ಬೀದರ್‌ | ಡಿ.3ರಂದು ಕನೇರಿ ಸ್ವಾಮೀಜಿ ವಿರುದ್ಧ ಬೃಹತ್ ಪ್ರತಿಭಟನೆ

Date:

ವಚನ ಸಾಹಿತ್ಯವನ್ನು ತಿರುಚಿ ವ್ಯಾಖ್ಯಾನಿಸುವುದು, ಲಿಂಗಾಯತ ಮಠಾಧೀಶರ ಕುರಿತು ಅವಹೇಳನಕಾರಿ ಹೇಳಿಕೆ ನೀಡುವುದು ಹಾಗೂ ಭಾರತದ ಸಂವಿಧಾನದ ಬಗ್ಗೆ ವಿವಾದಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿರುವ ಕಾಡಸಿದ್ದೇಶ್ವರ ಕನೇರಿ ಸ್ವಾಮೀಜಿ ವಿರುದ್ಧ ಡಿಸೆಂಬರ್ 3ರಂದು ಬೀದರ್ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ.

- Advertisement -

ಬೀದರ್ ನಗರದ ಕರ್ನಾಟಕ ಸಾಹಿತ್ಯ ಸಂಘದಲ್ಲಿ ಮಂಗಳವಾರ ಜಾತ್ಯತೀತ ನಾಗರಿಕರ ವೇದಿಕೆಯ ಸಹಯೋಗದಲ್ಲಿ ಹಿರಿಯರಾದ ವೈಜನಾಥ ಕಮಠಾಣೆ ಅವರ ಅಧ್ಯಕ್ಷತೆಯಲ್ಲಿ ನಡೆದ ಖಂಡನಾ ಸಭೆಯಲ್ಲಿ ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಭಾಗವಹಿಸಿ ಈ ನಿರ್ಣಯ ಕೈಗೊಂಡರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪಂಜಾಬ್ ಚುನಾವಣೆ | 6 ವರ್ಷಗಳ ಬಳಿಕ ಮತ್ತೆ...

2020ರ ಐತಿಹಾಸಿಕ ರೈತ ಹೋರಾಟದ ವೇಳೆ ಮುರಿದುಬಿದ್ದಿದ್ದ ಶಿರೋಮಣಿ ಅಕಾಲಿ ದಳ (SAD) ಮತ್ತು ಬಿಜೆಪಿ  ಮೈತ್ರಿ ಆರು ವರ್ಷಗಳ ಬಳಿಕ ಮತ್ತೆ ಜೀವ ಪಡೆದುಕೊಂಡಿದೆ. 2027ರ ಪಂಜಾಬ್ ವಿಧಾನಸಭಾ ಚುನಾವಣೆಗೆ ಮುನ್ನ...

ರೇಣುಕಾಸ್ವಾಮಿ ಕೊಲೆ ಪ್ರಕರಣ: ಸಾಕ್ಷಿಗಳು ಉಲ್ಟಾ ಹೊಡೆದ ಮಾತ್ರಕ್ಕೆ...

ಪಟ್ಟಣಗೆರೆ ಶೆಡ್‌ನಲ್ಲಿದ್ದ ನಾಲ್ವರು ಪ್ರಮುಖ ಸಾಕ್ಷಿಗಳು ನ್ಯಾಯಾಲಯದಲ್ಲಿ ಉಲ್ಟಾ ಹೊಡೆದಿರುವುದು ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಪ್ರತ್ಯಕ್ಷದರ್ಶಿಗಳು ಉಲ್ಟಾ ಹೊಡೆದ ಮಾತ್ರಕ್ಕೆ ದರ್ಶನ್‌ಗೆ ಕಾನೂನು ಕುಣಿಕೆಯಿಂದ ಮುಕ್ತಿ ಸಿಗುತ್ತದೆಯೇ? ಪೊಲೀಸರು...

ರಾಯಚೂರು | ಅವ್ಯವಸ್ಥೆಯ ಆಗರವಾದ ವಸತಿ ನಿಲಯ: ಜೀವ...

