ವೀಕೆಂಡ್ ಜಾಲಿ ನೆಪದಲ್ಲಿ ಪ್ರವಾಸಿಗರು ಹುಚ್ಚಾಟ ಮೇರೆದಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾದ ಮುಳ್ಳಯ್ಯನಗಿರಿ ರಸ್ತೆಯಲ್ಲಿ ಬೆಳಕಿಗೆ ಬಂದಿದೆ.
ಬಾಬಾ ಬುಡನ್ ಗಿರಿ ಭಾಗಕ್ಕೆ ವೀಕೆಂಡ್ ಹಿನ್ನೆಲೆಯಲ್ಲಿ ಸಾವಿರಾರು ಪ್ರವಾಸಿಗರು ಲಗ್ಗೆ ಇಟ್ಟಿದ್ದು, ಈ ನಡುವೆ ಕೆಲವರು ಅಪಾಯಕಾರಿ ಹುಚ್ಚಾಟಗಳ ಮೂಲಕ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದ್ದಾರೆ. ಕಿರಿದಾದ ಮತ್ತು ತಿರುವುಗಳಿಂದ ಕೂಡಿರುವ ರಸ್ತೆಯಲ್ಲಿ ಗುಜರಾತ್ ಮೂಲದ ‘GJ 05 JK9800’ ನೋಂದಣಿ ಸಂಖ್ಯೆಯ ಕಾರಿನಲ್ಲಿ ಬಂದ ಪ್ರವಾಸಿಗರು ಅತಿ ವೇಗವಾಗಿ ಚಲಾಯಿಸಿ ರಂಪಾಟ ನಡೆಸಿದ್ದಾರೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಗಂಡು ಹುಲಿ ಸಾವು; ತನಿಖೆಗೆ ಆಗ್ರಹ
ಕಾರಿನ ಸನ್‌ರೂಫ್ ಹಾಗೂ ಬಾಗಿಲುಗಳನ್ನು ಸಂಪೂರ್ಣವಾಗಿ ತೆರೆದು ಹುಚ್ಚಾಟವಾಡಿದ್ದಾರೆ. ನಿಯಮಗಳನ್ನು ಗಾಳಿಗೆ ತೂರಿ ಜೀವಕ್ಕೆ ಕುತ್ತು ತರುವಂತೆ ವರ್ತಿಸಿದ ಈ ಪ್ರವಾಸಿಗರ ಉದ್ಧಟತನ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಇಂತಹ ಅಪಾಯಕಾರಿ ಡ್ರೈವಿಂಗ್ ಮತ್ತು ಹುಚ್ಚಾಟಗಳಿಗೆ ಬ್ರೇಕ್ ಹಾಕಲು ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.




