ಗದಗ | ಭಾವೈಕ್ಯತೆಯಿಂದ ರಂಜಾನ್‌ ಆಚರಣೆ; ‘ಡಿವೈಎಫ್ಐ’ನಿಂದ ಪಾನಕ ವಿತರಣೆ

Date:

  • ಜಿಲ್ಲೆಯ ಹಲವೆಡೆ ಶ್ರದ್ಧಾ ಭಕ್ತಿಯಿಂದ ರಂಜಾನ್ ಆಚರಣೆ
  • ಶಾಂತಿ ಸೌಹಾರ್ದತೆಯೊಂದಿಗೆ ಆತಂಕಗಳು ದೂರವಾಗಲಿ

ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ಗೋಗೇರಿ ಗ್ರಾಮದಲ್ಲಿ ಮುಸ್ಲಿಂ ಬಾಂಧವರು ಸಡಗರ ಮತ್ತು ಸಂಭ್ರಮದಿಂದ ಈದುಲ್‌ ಫಿತ್ರ್ ನಮಾಜ್‌ ನೆರವೇರಿಸಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುವ ಮೂಲಕ ಪವಿತ್ರ ರಂಜಾನ್ ಆಚರಿಸಿದರು.

ಜಾಮಿಯಾ ಮಸೀದಿಯ ಹಾಫಿಜ್ ಜನಾಬ್ ಅಶ್ಫಕ್ ಮದನೀ ಮಾತನಾಡಿ, “ಮನುಕುಲಕ್ಕೆ ಏಕತೆ, ಸಮಾನತೆ ಮತ್ತು ಸೌಹಾರ್ದತೆಯ ಸಂದೇಶವನ್ನು ಸಾರುವ ಸಾಮರಸ್ಯದ ಬೆಸುಗೆಯಾದ ರಂಜಾನ್‌ ಹಬ್ಬದ ಆಚರಣೆಯಿಂದ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದು ಬದುಕನ್ನು ಮುನ್ನಡೆಸಲು ಸಾಧ್ಯವಾಗುತ್ತದೆ” ಎಂದು ತಿಳಿಸಿದರು.

ಮದೀನಾ ಮಸ್ಜಿದ್ ಹಾಪೀಜ್ ಜನಾಬ್‌ ಬರಕತುಲ್ಲಾ ಹಾಫೀಜ್ ಮಾತನಾಡಿ, “ರಂಜಾನ್‌ ಹಬ್ಬದ ಪ್ರಾರ್ಥನೆಯೊಂದಿಗೆ ಪ್ರೀತಿ ವಿಶ್ವಾಸ, ಶಾಂತಿ ಸೌಹಾರ್ದತೆಯೊಂದಿಗೆ ಆತಂಕಗಳು ದೂರವಾಗಿ ನೆಮ್ಮದಿಯ ಜನಜೀವನ ನೆಲೆಗೊಳ್ಳಲಿ” ಎಂದು ಶುಭ ಹಾರೈಸಿದ್ದರು. ಈ ವೇಳೆ ಗ್ರಾಮದ ಅಂಜುಮನ್ ಇಸ್ಲಾಂ ಕಮಿಟಿ ಸರ್ವಸದಸ್ಯರು ಹಾಗೂ ಯುವಕ ಮಿತ್ರರು ಹಾಜರಿದ್ದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಸುದ್ದಿ ಓದಿದ್ದೀರಾ? : ಕಲ್ಯಾಣ ಕರ್ನಾಟಕದಲ್ಲಿ ಬಿಜೆಪಿಯ ಮತ್ತೊಂದು ವಿಕೆಟ್ ಪತನ

ಡಿವೈಎಫ್ಐ ಸಂಘಟನೆ ವತಿಯಿಂದ ಪಾನಕ ವಿತರಣೆ

ಗದಗ ಜಿಲ್ಲೆಯ ರೋಣ ತಾಲೂಕಿನ‌ ಬೆಳವಣಿಕೆ ಗ್ರಾಮದಲ್ಲಿ ಡಿವೈಎಫ್ಐ ಸಂಘಟನೆ ವತಿಯಿಂದ ಮುಸ್ಲಿಂ ಬಾಂಧವರೊಂದಿಗೆ ರಂಜಾನ್ ಆಚರಿಸುವುದರ ಜೊತೆಗೆ ಪಾನಕ ವಿತರಿಸಿದರು.