ಡಾ. ಬಿ.ಆರ್ ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಮೂಲಸೌಕರ್ಯಗಳ ಕೊರತೆ ತೀವ್ರವಾಗಿದ್ದು, ವಿದ್ಯಾರ್ಥಿಗಳು ಪ್ರತಿದಿನ ತೊಂದರೆ ಅನುಭವಿಸುವಂತಾಗಿದೆ. ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಕನಿಷ್ಠ ಅಗತ್ಯಗಳ ಬಗ್ಗೆಯೂ ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷ್ಯ...

ರಾಜ್ಯದ ವಿವಿಧೆಡೆ ಕನೇರಿ ಸ್ವಾಮೀಜಿ ಆಯೋಜಿಸುತ್ತಿರುವ ಬಸವಾದಿ ಶರಣರ ಹಿಂದೂ ಸಮಾವೇಶಗಳಲ್ಲಿ ಶರಣರ ವಚನಗಳನ್ನು ತಿರುಚಿ ವ್ಯಾಖ್ಯಾನಿಸುವ ಮೂಲಕ ಅವರ ಮೂಲ ಆಶಯಗಳಿಗೆ ಧಕ್ಕೆ ಉಂಟುಮಾಡಲಾಗುತ್ತಿದೆ. ಅಲ್ಲದೆ, ಲಿಂಗಾಯತ ಮಠಾಧೀಶರನ್ನು ಟೀಕಿಸುವ ಹಾಗೂ ಹೀಯಾಳಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಸಭೆಯಲ್ಲಿ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದರು.

ಇತ್ತೀಚೆಗೆ ನಡೆದ ಸಮಾವೇಶವೊಂದರಲ್ಲಿ ಮಾತನಾಡಿದ ಕನೇರಿ ಸ್ವಾಮೀಜಿ, “ಸಂವಿಧಾನದಲ್ಲಿ ಮನುಸ್ಮೃತಿಯ ಅಂಶಗಳು ಅಡಕವಾಗಿವೆ’ ಎಂದು ಹೇಳಿರುವುದನ್ನು ಸಭೆ ಖಂಡಿಸಿತು. ಈ ಹೇಳಿಕೆ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದ್ದು, ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ವಿಚಾರಧಾರೆಗಳಿಗೆ ಅಪಮಾನ ಮಾಡಿದಂತಾಗಿದೆ” ಎಂದು ಅಭಿಪ್ರಾಯಪಟ್ಟರು.

ವಚನ ಸಾಹಿತ್ಯ, ಲಿಂಗಾಯತ ಮಠಾಧೀಶರು ಹಾಗೂ ಭಾರತದ ಸಂವಿಧಾನದ ಕುರಿತು ನೀಡಿರುವ ಹೇಳಿಕೆಗಳನ್ನು ಖಂಡಿಸಿ ಡಿ.3ರಂದು ಬೀದರ್ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಸಭೆ ನಿರ್ಧರಿಸಿತು.

1007092761

ಪ್ರತಿಭಟನೆಯಲ್ಲಿ ಜಾತ್ಯತೀತ ರಾಜಕೀಯ ಪಕ್ಷಗಳು, ಪ್ರಗತಿಪರ ಸಂಘಟನೆಗಳ ಮುಖಂಡರು, ಬಸವಾದಿ ಶರಣರ ಅನುಯಾಯಿಗಳು ಹಾಗೂ ಸಂವಿಧಾನ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ಮುಖಂಡರು ಕರೆ ನೀಡಿದ್ದಾರೆ.

