ಭಾರತ ಸೇರಿ 14 ರಾಷ್ಟ್ರಗಳ ಮೇಲೆ ಶೇ. 25ರಷ್ಟು ಹೊಸ ಸುಂಕ ಪ್ರಸ್ತಾಪಿಸಿದ ಅಮೆರಿಕ; ಚೀನಾಗೆ ಶೇ. 40ರವರೆಗೂ ಬರೆ!

Date:

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತವು, ಭಾರತ ಸೇರಿದಂತೆ ಒಟ್ಟು 14 ಪ್ರಮುಖ ವ್ಯಾಪಾರ ಪಾಲುದಾರ ರಾಷ್ಟ್ರಗಳ ಸರಕುಗಳ ಮೇಲೆ ಹೊಸದಾಗಿ ಆಮದು ಸುಂಕ ವಿಧಿಸಲು ಪ್ರಸ್ತಾಪಿಸಿದೆ. ಉತ್ಪಾದನಾ ವಲಯದಲ್ಲಿ “ಅಗತ್ಯಕ್ಕಿಂತ ಹೆಚ್ಚಿನ ಕೈಗಾರಿಕಾ ಸಾಮರ್ಥ್ಯ” ಹೊಂದಿರುವ ಮತ್ತು ಅಸಮಂಜಸ ವ್ಯಾಪಾರ ನೀತಿ ಅನುಸರಿಸುತ್ತಿರುವ ರಾಷ್ಟ್ರಗಳನ್ನು ನಿಯಂತ್ರಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಮೆರಿಕದ ವ್ಯಾಪಾರ ಪ್ರತಿನಿಧಿ ಕಚೇರಿ (USTR) ಬುಧವಾರ ಪ್ರಕಟಿಸಿದೆ.

- Advertisement -

ಯುಎಸ್‌ಟಿಆರ್ ಹೊರಡಿಸಿರುವ ಪ್ರಕಟಣೆಯ ಪ್ರಕಾರ, ಭಾರತದಿಂದ ಆಮದಾಗುವ ಸರಕುಗಳ ಮೇಲೆ ಶೇ. 25ರವರೆಗೆ ಹೊಸ ಸುಂಕ ವಿಧಿಸಲು ಪ್ರಸ್ತಾಪಿಸಲಾಗಿದೆ. ಈ ಹೊಸ ಸುಂಕವು ಜುಲೈ ತಿಂಗಳಿನಿಂದ ಭಾರತೀಯ ರಫ್ತುದಾರರು ಪಾವತಿಸುತ್ತಿರುವ ಪ್ರಸ್ತುತ ಶೇ. 10ರಷ್ಟು ಸುಂಕದ ಮೇಲೆ ಹೆಚ್ಚುವರಿಯಾಗಿ ಸೇರ್ಪಡೆಯಾಗುವುದಿಲ್ಲ ಎಂದು ಅಮೆರಿಕದ ಹಿರಿಯ ವ್ಯಾಪಾರ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪಂಜಾಬ್ ಚುನಾವಣೆ | 6 ವರ್ಷಗಳ ಬಳಿಕ ಮತ್ತೆ...

2020ರ ಐತಿಹಾಸಿಕ ರೈತ ಹೋರಾಟದ ವೇಳೆ ಮುರಿದುಬಿದ್ದಿದ್ದ ಶಿರೋಮಣಿ ಅಕಾಲಿ ದಳ (SAD) ಮತ್ತು ಬಿಜೆಪಿ  ಮೈತ್ರಿ ಆರು ವರ್ಷಗಳ ಬಳಿಕ ಮತ್ತೆ ಜೀವ ಪಡೆದುಕೊಂಡಿದೆ. 2027ರ ಪಂಜಾಬ್ ವಿಧಾನಸಭಾ ಚುನಾವಣೆಗೆ ಮುನ್ನ...

ರೇಣುಕಾಸ್ವಾಮಿ ಕೊಲೆ ಪ್ರಕರಣ: ಸಾಕ್ಷಿಗಳು ಉಲ್ಟಾ ಹೊಡೆದ ಮಾತ್ರಕ್ಕೆ...

