಲಾಯಿತು. ಇಂಧನ ದರ ಏರಿಕೆಯ ಬೆನ್ನಲ್ಲೇ ಬೇಳೆ ಕಾಳು, ಅಕ್ಕಿ, ಸಕ್ಕರೆ ಬೆಲೆಯೂ ಏರಿದೆ. ಮೋದಿ ಅವರು 2013ರಲ್ಲಿ ಯುಪಿಎ ಸರ್ಕಾರದ ಬೆಲೆ ಏರಿಕೆಯ ವಿರುದ್ಧ ಎಡೆಬಿಡದೆ ಉದ್ದುದ್ದ ಪ್ರಚಾರ ಭಾಷಣ ಮಾಡಿ ಅಧಿಕಾರಕ್ಕೆ ಬಂದವರು. ದಿನ ಬಳಕೆಯ ವಸ್ತುಗಳ ಬೆಲೆ ಇಳಿಕೆಯಾಗಬೇಕಿದ್ರೆ, ಬಿಜೆಪಿಗೆ ಮತ ಹಾಕಿ ಎಂದು ಪ್ರಚಾರ ಸಭೆಗಳಲ್ಲಿ ಹೇಳಿದ್ದರು. ನಂತರ ಅಧಿಕಾರಕ್ಕೆ ಬಂದ ಮೋದಿ ಸರ್ಕಾರ ಯಾವ ಬೆಲೆಯನ್ನೂ ಇಳಿಸಲಿಲ್ಲ. ಕಡೆಗೆ ಅವರು ಬೆಲೆಯೇರಿಕೆ ಎಂಬ ಪದ ಬಳಕೆಯನ್ನೇ ನಿಲ್ಲಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕೊಪ್ಪಳ | 3 ವರ್ಷದಲ್ಲಿ 35,302 ಜಾನುವಾರುಗಳ ಸಾವು;...

ರೋಗಬಾಧೆ, ಅಪಘಾತ ಹಾಗೂ ವಿವಿಧ ಆಕಸ್ಮಿಕ ಕಾರಣಗಳಿಂದ ಕೊಪ್ಪಳ ಜಿಲ್ಲೆಯಲ್ಲಿ ಜಾನುವಾರುಗಳ ಸಾವಿನ ಪ್ರಕರಣಗಳು ಹೆಚ್ಚುತ್ತಿದ್ದು, ಜಾನುವಾರು ಕಳೆದುಕೊಂಡ ರೈತರು ಒಂದೆಡೆ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರೆ, ಮತ್ತೊಂದೆಡೆ ಸರ್ಕಾರದ ಪರಿಹಾರಕ್ಕಾಗಿ ಕಚೇರಿಗಳಿಗೆ ಅಲೆದಾಡುವಂತಾಗಿದೆ. ಕೊಪ್ಪಳ...

ಕೊಪ್ಪಳ | 8 ತಿಂಗಳಿನಿಂದ ಕಿಟ್‌ ವಿತರಣೆಯಿಲ್ಲ, ಮಲಗಲು...

ಕೊಪ್ಪಳ ನಗರದ ಡಾ.ಬಿ ಆರ್‌ ಅಂಬೇಡ್ಕರ್ ಸರಕಾರಿ ಮೆಟ್ರಿಕ್‌ ನಂತರದ ಬಾಲಕರ ವೃತ್ತಿಪರ ವಸತಿ (ಪರಿಶಿಷ್ಟ ಜಾತಿ) ನಿಲಯದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯಿಂದ ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಕಳೆದ ಸುಮಾರು...

ನುಡಿನಮನ | ಕೆವಿಎನ್: ಕನ್ನಡದ ಘನವಿವೇಕ

ಪ್ರಭುತ್ವದ ಭಾಷೆಗಳಾದ ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಗಳು ವರ್ತಿಸುವ ಭಿನ್ನ ಬಗೆಗಳನ್ನು ಕೆವಿಎನ್ ಅವರು ವರ್ಗ ನೆಲೆಯ ಹಿನ್ನೆಲೆಯಲ್ಲಿ ನೋಡುತ್ತ ನೀಡುವ ಒಳನೋಟಗಳು ಭಾಷೆ ಮತ್ತು ಸಮಾಜದ ಸಂಬಂಧವನ್ನು ಅರ್ಥ ಮಾಡಿಕೊಳ್ಳಲು ಬೆಳಕಿಂಡಿಯಾಗಿವೆ....

ಅವರ ಮೊದಲ ಅವಧಿ ಮುಗಿದು ಎರಡನೇ ಅವಧಿಗೆ ಕಾಲಿಡುತ್ತಿದ್ದಂತೆ ಕೋವಿಡ್‌ ಕಾರಣ ಹೇಳಿ ಅಡುಗೆ ಅನಿಲ ಸಿಲಿಂಡರ್‌ ದರ ಸಾವಿರ ದಾಟಿಸಿದ್ದರು. ಪೆಟ್ರೋಲ್‌ ನೂರರ ಗಡಿ ದಾಟಿತ್ತು. ಡೀಸೆಲ್‌ ಮೊದಲ ಬಾರಿಗೆ ಎಂಬತ್ತರ ಸಮೀಪ ಬಂದಿತ್ತು. ಅಡುಗೆ ಎಣ್ಣೆ ನೂರೈವತ್ತು-ಇನ್ನೂರು ಗಡಿ ದಾಟಿತ್ತು. ಬೇಳೆ ಕಾಳು, ರಸಗೊಬ್ಬರ, ಕೀಟನಾಶಕ ಎಲ್ಲದರ ದರವನ್ನೂ ಮೋದಿ ಸರ್ಕಾರ ಏರಿಸಿ ಜನರಿಗೆ ಬೆಲೆಯೇರಿಕೆಯ ಬಿಸಿ ಮುಟ್ಟಿಸಿತ್ತು. ಮೋದಿ ಎಷ್ಟೇ ಬೆಲೆ ಏರಿಸಿದರೂ ಅವರ ಬೆಂಬಲಿಗರು ಅದು ದೇಶದ ಅಭಿವೃದ್ಧಿಗಾಗಿ ಎಂದು ಜನರ ಕಣ್ಣಿಗೆ ಮಂಕುಬೂದಿ ಎರಚುತ್ತಾ ಬಂದ್ರು. ಕೆಲವು ಅಂಧ ಭಕ್ತರು “ಪೆಟ್ರೋಲ್‌ ದರ ಸಾವಿರ ರೂಪಾಯಿ ಆದರೂ ನನ್ನ ವೋಟು ಮೋದಿಜೀಗೆ, ಬಿಜೆಪಿಗೆ” ಎಂದರು. ಈಗ ಯುದ್ಧ ತಣ್ಣಗಾಗಿದೆ ಅಕ್ಕಿ ಬೆಲೆ ನೂರರ ಸಮೀಪಕ್ಕೆ ಬಂದಿದೆ, ಸಕ್ಕರೆ ಕೇಜಿಗೆ 65 ರೂಪಾಯಿಯವರೆಗೆ ಏರಿಕೆಯಾಗಿದೆ. ಪ್ರತಿಯೊಂದು ವಸ್ತುವಿನ ಮೇಲೂ ಜಿಎಸ್‌ಟಿ ಹಾಕಿ ಕೇಂದ್ರ ಸರ್ಕಾರ ಬೊಕ್ಕಸ ತುಂಬಿಸಿಕೊಳ್ಳುತ್ತಿದೆ.