ಸಭೆಯಲ್ಲಿ ಜಾತ್ಯತೀತ ನಾಗರಿಕರ ವೇದಿಕೆ ಅಧ್ಯಕ್ಷ ಶ್ರೀಕಾಂತ್ ಸ್ವಾಮಿ, ಅಮೃತರಾವ್ ಚಿಮಕೋಡೆ, ಬಸವಕುಮಾರ ಪಾಟೀಲ್, ಶಿವಶರಣಪ್ಪ ಹುಗ್ಗೆ ಪಾಟೀಲ, ಪಂಡಿತರಾವ್ ಚಿದ್ರಿ, ಅನೀಲಕುಮಾರ್ ಬೆಲ್ದಾರ್, ಬಸವರಾಜ ಮಾಳಗೆ, ಬಾಬು ಪಾಸ್ವಾನ್, ಸುರೇಶ್ ಸ್ವಾಮಿ, ಶಂಕರರಾವ್ ದೊಡ್ಡಿ, ಬಸವರಾಜ ಸಂಗಮದ, ಸೂರ್ಯವಂಶಿ, ಸಂಜಯ ಪಾಟೀಲ್, ಜಗದೀಶ್ವರ ಬಿರಾದಾರ, ವಿನಯಕುಮಾರ್ ಮಾಳಗೆ, ಮಹೇಶ್ ಗೋರನಾಳಕರ್, ಗುರುರಾಜ, ಶೀತಲ ಸೂರ್ಯವಂಶಿ, ಸುಧಾಮಣಿ, ಅರ್ಚನಾ, ಪ್ರಕಾಶ ರಾವಣ, ಸಂತೋಷ ಜೋಳದಾಬಕೆ, ಶ್ರೀನಿವಾಸ ತೇಕಮಾಳ, ರಮೇಶ್ ಕಟ್ಟಿತುಗಾಂವ್, ಶಾಮಣ್ಣ ಬಾವಗೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

WhatsApp Image 2026 11 13 at 8.18.17 PM 15

ಇದನ್ನೂ ಓದಿ : ಬೀದರ್‌ | ಪೊಲೀಸರ ಒತ್ತಡ ನಿವಾರಣೆಗೆ ಕ್ರೀಡೆ, ಯೋಗ ಅಗತ್ಯ: ಸಚಿವ ಈಶ್ವರ ಖಂಡ್ರೆ

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೊರೋನಾ ವೇಳೆ ನನ್ನ ಮತ್ತು ತಾಯಿಯ ಜೀವ ಉಳಿಸಿದವರು ಆಶಾ ಕಾರ್ಯಕರ್ತೆಯರು: ಹೋರಾಟಗಾರರ ಬೆನ್ನಿಗೆ ನಿಂತ ವಿನೋದ್ ರಾಜ್

ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಹಿರಿಯ...

ಪಂಜಾಬ್‌ | ಎಡಪಕ್ಷಗಳ ಜೊತೆ ಮೈತ್ರಿಗೆ ಕಾಂಗ್ರೆಸ್ ಚಿಂತನೆ?

2027ರ ಪಂಜಾಬ್ ವಿಧಾನಸಭಾ ಚುನಾವಣೆಗೆ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಭಾರತೀಯ ಜನತಾ...

ಜನ್ಮಸ್ಥಳದ ವಿವರ ಸ್ಪಷ್ಟಪಡಿಸುವವರೆಗೆ ಪಾಸ್‌ಪೋರ್ಟ್‌ ಬಳಸದಂತೆ ಸೌರವ್‌ ದಾಸ್‌ಗೆ ಸರ್ಕಾರ ಸೂಚನೆ

ಪಾಸ್‌ಪೋರ್ಟ್‌ನಲ್ಲಿ ಜನ್ಮಸ್ಥಳದ ವಿವರವನ್ನು ಏಳು ದಿನಗಳೊಳಗೆ ಸ್ಪಷ್ಟಪಡಿಸಬೇಕು, ಅಲ್ಲಿಯವರೆಗೂ ಪಾಸ್‌ಪೋರ್ಟ್‌ ಬಳಸಬಾರದು...

ದೈಹಿಕ–ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡಿ: ಪೊಲೀಸ್ ಸಿಬ್ಬಂದಿಗೆ ಜಿಲ್ಲಾಧಿಕಾರಿ ಸಲಹೆ

ಪೊಲೀಸರು ದೇಶದ ಒಳಗಿನ ಸೈನಿಕರಂತೆ ಕಾರ್ಯನಿರ್ವಹಿಸುವ ಮೂಲಕ ಸಮಾಜದ ರಕ್ಷಣೆ ಹಾಗೂ...