ಪಟ್ಟಣಗೆರೆ ಶೆಡ್‌ನಲ್ಲಿದ್ದ ನಾಲ್ವರು ಪ್ರಮುಖ ಸಾಕ್ಷಿಗಳು ನ್ಯಾಯಾಲಯದಲ್ಲಿ ಉಲ್ಟಾ ಹೊಡೆದಿರುವುದು ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಪ್ರತ್ಯಕ್ಷದರ್ಶಿಗಳು ಉಲ್ಟಾ ಹೊಡೆದ ಮಾತ್ರಕ್ಕೆ ದರ್ಶನ್‌ಗೆ ಕಾನೂನು ಕುಣಿಕೆಯಿಂದ ಮುಕ್ತಿ ಸಿಗುತ್ತದೆಯೇ? ಪೊಲೀಸರು...

ರಾಯಚೂರು | ಅವ್ಯವಸ್ಥೆಯ ಆಗರವಾದ ವಸತಿ ನಿಲಯ: ಜೀವ...

ಡಾ. ಬಿ.ಆರ್ ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಮೂಲಸೌಕರ್ಯಗಳ ಕೊರತೆ ತೀವ್ರವಾಗಿದ್ದು, ವಿದ್ಯಾರ್ಥಿಗಳು ಪ್ರತಿದಿನ ತೊಂದರೆ ಅನುಭವಿಸುವಂತಾಗಿದೆ. ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಕನಿಷ್ಠ ಅಗತ್ಯಗಳ ಬಗ್ಗೆಯೂ ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷ್ಯ...

ಅಲ್ಲದೆ, ಭಾರತವು ಅಮೆರಿಕದೊಂದಿಗೆ ‘ಪರಸ್ಪರ ವ್ಯಾಪಾರ ಒಪ್ಪಂದ’ ಮಾಡಿಕೊಳ್ಳಲು ಯಶಸ್ವಿಯಾದರೆ, ಈ ಪ್ರಸ್ತಾವಿತ ಶೇ. 25ರಷ್ಟು ಸುಂಕವನ್ನು ಶೇ. 17ಕ್ಕೆ ಇಳಿಸುವ ಬಗ್ಗೆಯೂ ಪರಿಗಣಿಸಲಾಗುವುದು ಎಂದು ಯುಎಸ್‌ಟಿಆರ್ ತಿಳಿಸಿದೆ.

ಇದನ್ನೂ ಓದಿ: ರಷ್ಯಾ ಮೇಲಿನ ಅಮೆರಿಕ ಸುಂಕ 500%ರಿಂದ 100%ಗೆ ಇಳಿಕೆ: ಭಾರತ, ಚೀನಾಗೆ ನಿರಾಳತೆ

ಜಾಗತಿಕ ಮಾರುಕಟ್ಟೆಯಲ್ಲಿ ಅಗ್ಗದ ದರದ ಉತ್ಪನ್ನಗಳನ್ನು ಸುರಿಯುತ್ತಿದೆ ಎಂಬ ಆರೋಪದ ಮೇಲೆ ಚೀನಾದ ವಿರುದ್ಧ ಅಮೆರಿಕ ಅತ್ಯಂತ ಕಠಿಣ ನಿಲುವು ತಳೆದಿದೆ. ಚೀನಾದ ಸರಕುಗಳ ಮೇಲೆ ಹೊಸದಾಗಿ ಶೇ. 20ರಷ್ಟು ಸುಂಕ ಪ್ರಸ್ತಾಪಿಸಲಾಗಿದ್ದು, ಮಾತುಕತೆಗಳು ವಿಫಲವಾದರೆ ಇದು ಶೇ. 40ರವರೆಗೂ ಏರಿಕೆಯಾಗಬಹುದು ಎನ್ನಲಾಗಿದೆ. ಈಗಾಗಲೇ ಚಾಲ್ತಿಯಲ್ಲಿರುವ ಸುಂಕಗಳ ಜೊತೆಗೆ ಈ ಹೊಸ ತೆರಿಗೆಯೂ ಸೇರಿಕೊಳ್ಳುವುದರಿಂದ ಚೀನಾದ ಕೆಲವು ಉತ್ಪನ್ನಗಳ ಮೇಲಿನ ಒಟ್ಟು ಸುಂಕ ಶೇ. 45ರ ಗಡಿ ದಾಟುವ ಸಾಧ್ಯತೆಯಿದೆ.

ಕಳೆದ ಎಂಟು ತಿಂಗಳುಗಳಿಂದ 16 ವ್ಯಾಪಾರ ಪಾಲುದಾರ ರಾಷ್ಟ್ರಗಳ ಮೇಲೆ ಸೆಕ್ಷನ್ 301 ಅಡಿಯಲ್ಲಿ ನಡೆಸಿದ ತನಿಖೆಯ ಬಳಿಕ ಈ ನಿರ್ಧಾರ ಪ್ರಕಟಿಸಲಾಗಿದೆ. ಪ್ರಸ್ತಾವಿತ ಸುಂಕದ ಪಟ್ಟಿಯಲ್ಲಿ ಭಾರತ ಮತ್ತು ಚೀನಾ ಹೊರತುಪಡಿಸಿ ಯುರೋಪಿಯನ್ ಒಕ್ಕೂಟ (EU), ಜಪಾನ್, ದಕ್ಷಿಣ ಕೊರಿಯಾ, ಬಾಂಗ್ಲಾದೇಶ, ಕಾಂಬೋಡಿಯಾ, ಇಂಡೋನೇಷ್ಯಾ, ಮಲೇಷ್ಯಾ, ಸಿಂಗಾಪುರ, ಸ್ವಿಟ್ಜರ್ಲೆಂಡ್, ತೈವಾನ್, ಥೈಲ್ಯಾಂಡ್ ಮತ್ತು ವಿಯೆಟ್ನಾಂ ಸೇರಿವೆ. ತನಿಖೆಗೊಳಪಟ್ಟಿದ್ದ ಮೆಕ್ಸಿಕೊ ಮತ್ತು ನಾರ್ವೆ ದೇಶಗಳ ಮೇಲೆ ಸದ್ಯಕ್ಕೆ ಯಾವುದೇ ಹೊಸ ಸುಂಕ ಪ್ರಸ್ತಾಪಿಸಿಲ್ಲ.

ಈ ಸುಂಕಗಳು ತಕ್ಷಣವೇ ಜಾರಿಗೆ ಬರುವುದಿಲ್ಲ. ಫೆಡರಲ್ ರಿಜಿಸ್ಟರ್‌ನಲ್ಲಿ ಪ್ರಕಟವಾದ ಬಳಿಕ, ಸಾರ್ವಜನಿಕರ ಅಭಿಪ್ರಾಯ ಸಂಗ್ರಹಣೆ ಮತ್ತು ವಿಚಾರಣಾ ಪ್ರಕ್ರಿಯೆ ನಡೆಯಲಿದೆ. ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ, ಮುಂದಿನ ವರ್ಷದ ಜನವರಿ ತಿಂಗಳಿನಲ್ಲಿ ಈ ಹೊಸ ದರಗಳು ಜಾರಿಗೆ ಬರುವ ಸಾಧ್ಯತೆಯಿದೆ ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ.

ಈಗಾಗಲೇ ಅಮೆರಿಕದ ಆಮದು ಸುಂಕ ನೀತಿಯು ಕೇವಲ ದೇಶೀಯ ಕೈಗಾರಿಕೆಗಳ ರಕ್ಷಣೆಗೆ ಸೀಮಿತವಾಗದೆ, ಜಾಗತಿಕ ವ್ಯಾಪಾರದಲ್ಲಿ ತನ್ನ ಪ್ರಾಬಲ್ಯ ಉಳಿಸಿಕೊಳ್ಳಲು ಮತ್ತು ಇತರ ಆರ್ಥಿಕತೆಗಳ ಬೆಳವಣಿಗೆಯ ವೇಗವನ್ನು ನಿಯಂತ್ರಿಸಲು ಬಳಸುತ್ತಿರುವ ಪ್ರಬಲ ಅಸ್ತ್ರವಾಗಿ ಮಾರ್ಪಟ್ಟಿದೆ ಎಂಬ ವಿಶ್ಲೇಷಣೆಗಳು ಜಾಗತಿಕ ಮಟ್ಟದಲ್ಲಿ ಬಲವಾಗಿ ಕೇಳಿಬರುತ್ತಿವೆ. ಹೆಚ್ಚಿನ ಸುಂಕ ವಿಧಿಸುವ ಬೆದರಿಕೆ ಒಡ್ಡಿ, ನಂತರ ಮಾತುಕತೆಯ ಮೇಜಿನಲ್ಲಿ ತನಗೆ ಅನುಕೂಲಕರವಾದ ವ್ಯಾಪಾರ ಷರತ್ತುಗಳು ಅಥವಾ ಮಾರುಕಟ್ಟೆ ಪ್ರವೇಶವನ್ನು ಪಡೆಯುವ ತಂತ್ರಗಾರಿಕೆಯೂ ಇದರ ಹಿಂದಿದೆ.

