ದಕ್ಷಿಣ ಕನ್ನಡ | ಬತ್ತಿದ ತುಂಬೆ, ಶಾಂಭವಿ, ಗುರುಪುರ ಜಲಾಶಯ; ಕುಡಿಯುವ ನೀರಿಗೂ ಹಾಹಾಕಾರ

Date:

ಕರಾವಳಿಯಲ್ಲಿ ಬಿಸಿಲ ಝಳ ಎಂದಿಗಿಂತ ಈ ಬಾರಿ ಹೆಚ್ಚಾಗಿದೆ. ಗರಿಷ್ಠ ಉಷ್ಣಾಂಶ 36 ಡಿಗ್ರಿ ಸೆಲ್ಸಿಯಸ್‌ ದಾಟಿದ ದಿನಗಳಿಗೂ ಜಿಲ್ಲೆ ಸಾಕ್ಷಿಯಾಗಿದೆ. ನೇತ್ರಾವತಿ, ಕುಮಾರಧಾರ, ಫಾಲ್ಗುಣಿ, ನಂದಿನಿ, ಶಾಂಭವಿ, ಪಯಸ್ವಿನಿ ಈ ನದಿಗಳು ದಕ್ಷಿಣ ಕನ್ನಡ ಜಿಲ್ಲೆಯ ಜೀವಾಳ, ಕೃಷಿಗೂ, ಕುಡಿಯುವ ನೀರಿಗೂ ನೀರೊದಗಿಸುವುದು ಇವೇ ನದಿಗಳು. ಈ ನದಿಗಳ ತಟಗಳು ಈಗಾಗಲೇ ಒಣಗಿ ಹೋಗಿವೆ.

- Advertisement -

ಸುತ್ತ ಸಮುದ್ರ, ಸಹ್ಯಾದ್ರಿ ಶ್ರೇಣಿಯಲ್ಲಿ ಉಗಮವಾದ ನದಿಗಳೆಲ್ಲಾ ಹರಿದು ಕಡಲೂರನ್ನೇ ಸೇರುತ್ತವೆ, ಹೀಗಿರುವಾಗ ʼದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೀರಿಗೇನೂ ಸಮಸ್ಯೆಯಿರದುʼ ಎಂದು ಮೇಲೆಣಿಕೆಗೆ ತೋರುತ್ತದೆ. ಆದರೆ, ವಾಸ್ತವ ಹೀಗೆಲ್ಲ ಜಿಲ್ಲೆಯ ಜನರು ಕುಡಿಯುವ ನೀರಿಗೆ ಟ್ಯಾಂಕರ್‌ಗಳ ಬರುವಿಕೆಯನ್ನು ಕಾಯುವ ಪರಿಸ್ಥಿತಿಗೆ ತಲುಪಿದ್ದಾರೆ.

ಸುಡು ಬೇಸಿಗೆಯ ದಿನಗಳಲ್ಲಿ ನದಿ ಬತ್ತುವಾಗ ಮಹಾನಗರ ನೀರಿಗಾಗಿ ಆಶ್ರಯಿಸುತ್ತಿದ್ದ ತುಂಬೆ, ಶಾಂಭವಿ, ಗುರುಪುರ ಜಲಾಶಯಗಳು ಬತ್ತಿ ಹೋಗಿವೆ. ಬಹುತೇಕ ಜಲಾಶಯಗಳ ನೀರಿನ ಹೊರ ಹರಿವಿನ ಬಾಗಿಲನ್ನು ಮುಚ್ಚಲಾಗಿದೆ. ತುಂಬೆ ಜಲಾಶಯದ ಒಟ್ಟು ನೀರು ಸಂಗ್ರಹಣ ಸಾಮರ್ಥ್ಯ 10 ಮೀಟರ್‌ಗಳು, ಸದ್ಯ ಜಲಾಶಯದಲ್ಲಿನ ನೀರಿನ ಸಂಗ್ರಹಣೆ ಕೇವಲ 4 ಮೀಟರ್‌. ಮಾರ್ಚ್‌ ತಿಂಗಳ ಶುರುವಾತಿನಲ್ಲೆ ತುಂಬೆಯಲ್ಲಿ ಇನ್ನೂ 39 ದಿನಗಳಿಗೆ ಬೇಕಾಗುವಷ್ಟು ನೀರು ಮಾತ್ರ ಲಭ್ಯವಿದೆ ಎಂದು ಮಂಗಳೂರು ಮಹಾನಗರ ಪಾಲಿಕೆ ಸೂಚನೆ ನೀಡಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ...

