ಚಾಮರಾಜನರ | ಬಿರುಗಾಳಿ ಸಹಿತ ಮಳೆ; ಬಾಳೆ, ಟೊಮೆಟೊ ಬೆಳೆಗಳಿಗೆ ಹಾನಿ

Date:

ಚಾಮರಾಜನಗರ ಜಿಲ್ಲೆಗೆ ಈ ವರ್ಷದ ಮೊದಲ ಮಳೆಯ ಸಿಂಚನವಾಗಿದೆ. ಕೊಳ್ಳೇಗಾಲ, ಯಳಂದೂರು ತಾಲೂಕು ವ್ಯಾಪ್ತಿಯಲ್ಲಿ ಬಿಟ್ಟು ಉಳಿದ ತಾಲೂಕುಗಳಲ್ಲಿ ಅಲ್ಲಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗಿದೆ. ಗಾಳಿಯಿಂದಾಗಿ ಬಾಳೆ, ಟೊಮೆಟೊ ಬೆಳೆಗಳಿಗೆ ಹಾನಿಯೂ ಆಗಿದೆ.

- Advertisement -

ಚಾಮರಾಜನಗರ, ಗುಂಡ್ಲುಪೇಟೆ ತಾಲೂಕುಗಳಿಗೆ ಹೋಲಿಸಿದರೆ ಹನೂರು ತಾಲೂಕಿನಲ್ಲಿ ಚೆನ್ನಾಗಿ ಮಳೆಯಾಗಿದೆ. ಚಾಮರಾಜನಗರ ತಾಲೂಕು ವ್ಯಾಪ್ತಿಯಲ್ಲಿ ಸಾಧಾರಣ ಮಳೆ ಬಿದ್ದರೆ, ಗುಂಡ್ಲುಪೇಟೆಯ ಅರಣ್ಯದ ಅಂಚುಗಳಲ್ಲಿ ತುಂತುರು ಮಳೆಯಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಾಂಧಿಯ ಆರ್ಥಿಕ ಸಾಮಾಜಿಕ ಸಂಕೇತಗಳು: ಉಪ್ಪು, ಖಾದಿ, ಚರಕ...

ಗ್ರಾಮೀಣ ಭಾರತದ ಆರ್ಥಿಕತೆ ಮನಗಂಡಿದ್ದ ಗಾಂಧಿ ಹಾಲಿನ ಬಗೆಗಿನ ಕಠೋರ ನಿಲುವನ್ನು ನಿರಾಕರಿಸಿ ತನ್ನನ್ನು ತಾನು ಮೇಕೆಯ ಮಮಕಾರದ ಹಾಲಿಗೆ ಕೊಟ್ಟುಕೊಂಡಿದ್ದರು. ಈಗಿನ ಪಶುಪಾಲಕ ಸಮುದಾಯಗಳ ಸಾವಯವ ಬದುಕಿನ ರೀತಿ ನೀತಿ ಗಮನಿಸಿ......

ಈ ದಿನ ವಿಶೇಷ | ಗಾಂಧೀ ಎಂದರೆ ಏನು?

ಇಂದು ಮಹಾತ್ಮಾ ಗಾಂಧೀಜಿಯವರ ಜನ್ಮದಿನ. ಅವರ ವಿಚಾರ, ಚಿಂತನೆ, ನಡೆ-ನುಡಿ... ಅವರನ್ನು ಗ್ರಹಿಸಲು ಅವರ ದಿನಚರಿಯ ಭಾಗವೇ ಆಗಿದ್ದ ಕೆಲವು ತುಣುಕುಗಳು ನಿಮ್ಮ ಓದಿಗಾಗಿ... ಆರೆಸ್ಸೆಸ್‌ಗೊಂದು ಕಿವಿಮಾತುಅದು ದೇಶ ವಿಭಜನೆಯ ಕಾಲ. ಎಲ್ಲೆಲ್ಲೂ ಹಿಂದೂ-ಮುಸ್ಲಿಂ...

ಕಪ್ಪತಗುಡ್ಡದ ಮಡಿಲಲ್ಲಿ ಗಾಂಧಿ ತತ್ವಗಳ ಪ್ರೇರಣಾ ಕೇಂದ್ರ ‘ಸಬರಮತಿ...

ಗದಗ ನಗರದ ಕಪ್ಪತಗುಡ್ಡದ ಸೆರಗಿನಲ್ಲಿರುವ 'ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ'ದ ಆವರಣದಲ್ಲಿ ನಿರ್ಮಿಸಲಾಗಿರುವ ಸಬರಮತಿ ಆಶ್ರಮವು ಗಾಂಧೀಜಿಯವರ ತತ್ವ ಮತ್ತು ಆದರ್ಶಗಳನ್ನು ಇಂದಿನ ಪೀಳಿಗೆಗೆ ತಲುಪಿಸುವ ಪ್ರೇರಣಾ ಕೇಂದ್ರವಾಗಿ...