ಇತ್ತ ರಾಜ್ಯದಲ್ಲಿ 2023ರಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪಂಚ ಗ್ಯಾರಂಟಿಯಾದ ಶಕ್ತಿ, ಗೃಹಲಕ್ಷ್ಮಿ, ಗೃಹಜ್ಯೋತಿ, ಹತ್ತು ಕೆಜಿ ಅಕ್ಕಿ, ಯುವನಿಧಿ ಜಾರಿಗೆ ಕಾಂಗ್ರೆಸ್‌ಗಿಂತ ವಿಪಕ್ಷ ಬಿಜೆಪಿ ಒತ್ತಡ ಹೆಚ್ಚಾಗಿತ್ತು. ಅಧಿಕಾರಕ್ಕೆ ಬಂದ ಒಂದೇ ವಾರದಲ್ಲಿ ಶಕ್ತಿ ಯೋಜನೆಯಡಿ ರಾಜ್ಯದ ಎಲ್ಲ ಸ್ತರದ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣದ ಜಾರಿಯಾಯಿತು. ಇಡೀ ರಾಜ್ಯದಲ್ಲಿ ಮಹಿಳೆಯರ ಬಸ್‌ ಪ್ರಯಾಣ ಹೆಚ್ಚಾಯಿತು. ಶಿಕ್ಷಣ, ಉದ್ಯೋಗ ಎಂದು ಹೊರ ಬರುವ ಮಹಿಳೆಯರ ಪ್ರಮಾಣ ಹೆಚ್ಚಾಯಿತು. ಮಹಿಳಾ ಸಬಲೀಕರಣಕ್ಕೆ ಇದು ದೊಡ್ಡ ಕೊಡುಗೆಯಾಯಿತು. ಗೃಹಲಕ್ಷ್ಮಿ ಯೋಜನೆಯಡಿ ಬಿಪಿಎಲ್‌/ಎಪಿಎಲ್‌ ಕಾರ್ಡುದಾರರಿಗೆ ಮಾಸಿಕ ಎರಡು ಸಾವಿರ ಹಣ ನೀಡುವ ಯೋಜನೆ ಕುಂಟುತ್ತ ಎಡವುತ್ತಾ ಸಾಗುತ್ತಿದೆ. ಇನ್ನೂರು ಯೂನಿಟ್‌ ವಿದ್ಯುತ್‌ ನೀಡುವ ಯೋಜನೆಯೂ ಬಡ, ಕೂಲಿ ಕಾರ್ಮಿಕರ ತಿಂಗಳ ಹೊರೆಯನ್ನು ಕಡಿಮೆ ಮಾಡಿದೆ. ಆದರೆ, ಕೇಂದ್ರದ ಜೊತೆಗೆ ರಾಜ್ಯ ಸರ್ಕಾರವೂ ನಿರಂತರವಾಗಿ ಬೆಲೆಯೇರಿಕೆ ಮಾಡುತ್ತಿರುವುದು ಬಡವರು ಮತ್ತು ಮಧ್ಯಮ ವರ್ಗಗಳ ಆರ್ಥಿಕ ಹೊರೆಯನ್ನು ಹೆಚ್ಚಿಸುತ್ತಿದೆ. ಜೀವನ ಮಟ್ಟ ಏರಿಕೆ ಕಾಣುವ ಬದಲು ಅದು ಕುಸಿಯುವಂತಾಗಿರುವುದು ಸತ್ಯ.

