ಚಿಕ್ಕಮಗಳೂರು | ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರಿಂದ ಸಂಕೇತಿಕಾ ಉಪವಾಸ ಧರಣಿ

Date:

ಚಿಕ್ಕಮಗಳೂರು ಜಿಲ್ಲೆಯ ಅಗಳಗಂಡಿ ಗ್ರಾಮ ಪಂಚಾಯಿತಿಯ ಹೆಗ್ಗಾರು ಗ್ರಾಮದ ವ್ಯಾಪ್ತಿಯಲ್ಲಿ ಬರುವ ಹುಲ್ತಾಳ್, ನಕೃಗೋಳಿ, ಹಾಗೂ ಬಂಗಾಡಿ ಈ ಕಾಡು ಪ್ರದೇಶದಲ್ಲಿ ಅರಣ್ಯ ಇಲಾಖೆ ಕಾಡೋಳಗೆ ಗಿಡ ನೆಡುವ ಯೋಜನೆಯನ್ನು ವಿರೋಧಿಸಿ ಆ ಗ್ರಾಮದ ಗ್ರಾಮಸ್ಥರು ಶನಿವಾರ ಉಪವಾಸ ಸತ್ಯಗ್ರಹ ಮಾಡಿದ್ದಾರೆ.

- Advertisement -

ಅರಣ್ಯ ಇಲಾಖೆಯಿಂದ ಈ ಹಿಂದೇ ಗಿಡ ನೆಡಲು ಮುಂದದಾಗ ಪ್ರತಿಭಟನೆಯನ್ನು ನೆಡೆಸಲಾಗಿತ್ತು. ನಂತರವೂ ಮತ್ತೆ ಕಾಡೋಳಗೆ ಗಿಡ ನೆಡಲು ಗುಂಡಿ ತೊಡಲು ಮುಂದಾದಾಗ ಶುಕ್ರವಾರ ಗ್ರಾಮಸ್ಥರು ತಡೆಯಲು ಹೋದಾಗ ಹೋದಾಗ ಫಾರೆಸ್ಟ್ರ ಹಾಗೂ ಊರಿನ ಗ್ರಾಮಸ್ಥರು ನಡುವೆ ಮಾತಿನ ಚಕಮಕಿ ನಡೆದಿದ್ದು, ಈ ಕುರಿತು ಉಪವಾಸ ಸತ್ಯಾಗ್ರಹ ಮಾಡಲು  ಸುತ್ತಮುತ್ತಲಿನ ಗ್ರಾಮಸ್ಥರು ಮುಂದಾಗಿ, ಸಂಕೇತಿಕಾ ಉಪವಾಸ ಧರಣಿ ಮಾಡಿ ಈ ಸಭೆಯಲ್ಲಿ ಈ ನಿರ್ಣಯವನ್ನು ಚರ್ಚಿಸಲಾಯಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ ಕಲ್ಪಿತ ಬಲವನ್ನು ಮೀರಿ, ಬಸವಂತಪ್ಪ ಬೆಳೆಯಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ. ಪೌರಕಾರ್ಮಿಕರ ಮಗನಾಗಿ ಹುಟ್ಟಿ, ಸಚಿವ ಸ್ಥಾನದವರೆಗೆ ಬೆಳೆದವರು ಕೆ.ಎಸ್....

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ,...

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎದೆ ತಟ್ಟಿಕೊಳ್ಳುತ್ತಿದೆ. ಶತೃ ದೇಶವನ್ನು ಮಣಿಸುವುದು ಯಾರಿಗಾದರೂ ಹೆಮ್ಮೆಯೇ. ಆದರೆ, ದೇಶದ ಅಖಂಡತೆಗೆ ಅತಿ...

ಎಸ್‌ಐಆರ್‌ | 13 ಕೋಟಿ ಮತಗಳ ಮಾರಣಹೋಮ

ಭಾರತೀಯ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಅತ್ಯಂತ ಪ್ರಮುಖ ಅಡಿಪಾಯವೇ ಮತದಾನದ ಹಕ್ಕು. ದೇಶದ ಪ್ರಜಾಪ್ರಭುತ್ವದ ಮೌಲ್ಯಗಳು ಉಳಿದುಕೊಂಡಿರುವುದೇ ಚುನಾವಣಾ ವ್ಯವಸ್ಥೆಯ ಮೇಲಿರುವ ಸಾರ್ವಜನಿಕರ ಅಪಾರ ನಂಬಿಕೆಯಿಂದ. ಆದರೆ, ಚುನಾವಣಾ ಆಯೋಗವು (ECI) ದೇಶಾದ್ಯಂತ ಜಾರಿಗೆ...

