ದಕ್ಷಿಣ ಕನ್ನಡ | ತುಳು ಭಾಷೆಗೆ ಅಧಿಕೃತ ಸ್ಥಾನಮಾನಕ್ಕೆ ಆಗ್ರಹಿಸಿ ಟ್ವೀಟ್‌ ಅಭಿಯಾನ

0
138
ತುಳು ಭಾಷೆ

ತುಳು ಭಾಷೆಗೆ ಅಧಿಕೃತ ಸ್ಥಾನಮಾನ ಸಿಗಬೇಕೆಂದು ಆಗ್ರಹಿಸಿ, ಹಲವು ಸಂಘಟನೆಗಳು ನ. 1ರ ಕರ್ನಾಟಕ ರಾಜ್ಯೋತ್ಸವದಂದು ತುಳುವರ ಕರಾಳ ದಿನವೆಂದು ಆಚರಿಸಿದ್ದು, ಬೆಳಿಗ್ಗೆಯಿಂದ ರಾತ್ರಿಯವರೆಗೆ ಟ್ವಿಟ್ಟರ್‌ನಲ್ಲಿ ಟ್ವೀಟ್‌ ಅಭಿಯಾನ ಹಮ್ಮಿಕೊಂಡಿದ್ದರು. ಸಾವಿರಾರು ಮಂದಿ ಟ್ವೀಟ್‌ ಮಾಡುವ ಮೂಲಕ ತುಳು ಭಾಷಾ ಮಾನ್ಯತೆಗೆ ಆಗ್ರಹಿಸಿದ್ದಾರೆ.

ಹಲವು ವರ್ಷಗಳಿಂದ ತುಳು ಭಾಷೆಯನ್ನು ರಾಜ್ಯ ಭಾಷೆಯನ್ನಾಗಿ ಮಾಡಬೇಕು. 8ನೇ ಪರಿಚ್ಛೇದಕ್ಕೆ ಸೆರ್ಪಡೆ ಮಾಡಬೇಕೆಂದು ಹಲವು ಸಂಘಟನೆಗಳು ಅಭಿಯಾನ ಸೇರಿದಂತೆ ಸರಕಾರಕ್ಕೆ ಮನವಿಯನ್ನು ನೀಡುತ್ತಾ ಬಂದಿವೆ. ಆದರೂ ತುಳುನಾಡಿಗರ ಕನಸು ಈಡೇರದ ಹಿನ್ನೆಲೆಯಲ್ಲಿ ನವೆಂಬರ್‌ 1ರಂದು ಪುನಃ ಹಲವು ಸಂಘಟನೆಗಳು ಟ್ವೀಟ್ ಅಭಿಯಾನ ಹಮ್ಮಿಕೊಂಡಿದ್ದವು.

ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದಾಗಿ ಹೀಗಾಗುತ್ತಿದ್ದು, ಜನಪ್ರತಿನಿಧಿಗಳು ಕಲಾಪಗಳಲ್ಲಿ ಆಗ್ರಹಿಸಬೇಕೆಂದು ಅನೇಕರು ತಮ್ಮ ಟ್ವೀಟ್‌ ಮೂಲಕ ಪ್ರಧಾನಿ, ಮುಖ್ಯಮಂತ್ರಿ, ಸಂಸದರು, ಶಾಸಕರು ಸೇರಿದಂತೆ ವಿವಿಧ ಜನಪ್ರತಿನಿಧಿಗಳನ್ನು‌ ಅಭಿಯಾನದಲ್ಲಿ ಒತ್ತಾಯಿಸಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಸುದ್ದಿ ಓದಿದ್ದೀರಾ? ಉಡುಪಿ | ದ್ವೇಷ ಅಳಿಸಿ, ದೇಶ ಉಳಿಸೋಣ; ರಾಜ್ಯ ವ್ಯಾಪಿ ಅಭಿಯಾನ   

“ಕಾರ್ಯಗತಗೊಳ್ಳದ ವರದಿ ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಣೆ ಮಾಡುವ ನಿಟ್ಟಿನಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಮಿತಿಯೊಂದನ್ನು ರಚಿಸಿತ್ತು. ಆದರೆ ಸಮಿತಿ ರಚಿಸಿದ ವರದಿ ಇನ್ನೂ ಬಹಿರಂಗಗೊಂಡಿಲ್ಲ. ವಿಸ್ತೃತ ವರದಿಯನ್ನು ರಾಜ್ಯ ಸರ್ಕಾರಕ್ಕೆ ಈಗಾಗಲೇ ಸಲ್ಲಿಸಲಾಗಿತು. ಬಳಿಕ ವಿಧಾನಸಭೆ ಚುನಾವಣೆ ವಿಚಾರ ಬಂದ ಕಾರಣ ಈ ವಿಷಯ ಮುನ್ನೆಲೆಗೆ ಬಂದಿರಲಿಲ್ಲ” ಎಂದು ಕರಾವಳಿಗರು ಟ್ವೀಟ್‌ ಅಭಿಯಾನದಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here