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು ಇದೇ ಮೊದಲೇನಲ್ಲ. ಕರಾವಳಿಯ ಜನತೆ ಇಂತಹ ಪ್ರಚೋದನಾತ್ಮಕ ನಡೆಗಳನ್ನು ತಿರಸ್ಕರಿಸಿ, ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲಬೇಕಾಗಿದೆ. ಕರಾವಳಿ ಕರ್ನಾಟಕವಾಗಲಿ...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ...

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್ ಅವರ ನಿರ್ಧಾರಗಳ ಕುರಿತು ಚುನಾವಣಾ ಆಯುಕ್ತರಾದ ಸುಖಬೀರ್‌ ಸಿಂಗ್‌ ಸಂಧು ಮತ್ತು...

ಜಿಲ್ಲೆಯ ಇತರೆ ಭಾಗಗಳಿಗಿಂತಲೂ ಉಳ್ಳಾಲ, ಮೂಲ್ಕಿ ಹಾಗೂ ವಿಟ್ಲ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಾರಕಕ್ಕೇರಿದೆ. ಉಳ್ಳಾಲದಲ್ಲಿ ಪ್ರತಿದಿನ 6 ಟ್ರಿಪ್‌ನಂತೆ ಟ್ಯಾಂಕರ್‌ ನೀರು ಸರಬರಾಜು ಮಾಡುತ್ತಿದ್ದು, ಮೂಲ್ಕಿಯಲ್ಲಿ ದಿನಕ್ಕೆ 16 ಟ್ರಿಪ್‌ ಟ್ಯಾಂಕರ್‌ ನೀರು ಸರಬರಾಜು ಮಾಡುವ ಸ್ಥಿತಿ ನಿರ್ಮಾಣವಾಗಿದೆ.

ಸದ್ಯದ ಪರಿಸ್ಥಿತಿಯ ಕುರಿತು ಈದಿನ.ಕಾಮ್‌ ಜತೆಗೆ ಮಾತನಾಡಿದ ಪರಿಸರ ಸಂರಕ್ಷಣ ವೇದಿಕೆಯ ಸಂಚಾಲಕ ಮಂಗಳೂರು ರಿಯಾಝ್‌ “ಉಳ್ಳಾಲವೆಂದರೆ ನೀರಿನಿಂದ ಸುತ್ತುವರೆದ ಭೂಭಾಗ ಎಂದರ್ಥ, ಹೆಸರಿಗೆ ತಕ್ಕಂತೆ ಅರಬ್ಬಿ ಸಮುದ್ರ ಮತ್ತು ನೇತ್ರಾವತಿ ನದಿ ನೀರಿನಿಂದ ಆವೃತವಾದ ಈ ಊರಿನಲ್ಲಿ ಕುಡಿಯಲು ಯೋಗ್ಯವಾದ ನೀರಿಲ್ಲ. ಉಳ್ಳಾಲದಲ್ಲಿ ನೂರಾರು ಬಾವಿಗಳು ನೀರಿಲ್ಲದೆ ಪಾಳು ಬಿದ್ದಿವೆ. ಅಂತರ್ಜಲ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಜತೆಗೆ ಕೊಳಚೆ ನೀರು ಶುದ್ಧ ನೀರಿನ ಮೂಲವನ್ನು ಸೇರುತ್ತಿರುವುದರಿಂದ ಲಭ್ಯವಿರುವ ನೀರನ್ನು ಕುಡಿಯಲು ಬಳಸಲು ಯೋಚಿಸುವ ಸ್ಥಿತಿ ನಿರ್ಮಾಣವಾಗಿದೆ. ಉಳ್ಳಾಲದಂತಹ ಜಲಸಮೃದ್ಧ ಪ್ರದೇಶದಲ್ಲಿ ನೀರಿನ ಹಾಹಾಕಾರ ಸೃಷ್ಟಿಯಾಗಿರುವುದು ನಮ್ಮ ದುರಾದೃಷ್ಟ” ಎಂದು ಸಂಕಟ ವ್ಯಕ್ತಪಡಿಸಿದ್ದಾರೆ.

“ಈ ಹಿಂದೆ ಉಳ್ಳಾಲದ ದರ್ಗಾದ ಬಾವಿಯಿಂದ ಪಟ್ಟಣಕ್ಕೆ ಬೇಕಾದ ನೀರು ಪೂರೈಕೆಯಾಗುತ್ತಿತ್ತು, ಈಗ ಗ್ರಾಮೀಣ ಭಾಗಗಳಲ್ಲಿ ಗುಡ್ಡಗಾಡು ಪ್ರದೇಶಗಳಲ್ಲೂ ನೀರಿನ ಕೊರತೆ ತಲೆದೋರಿರುವುದರಿಂದ ದರ್ಗಾದ ಬಾವಿಯಿಂದ ಗುಡ್ಡಗಾಡು ಭಾಗಗಳಿಗೆ ನೀರಿನ ಸರಬರಾಜು ಮಾಡಲಾಗುತ್ತಿದೆ. ಮಳೆಯ ಪ್ರಮಾಣವೂ ತಗ್ಗಿದೆ ಹತ್ತಿರದ ಕೆರೆ ಬಾವಿಗಳೆಲ್ಲವೂ ಬತ್ತಿ ಹೋಗಿವೆ ಸೈಟು ಮನೆಗಳಿಗೆ ಪಂಚಾಯಿತಿಯ ಪೈಪ್‌ ಲೈನ್‌ಗಳು ಬಿಟ್ಟು ನೀರಿಗೆ ಪರ್ಯಾಯ ಮೂಲಗಳೇ ಇಲ್ಲ. ಸಮಸ್ಯೆ ದಿನೇದಿನೇ ಬಿಗಡಾಯಿಸುತ್ತಿದ್ದು, ಸಂಬಂಧ ಪಟ್ಟ ಇಲಾಖೆಗಳಿಗೆ ಈ ಬಗ್ಗೆ ಪರಿವೆಯೇ ಇಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಸ್ತುತ ವಿಟ್ಲದ ಪರಿಸ್ಥಿತಿಯ ಕುರಿತು ಈ ದಿನ.ಕಾಮ್‌ ಜೊತೆಗೆ ಮಾತನಾಡಿದ ಸಿಪಿಎಮ್‌ ಪಕ್ಷದ ಜಿಲ್ಲಾ ಕಾರ್ಯದರ್ಶಿ ರಾಮಣ್ಣ ವಿಟ್ಲ “ಹಲವಾರು ವರ್ಷಗಳಿಂದ ವಿಟ್ಲದಲ್ಲಿ ಕುಡಿಯುವ ನೀರಿನ ಸಮಸ್ಯೆ ತಾಂಡವವಾಡುತ್ತಿದೆ. ಆದರೆ ಆಡಳಿತ ಸರ್ಕಾರ ಮತ್ತು ಅಧಿಕಾರಿಗಳು ಈ ಬಗ್ಗೆ ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ. ಯಾವುದೇ ಮೂಲಭೂತ ಸೌಕರ್ಯವಿರದ ವಿಟ್ಲ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯತ್‌ ಆಗಿ ಘೋಷಿಸಿದರು. ಪಟ್ಟಣ ಪಂಚಾಯತ್ ಎಂದು ಘೋಷಿಸುವ ಮುನ್ನ ಇವರಿಗೆ ಈ ಪ್ರದೇಶದ ಅಭಿವೃದ್ಧಿಯ ಹಪಾಹಪಿ ಇರಲಿಲ್ಲ. ಬದಲಿಗೆ ಗ್ರಾಮದಲ್ಲಿ ಇದ್ದ 4 ಸಾರಾಯಿ ಅಂಗಡಿಗಳನ್ನು ಉಳಿಸಿಕೊಳ್ಳಬೇಕಿತ್ತು. 8 ವರ್ಷಗಳ ಹಿಂದೆ ಸಾರಾಯಿ ಅಂಗಡಿ ಮಾಲಿಕರ ಹಿತಾಸಕ್ತಿ ಕಾಪಾಡಲು ಕನಿಷ್ಠ ಸೌಕರ್ಯಗಳಿರದ ವಿಟ್ಲವನ್ನು ಗ್ರಾಮ ಪಂಚಾಯಿತಿಯಿಂದ ಪಟ್ಟಣ ಪಂಚಾಯತ್‌ ಎಂದು ಘೋಷಿಸಿಕೊಂಡು ತಮ್ಮ ಬೇಳೆ ಬೇಯಿಸಿಕೊಂಡರೇ ಹೊರತು ಕುಡಿಯುವ ನೀರು, ಓಡಾಡಲು ರಸ್ತೆಗಳನ್ನು ನಿರ್ಮಿಸುವ ಹೊಣೆಯಿಂದ ನುಣುಚಿಕೊಂಡರು. ಈಗ ಟ್ಯಾಂಕರ್‌ ಮೂಲಕ ನೀರಿನ ಸರಬರಾಜು ಮಾಡುವ ಪ್ರಯತ್ನಕ್ಕೇನೋ ಇಳಿದಿದ್ದಾರೆ ಆದರೆ ರಸ್ತೆಯೇ ಇರದ ಗುಡ್ಡಗಾಡಿಗೆ ಟ್ಯಾಂಕರ್‌ಗಳು ಹೇಗೆ ತಲುಪುತ್ತವೆ? ನಗರದ ಸರಾಗ ರಸ್ತೆಗಳಿಗೆ ಟ್ಯಾಂಕರ್‌ ಸಾಗಿಸುವುದು ಸುಲಭ ಆದರೆ ಹಳ್ಳಿಗರಿಗೆ ಈ ಸೌಕರ್ಯವನ್ನೂ ತಲುಪಿಸಲಾಗದು. ಇಲ್ಲಿನ ಸ್ಥಳೀಯರ ಬದುಕಿನ ಕುರಿತು ಯಾರಿಗೂ ಕಿಂಚಿತ್ತೂ ಕನಿಕರವಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕರಾವಳಿಯಲ್ಲಿ ಬಿಸಿಲ ಝಳ ಎಂದಿಗಿಂತ ಈ ಬಾರಿ ಹೆಚ್ಚಾಗಿಯೇ ಇದೆ. ಗರಿಷ್ಠ ಉಷ್ಣಾಂಶ 36 ಡಿಗ್ರಿ ಸೆಲ್ಸಿಯಸ್‌ ದಾಟಿದ ದಿನಗಳಿಗೂ ಜಿಲ್ಲೆ ಸಾಕ್ಷಿಯಾಗಿದೆ. ನೇತ್ರಾವತಿ, ಕುಮಾರಧಾರಾ, ಫಾಲ್ಗುಣಿ, ನಂದಿನಿ, ಶಾಂಭವಿ, ಪಯಸ್ವಿನಿ ಈ ನದಿಗಳು ದಕ್ಷಿಣ ಕನ್ನಡ ಜಿಲ್ಲೆಯ ಜೀವಾಳ, ಕೃಷಿಗೂ, ಕುಡಿಯುವ ನೀರಿಗೂ ನೀರೊದಗಿಸುವುದು ಇವೇ ನದಿಗಳು. ಈ ನದಿಗಳ ತಟಗಳು ಈಗಾಗಲೇ ಒಣಗಿ ಹೋಗಿವೆ.

ದಕ್ಷಿಣ ಕನ್ನಡ ಜಿಲ್ಲೆಯ ಪೂರ್ವ ಮುಂಗಾರಿನ ಪ್ರಮಾಣದಲ್ಲಿ ಈ ಬಾರಿ ಇಳಿಕೆ ಕಂಡು ಬಂದಿದೆ. ಪ್ರತಿ ವರ್ಷಕ್ಕಿಂತ 14% ಕೊರತೆ ಕಂಡುಬಂದಿದೆ. ಮಂಗಳೂರಿನಲ್ಲಿ 53% ಶೇಕಡ ಮಳೆಯ ಕೊರತೆ ಉಂಟಾಗಿದೆ. ನದಿ ಮೂಲಗಳು ಬರಿದಾಗಲು ಜಲಾಶಯಗಳಲ್ಲಿ ನೀರಿನ ಸಂಗ್ರಹ ಇಳಿಕೆಯಾಗಲು ಮಳೆಯ ಕೊರತೆಯೂ ಕಾರಣ. ನದಿ, ಕಾಡು, ಜೀವವೈವಿಧ್ಯ ಇವೆಲ್ಲವೂ ಸದಾ ಒಂದಕ್ಕೊಂದು ತಳುಕು ಹಾಕಿಕೊಂಡಿರುತ್ತದೆ. ಕರಾವಳಿಯ ನೀರಿನ ಬರ, ಅಂತರ್ಜಲ ಮಟ್ಟದ ಕುಸಿತದ ಕಾರಣಗಳನ್ನು ಪಶ್ಚಿಮ ಘಟ್ಟಗಳ ಉಡಿಯಲ್ಲಿ ತಡಕಾಡಿದರೆ ಬಹುಷಃ ಉತ್ತರ ಸಿಕ್ಕಿತು.

WhatsApp Image 2026 03 09 at 18.17.26
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲೆ ಉಳಿಯಲಿ, ಕೌಶಲ್ಯ ಬೆಳೆಯಲಿ: ಕರ್ನಾಟಕ ಪರ್ವ 2026ಕ್ಕೆ ಡಿ.ಕೆ ಶಿವಕುಮಾರ್ ಚಾಲನೆ

ಬೆಂಗಳೂರಿನ ಅರಮನೆ ಮೈದಾನದಲ್ಲಿ ಶನಿವಾರ ವೈವಿಧ್ಯತೆಯಲ್ಲಿ ಏಕತೆ, ಕೌಶಲ್ಯದಲ್ಲಿ ಸ್ವಾವಲಂಬನೆ ಎಂಬ...

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ ಅಮಾನವೀಯ ಕೊಲೆಗಡುಕರ ಬೆಂಬಲಕ್ಕೆ ನಿಂತ ಸಂಘಪರಿವಾರ

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ ಬಿಗಿಯಾಗುತ್ತಿರುವ ಬಿಕ್ಕಟ್ಟು!

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು...