ಬಾಗೇಪಲ್ಲಿ | ಎತ್ತಿನಹೊಳೆ ಅಲ್ಲ ಹಣದಹೊಳೆ ಹರಿಸುವ ಯೋಜನೆ-ಸಂಸದ ಡಾ.ಕೆ.ಸುಧಾಕರ್

Date:

ಕೇರಳ,ತೆಲಂಗಾಣ ಮತ್ತು ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗ ಮತದಾರರ ಪಟ್ಟಿಯಲ್ಲಿ ಯಾವುದೇ ಧೋಷಗಳು ಇರಲಿಲ್ಲ ಬಿಜೆಪಿ ಸರಕಾರಗಳು ಅಧಿಕಾರ ಇರುವ ರಾಜ್ಯಗಳಲ್ಲಿ ಮಾತ್ರ ಲೋಪಧೋಷಗಳು ಇವೆ ಎಂದು ಕಾಂಗ್ರೆಸ್ ಮುಖಂಡರು ದೆಹಲಿಯಲ್ಲಿ ನಡೆಸುತ್ತಿರುವ ಹೋರಾಟ ಪೋಳ್ಳುತನದಿಂದ ಕೂಡಿದೆ ಎಂದು ಲೋಕಸಭೆ ಸದಸ್ಯ ಡಾ.ಕೆ.ಸುಧಾಕರ್ ವ್ಯಂಗವಾಡಿದರು.

- Advertisement -

ಅವರು ಬುಧುವಾರ ಪಟ್ಟಣದ ಹೊರವಲಯದ ಕೊಂಡಂವಾರಿಪಲ್ಲಿ ಗ್ರಾಮದ ಎಸ್‌ಎಲ್‌ಎನ್ ಕಲ್ಯಾಣ ಮಂಟಪದಲ್ಲಿ ಎನ್.ಡಿ.ಎ.ಸಮನ್ವಯ ಸಭೆ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಗೆ ಸ್ಪರ್ಧೆ ಮಾಡಿರುವ ಎನ್‌ಡಿಎ ಅಭ್ಯರ್ಥಿ ಕೆ.ಎ.ಸುರೇಶ್ ಪರವಾಗಿ ಮತಯಾಚನೆ ಮಾತನಾಡಿದ ಅವರು ದೆಹಲಿಯಲ್ಲಿ ಕಾಂಗ್ರೆಸ್ ನಡೆಸುತ್ತಿರುವ ಹೋರಾಟದಲ್ಲಿ ರಾಜ್ಯ ಸಂಪುಟದ ಸಿಎಂ ಮತ್ತು ಸಚಿವ ಸಂಪುಟದ ಸದಸ್ಯರು ದೆಹಲಿಯ ಬೀದಿಗಳಲ್ಲಿ ಹೋರಾಟ ಮಾಡುತ್ತಿದ್ದರೆ ರಾಜ್ಯದ ರೈತರು ತಮ್ಮ ಬೆಳೆಗಳಿಗೆ ಬೆಂಬಲ ಘೋಷಣೆ ಮಾಡಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವುದು ಖಂಡನೀಯ ನಾನು ಕಾಂಗ್ರೆಸ್ ಪಕ್ಷದಲ್ಲಿದ್ದಾಗ ಎತ್ತಿನ ಹೊಳೆ ಯೋಜನೆ ಎರಡೇ ವರ್ಷದಲ್ಲಿ ಚಿಕ್ಕಬಳ್ಳಾಪರ ಜಿಲ್ಲೆಗೆ ಹರಿಯುತ್ತದೆ ಎಂದು ನಂಬಿ ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರದಿಂದ 50ಸಾವಿರ ಜನರನ್ನು ಗುದ್ದಲಿ ಪೂಜೆ ಕಾರ್ಯಕ್ರಮಕ್ಕೆ ಸೇರಿಸಿದ್ದೆ ಈ ಸಂದರ್ಭದಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯ ಕೂಡ ಜನರನ್ನು ನೋಡಿ ಅಶ್ಚರ್ಯ ವ್ಯಕ್ತಪಡಿಸಿದ್ದರು. ಗುದ್ದಲಿ ಪೂಜೆ ನೆರವೇರಿಸಿ 12 ವರ್ಷಗಳು ಕಳೆಯುತ್ತಾ ಬಂದರೂ ಈ ಯೋಜನೆ ಇನ್ನು ಸಕಲೇಶ್ವರಪುರದಲ್ಲಿ ಉಳಿದಿದೆ.ಅಗ 8ಸಾವಿರೂಗಳ ವೆಚ್ಚದೊಂದಿಗೆ ಪ್ರಾರಂಭವಾದ ಯೋಜನೆ ಈಗ 40ಸಾವಿರ ಕೋಟಿರೂಗಳಿಗೆ ತಲುಪಿದೆ ಇದು ಎತ್ತಿನಹೊಳೆ ಯೋಜನೆ ಅಲ್ಲ ಹಣದ ಹೊಳೆ ಹರಿಸುವ ಯೋಜನೆಯಾಗಿ ಪರಿವರ್ತನೆಯಾಗಿದೆ.ಆಗ್ನೇಯ ಪದವೀಧ ಕ್ಷೇತ್ರದಿಂದ ವಿಧಾನಪರಿಷತ್‌ಗೆ ಇದುವೆಗೂ ನಡೆದ 10 ಚುನಾವಣೆಗಳ ಪೈಕಿ 8ರಲ್ಲಿ ಸಲ ಬಿಜೆಪಿ ಜಯಗಳಿಸಿದ್ದರೆ ಎರಡು ಸಲ ಜೆಡಿಎಸ್ ಪಕ್ಷ ಜಯಗಳಿಸಿದೆ ಆದರೆ ಕಾಂಗ್ರೆಸ್ ಪಕ್ಷ ಇದುವೆಗೂ ಖಾತೆ ತರೆದಿಲ್ಲ ಬಿಜೆಪಿ,ಜೆಡಿಎಸ್ ಕಾರ್ಯಕರ್ತರು ಪದವೀಧರರ ಮತದಾರರ ಪಟ್ಟಿಯನ್ನು ಮುಂದಿಟ್ಟುಕೊಂಡು ಪ್ರತಿ ಮತದಾರರನ್ನು ಬೇಟಿ ಮಾಡಿ ಎನ್‌ಡಿಎ ಅಭ್ಯರ್ಥಿ ಕೆ.ಎಂ.ಸುರೇಶ್ ಅವರ ಪರವಾಗಿ ಮತ ಚಲಾಯಿಸುವಂತೆ ಮನವೋಲಿಸಬೇಕಾಗಿದೆ.

ಕರ್ನಾಟಕದ ವಿಧಾನಪರಿಷತ್‌ನಲ್ಲಿ ಬಿಜೆಪಿ,ಜೆಡಿಎಸ್ ಸದಸ್ಯ ಸಂಖ್ಯೆ ಕಡಿಮೆ ಇದೆ.ಬಸವರಾಜ ಹೊರಟ್ಟಿ ಸಭಾಪತಿ ಸ್ಥಾನದಿಂದ ಸಿಎಂ ಮತ್ತು ಕಾಂಗ್ರೆಸ್ ಮುಖಂಡರು ಬಲಂತವಾಗಿ ರಾಜಿನಾಮೆ ಪಡೆದು ಪದಚ್ಯುತಿ ಮಾಡಿದರು.ಇಂತಹುಗಳನ್ನು ತಡೆಯಲು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಿಗೆ ಸಂಖ್ಯಾ ಬಲ ಹೆಚ್ಚಿರಬೇಕು. ಪದವಿ ಮಾಡಿದರೆ ಸಾಲದು ಪದವಿ ಪಡೆದ ಯುವಕರು ದಾಖಲೆಗಳೊಂದಿಗೆ ಚುನಾವಣೆ ಅಧಿಕಾರಿಗೆ ಸಲ್ಲಿಸಿ ನೋಂದಣಿ ಮಾಡಿಸಿದರೆ ಮತ ಹಕ್ಕು ಸಿಗುತ್ತದೆ.ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಕೋಲಾರ,ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರ ಸ್ಥಾನಗಳಿಗೆ ಬೇಟಿ ನೀಡಲಿದ್ದಾರೆ.ಚಿಕ್ಕಬಳ್ಳಾಪುರಕ್ಕೆ ಗುರುವಾರ ಮಧ್ಯಾಹ್ನ 3ಗಂಟೆಗೆ ಆಗಮಿಸಿ ಕೆ.ಎಂ.ಸುರೇಶ್ ಪರವಾಗಿ ಮತಯಾಚನೆ ಮಾಡಲಿದ್ದಾರೆ.ಈ ಕಾರ್ಯಕ್ರಮಕ್ಕೆ ಬಿಜೆಪಿ,ಜೆಡಿಎಸ್ ಮುಖಂಡರು ಪದವಿ ಮತದಾರರೊಂದಿಗೆ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದರು.

ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಮುನಿರಾಜು ಪ್ರಾಸ್ತಾವಿಕವಾಗಿ ಮಾತನಾಡಿ ಆಗ್ನೇಯ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಎನ್‌.ಡಿ.ಎ ಅಭ್ಯರ್ಥಿ ಕೆ.ಎಂ. ಸುರೇಶ್ ಪರ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಹೇಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆವರಿನ ಹಣಕ್ಕೆ ಮೋದಿ ಸರ್ಕಾರದ ಕಂಟಕ: ಹೊಸ ಪಿಎಫ್...

ತಮ್ಮದೇ ಬೆವರಿನ ಗಳಿಕೆ, ತುರ್ತು ಬದುಕಿನ ಆಸರೆ ಪಿಎಫ್. ಆದರೆ ಇಂದು ಆ ಹಣವನ್ನು ಪಡೆಯಲಾಗದೆ ಗಾರ್ಮೆಂಟ್ಸ್ ಕಾರ್ಮಿಕರು ಕಣ್ಣೀರು ಹಾಕುವಂತಾಗಿದೆ. ಬಟ್ಟೆ ಕಾರ್ಖಾನೆಗಳ ಶ್ರಮಿಕರ ಬದುಕಿಗೆ ಕೇಂದ್ರದ ಮೋದಿ ಸರ್ಕಾರದ ಹೊಸ...

ಬಾಗಲಕೋಟೆ | ನಿಲ್ದಾಣಗಳಿದ್ದರೂ ರಸ್ತೆಯಲ್ಲೇ ಬಸ್‌ ನಿಲುಗಡೆ; ಟ್ರಾಫಿಕ್...

ಬಾಗಲಕೋಟೆ ನಗರದಲ್ಲಿ ಸುಗಮ ಸಂಚಾರಕ್ಕಾಗಿ ಬಸ್‌ ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಪ್ರಯಾಣಿಕರು ಬಿಸಿಲು, ಮಳೆಯಿಂದ ರಕ್ಷಣೆ ಪಡೆಯಲು ಆಸನ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಬಸ್‌ಗಳು ನಿಲುಗಡೆಗೊಳ್ಳಲು ಪ್ರತ್ಯೇಕ ಜಾಗವನ್ನೂ ಗುರುತಿಸಲಾಗಿದೆ. ಆದರೆ, ಬಸ್‌ಗಳು ಮಾತ್ರ ನಿಲ್ದಾಣಕ್ಕೆ...

ಅಂಬಾನಿ ರಕ್ಷಣೆಗೆ ನಿಂತಿತೇ ಮೋದಿ ಸರ್ಕಾರ; ಗೆಳೆಯನ ಹಿತ...

ಭಾರತದ ಡಿಜಿಟಲ್ ಆಕಾಶದಲ್ಲಿ ಈಗ ಜಾಗತಿಕ ದೈತ್ಯ ಎಲಾನ್ ಮಸ್ಕ್ ಮತ್ತು ದೇಶೀಯ ಕುಬೇರ ಮುಖೇಶ್ ಅಂಬಾನಿ ನಡುವೆ ಮಹಾಸಮರ ಶುರುವಾಗಿದೆ. ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಇಂಟರ್‌ನೆಟ್ ನೀಡಲು ಸಜ್ಜಾಗಿರುವ ಮಸ್ಕ್ ಅವರ...

ಎರಡೂ ಪಕ್ಷಗಳ ಮುಖಂಡರು ಪ್ರತಿ ಗ್ರಾಮದಲ್ಲಿರುವ ಪದವೀಧರ ಮತದಾರರನ್ನು ಸಂಪರ್ಕಿಸಿ, ಅಭ್ಯರ್ಥಿಯ ಪರ ಮತಯಾಚಿಸಬೇಕು. ಬೂತ್ ಮಟ್ಟದಲ್ಲಿ ಸಮನ್ವಯದಿಂದ ಕೆಲಸ ಮಾಡಬೇಕು ಎಂದು ತಿಳಿಸಿದರು.

ಇದನ್ನು ಓದಿದ್ದೀರಾ..?ಬಾಗೇಪಲ್ಲಿ | ದೆಹಲಿ ಜಂತರ್ ಮಂತರ್ ನಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಸಿಪಿಐಎಂ ಬೆಂಬಲ

ಜಿಲ್ಲಾ ಬಿಜೆಪಿ ಅಧ್ಯಕ್ಷ ಸೀಕಲ್ ರಾಮಚಂದ್ರಗೌಡ,ನಿಕಟಪೂರ್ವ ಅಧ್ಯಕ್ಷ ರಾಮಲಿಂಗಪ್ಪ,ಜೆಡಿಎಸ್ ಜಿಲ್ಲಾ ಅಧ್ಯಕ್ಷ ಮುಕ್ತ ಮುನಿಯಪ್ಪ,ಎನ್‌ಡಿಎ ಮುಖಂಡ ಹರಿನಾಥರೆಡ್ಡಿ,ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಬಿ.ಆರ್.ನರಸಿಂಹನಾಯ್ದು,ಆಚಿಗಾನಪಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸೇವಾ ಸಹಕಾರ ಸಂಘದ ಅಧ್ಯಕ್ಷ ಜೆ.ಪಿ.ಚಂದ್ರಶೇಖರರೆಡ್ಡಿ,ರಾಜ್ಯ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಕೋನಪರೆಡ್ಡಿ,ಜಿಲ್ಲಾ ಎಸ್ಸಿ ಮೋರ್ಚಾ ಅಧ್ಯಕ್ಷ ಆರ್.ವೆಂಕಟೇಶ್,ಬಿಜೆಪಿ ಮಂಡಲಾಧ್ಯಕ್ಷ ಆರ್.ಪ್ರತಾಫ್,ಪ್ರಧಾನ ಕಾರ್ಯದರ್ಶಿ ಬಿ.ಎಸ್.ಲೋಕೆಶ್ ಮತ್ತಿತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉತ್ತರ ಕನ್ನಡ | ಪರಿಶಿಷ್ಟ ಜಾತಿ, ಪಂಗಡದ ಅನುದಾನ ಸಮರ್ಪಕ ಬಳಕೆಗೆ ಜಿಲ್ಲಾಧಿಕಾರಿ ಸೂಚನೆ

ಉತ್ತರ ಕನ್ನಡ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಅಭಿವೃದ್ಧಿಗಾಗಿ ವಿವಿಧ...

ಬೀಳಗಿ | ಅ.18ರಂದು ‘ಬಸವ-ಭೀಮ ಸಂಗಮ’ ಸಮಾವೇಶ

ಜಾತ್ಯತೀತ ಹಾಗೂ ಬಹುತ್ವದ ಕರ್ನಾಟಕದ ಸಂಕಲ್ಪದೊಂದಿಗೆ ಸರ್ವಜಾತಿ-ಸರ್ವಧರ್ಮ ಸಹೋದರತ್ವ ಸಾರುವ ‘ಬಸವ-ಭೀಮ...

ಗೋಕರ್ಣ | ಹಾಪ್‌ಮೂನ್ ಬೀಚ್‌ನಲ್ಲಿ ಎರಡು ಬೋಟ್‌ಗಳಿಗೆ ಹಾನಿ: ₹1.80 ಲಕ್ಷ ನಷ್ಟ

ಗೋಕರ್ಣ: ಹಾಪ್‌ಮೂನ್ ಬೀಚ್‌ನ ದಡದಲ್ಲಿ ನಿಲ್ಲಿಸಿದ್ದ ಜಲಸಾಹಸ ಕ್ರೀಡೆಗಳಿಗೆ ಬಳಸುವ ಎರಡು...

ಕೊಪ್ಪಳ | ಸರ್ಕಾರಿ ಪ್ರೌಢಶಾಲೆಯ ರಂಗಮಂದಿರದ ಕೊಠಡಿಯಲ್ಲಿ ಬೆಂಕಿ: ಕ್ರೀಡಾ ಸಾಮಗ್ರಿಗಳು ಭಸ್ಮ

ಕನಕಗಿರಿ ತಾಲೂಕಿನ ಹುಲಿಹೈದರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ರಂಗಮಂದಿರದ ಕೊಠಡಿಯಲ್ಲಿ ಮುಂಜಾನೆ...