ಡಿವೈಎಫ್ಐ ಮುಖಂಡ ಹನಮಂತ ಮಾದರ ಮಾತನಾಡಿ, “ಪ್ರಸ್ತುತ ಸಮಾಜದಲ್ಲಿ ಅನೇಕ ರೀತಿಯ ಕೋಮುಸಂಘರ್ಷ, ದ್ವೇಷ ಮುಂತಾದ ರೀತಿಯ ಕಾರಣಗಳಿಂದ ಜಾತಿ ಆಧಾರಿತವಾಗಿ ಸಂಬಂಧಗಳು ಒಡೆದು ಹೊಂಟಿವೆ. ಆದ್ದರಿಂದ ಅಂತಹ ಸಂಘರ್ಷಗಳನ್ನು ನಿಯಂತ್ರಿಸಲು ಮತ್ತು ಪರಸ್ಪರವಾಗಿ ಸಂಬಂಧಗಳನ್ನು ಹೆಣೆಯುವಲ್ಲಿ ನಾವೆಲ್ಲರೂ ಮುಂದಾಗಬೇಕು” ಎಂದು ಕರೆ ನೀಡಿದರು.

ನಮ್ಮಲ್ಲಿಲ್ಲ ಹಿಂದೂ ರಕ್ತ, ನಮ್ಮಲ್ಲಿಲ್ಲ ಮುಸ್ಲಿಂ ರಕ್ತ, ನಮ್ಮಲ್ಲಿಲ್ಲ ಕ್ರೈಸ್ತ ರಕ್ತ, ನಮ್ಮಲ್ಲಿಲ್ಲ ಬೌದ್ಧ ರಕ್ತ, ಅದುವೇ ಮಾನವ ಕೆಂಪು ರಕ್ತ ಎಂಬ ಶೀರ್ಷಿಕೆಯ ಘೋಷಣೆಯ ಮೂಲಕ ಸೌಹಾರ್ದತೆಯಿಂದ ಪಾನಕ ವಿತರಿಸಿ ಸೌಹಾರ್ದತೆ ಮೆರೆದರು.

DYFI

ಪ್ರಕಾಶ್ ಕರಕೀಕಟ್ಟಿ ಶಿಕ್ಷಕರು, ವಕೀಲ ಎಸ್‌ ಎಸ್ ಹಾಲಭಾವಿ, ಮಹೇಶ್ ಹೀರೆಮಠ, ಸಿಐಟಿಯು ಜಿಲ್ಲಾಧ್ಯಕ್ಷ ಸಂಕಪ್ಪ ಕುರಹಟ್ಟಿ, ಮೈಲಾರಪ್ಪ ಮಾದರ, ಹನಮಂತ ತಾಳಿ, ರಾಮಣ್ಣ ಮಲ್ಲಾಪುರ, ಮುತ್ತಪ್ಪ ಮಾದರ, ಮಂಜುನಾಥ ಮಾದರ, ರಾಜು ಆದವಾನಿ. ನವೀನ್ ಆದವಾನಿ, ವಿಶ್ವನಾಥ್ ಹುಣಸಿಗಿಡದ ಸೇರಿದಂತೆ ಹಲವರು ಹಾಜರಿದ್ದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಲೋಕಸಭಾ ಚುನಾವಣೆ | ಮತದಾನ ಮಾಡಲು ವಿಕಲಚೇತನರು, ಹಿರಿಯ ನಾಗರಿಕರಿಗೆ ಸೌಲಭ್ಯ

ರಾಜ್ಯದಲ್ಲಿ ಏಪ್ರಿಲ್ 26ರಂದು ಮೊದಲ ಹಂತದ ಲೋಕಸಭಾ ಚುನಾವಣೆ ನಡೆಯಲಿದೆ. ಈ...

ಲೋಕಸಭಾ ಚುನಾವಣೆ; ಕರ್ತವ್ಯದಲ್ಲಿರುವ ಬಹುತೇಕ ನೌಕರರಿಗೆ ಸಿಗದ ಅಂಚೆ ಮತದಾನ

ಲೋಕಸಭಾ ಚುನಾವಣೆಯ ಕರ್ತವ್ಯಕ್ಕೆ ತೆರಳುವ ಬಹುತೇಕ ಸೇವಾ ಸಿಬ್ಬಂದಿಗಳು ಈ ಬಾರಿ...

ಹಾಸನ ಪೆನ್‌ಡ್ರೈವ್‌ ಪ್ರಕರಣ: ನಾಲ್ವರು ಸಂತ್ರಸ್ತೆಯರು ಆತ್ಮಹತ್ಯೆಗೆ ಯತ್ನ

ಹಾಸನದ ಪೆನ್‌ಡ್ರೈವ್‌ ಪ್ರಕರಣ ದಿನದಿಂದ ದಿನಕ್ಕೆ ಜಿಲ್ಲಾದ್ಯಂತ ಆತಂಕ ಹೆಚ್ಚಿಸ್ತಾ ಇದೆ....

ಬೆಂಗಳೂರು | ಲೋಕಸಭಾ ಚುನಾವಣೆ : ಮಸ್ಟರಿಂಗ್ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಜಿಲ್ಲಾ ಚುನಾವಣಾಧಿಕಾರಿ

2024ರ ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆ, ಜಿಲ್ಲಾ ಚುನಾವಣಾಧಿಕಾರಿ ಹಾಗೂ ಬೃಹತ್...