ಭಾರತ, ವಿಯೆಟ್ನಾಂ, ಬಾಂಗ್ಲಾದೇಶ, ಇಂಡೋನೇಷ್ಯಾ ಸೇರಿದಂತೆ ಹಲವು ಏಷ್ಯನ್ ರಾಷ್ಟ್ರಗಳು ತಮ್ಮ ಆರ್ಥಿಕ ಬೆಳವಣಿಗೆಗೆ ರಫ್ತು ಮತ್ತು ಉತ್ಪಾದನಾ ವಲಯದ ವಿಸ್ತರಣೆಯನ್ನು ಅವಲಂಬಿಸಿವೆ. ಇಂತಹ ಸಂದರ್ಭದಲ್ಲಿ ಏಕಾಏಕಿ ಹೆಚ್ಚಿನ ಸುಂಕ ಪ್ರಸ್ತಾಪಿಸುವುದರಿಂದ ಅಮೆರಿಕದ ಮಾರುಕಟ್ಟೆಯಲ್ಲಿ ಈ ದೇಶಗಳ ಉತ್ಪನ್ನಗಳ ಬೆಲೆ ಹೆಚ್ಚಾಗಿ, ಅವುಗಳ ಬೇಡಿಕೆ ಕುಸಿಯುವ ಅಪಾಯವಿರುತ್ತದೆ. ಹೊಸ ಉದ್ದಿಮೆಗಳು ಮತ್ತು ವಿದೇಶಿ ನೇರ ಹೂಡಿಕೆಗಳು (FDI) ಸುಂಕದ ಅನಿಶ್ಚಿತತೆಯಿಂದಾಗಿ ಯೋಜನೆಗಳನ್ನು ಮುಂದೂಡುವ ಅಥವಾ ಮರುಪರಿಶೀಲಿಸುವ ಸಾಧ್ಯತೆ ಇರುತ್ತದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗಲಕೋಟೆ |ಎಣ್ಣೆಕಾಳು, ದ್ವಿದಳ ಧಾನ್ಯ ಸಂಸ್ಕರಣಾ ಘಟಕ ಸ್ಥಾಪನೆಗೆ ಶೇ.೩೩ರಷ್ಟು ಸಹಾಯಧನ

ರೈತರು ಹಾಗೂ ಕೃಷಿ ಆಧಾರಿತ ಸಂಸ್ಥೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ೨೦೨೬-೨೭ನೇ...

ಐಪಿಎಲ್ ಹರಾಜು 2027: ವಿದೇಶಿ ಆಟಗಾರರ ರೇಸ್‌ನಲ್ಲಿ ಆಸೀಸ್, ಆಫ್ರಿಕಾ ಕ್ರಿಕೆಟಿಗರೇ ಟಾಪ್!

ಬಹುನಿರೀಕ್ಷಿತ 2027ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮಿನಿ ಹರಾಜಿಗೆ ವೇದಿಕೆ...

ಬೀದರ್‌ | ನ.28, 29ರಂದು ಮಂಗಳೂರಿನಲ್ಲಿ ‘ಜನನುಡಿ’: ಪೋಸ್ಟರ್ ಬಿಡುಗಡೆ

ಯುವಜನರ ರಾಜಕಾರಣದ ದಿಕ್ಕು, ಭವಿಷ್ಯ ಮತ್ತು ಸವಾಲುಗಳನ್ನು ಪ್ರಧಾನ ಆಶಯವಾಗಿಟ್ಟುಕೊಂಡು ನ.28...

ಧಾರವಾಡ | ಜಾಮೀನು ರದ್ದತಿ ನ್ಯಾಯದ ಹೋರಾಟಕ್ಕೆ ಸಿಕ್ಕ ಜಯ: ಬಸವರಾಜ ಕೊರವರ

ಶಾಸಕ ವಿನಯ್ ಕುಲಕರ್ಣಿ ಅವರಿಗೆ ನೀಡಲಾಗಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿರುವುದು...