ಆಧಾರ್ ಕಾರ್ಡ್ ವಯಸ್ಸಿನ ಅಧಿಕೃತ ಪುರಾವೆಯಲ್ಲ: ಮಧ್ಯಪ್ರದೇಶ ಹೈಕೋರ್ಟ್

Date:

ಆಧಾರ್ ಕಾರ್ಡ್ ಅನ್ನು ವ್ಯಕ್ತಿಯ ವಯಸ್ಸನ್ನು ನಿರ್ಧರಿಸಲು ಅಂತಿಮ ಅಥವಾ ಅಧಿಕೃತ ಪುರಾವೆಯಾಗಿ ಪರಿಗಣಿಸಲು ಸಾಧ್ಯವಿಲ್ಲ. ಮರಣೋತ್ತರ ಪರೀಕ್ಷೆಯ ವೈದ್ಯಕೀಯ ವರದಿಯು ವಯಸ್ಸಿನ ನಿರ್ಧಾರದಲ್ಲಿ ಹೆಚ್ಚು ನಂಬಲರ್ಹ ಸಾಕ್ಷಿಯಾಗಿದೆ ಎಂದು ಮಧ್ಯಪ್ರದೇಶ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

- Advertisement -

ಮೋಟಾರು ವಾಹನ ಅಪಘಾತದಲ್ಲಿ ಮೃತಪಟ್ಟ 13 ವರ್ಷದ ಬಾಲಕನ ತಂದೆ-ತಾಯಿಗೆ ನೀಡಲಾಗುವ ಪರಿಹಾರ ಮೊತ್ತವನ್ನು ಹೆಚ್ಚಿಸುವ ಸಂದರ್ಭದಲ್ಲಿ ನ್ಯಾಯಮೂರ್ತಿ ಅಮಿತ್ ಸೇಥ್ ಅವರಿದ್ದ ಪೀಠವು ಈ ಅಭಿಪ್ರಾಯ ವ್ಯಕ್ತಪಡಿಸಿದೆ. 

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಟ್ರಂಪ್‌ಗೆ ಮುಖಭಂಗ, ಯುರೋಪಿನಲ್ಲಿ ಆತಂಕ; ಜಗತ್ತಿನಲ್ಲಿ ಬದಲಾಗುತ್ತಿರುವ ಬಲಪಂಥೀಯ...

2026ರ ಅಮೆರಿಕ ಮತ್ತು ಬ್ರೆಜಿಲ್‌ನ ಚುನಾವಣಾ ಫಲಿತಾಂಶಗಳು ಜಾಗತಿಕ ಮಟ್ಟದಲ್ಲಿ ರಾಜಕೀಯ ಒಲವಿನ ಬದಲಾವಣೆಯನ್ನು ದೃಢಪಡಿಸಿವೆ. ಡೆಮಾಕ್ರಟರು ಸಾಧಿಸಿದ 255 ಹೌಸ್ ಮತ್ತು 54 ಸೆನೆಟ್ ಸ್ಥಾನಗಳ ಜಯ, ಹಾಗೂ ಬ್ರೆಜಿಲ್‌ನಲ್ಲಿನ ಅಧಿಕಾರ...

ಹೆಣ್ಣು-ಹಣ-ಚಾರಣ ಹಗರಣ: ಜಾಗತಿಕ ಚಿಪ್ ಸಾಮ್ರಾಜ್ಯದಲ್ಲಿ ಅಲ್ಲೋಲ ಕಲ್ಲೋಲ...

ಚಿಪ್ ಸಾಮ್ರಾಜ್ಯದ ಸಿಇಒ ಸುತ್ತ ಹೆಣೆದುಕೊಂಡಿರುವ ವಿವಾಹೇತರ ಸಂಬಂಧ, ಚೀನಿ ಚಾರಣ ಜಾಲ ಮತ್ತು ಭದ್ರತಾ ಆರೋಪಗಳು ಜಾಗತಿಕ ಮಾರುಕಟ್ಟೆಯನ್ನು ಅಲ್ಲೋಲಕಲ್ಲೋಲಗೊಳಿಸಿವೆ. ತಂತ್ರಜ್ಞಾನ ದೈತ್ಯರ ಒಳಸುಳಿಗಳೇನು? ಭಾರತದ ಡಿಜಿಟಲ್ ಹಾಗೂ ಸೆಮಿಕಂಡಕ್ಟರ್ ಭವಿಷ್ಯಕ್ಕೆ...