ಮಲೆನಾಡಲ್ಲಿ ಇಂತಹ ಯೋಜನೆಗಳು ಅವೈಜ್ಞಾನಿಕ ವಾಗಿದ್ದು,ಅನಾದಿಕಾಲದಿಂದಲೂ ಕಾಡಿನ ನಡುವೆ ಹಾಗೂ ಕಾಡನ್ನು ಉಳಿಸುತ್ತ,ಇಲ್ಲೇ ಇದ್ದು ಬದುಕನ್ನು ಕಟ್ಟಿ ಜೀವನ ಮಾಡಿಕೊಂಡು ಬರುತ್ತಿರುವ ಈ ಹೊತ್ತಿನಲ್ಲಿ ಇಂತಹ ಯೋಜನೆಯನ್ನು ಜಾರಿ ತಂದು ಮಲೆನಾಡಿಗರ ಹಾಗೂ ಅದಿವಾಸಿ ಜನರ ನಿದ್ದೆ ಕೆಡಿಸುವ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದು, ಮಲೆನಾಡಿನ ಜನರು ನಾಗರ ಬನ, ದೇವರ ಬನ, ಸೊಪ್ಪಿನ ಹಾಡ್ಯಾ ಹಾಗೂ ಒಳಹಕ್ಲು ಎಂದು ಮನೆ ಸುತ್ತಮುತ್ತಲಿನ  ಕಾಡು ಗುಡ್ಡಗಳನ್ನು ರಕ್ಷಿಸಿಕೊಂಡು ಬಂದಿದ್ದು ಇತ್ತೀಚಿನ ದಿನಗಳಲ್ಲಿ ಸೆಕ್ಷನ್ 4(1), ಕಾಯ್ದೆಯಡಿ ತಂದು ಈ ಎಲ್ಲಾ ಕಾಡು ಗುಡ್ಡಗಳನ್ನು   ಇಲಾಖೆ ತನ್ನ ಸುಪರ್ದಿಗೆ ತೆಗೆದುಕೊಳ್ಳುತ್ತ ಜನರ ಬದುಕನ್ನು ಕಿತ್ತುಕೊಳ್ಳುತ್ತಿದೆ. ನಾವು ಶತಮಾನದಿಂದಲೂ ಹುಟ್ಟಿಬೆಳೆದ ಕಾಡಲ್ಲಿ  ಅದಿವಾಸಿ ರೈತರು ಬದುಕನ್ನು ಕಟ್ಟಿಕೊಂಡಿದ್ದರು, ಕನಿಷ್ಠ ಬದುಕನ್ನು ಕಟ್ಟಿಕೊಳ್ಳಲು ಮಾಡಿಕೊಂಡಿದ್ದ ಸಾಗುವಳಿ ಭೂಮಿಗೆ ಹಕ್ಕುಪತ್ರವನ್ನು ಈ ಕಾಯ್ದೆಗಳಿಂದ ಕೊಡಲಾಗುತ್ತಿಲ್ಲ. ತಕ್ಷಣ ಈ ರೀತಿಯ ಯೋಜನೆ ಕೈ ಬಿಟ್ಟು ಇಲ್ಲಿನ ಮೂಲನಿವಾಸಿಗಳಿಗೆ ಸಾಗುವಳಿ ಭೂಮಿಗೆ ಮತ್ತು ವಾಸಿಸುವ ಮನೆಗೆ ಹಕ್ಕುಪತ್ರವನ್ನು ನೀಡುವುದರೊಂದಿಗೆ ನೈಸರ್ಗಿಕವಾಗಿರುವ ಮಲೆನಾಡಿನ ಗುಡ್ಡ, ಕಾಡುಗಳನ್ನು ಅಲ್ಲಿನ ಜನರು ಹಿಂದೆ ಹೇಗೆ ರಕ್ಷಣೆ ಮಾಡಿಕೊಂಡು ಬಂದಿದ್ದರೋ ಹಾಗೆ ಅ ಹಕ್ಕು ಅಲ್ಲಿನ ಜನರಿಗೆ ನೀಡಬೇಕು ಎಂದು ಗ್ರಾಮಸ್ಥರು ಈದಿನ.ಕಾಮ್ ಜೊತೆ ಮಾತಾಡಿದ್ದಾರೆ.

ಇಲಾಖೆಯ ಬೇರೆ ಬೇರೆ ಜನಪರ ಪರಿಸರ ಯೋಜನೆಗೆ ಇಲ್ಲಿನ ಜನರ ಸಹಕಾರ ಇರುತ್ತೆ ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು. ಮುಂದಿನ ದಿನಗಳಲ್ಲಿ ಈ ರೀತಿಯ ಕಾಡುಪ್ರದೇಶದಲ್ಲಿ ಗಿಡ ನೆಡುವ ಯೋಜನೆಯನ್ನು ಮಲೆನಾಡಿನ ರೈತರೊಂದಿಗೆ ಸೇರಿ ವಿರೋಧಿಸುತ್ತೇವೆ.  ಸ್ಥಗಿತಗೊಳಿಸಿರುವ ಈ ಕಾಮಗಾರಿಯನ್ನು ಇವತ್ತು ನಿಲ್ಲಿಸಿದ್ದರು ಮುಂದೆ ಶಾಶ್ವತವಾಗಿ ನಿಲ್ಲಿಸಬೇಕು. ತಪ್ಪಿದಲ್ಲಿ ಹತ್ತಾರು ಮಲೆನಾಡಿಗರೊಂದಿಗೆ ಹೋರಾಟವನ್ನು ತೀರ್ವ ಗೊಳಿಸುವುದೆಂದು ನಿರ್ಣಯಿಸಲಾಯಿತು ಎಂದು ಉಲ್ತಾಳ್ ನಿವಾಸಿ ತಿಳಿಸದರು.

ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಅರಣ್ಯ ಇಲಾಖೆ ಗಿಡ ನೆಡುವ ಯೋಜನೆ; ಖಂಡಿಸಿ ನಾಳೆ ಗ್ರಾಮಸ್ಥರಿಂದ ಉಪವಾಸ ಸತ್ಯಾಗ್ರಹ

ಈ ವೇಳೆ ಕರ್ನಾಟಕ ಜನಶಕ್ತಿಯ ಜಿಲ್ಲಾ ಕಾರ್ಯದರ್ಶಿ ಸುರೇಶ್ ಗಡಿಕಲ್, ಕರ್ನಾಟಕ ಜನಶಕ್ತಿಯ ಮಹಿಳಾ ಮುನ್ನಡೆ ರಾಧ ಹಾಗಲಗಂಚಿ,ಪರಿಸರವಾದಿ ಗುರುಮೂರ್ತಿ ಜೋಗಿಬೈಲು, ಸುಲೋಚನಾ ಹುಲ್ತಾಳ್, ಲೀಲಾವತಿ, ಸುಶೀಲ,ಹೇಮಾ,ರಾಜೇಶ್,ವಿನಯ್, ಕೃಪ, ಹರೀಶ್ ಹಾಗೂ ಗೋಪಾಲಗೌಡ ಹಾಗೂ ಇನ್ನಿತರರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು | ಆನೆ ದಾಳಿಗೆ ವಾಕಿಂಗ್ ತೆರಳಿದ್ದ ವ್ಯಕ್ತಿ ಬಲಿ

ಇಂದು ಮುಂಜಾನೆ ವಾಕಿಂಗ್ ತೆರಳಿದ್ದ ವ್ಯಕ್ತಿಯೊಬ್ಬರು ಆನೆ ದಾಳಿಗೆ ಮೃತಪಟ್ಟಿರುವ ಘಟನೆ...

ಮುಂಡಗೋಡ | ಮೊಬೈಲ್ ಅಂಗಡಿ ಕಳ್ಳತನ: ನಾಲ್ವರು ವಿದ್ಯಾರ್ಥಿಗಳ ಬಂಧನ

ಮೊಬೈಲ್ ಅಂಗಡಿಯ ಬೀಗ ಒಡೆದು ವಿವಿಧ ಎಲೆಕ್ಟ್ರಾನಿಕ್ ವಸ್ತುಗಳನ್ನು ಕಳವು ಮಾಡಿದ...

‘ವಿಬಿ-ಜಿ ರಾಮ್‌ ಜಿ’ ಅನುಷ್ಠಾನದಲ್ಲಿ ಎಡವಟ್ಟು! ಕೂಲಿ ಸಿಗದೆ ಕಂಗಾಲಾದ ಬಡ ಕಾರ್ಮಿಕರು

ಗ್ರಾಮೀಣ ಬಡ ಕುಟುಂಬಗಳಿಗೆ ಆಸರೆಯಾಗಬೇಕಿದ್ದ ‘ವಿಬಿ-ಜಿ ರಾಮ್ ಜಿ’ (VB-G RAM...

ಹೊನ್ನಾವರ | ಬಾಡಿಗೆ ಹಣ ಕೇಳಿದ್ದಕ್ಕೆ ಹಲ್ಲೆ, ಅವಾಚ್ಯ ಶಬ್ದಗಳಿಂದ ನಿಂದನೆ: ಪ್ರಕರಣ ದಾಖಲು

ಬಾಕಿ ಉಳಿದಿದ್ದ ಬಾಡಿಗೆ ಹಣ ನೀಡುವಂತೆ ಕೇಳಿದ ವ್ಯಕ್ತಿಗೆ ಅವಾಚ್ಯ ಶಬ್ದಗಳಿಂದ...