ನವೆಂಬರ್‌ ತಿಂಗಳ ಆರಂಭದಲ್ಲಿ ರಾಜ್ಯದ ಜನರಿಗೆ ಬೆಲೆಯೇರಿಕೆ ಬಿಸಿ ತಟ್ಟಿದೆ. ನವೆಂಬರ್‌ ಒಂದರಿಂದ ಹಾಲಿನ ದರದಲ್ಲಿ ಎಂಟು ರೂಪಾಯಿ ಹೆಚ್ಚಳ ಮಾಡಿದ ಸರ್ಕಾರ ಇದೀಗ ಸಾರಿಗೆ ಬಸ್‌ಗಳ ದರವನ್ನು ಹೆಚ್ಚಿಸಿ ಜನರ ಆಕ್ರೋಶಕ್ಕೆ ತುತ್ತಾಗಿದೆ.
ನವೆಂಬರ್‌ 5ರಂದು ಬಿಎಂಟಿಸಿ ಟಿಕೆಟ್‌ ದರದಲ್ಲಿ ಶೇ 35ರಷ್ಟು, ಕೆಎಸ್‌ಆರ್‌ಟಿಸಿ ಸಹಿತ ಉಳಿದ ನಿಗಮಗಳಲ್ಲಿ ಶೇ 25ರಷ್ಟು ದರ ಏರಿಕೆ ಮಾಡಲಾಗಿದೆ. ಕಾಲಕಾಲಕ್ಕೆ ಎಲ್ಲ ಸರ್ಕಾರಗಳೂ ಬೆಲೆ ಏರಿಕೆ ಮಾಡುತ್ತಾ ಬಂದಿವೆ. ನಿಗಮಗಳು ನಷ್ಟದಲ್ಲಿವೆ. ಇಂತಹ ಸಮಯದಲ್ಲಿ ಬೆಲೆ ಸಹಜ ಪ್ರಕ್ರಿಯೆ ಎಂದು ಸರ್ಕಾರದ ಮಂತ್ರಿಗಳು ಹೇಳುತ್ತಾರೆ. ಆದರೆ, ಒಂದೇ ಬಾರಿ ಈ ಮಟ್ಟಿನ ಏರಿಕೆ ತೀವ್ರ ಟೀಕೆಗೆ ಗುರಿಯಾಗಿದೆ.

ಯಾವ ಸರ್ಕಾರವೇ ಆಗಲಿ ಬಡವರ ಬದುಕನ್ನು ಹೈರಾಣವಾಗಿಸುವ ದಿನ ಬಳಕೆಯ ವಸ್ತುಗಳ ಬೆಲೆ ಏರಿಕೆ, ಬಡವರ ಏಕೈಕ ಸಾರಿಗೆ ಬಸ್‌ ಟಿಕೆಟ್‌ ದರ ವಿಪರೀತ ಏರಿಕೆ ಮಾಡುವುದು ಸಮರ್ಥನೀಯವಲ್ಲ. ರಾಜ್ಯದಲ್ಲಿ ಶಕ್ತಿ ಯೋಜನೆಯಿಂದಾಗಿ ಮಹಿಳೆಯರು ಶಿಕ್ಷಣ, ಉದ್ಯೋಗ ಸೇರಿದಂತೆ ಸ್ವತಂತ್ರವಾಗಿ ಸಂಚರಿಸಲು ಉಚಿತ ಪ್ರಯಾಣ ಸೌಲಭ್ಯ ಒದಗಿಸಿರುವುದು ದೇಶಕ್ಕೇ ಮಾದರಿ. ಇತ್ತೀಚೆಗೆ ಕೇರಳದಲ್ಲೂ ಈ ಯೋಜನೆಯನ್ನು ಭಾಗಶಃ ತಿದ್ದುಪಡಿಯೊಂದಿಗೆ ಜಾರಿಗೆ ತರಲಾಗಿದೆ. ಇಂತಹ ಯೋಜನೆಗಳ ಬಗ್ಗೆ ಮೂಗು ಮುರಿಯುವವರು ಇದ್ದೇ ಇರುತ್ತಾರೆ. ರಾಜ್ಯದಲ್ಲಿ ಬಸ್‌ ಟಿಕೆಟ್‌ ದರ ಏರಿಸಿದ ತಕ್ಷಣ ಅವರ ಸಿಟ್ಟು ಮಹಿಳೆಯರಿಗೆ ನೀಡಿದ ಉಚಿತ ಯೋಜನೆಗಳ ಕಡೆಗೆ ತಿರುಗುತ್ತದೆ. ಅದು ಪುರುಷಹಂಕಾರ ಮತ್ತು ಮಹಿಳೆಯರೆಂದರೆ ಮನೆಯಲ್ಲಿ ಬಿದ್ದಿರಬೇಕು, ಗಂಡನ ಅಣತಿಯಂತೆ ನಡೆದುಕೊಳ್ಳಬೇಕು ಎಂಬ ʼಮನುವಾದಿʼಸ್ಥಿತಿಯ ಮುಂದುವರಿಕೆ. ಅದಕ್ಕೆ ಈಗ ಆಹಾರವಾಗಿದೆ ಸರ್ಕಾರದ ಎಡವಟ್ಟು.

ರಾಜ್ಯದಲ್ಲಿ ಇನ್ನೂರು ಯೂನಿಟ್‌ವರೆಗೆ ಉಚಿತ ವಿದ್ಯುತ್‌ ನೀಡಲಾಗುತ್ತಿದೆ. ಅದೇ ಸಮಯದಲ್ಲಿ ವಿದ್ಯುತ್‌ ದರ ಸರ್ಕಾರ ಏರಿಸಿತ್ತು. ಒಂದು ಕಡೆ ಉಚಿತ ಕೊಟ್ಟು, ಮತ್ತೊಂದು ಕಡೆ ದುಬಾರಿ ಶುಲ್ಕ ವಸೂಲಿಗಿಳಿದಿದೆ ಸರ್ಕಾರ ಎಂಬ ಆರೋಪ ಸ್ವಾಭಾವಿಕ. ಹಾಗೆ ನೋಡಿದರೆ ಬಡವರಿಗೆ ಯಾವುದೇ ಉಚಿತ ಯೋಜನೆ ನೀಡದಿದ್ದರೂ ಮೋದಿಯವರ ಒಕ್ಕೂಟ ಸರ್ಕಾರ ಎಲ್ಲ ವಸ್ತುಗಳ ದರ ಏರಿಕೆ ಮಾಡಿ ಬೊಕ್ಕಸ ತುಂಬಿಸಿಕೊಳ್ಳುತ್ತಿದೆ. ಸಣ್ಣದೊಂದು ಸೂಜಿ, ದಾರ, ಪೆನ್ಸಿಲ್‌, ಹಾಲು, ಮೊಸರು ಯಾವೊಂದು ವಸ್ತುವೂ ಜಿಎಸ್‌ಟಿಯಿಂದ ಹೊರತಾಗಿಲ್ಲ. ರೈತರು ಬೆಳೆ ಬೆಳೆಯಲು ಬಳಸುವ ಎಲ್ಲಾ ಪರಿಕರ, ಬೀಜ, ಗೊಬ್ಬರ, ಕೀಟನಾಶಕಗಳ ಬೆಲೆ ಹತ್ತು ವರ್ಷಗಳಲ್ಲಿ ದುಪ್ಪಟ್ಟಾಗಿದೆ.

ವಿಪಕ್ಷದಲ್ಲಿರುವ ಕಾರಣ ಬಿಜೆಪಿ ಮತ್ತು ಜೆಡಿಎಸ್‌ನವರು ರಾಜ್ಯದಲ್ಲಿ ಬೆಲೆಯೇರಿಕೆಯಾದಾಗ ಭಾರೀ ಗದ್ದಲ ಸೃಷ್ಟಿಸಿ ರಸ್ತೆಗಿಳಿದು ಪ್ರತಿಭಟಿಸುತ್ತಾರೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರು ತಲೆ ಮೇಲೆ ಹಾಲಿನ ಕ್ಯಾನು ಹೊತ್ತು ಪ್ರತಿಭಟಿಸಿದ್ದರು. ಪ್ರತಿ ಮನೆಯಲ್ಲೂ ಬಳಸುವ ಸಿಲಿಂಡರ್‌ ದರ ಐವತ್ತು, ನೂರು ರೂಪಾಯಿಯಂತೆ ಏರಿಕೆಯಾದಾಗ ಅವರು ಕೈಗೆ ಸಿಗಲಿಲ್ಲ. ಕನಿಷ್ಠ ಜಿಎಸ್‌ಟಿಯಲ್ಲಿ ಸಿಗಬೇಕಿರುವ ನ್ಯಾಯಯುತ ಪಾಲು ಕೊಡುವಂತೆ ನಿರ್ಮಲಾ ಸೀತಾರಾಮನ್‌ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ ಉದಾಹರಣೆ ಇಲ್ಲ. ಒಕ್ಕೂಟ ಸರ್ಕಾರ ಎಲ್ಲ ರಾಜ್ಯಗಳಿಗೂ ನ್ಯಾಯಯುತ ಪಾಲನ್ನು ಕೊಡಬೇಕು. ಅದರಲ್ಲೂ ಮೋದಿ ಸರ್ಕಾರ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಲೇ ಬಂದಿದೆ,. ಬರ ಪರಿಹಾರ, ಪ್ರವಾಹ ಪರಿಹಾರ ನೀಡುವಲ್ಲಿಯೂ ಕರ್ನಾಟಕವನ್ನು ನಿರ್ಲಕ್ಷಿಸುತ್ತಾ ಬರಲಾಗುತ್ತಿದೆ. ಅದು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗಲೂ ಪ್ರಾಮಾಣಿಕವಾಗಿ ನಡೆದುಕೊಂಡಿಲ್ಲ ಮೋದಿ ಸರ್ಕಾರ. ಬಿಜೆಪಿ ಮತ್ತು ಅವರ ಮಿತ್ರ ಪಕ್ಷಗಳಿಗೆ ಬೆಲೆಯೇರಿಕೆಯ ವಿರುದ್ಧ ಮಾತನಾಡುವ ನೈತಿಕತೆ ಇಲ್ಲ. ಆದರೆ, ಈ ಬರಗಾಲದಲ್ಲಿ ರಾಜ್ಯಸರ್ಕಾರ ಒಮ್ಮೆಗೇ ಈ ಪ್ರಮಾಣದ ಬಸ್‌ ಟಿಕೆಟ್‌ ದರ ಏರಿಕೆ ಮಾಡಿರುವುದು ಸರಿಯಲ್ಲ.

ಸರ್ಕಾರದ ಬೊಕ್ಕಸದಲ್ಲಿ ಹಣ ಇಲ್ಲ ಎಂದು ಸರ್ಕಾರದ ಖರ್ಚುಗಳಲ್ಲಿ ಕಡಿತ ಮಾಡಲಾಗಿದೆಯೇ? ಶಾಸಕರ ವೇತನ, ಭತ್ಯೆಯನ್ನು ಯಾವುದೇ ವಿರೋಧ ಇಲ್ಲದೇ ಎಲ್ಲಾ ಪಕ್ಷದವರು ಬೆಂಬಲಿಸಿ ಹೆಚ್ಚಿಸಿಕೊಳ್ಳುತ್ತಾರೆ. ಶಾಸಕರು, ಸಂಸದರು, ಮಂತ್ರಿಗಳ ಮನೆ ಭತ್ಯೆ, ಕಚೇರಿ ಭತ್ಯೆ,ಕಾರು, ಕಾರಿಗೆ ಪೆಟ್ರೋಲ್‌, ಡ್ರೈವರ್‌ ಸಂಬಳ ಎಲ್ಲವನ್ನೂ ಸಾರ್ವಜನಿಕರ ತೆರಿಗೆ ಹಣದಲ್ಲೇ ಭರಿಸಲಾಗುತ್ತದೆ. ಫೋನ್‌ ಬಿಲ್‌, ಸಹಾಯಕರ ವೇತನ, ಔಷಧಿ ಎಲ್ಲವೂ ಸರ್ಕಾರ ಕೊಡುತ್ತದೆ. ಹಾಗೆ ನೋಡಿದರೆ ದೇಶದಲ್ಲಿ ಅತಿದೊಡ್ಡ ಬಿಟ್ಟಿಭಾಗ್ಯದ ಫಲಾನುಭವಿಗಳು ರಾಜರಾರಣಿಗಳು. ಬರ ಇದೆ, ಅಭಿವೃದ್ಧಿಗೆ ದುಡ್ಡಿಲ್ಲ ಎಂದು ಜನಪ್ರತಿನಿಧಿಗಳ ಈ ಯಾವ ಸವಲತ್ತುಗಳಿಗೂ ಕುತ್ತು ಬರುವುದಿಲ್ಲ. ಬಡವರ ಮೇಲೆ ಮಾತ್ರ ಬೆಲೆ ಏರಿಕೆಯ ಬಿಸಿ ತಟ್ಟುತ್ತದೆ. ಇದನ್ನು ಸರ್ಕಾರಗಳು ಅರ್ಥ ಮಾಡಿಕೊಳ್ಳಬೇಕು. ಜನರ ತೆರಿಗೆ ಹಣದಲ್ಲಿ ಐಷಾರಾಮಿ ಬದುಕು ನಡೆಸುತ್ತಿರುವ ಅಧಿಕಾರಸ್ಥರು ಬಡವರ ಬದುಕಿನ ಬಗ್ಗೆಯೂ ಯೋಚಿಸಬೇಕಿದೆ.

ಚುನಾವಣೆ ಬಂದಾಗ ಬಣ್ಣ ಬಣ್ಣದ ಮಾತಿಗೆ ಮರುಳಾಗಿ, ಆಮಿಷಗಳಿಗೆ ಮತ ಮಾರಿಕೊಳ್ಳುವ ಜನ ಪ್ರಬುದ್ಧರಾಗಬೇಕಿದೆ. ಸರ್ಕಾರಗಳು ಕಲ್ಯಾಣ ಯೋಜನೆಗಳನ್ನು ಆರ್ಥಿಕ ಹೊರೆಯಾಗದ ರೀತಿಯಲ್ಲಿ ನಿಭಾಯಿಸುವುದನ್ನು ಕಲಿಯಬೇಕಿದೆ

+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗಲಕೋಟೆ | ಕಬ್ಬು ತೂಕ ಮೋಸಕ್ಕೆ ಬ್ರೇಕ್; ಜಿಲ್ಲೆಯ 9 ಸಕ್ಕರೆ ಕಾರ್ಖಾನೆಗಳ ತಪಾಸಣೆ

ಕಬ್ಬು ಅರೆಯುವ ಹಂಗಾಮು ಆರಂಭವಾಗಿರುವ ಬೆನ್ನಲ್ಲೇ ಕಬ್ಬು ಬೆಳೆಗಾರರಿಗೆ ತೂಕದಲ್ಲಿ ಅನ್ಯಾಯವಾಗದಂತೆ...

ಬೀದರ್‌ | ಪ್ರಭುರಾವ ಕಂಬಳಿವಾಲೆ ಪ್ರತಿಷ್ಠಾನದಿಂದ ಸಮ್ಮೇಳನ ಸರ್ವಾಧ್ಯಕ್ಷರಿಗೆ ಸನ್ಮಾನ

ನವೆಂಬರ್ 14 ಮತ್ತು 15ರಂದು ನಗರದ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ನಡೆಯಲಿರುವ...

2013ರ ಅತ್ಯಾಚಾರ ಪ್ರಕರಣ: ಪತ್ರಕರ್ತ ತರುಣ್ ತೇಜ್‌ಪಾಲ್‌ ಶಿಕ್ಷೆ ಅಮಾನತಿಗೆ ಸುಪ್ರೀಂ ಕೋರ್ಟ್ ನಕಾರ

2013ರಲ್ಲಿ ಕಿರಿಯ ಸಹೋದ್ಯೋಗಿ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ, 'ತೆಹಲ್ಕಾ'...

ಭಾಲ್ಕಿ | ದಾಸೋಹ ಅಹಂಕಾರವಿಲ್ಲದ ಸಮರ್ಪಣಾ ಭಾವದ ಪ್ರತೀಕ: ಬಸವಲಿಂಗ ಪಟ್ಟದ್ದೇವರು

ದಾಸೋಹ ಎಂಬುದು ಶರಣ ಸಂಸ್ಕೃತಿ ಹಾಗೂ ಭಾರತೀಯ ಆಧ್ಯಾತ್ಮಿಕ ಪರಂಪರೆಯ ಅತ್ಯಂತ...