ಬಾಗೇಪಲ್ಲಿ | ಶಾಸಕ ಸುಬ್ಬಾರೆಡ್ಡಿಯ ಎಲ್ಲಾ ಹಗರಣಗಳ ವಿರುದ್ದ ನ.11 ರಂದು ಬೃಹತ್ ಹೋರಾಟ

Date:

ಸರ್ಕಾರಿ ಅಧಿಕಾರಿಗಳಿಂದ, ಕ್ರಷರ್ ಮಾಲೀಕರಿಂದ ವಸೂಲಿ ಮಾಡಿರುವ ಹಾಗೂ ಬಡ ರೈತರಿಂದ ಕಬಳಿಸಿರುವ ಜಮೀನುಗಳಿಂದ ಬಂದಿರುವ ಅಕ್ರಮ ಹಣದಿಂದ ಸಮಾಜ ಸೇವೆ ಮಾಡಿ ಕ್ಷೇತ್ರದ ಜನರನ್ನು ಮೋಸ ಮಾಡುತ್ತಿರುವ ಶಾಸಕ ಸುಬ್ಬಾರೆಡ್ಡಿಯ ಎಲ್ಲಾ ಹಗರಣಗಳ ವಿರುದ್ದ ನ.11 ರಂದು ನಡೆಯಲಿರುವ ಬೃಹತ್ ಹೋರಾಟದಲ್ಲಿ ಪ್ರತಿಯೊಬ್ಬರು ಭಾಗವಹಿಸುವಂತೆ ಎನ್‌ಡಿಎ ಮುಖಂಡ ಹರಿನಾಥರೆಡ್ಡಿ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ಬಾಗೇಪಲ್ಲಿ ಪಟ್ಟಣ ಹೊರವಲಯದಲ್ಲಿರುವ ಹರಿನಾಥರೆಡ್ಡಿ ಪಾರ್ಮ್ ಹೌಸ್‌ನಲ್ಲಿ ಅಯೋಜಿಸಿದ್ದ 71 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಭೂ ಹಗರಣಗಳ ಭ್ರಷ್ಟಾಚಾರದ ಬಗ್ಗೆ ದಾಖಲೆ ಬಿಡುಗಡೆಗೊಳಿಸಿ ಉತ್ತರ ನೀಡುವಂತೆ ಶಾಸಕ ಸುಬ್ಬಾರೆಡ್ಡಿ ನೇರ ಸವಾಲ್ ಹಾಕಿದರೂ ಪ್ರತಿಕ್ರಿಯೆ ನೀಡದ ಹಿನ್ನಲೆಯಲ್ಲಿ ಎನ್‌ಡಿಎವತಿಯಿಂದ ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿತ್ತು, ವಿಧಾನ ಪರಿಷತ್ ಚುನಾವಣೆ ನೀತಿ ಸಂಹಿತೆ ಕಾರಣ ಪೊಲೀಸ್ ಇಲಾಖೆಯಿಂದ ಅನುಮತಿ ಸಿಗಲಿಲ್ಲ, ಘಂಟ್ಲಮಲ್ಲಮ್ಮ ಕಣಿವೆ ಬಳಿಯ ರೈತರಿಗೆ ಮೋಸ ಮಾಡಿ 1 ಕೋಟಿ ರೂ ಬೆಲೆಬಾಳುವ ಜಮೀನಿಗೆ ಕೇವಲ 20 ರಿಂದ 25 ಲಕ್ಷ ರೂ ಕೊಟ್ಟು ಶಾಸಕ ಸುಬ್ಬಾರೆಡ್ಡಿ ತನ್ನ ಬಿನಾಮಿ ಸಂಸ್ಥೆ ಸಾಯಿ ಎಂಟರ್ ಪ್ರೆöÊಸಸ್ ಮೂಲಕ 60 ಎಕರೆ ಜಮೀನು ಲಪಟಾಯಿಸಿ ಅಕ್ರಮವಾಗಿ ಹಣ ಸಂಪಾಧನೆ ಮಾಡಲು ಹೊರಟಿದ್ದಾರೆ, ವಿವಿಧ ಇಲಾಖೆಯ ಸರ್ಕಾರಿ ಅಧಿಕಾರಿಗಳಿಂದ, ಕ್ರಶರ್ ಮಾಲೀಕರಿಂದ ವಸೂಲಿ ಮಾಡುತ್ತಿರುವ ಕಮೀಷನ್ ಹಣದಲ್ಲಿ ಬಡವರಿಗೆ ಸೀರೆಗಳು ಹಂಚಿ ಸಾಮೂಹಿಕ ವಿವಾಹಗಳು ಮಾಡಿ ಸಮಾಜ ಸೇವೆ ಹೆಸರಿನಲ್ಲಿ ಕ್ಷೇತ್ರದ ಜನರನ್ನು ಕಳೆದ 13 ವರ್ಷಗಳಿಂದ ಮೋಸ ಮಾಡುತ್ತಿದ್ದಾರೆ. ಅದೇ ರೀತಿಯಲ್ಲಿ ಕೈಗಾರಿಕೆಗಳ ಅಭಿವೃದ್ದಿ ಮಾಡುತ್ತೇನೆಂದು ಹೇಳಿ ಹೊಸಹುಡ್ಯ, ಕೊಂಡಿರೆಡ್ಡಿಪಲ್ಲಿ ಗ್ರಾಮಗಳ ವ್ಯಾಪ್ತಿಯಲ್ಲಿ ಸರ್ಕಾರಕ್ಕೆ ಸೇರಬೇಕಾಗಿರುವ ನೂರಾರು ಎಕರೆ ಸರ್ಕಾರಿ ಜಮೀನನ್ನು ತನ್ನ ಸಂಬಂಧಿಕರ ಹೆಸರಿಗೆ ನೊಂದಣಿ ಮಾಡಿಸಿಕೊಂಡು ಸರ್ಕಾರದಿಂದ ಸಾವಿರಾರು ಕೋಟಿ ರೂ ಹಣ ಪರಿಹಾರವಾಗಿ ಪಡೆದುಕೊಳ್ಳುತ್ತಿದ್ದಾರೆ. ಶಾಸಕ ಸುಬ್ಬಾರೆಡ್ಡಿರವರ ಎಲ್ಲ ಭೂ ಹಗರಣಗಳಿಗೆ ಅಡಳಿತರೂಡ ಕಾಂಗ್ರೆಸ್ ಸರ್ಕಾರ ಮತ್ತು ಜಿಲ್ಲಾಡಳಿತ, ತಾಲೂಕು ಆಡಳಿತ ಕುಮ್ಮಕ್ಕು ನೀಡುತ್ತಿದೆ. ಅದ್ದರಿಂದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಹಾಗೂ ಕಾಂಗ್ರೆಸ್ ಸರ್ಕಾರದ ಭ್ರಷ್ಟಚಾರಗಳ ವಿರುದ್ದ ನ.11 ರಂದು ಸಂಸದ ಡಾ.ಕೆ.ಸುಧಾಕರ್ ನೇತೃತ್ವದಲ್ಲಿ ಬಾಗೇಪಲ್ಲಿಯಲ್ಲಿ ಬೃಹತ್ ಹೋರಾಟ ನಡೆಸಲಾಗುತ್ತಿದ್ದು ರೈತರು, ಹೋರಾಟಗಾರರು, ಕಾರ್ಯಕರ್ತರು ಬಾಗವಹಿಸುವಂತೆ ಹರಿನಾಥರೆಡ್ಡಿ ಕರೆ ನೀಡಿದ್ದಾರೆ.

ಬಾಗೇಪಲ್ಲಿ ಪಟ್ಟಣದ ವಿವಿಧ ರಸ್ತೆಗಳಲ್ಲಿ ಕಾರು ರ‍್ಯಾಲಿ ನಡೆಸಿ 71 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಆಚರಿಸಿ ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು.


ಇದನ್ನು ಓದಿದ್ದೀರಾ..?ಕೋಲಾರ | ವಾಲ್ಮೀಕಿ, ಅಂಬೇಡ್ಕರ್ ನಮ್ಮ ನಿಜವಾದ ಹೀರೋಗಳು: ಶಾಸಕ ಕೊತ್ತೂರು ಮಂಜುನಾಥ್

- Advertisement -

ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕರಾದ ವಿ.ವೆಂಕಟಶಿವಾರೆಡ್ಡಿ, ಪಿ.ಎ.ನಾಗರಾಜುರೆಡ್ಡಿ, ಮುಖಂಡರಾದ ಜೆ.ಪಿ.ರೆಡ್ಡಿ, ಆ.ನ.ಮೂರ್ತಿ, ಎಂ.ಬಿ.ಲಕ್ಷ್ಮೀ ನರಸಿಂಹಯ್ಯ, ಎ.ಗೋಪಾಲಕೃಷ್ಣ, ಜಿ.ವಿ.ಕೃಷ್ಣಾರೆಡ್ಡಿ, ಎಸ್.ಆರ್.ಲಕ್ಷ್ಮೀನಾರಾಯಣ, ಗುಜ್ಜೇಪಲ್ಲಿ ಸುಧಾಕರರೆಡ್ಡಿ, ಜಿಲಕರಪಲ್ಲಿ ಅಮರಪ್ಪ, ಸುದರ್ಶನ್‌ನಾಯ್ಡು, ಎಸ್.ವೈ.ವೆಂಕಟರಮಣಾರೆಡ್ಡಿ, ಶ್ರೀನಿವಾಸರೆಡ್ಡಿ, ಸುನೀಲ್, ಗಣೇಶ್‌ರೆಡ್ಡಿ, ಮಲ್ಲಿಕಾರ್ಜುನ ಮತ್ತಿತರರು ಇದ್ದರು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾವೇರಿ | ಸಕ್ಕರೆ ಸಚಿವ ರುದ್ರಪ್ಪ ಲಮಾಣಿ ಮನೆ ಮುಂದೆ ನಡೆಯುತ್ತಿದ್ದ ಧರಣಿ ಹಿಂಪಡೆದ ರೈತರು

"ಕಬ್ಬಿಗೆ ಬೆಂಬಲ ಬೆಲೆ ನಿಗದಿ, ಸ್ವಾಮಿನಾಥನ್ ವರದಿ ಜಾರಿಗೆ ಆಗುವವರೆಗೂ ಕಾರ್ಖಾನೆಗಳನ್ನು...

ಚಿಂತಾಮಣಿ | ಯಾದವ ಸಮುದಾಯದ ಶೈಕ್ಷಣಿಕ,ಆರ್ಥಿಕ ಹಾಗೂ ರಾಜಕೀಯ ಅಭಿವೃದ್ಧಿಗೆ ಒತ್ತು : ಮುನೇಗೌಡ

ಯಾದವ ಸಂಘದ ಜಿಲ್ಲಾಧ್ಯಕ್ಷರು ಹಾಗೂ ವಕೀಲರಾದ ಮುನೇಗೌಡ ಅವರು ಚಿಂತಾಮಣಿ ತಾಲ್ಲೂಕಿನ...

ಕಬ್ಬು ಬೆಳೆಗಾರರಿಂದ ಮೈಸೂರು-ಊಟಿ ರಾಷ್ಟ್ರೀಯ ಹೆದ್ದಾರಿ ಬಂದ್

ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿಪಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ...