ಗುಂಡ್ಲುಪೇಟೆ | ಕೇರಳದಲ್ಲಿ ನಿಪಾ ವೈರಸ್‌ ಪತ್ತೆ: ಗಡಿ ಜಿಲ್ಲೆಯಲ್ಲಿ ಕಟ್ಟೆಚ್ಚರ

Date:

ನೆರೆಯ ರಾಜ್ಯಕೇರಳದಲ್ಲಿ ನಿಪಾ ವೈರಸ್‌ ಪತ್ತೆಯಾಗಿದ್ದು, ಮುಂಜಾಗೃತಾ ಕ್ರಮವಾಗಿ ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆಯಲ್ಲಿಐಸೋಲೇಶನ್‌ ವಾರ್ಡ್‌ ಸಿದ್ದಪಡಿಸಲಾಗಿದೆ.  

ಈ ಬಗ್ಗೆ ತಾಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಮಂಜುನಾಥ್ ಮಾಹಿತಿ ನಿಡಿದ್ದಾರೆ. ಕೇರಳ ರಾಜ್ಯದಲ್ಲಿ ನಿಪಾ ವೈರಸ್ ಸೋಂಕು ಪತ್ತೆಯಾಗಿದೆ. ಈ ಹಿನ್ನೆಲೆ, ಮುಂಜಾಗ್ರತಾ ಕ್ರಮವಾಗಿ ತಾಲೂಕು ಆಸ್ಪತ್ರೆಯಲ್ಲಿ ಮೂರು ಹಾಸಿಗೆಯ ಐಸೋಲೇಶನ್ ವಾರ್ಡ್ ಸಿದ್ಧಪಡಿಸಲಾಗಿದೆ. ನಿಪಾ ವೈರಸ್ ಲಕ್ಷಣಗಳು ಕಂಡು ಬಂದಲ್ಲಿ ತ್ವರಿತ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.

ಜ್ವರ, ಮೈ-ಕೈ ನೋವು, ಸ್ನಾಯುಗಳ ನೋವು, ತಲೆನೋವು ವಾಂತಿ, ಸುಸ್ತು ಸೇರಿದಂತೆ ಅನಾರೋಗ್ಯದ ಕೆಲವು ಲಕ್ಷಣಗಳು ಕಂಡುಬರುತ್ತದೆ. ಈ ಲಕ್ಷಣ ಕಂಡುಬಂದವರು ಕೂಡಲೇ ವೈದ್ಯರನ್ನು ಸಂಪರ್ಕಿಸಲು ಎಚ್ಚರಿಸಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ನಿಪಾ ವೈರಸ್ ಮನುಷ್ಯರಲ್ಲಿ ಬಹಳ ವೇಗವಾಗಿ ಹರಡುತ್ತದೆ. ನಿಪಾ ವೈರಸ್ ಪ್ರಾಣಿಗಳಿಂದ ಪ್ರಾಣಿಗಳಿಗೆ ಮತ್ತು ಬಾವಲಿಯಿಂದ, ಪಕ್ಷಿಗಳಿಗೆ, ಪಕ್ಷಿಗಳು ತಿಂದು ಬಿಟ್ಟ ಹಣ್ಣು ಹಂಪಲಗಳಿಂದ ಮನುಷ್ಯರಿಗೆ ವೈರಸ್ ಹರಡುತ್ತದೆ ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆ.

+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಾಮರಾಜನಗರ | ಸ್ವಂತ ಹಣದಲ್ಲಿ ಅಂಗನವಾಡಿ ಕೇಂದ್ರ ನಿರ್ಮಿಸಿದ ಮುಸ್ಲಿಂ ಮಹಿಳೆ

ದಕ್ಷಿಣ ಕರ್ನಾಟಕದ ಹಿಂದುಳಿದ ಜಿಲ್ಲೆಗಳಲ್ಲಿ ಚಾಮರಾಜನಗರವೂ ಒಂದು. ರಾಜ್ಯದಲ್ಲಿಯೇ ಹೆಚ್ಚು ಬರ...

ಚಾಮರಾಜನಗರ | ಮುಸ್ಲಿಂ ಬಾಂಧವರಿಂದ ಸಂವಿಧಾನ ದಿನಾಚರಣೆ ಮತ್ತು ಜನ ಜಾಗೃತಿ ಸಮಾವೇಶ

ಕೊಳ್ಳೇಗಾಲ ಪಟ್ಟಣದ ನ್ಯಾಷನಲ್ ಶಾಲೆ ಆವರಣದಲ್ಲಿರುವ ಮಾತೇ ಸಾವಿತ್ರಿಬಾಯಿ ಪುಲೆ ರಂಗವೇದಿಕೆಯಲ್ಲಿ...

ಚಾಮರಾಜನಗರ ಜಿಲ್ಲೆಯಲ್ಲಿ 2023ರಲ್ಲಿ 83 ಪೋಕ್ಸೋ ಪ್ರಕರಣ ದಾಖಲು

ಚಾಮರಾಜನಗರ ಜಿಲ್ಲೆಯಲ್ಲಿ ಮಕ್ಕಳ ಮೇಲಿನ ಅಪರಾಧ ಪ್ರಕರಣಗಳ ಸಂಖ್ಯೆ 2023ರಲ್ಲಿ ಹೆಚ್ಚಾಗಿದೆ....

ಚಾಮರಾಜನಗರ | ಆಮ್ಲಜನಕ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಫೆ.1ರಿಂದ ಉದ್ಯೋಗ

ಕೊರೋನಾ 2ನೇ ಅಲೆಯ ವೇಳೆ ಚಾಮರಾಜನಗರದಲ್ಲಿ ನಡೆದಿದ್ದ ಆಮ್ಲಜನಕ ದುರಂತದಲ್ಲಿ ಸಾವನ್ನಪ್ಪಿದ್ದವರ...