ಕ್ರಾಂತಿಯ ಜ್ಯೋತಿ ಪ್ರವಾದಿ ಮುಹಮ್ಮದ್(ಸ) ಸೀರತ್ ಅಭಿಯಾನ ಪ್ರಯುಕ್ತ ಇದರಾ ಅದಬ್ ಏ ಇಸ್ಮಾಮೀ ಹಿಂದ್ ಬೀದರ್ ಸಹಯೋಗದಲ್ಲಿ ಇಂದು (ಆ.30) ರಂದು ಬಹುಭಾಷಾ ಕವಿಗೋಷ್ಠಿ ಆಯೋಜಿಸಲಾಗಿದೆ.
ಬೀದರ್ ನಗರದ ಅಂಬೇಡ್ಕರ್ ವೃತ್ತ ಸಮೀಪದ ಕರ್ನಾಟಕ ಸಾಹಿತ್ಯ ಸಂಘದಲ್ಲಿ ಬೆಳಿಗ್ಗೆ 11ಗಂಟೆ ನಡೆಯಲಿರುವ ಕವಿಗೋಷ್ಠಿಯಲ್ಲಿ ಒಟ್ಟು 16 ಜನ ಕವಿಗಳು ಕನ್ನಡ, ಹಿಂದಿ, ಇಂಗ್ಲಿಷ್, ಉರ್ದು ಹಾಗೂ ಮರಾಠಿ ಭಾಷೆಯಲ್ಲಿ ಕವಿತೆ ವಾಚಿಸಲಿದ್ದಾರೆ. ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಜಮಾಅತೆ ಇಸ್ಲಾಮೀ ಹಿಂದ್ನ ಸ್ಥಾನೀಯ ಅಧ್ಯಕ್ಷ ಮುಹಮ್ಮದ್ ಮೌಅಜ್ಜಮ್ ವಹಿಸಲಿದ್ದಾರೆ.
ಈ ವಿಶೇಷ ಬಹುಭಾಷಾ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಜಿಲ್ಲೆಯ ಸಾಹಿತ್ಯಾಸಕ್ತರು, ಸಾರ್ವಜನಿಕರು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಇದರಾ ಅದಬ್ ಏ ಇಸ್ಮಾಮೀ ಹಿಂದ್ ಅಧ್ಯಕ್ಷರಾದ ರಫೀವುಝ್ಹಮಾ ಖಾದ್ರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ : ಬೀದರ್ ಜಿಲ್ಲಾ ಪಂಚಾಯತ್ ಸಿಇಒ ಗಿರೀಶ ಬದೋಲೆ ವರ್ಗಾವಣೆ, ಗಿತ್ತೆ ಮಾಧವ್ ನೂತನ ಸಿಇಒ





