ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ವಿರುದ್ಧದ ಪ್ರತಿಭಟನೆಗೆ ದೇಶದ ವಿವಿಧ ಭಾಗಗಳಿಂದ ಬೆಂಬಲ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ದೆಹಲಿ ಮತ್ತು ಮುಂಬೈನಲ್ಲಿ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗೆ ತೆರಳುತ್ತಿದ್ದ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಎಂ.ಎ. ಬೇಬಿ, ಹಿರಿಯ ಎಡಪಂಥೀಯ ನಾಯಕಿ ಬೃಂದಾ ಕಾರಟ್ ಸೇರಿದಂತೆ ಹಲವು ನಾಯಕರನ್ನು ದೆಹಲಿ ಪೊಲೀಸರು ಶನಿವಾರ ವಶಕ್ಕೆ ಪಡೆದಿದ್ದಾರೆ ಇದನ್ನು ಸಿಪಿಐಎಂ ಪಕ್ಷ ತೀವ್ರವಾಗಿ ಖಂಡಿಸುತ್ತೆ ಎಂದು ಸಿಪಿಐಎಂ ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಎಂ.ಪಿ.ಮುನಿ ವೆಂಕಟೇಶಪ್ಪ ತಿಳಿಸಿದರು.
ಇಂದು ನವದೆಹಲಿಯಲ್ಲಿ ಚುನಾವಣಾ ಮುಖ್ಯ ಕಮಿಷನರ್ ಗ್ಯಾನೇಶ್ ಕುಮಾರ್ ರಾಜಿನಾಮೆ ಹಾಗು ಅಕ್ರಮ ಎಸ್.ಐ.ಆರ್ ರದ್ದು ಪಡಿಸಲು ಒತ್ತಾಯಿಸಿ ಸಿಜೆಪಿ ಮತ್ತಿತರೆ ಎಡ ಮತ್ತು ಪ್ರಜಾಸತ್ತಸತ್ಮಕ ಸಂಘಗಳು ಕರೆ ನೀಡಿದ್ದ ಜಂತರ್ ಮಂತರ್ ಬೃಹತ್ ಪ್ರತಿಭಟನಾ ಪ್ರದರ್ಶನಕ್ಕೆ ಹೆದರಿ, ಶ್ರೀ ನರೇಂದ್ರ ಮೋದಿ ತನ್ನ ಪ್ರಧಾನ ಮಂತ್ರಿ ಸ್ಥಾನವನ್ನು ಹಾಗು ಗೃಹ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡು ಪ್ರಜಾಸತ್ತಾತ್ಮಕ ಚಳುವಳಿಯನ್ನು ದಮನ ಮಾಡಲು ಯತ್ನಿಸಿದ ದುಷ್ಕೃತ್ಯವನ್ನು ಸಿಪಿಐಎಂ ಡಿವೈಎಫ್ಐ, ಎಸ್ಎಫ್ಐ ಸಂಘಟನೆಗಳು ಇಂದು ಬಾಗೇಪಲ್ಲಿಯಲ್ಲಿ ಮೆರವಣಿಗೆ ನಡೆಸಿ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಲಾಯಿತು.
ತದನಂತರ ಮಾತನಾಡಿ ಎಸ್‌ಐಆರ್ ಮೂಲಕ ದೊಡ್ಡ ಪ್ರಮಾಣದಲ್ಲಿ ಮತದಾರರ ಹೆಸರುಗಳನ್ನು ಅಳಿಸಲಾಗಿದೆ ಎಂಬುದು ಪ್ರತಿಭಟನಾಕಾರರ ಆರೋಪವಾಗಿದೆ. ಮತದಾರರ ಹಕ್ಕುಗಳನ್ನು ರಕ್ಷಿಸಬೇಕು, ಮುಖ್ಯ ಚುನಾವಣಾ ಆಯುಕ್ತರು ರಾಜೀನಾಮೆ ನೀಡಬೇಕು ಮತ್ತು ಎಸ್‌ಐಆರ್ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು ಎಂಬುದು ಹೋರಾಟಗಾರರ ಪ್ರಮುಖ ಬೇಡಿಕೆಗಳಾಗಿವೆ ಎಂದು ಹೇಳಿದರು.
ದಮನಕಾರಿ ಕ್ರಮಗಳಿಂದ ಜನರು ತಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳುವ ಸಂಕಲ್ಪವನ್ನು ಎಂದಿಗೂ ಅಳಿಸಲು ಸಾಧ್ಯವಿಲ್ಲ ಎಂಬುದನ್ನು ಮೋದಿ ಸರ್ಕಾರ ಮತ್ತು ಸಂಘ ಪರಿವಾರ ಅರ್ಥಮಾಡಿಕೊಳ್ಳಬೇಕು” ಎಂದು ಅವರು ತಿಳಿಸಿದ್ದಾರೆ.
ಬ್ಯಾರಿಕೇಡ್‌ಗಳು ರಸ್ತೆಗಳನ್ನು ತಡೆಯಬಹುದು. ಆದರೆ ಪ್ರಜಾಪ್ರಭುತ್ವದ ಪಯಣವನ್ನು ತಡೆಯಲು ಸಾಧ್ಯವಿಲ್ಲ. ತಮ್ಮ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ರಕ್ಷಿಸಲು ಸಂಕಲ್ಪ ಮಾಡಿರುವ ಜನರ ಧ್ವನಿಯನ್ನು ಯಾವುದೇ ಶಕ್ತಿಯಿಂದಲೂ ಅಡಗಿಸಲು ಸಾಧ್ಯವಿಲ್ಲ” ಎಂದು ಹೇಳಿದರು.
ಇದನ್ನು ಓದಿದ್ದೀರಾ..?ಕೋಲಾರ | ರಾಜು ಶ್ರೀನಿವಾಸಪ್ಪ ಹುಟ್ಟುಹಬ್ಬ: ಅನಾಥಾಶ್ರಮದಲ್ಲಿ ಅನ್ನಸಂತರ್ಪಣೆ, ರೋಗಿಗಳಿಗೆ ಹಣ್ಣು ವಿತರಣೆ
ಪ್ರತಿಭಟನೆಯಲ್ಲಿ ತಾಲ್ಲೂಕು ಕಾರ್ಯದರ್ಶಿ ರಘುರಾಮರೆಡ್ಡಿ, ದೇವಿ ಕುಂಟೆ ಶ್ರೀನಿವಾಸ, ಚನ್ನರಾಯಪ್ಪ, ಡಿ.ಟಿ ಮುನಿಸ್ವಾಮಿ, ಎಸ್ ಎಫ್ ಐ ನ ಸೋಮಶೇಖರ, ಮುನಿಯಪ್ಪ, ಅಶ್ವತ್ಥನಾರಾಯಣ, ಚಂಚುರಾಯನಪಲ್ಲಿ ಕೃಷ್ಣಪ್ಪ, ಜಿ ಕೃಷ್ಣಪ್ಪ, ಮುಸ್ತಫಾ , ಇಮ್ರಾನ್, ಗಣೇಶ,ಆನಂದ,ರೈಸಲ್ ಮುಂತಾದವರು ಉಪಸ್ಥಿತರಿದ್ದರು.