ಮಳೆಯಾಗಿದ್ದರಿಂದ ಬಿಸಿಲಿನಿಂದ ತತ್ತರಿಸಿದ್ದ ಜನರು ಕೊಂಚ ನಿಟ್ಟುಸಿರು ಬಿಡುವಂತಾಗಿದೆ. ಇನ್ನೂ ಎರಡು ಮೂರು ದಿನಗಳ ಕಾಲ ಮಳೆಯಾಗುವ ನಿರೀಕ್ಷೆ ಇರುವುದಾಗಿ ಹವಾಮಾನ ಇಲಾಖೆ ಹೇಳಿದೆ.

ಹನೂರು ತಾಲೂಕಿನ ಕೌದಳ್ಳಿ, ನಾಗಣ್ಣನಗರ, ಜಿ ಆರ್ ನಗರ, ಕಾಮಗೆರೆ, ಮಂಗಲ, ಕಣ್ಣೂರು ಸೇರಿದಂತೆ ಹಲವೆಡೆ ಗುರುವಾರ ಮಧ್ಯಾಹ್ನ ಗುಡುಗು, ಗಾಳಿ ಸಹಿತ ಮಳೆಯಾಗಿದೆ. ಬರದ ಛಾಯೆಯಿಂದ ಬಾಡಿ ಬಸವಳಿದಿದ್ದ ಇಳೆಗೆ ಮಳೆ ತಂಪೆರೆದಿದೆ.

ಬೆಳಿಗ್ಗೆಯಿಂದ ಮಳೆ ಬರುವ ಕುರುಹುಗಳು ಇರಲಿಲ್ಲ. ಮಧ್ಯಾಹ್ನ ಮೋಡ ಕಪ್ಪಿಟ್ಟು, ಗಾಳಿ, ಗುಡುಗಿನ ಸಹಿತ ಮಳೆಯಾಗಿದೆ.

ಟೊಮೆಟೊ ಬೆಳೆ ಹಾನಿ

ಮಳೆಗೆ ತಾಲೂಕಿನ ನಾಗಣ್ಣ ನಗರ, ಅಜ್ಜೀಪುರ ಸಮೀಪದ ಜಿ ಆರ್‌ ನಗರದಲ್ಲಿ ಬಾಳೆ ಮತ್ತು ಟೊಮೆಟೊ ಬೆಲೆ ನೆಲಕ್ಕಚಿವೆ. ನಾಗಣ್ಣ ನಗರದ ರೈತ ಮುರುಗೇಶ್ ಅವರ 800 ಬಾಳೆ ಮರಗಳ ಪೈಕಿ 650 ಮರಗಳು ಮುರಿದು ಬಿದ್ದಿವೆ. ಅಜ್ಜೀಪುರ ಸಮೀಪದ ಜಿ ಆರ್ ನಗರದ ರೈತ ಶ್ರೀರಂಗ ಅವರಿಗೆ ಸೇರಿದ ಟೊಮೊಟೊ ಬೆಳೆ ಉದುರಿವೆ.

‘ಬಿರು ಬೇಸಿಗೆಯ ನಡುವೆ ಸಾಲ ಮಾಡಿ ಬೆಳೆಯಲಾಗಿದ್ದ ಬಾಳೆ ಬೆಳೆ ಕಟಾವು ಹಂತಕ್ಕೆ ತಲುಪಿತ್ತು. ಇಂತಹ ಸಂದರ್ಭದಲ್ಲಿ ಬೆಳೆ ಮಳೆಗೆ ಸಿಲುಕಿರುವುದರಿಂದ  ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಜಿಲ್ಲಾಡಳಿತ ಪರಿಶೀಲನೆ ನಡೆಸಿ ಪರಿಹಾರ ನೀಡಬೇಕು’ ಎಂದು ರೈತರು ಒತ್ತಾಯಿಸಿದ್ದಾರೆ.

ಚಾಮರಾಜನಗರ ತಾಲ್ಲೂಕಿನ ಆಲೂರು, ಕೆಂಪನಪುರ, ಗೂಳಿಪುರ, ಕನ್ನೇಗಾಲ, ಮಂಗಲ ಗ್ರಾಮಗಳಲ್ಲೂ ಗಾಳಿ ಸಹಿತ ಮಳೆಯಾಗಿದೆ.

ಸಂತೇಮರಹಳ್ಳಿ ಹೋಬಳಿ ವ್ಯಾಪ್ತಿಗೆ ಬರುವ ಕೆಂಪನಪುರ ಸೇರಿದಂತೆ ಹಲವು ಊರುಗಳಲ್ಲಿ ಗಾಳಿಯ ಆರ್ಭಟಕ್ಕೆ ಸಿಲುಕಿ ಬಾಳೆ ತೋಟಗಳು ನೆಲಕ್ಕುರುಳಿವೆ. ಕೆಂಪನಪುರ ಗ್ರಾಮದ ಕೆ ಎಂ ಗುರುಸಿದ್ದಪ್ಪ ಸುಶೀಲಮ್ಮ ಹಾಗೂ ಸಿದ್ದಲಿಂಗಸ್ವಾಮಿ ಎಂಬುವವರಿಗೆ ಸೇರಿದ ತಲಾ ಎರಡು ಎಕರೆ ಬಾಳೆ ಫಸಲು ನಾಶವಾಗಿರುವುದಾಗಿ ವರದಿಯಾಗಿದೆ.

“ಕಟಾವು ಹಂತಕ್ಕೆ ಬಂದಿರುವ ಬಾಳೆ ತೋಟ ಗಾಳಿ ಮಳೆಗೆ ನೆಲ ಕಚ್ಚಿರುವುದರಿಂದ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ. ತೋಟಗಾರಿಕೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ನೀಡಲು ಮುಂದಾಗಬೇಕು” ಎಂದು ಕೆಂಪನಪುರ ಗ್ರಾಮದ ಮುಖಂಡರು ಒತ್ತಾಯಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಭಾರೀ ಗಾಳಿ ಮಳೆ; ಸಿಡಿಲ ಹೊಡೆತಕ್ಕೆ 25 ಮೇಕೆಗಳು ಬಲಿ

ಗುಂಡ್ಲುಪೇಟೆ ತಾಲೂಕಿನ ಗೋಪಾಲಸ್ವಾಮಿ ಬೆಟ್ಟದ ತಪ್ಪಲು ಹಾಗೂ ಕಾಡಂಚಿನ ಗ್ರಾಮಗಳಲ್ಲಿ ನಾಲ್ಕೈದು ನಿಮಿಷಗಳ ಕಾಲ ತುಂತುರು ಮಳೆಯಾಗಿದೆ. ಬಂಡೀಪುರ, ಮೇಲುಕಾಮನಹಳ್ಳಿ, ಹಂಗಳ, ದೇವರಹಳ್ಳಿ, ಗೋಪಾಲಪುರ ಭಾಗದಲ್ಲೂ ತುಂತುರು ಹನಿ ಬಿದ್ದಿದೆ.

ಸಂಜೆ ಐದರ ಸಮಯದಲ್ಲಿ ಮೋಡ ಕವಿದ ವಾತಾವರಣವಿದ್ದು, ಬಳಿಕ ಜೋರು ಹನಿ ಬಿದ್ದು ನಿಂತಿತು. ಮಳೆಯ ನಿರೀಕ್ಷೆಯಲ್ಲಿದ್ದ ರೈತರಿಗೆ ನಿರಾಸೆಯಾಗಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಾರವಾರ, ಕುಮಟಾ, ದಾಂಡೇಲಿ ಪೊಲೀಸ್‌ ಅಧಿಕಾರಿಗಳ ವರ್ಗಾವಣೆ

ಉತ್ತರ ಕನ್ನಡ ಜಿಲ್ಲೆಯ ಪೊಲೀಸ್ ಇಲಾಖೆಯಲ್ಲಿ ಹಲವು ಅಧಿಕಾರಿಗಳ ವರ್ಗಾವಣೆ ಹಾಗೂ...

ಗದಗ | ಆನಂದಕಂದರ ಸಾಹಿತ್ಯವು ಸಾರ್ವಕಾಲಿಕ ಮೌಲ್ಯ ಹೊಂದಿದೆ: ಡಾ. ಅರ್ಜುನ ಗೊಳಸಂಗಿ

ಕನ್ನಡ ನಾಡು-ನುಡಿ, ಸಂಸ್ಕೃತಿ ಮತ್ತು ಜನಪದ ಸೊಗಡನ್ನು ಅಕ್ಷರ ರೂಪಕ್ಕಿಳಿಸಿದ ಆನಂದಕಂದರ...

ರಾಯಚೂರು | ಕಾರು ಪಲ್ಟಿ: ಕೃಷ್ಣಾ ಭಾಗ್ಯ ಜಲನಿಗಮದ ಸಹಾಯಕ ಎಂಜಿನಿಯರ್ ಸಾವು

ಕಾರು ನಿಯಂತ್ರಣ ತಪ್ಪಿ ಪಲ್ಟಿಯಾಗಿ ಕೃಷ್ಣಾ ಭಾಗ್ಯ ಜಲನಿಗಮದ ನಾರಾಯಣಪುರ ವಲಯದ...

ರಾಯಚೂರು | ಯರಮರಸ್ ವಿದ್ಯುತ್ ಘಟಕ ಭೂ ಸಂತ್ರಸ್ಥರಿಗೆ ಉದ್ಯೋಗ ನೀಡಲು ಆಗ್ರಹ

ಯರಮರಸ್ ವಿದ್ಯುತ್ ಘಟಕಕ್ಕೆ ಭೂಮಿ ಕಳೆದುಕೊಂಡ ಭೂ ಸಂತ್ರಸ್ಥರಿಗೆ ಉದ್ಯೋಗ ನೀಡದೇ...