ಚಿಂತಾಮಣಿ:ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳ ಕಛೇರಿಯ ಬಳಿ ನಡೆಯುತ್ತಿರುವ ಜಂಗಮಕೋಟೆ ಕೈಗಾರಿಕೆ ಸ್ಥಾಪನೆಗೆ ಪರ ವಿರೋಧ ನಡುವೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಾಮೂಹಿಕ ನಾಯಕತ್ವದಲ್ಲಿ ಜಂಗಮಕೋಟೆ ಕೈಗಾರಿಕಾ ಪ್ರದೇಶ ಸ್ಥಾಪನೆಗೆ ಚಿಂತಾಮಣಿಯಿಂದ ರೈತರು ಬೆಂಬಲ ಘೋಷಿಸಿ ಪ್ರತಿಭಟನೆಗೆ ಹೊರಟರು.
ಈ ಸಂದರ್ಭದಲ್ಲಿ ರೈತ ಸಂಘದ ತಾಲೂಕ ಅಧ್ಯಕ್ಷರಾದ ಕದಿರೇಗೌಡ ಜಗಮಕೋಟೆ ಬಳಿ ಸಾವಿರಾರು ಎಕರೆ ಜಮೀನನ್ನು ಸರ್ಕಾರ ವಶಕ್ಕೆ ಪಡೆದುಕೊಂಡು ಕೈಗಾರಿಕೆ ಸ್ಥಾಪನೆ ಮಾಡಲು ಮುಂದಾಗಿದ್ದು ಅಲ್ಲಿ ಕೈಗಾರಿಕೆಗಳು ಸ್ಥಾಪನೆ ಆಗಬೇಕು ಹಾಗೂ ರೈತರು ಸಹ ಉಳಿಯಬೇಕು.
ಕೆಲ ಬಲಾಡ್ಯರು ಕೈಗಾರಿಕೆಗಳು ಸ್ಥಾಪನೆಗೆ ವಿರೋಧ ಮಾಡುತ್ತಿರುವುದು ಸರಿಯಲ್ಲ ಕೈಗಾರಿಕೆಗಳ ಸ್ಥಾಪನೆ ಯಾದರೆ ರೈತರ ಮಕ್ಕಳಿಗೆ ಉದ್ಯೋಗ ಸಿಗುತ್ತದೆ ಎಂದು ಹೇಳಿದರು.
ಇದನ್ನು ಓದಿದ್ದೀರಾ..? ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ
ಈ ಸಂದರ್ಭದಲ್ಲಿ ರೈತ ಸಂಘದ ರಾಜ್ಯ ವಲಯ ಸದಸ್ಯ ರಘುನಾಥ್ ರೆಡ್ಡಿ, ಭೀಮಣ್ಣ,ಅಂಜಿನಪ್ಪ, ವೆಂಕಟರವಣಪ್ಪ,ನಾರಾಯಣಸ್ವಾಮಿ, ರಾಮಯ್ಯ,ವೆಂಕಟರಾಮಯ್ಯ,ಡಿ ಎಂ ಮುನಿ ವೆಂಕಟಪ್ಪ,ವೆಂಕಟೇಶಪ್ಪ, ಮುರಳಿ,ಮುನಿಯಪ್ಪ,ಪಟೇಲ್ ನಾರಾಯಣಸ್ವಾಮಿ,ಎಲ್ಲಪ್ಪ, ಸೇರಿದಂತೆ ಮತ್ತಿತರರು ಇದ್ದರು.




