ಚಿಕ್ಕಬಳ್ಳಾಪುರ | ಸಾಮೂಹಿಕ ನಮಾಜ್‌ಗೆ ಆಗಮಿಸಿದ ಸಚಿವ ಡಾ. ಕೆ ಸುಧಾಕರ್‌ಗೆ ವಿರೋಧ

Date:

  • ಪೋಷಾಕು, ಟೋಪಿ ಧರಿಸಲು ನಿರಾಕರಿಸಿದ ಸಚಿವ
  • ರಂಜಾನ್ ಸಭೆಯಲ್ಲಿ ಮುಜುಗರಕ್ಕೊಳಗಾದ ಸುಧಾಕರ್

ರಂಜಾನ್‌ ಹಬ್ಬದ ಪ್ರಯುಕ್ತ ಸಾಮೂಹಿಕ ನಮಾಜ್‌ಗೆ ಆಗಮಿಸಿದ ಸಚಿವ ಡಾ. ಕೆ ಸುಧಾಕರ್‌ ವಿರುದ್ಧ ಮುಸ್ಲಿಂ ಬಾಂಧವರು ಅಸಮಧಾನ ವ್ಯಕ್ತಪಡಿಸಿದ್ದಾರೆ.

ಚಿಕ್ಕಬಳ್ಳಾಪುರ ನಗರದ ದಿನ್ನೆಹೊಸಳ್ಳಿ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ರಂಜಾನ್‌ ಹಬ್ಬದ ಪ್ರಯುಕ್ತ ಸಾಮೂಹಿಕ ನಮಾಜ್‌ ಮಾಡುತಿದ್ದ ಸಂದರ್ಭದಲ್ಲಿ ಪ್ರತಿ ಬಾರಿ ಶಾಸಕ ಕೆ ಸುಧಾಕರ್‌ ಅವರು ಮುಸ್ಲಿಮರ ಟೋಪಿ ಹಾಕಿಕೊಂಡು ಪ್ರಾರ್ಥನೆಯಲ್ಲಿ ಬಾಗವಹಿಸುತಿದ್ದರು.

ಈ ಭಾರಿ ನಮಾಜ್‌ನಲ್ಲಿ ಭಾಗವಹಿಸಿ ಯಾವುದೇ ಪೋಷಾಕು, ಟೋಪಿ ಧರಿಸಲು ನಿರಾಕರಿಸಿದ್ದಾರೆ. ಸಚಿವರ ಈ ವರ್ತನೆಯಿಂದ ಮುಸ್ಲಿಮರು ವಿರೋಧ ವ್ಯಕ್ತಪಡಿಸಿದ್ದಲ್ಲದೆ ಅಕ್ಷೇಪಣೆಯನ್ನೂ ವ್ಯಕ್ತಪಡಿಸಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ವೇಳೆ ಕೆಲವರು ಭಾರೀ ವಿರೋಧ ವ್ಯಕ್ತಪಡಿಸಿದ್ದರಿಂದ ಸುಧಾಕರ ಅವರಿಗೆ ಮುಜುಗರವೂ ಆಗಿದೆ. ನಂತರ ಬೆಂಬಲಿಗರು ಮತ್ತು ಕೆಲವು ಮುಸ್ಲಿಂ ಯುವಕರ ನಡುವೆ ವಾಗ್ವಾದ ನಡೆಯಿತು. ಬಳಿಕ ಮುಸ್ಲಿಂ ಮುಖಂಡರು ಎಲ್ಲರನ್ನೂ ಸಮಾಧಾನದಿಂದ ಇರುವಂತೆ ಕೇಳಿಕೊಂಡಿದ್ದಾರೆ.

ಈ ಸುದ್ದಿ ಓದಿದ್ದೀರಾ? ಗದಗ | ಭಾವೈಕ್ಯತೆಯಿಂದ ರಂಜಾನ್‌ ಆಚರಣೆ; ‘ಡಿವೈಎಫ್ಐ’ನಿಂದ ಪಾನಕ ವಿತರಣೆ

ಇದೇ ಸಂದರ್ಭದಲ್ಲಿ ಕಾಂಗ್ರೆಸ್‌ನ ಅಭ್ಯರ್ಥಿ ಪ್ರದೀಪ್‌ ಈಶ್ವರ್‌ ಮತ್ತು ಜೆಡಿಎಸ್‌ ಅಭ್ಯರ್ಥಿ ಕೆ ಪಿ ಬಚ್ಚೇಗೌಡ ಮುಸ್ಲಿಂ ಪೋಷಾಕು ಧರಿಸಿ ನಮಾಜ್‌ನಲ್ಲಿ ಭಾಗವಹಿದ್ದರು. ಟೋಪಿ ಧರಿಸಿದ್ದರಿಂದ ಇವರನ್ನು ಯಾರೂ ಆಕ್ಷೇಪಿಸಲಿಲ್ಲ, ವಿರೋಧಿಸಲಿಲ್ಲ. ಆದರೆ, ಸುಧಾಕರ್‌ ಅವರಿಗೆ ಮಾತ್ರ ಭಾರೀ ವಿರೋಧ ವ್ಯಕ್ತವಾಗಿದ್ದರಿಂದ ಮುಜುಗರಕ್ಕೀಡಾಗಿದ್ದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಆಗ್ರಹ

ದಾವಣಗೆರೆಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ ಹಲವಾರು ವರ್ಷಗಳಿಂದ ಬೇಡಿಕೆ ಇಡಲಾಗಿದೆ. ಸರ್ಕಾರ...

ಕಲಬುರಗಿ | ‘ಅಂಬೇಡ್ಕರ್ ಮತ್ತು ಗಾಂಧೀಜಿ – ಒಂದು ನದಿಯ ಎರಡು ದಡಗಳು’

ಬಾಬಾ ಸಾಹೇಬ್ ಅವರ 133ನೇ ಜಯಂತಿಯ ದಿನದಂದ ನಾವು ಹೆಚ್ಚೆಚ್ಚು ಎಷ್ಟೇ...

ಗದಗ | ದೊಡ್ಡೂರು ಗ್ರಾಮದಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ

ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ದೊಡ್ಡೂರ ಗ್ರಾಮದಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್...

ರಾಯಚೂರು | ಅಂಬೇಡ್ಕರ್ ಜಯಂತಿಯಂದು ಮಾಂಸ ಮಾರಾಟ ನಿಷೇಧ; ಖಂಡನೆ

ಡಾ. ಬಿ.ಆರ್ ಅಂಬೇಡ್ಕರ್ ಜಯಂತಿ ಹಿನ್ನೆಲೆ ಏಪ್ರಿಲ್ 14ರಂದು ರಾಯಚೂರು ಜಿಲ್ಲೆಯ...