ಹೊರಗೆ ‘ರಾಮ’-ಒಳಗೆ ‘ನಾಥೂರಾಮ’: ಗಾಂಧೀಜಿಯವರ ತಾತ್ವಿಕತೆಯ ಮುಂದೆ ಬಲಪಂಥೀಯ...

ಗಾಂಧೀಜಿಯವರನ್ನು ವಿರೋಧಿಸುವ ರಾಜಕೀಯ ಪ್ರಯತ್ನಗಳು ಅವರ ವ್ಯಕ್ತಿತ್ವವನ್ನು ಕುಗ್ಗಿಸುವ ಬದಲು, ಅವರ ಆದರ್ಶಗಳ ಪ್ರಸ್ತುತತೆಯನ್ನು ಮತ್ತಷ್ಟು ಮುನ್ನೆಲೆಗೆ ತರುತ್ತಿವೆ. ಸತ್ಯ, ಅಹಿಂಸೆ, ಮಾನವೀಯತೆ, ಸಾಮಾಜಿಕ ಸಮಾನತೆ ಮತ್ತು ಗ್ರಾಮ ಸ್ವರಾಜ್ಯದ ಪರಿಕಲ್ಪನೆಗಳು ಇಂದಿಗೂ...

2019ರ ಡಿಸೆಂಬರ್‌ನಲ್ಲಿ ನಡೆದ ರಸ್ತೆ ಅಪಘಾತದಲ್ಲಿ 13 ವರ್ಷದ ಬಾಲಕನೊಬ್ಬ ಮೃತಪಟ್ಟಿದ್ದನು. ಬಾಲಕನ ಪೋಷಕರು ಸಲ್ಲಿಕೆ ಮಾಡಿದ್ದ ಪರಿಹಾರ ಅರ್ಜಿಯ ವಿಚಾರಣೆ ನಡೆಸಿದ್ದ ‘ಮೋಟಾರು ಅಪಘಾತ ಪರಿಹಾರ ನ್ಯಾಯಾಧಿಕಾರ’ (MACT), ಬಾಲಕನ ಆಧಾರ್ ಕಾರ್ಡ್ ಆಧಾರದ ಮೇಲೆ ಆತನಿಗೆ 14 ವರ್ಷ 7 ತಿಂಗಳು 9 ದಿನ ವಯಸ್ಸಾಗಿದೆ ಎಂದು ಲೆಕ್ಕಾಚಾರ ಮಾಡಿ ₹5.45 ಲಕ್ಷ ಪರಿಹಾರ ಘೋಷಿಸಿತ್ತು.

ಇದನ್ನು ಪ್ರಶ್ನಿಸಿ ಪೋಷಕರು ಪರಿಹಾರ ಮೊತ್ತ ಹೆಚ್ಚಿಸುವಂತೆ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಮತ್ತೊಂದೆಡೆ, ಇನ್ಶೂರೆನ್ಸ್ ಕಂಪನಿಯು ಬಾಲಕನ ಪೋಸ್ಟ್‌ಮಾರ್ಟಂ ವರದಿಯನ್ನು ಉಲ್ಲೇಖಿಸಿ, ಆತನಿಗೆ ಅಪಘಾತದ ಸಮಯದಲ್ಲಿ 13 ವರ್ಷವಾಗಿತ್ತು ಮತ್ತು ಅದಕ್ಕೆ ತಕ್ಕಂತೆ ಪರಿಹಾರದ ‘ಮಲ್ಟಿಪ್ಲೈಯರ್’ ಅನ್ವಯಿಸಬೇಕು ಎಂದು ವಾದಿಸಿತ್ತು.

ಹೈಕೋರ್ಟ್ ಹೇಳಿದ್ದೇನು?

ಇನ್ಶೂರೆನ್ಸ್ ಕಂಪನಿಯ ವಾದವನ್ನು ಪುರಸ್ಕರಿಸಿದ ಹೈಕೋರ್ಟ್, “ಆಧಾರ್ ಕಾರ್ಡ್ ಮುಖ್ಯವಾಗಿ ವ್ಯಕ್ತಿಯ ಗುರುತಿನ ಚೀಟಿಯಾಗಿದೆ ಹೊರತು, ಅದನ್ನು ವಯಸ್ಸನ್ನು ಪ್ರಮಾಣೀಕರಿಸುವ ಅಂತಿಮ ಸಾಕ್ಷಿ ಎಂದು ಪರಿಗಣಿಸಲಾಗುವುದಿಲ್ಲ. ಆದರೆ ಪೋಸ್ಟ್‌ಮಾರ್ಟಂ ವರದಿಯಲ್ಲಿ ನಮೂದಿಸಲಾದ ವಯಸ್ಸು ವೈಜ್ಞಾನಿಕ ವೈದ್ಯಕೀಯ ತಪಾಸಣೆಯ ಆಧಾರದ ಮೇಲೆ ಸಿದ್ಧಪಟ್ಟಿರುತ್ತದೆ. ಆದ್ದರಿಂದ ಈ ಪ್ರಕರಣದಲ್ಲಿ ಪೋಸ್ಟ್‌ಮಾರ್ಟಂ ವರದಿಯೇ ಹೆಚ್ಚು ನಂಬಲರ್ಹವಾಗಿದೆ” ಎಂದು ಸ್ಪಷ್ಟಪಡಿಸಿತು.

ಬಾಲಕನ ವಯಸ್ಸು 13 ವರ್ಷ ಎಂದು ಪರಿಗಣಿಸಿದ ಕೋರ್ಟ್, 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮೃತರ ಪ್ರಕರಣಗಳಲ್ಲಿ ಅನ್ವಯವಾಗುವ ’15 ಮಲ್ಟಿಪ್ಲೈಯರ್ʼ  ಬಳಸಿತು.

ಮೃತನ ಕಾಲ್ಪನಿಕ ಮಾಸಿಕ ಆದಾಯವನ್ನು ಕೌಶಲರಹಿತ ಕಾರ್ಮಿಕನ ಕನಿಷ್ಠ ವೇತನದ ಆಧಾರದ ಮೇಲೆ ₹7,950 ಎಂದು ನಿಗದಿಪಡಿಸಲಾಯಿತು.  ವೈಯಕ್ತಿಕ ವೆಚ್ಚಕ್ಕಾಗಿ ಶೇಕಡಾ 50 ರಷ್ಟನ್ನು ಕಡಿತಗೊಳಿಸಿ, ’15’ಮಲ್ಟಿಪ್ಲೈರ್‌ನ್ನು ಅನ್ವಯಿಸಿ ಅವಲಂಬನೆ ನಷ್ಟವನ್ನು ₹7,15,500 ಎಂದು ಲೆಕ್ಕ ಹಾಕಲಾಯಿತು. ಪೋಷಕರಿಗೆ ‘ಪೋಷಕರ ಸಾಂತ್ವನ’ ವಾಗಿ ತಲಾ ₹40,000, ಅಂತಿಮ ಸಂಸ್ಕಾರದ ವೆಚ್ಚಕ್ಕೆ ₹15,000 ಹಾಗೂ ಆಸ್ತಿ ನಷ್ಟಕ್ಕೆ ₹15,000 ನೀಡಲು ಆದೇಶಿಸಲಾಯಿತು.

ಮೋಟಾರು ವಾಹನ ಅಪಘಾತದಲ್ಲಿ ಯಾರಾದರೂ ಮೃತಪಟ್ಟಾಗ ಅಥವಾ ತೀವ್ರವಾಗಿ ಗಾಯಗೊಂಡಾಗ, ಸಂತ್ರಸ್ತರ ಕುಟುಂಬಕ್ಕೆ ನೀಡಬೇಕಾದ ಪರಿಹಾರದ ಮೊತ್ತವನ್ನು ನ್ಯಾಯಾಲಯಗಳು ಹೇಗೆ ಲೆಕ್ಕ ಹಾಕುತ್ತವೆ ಎಂಬುದನ್ನು ಪ್ರತಿಯೊಬ್ಬರೂ ಸರಳವಾಗಿ ಅರ್ಥಮಾಡಿಕೊಳ್ಳುವುದು ಅಗತ್ಯ.

ಕೋರ್ಟ್‌ಗಳು ಪರಿಹಾರದ ಮೊತ್ತವನ್ನು ನಿಗದಿಪಡಿಸಲು ಮುಖ್ಯವಾಗಿ ‘ಗುಣಕ’ ಅಥವಾ  ಮಲ್ಟಿಪ್ಲೈಯರ್  ಎಂಬ ವಿಧಾನವನ್ನು ಬಳಸುತ್ತವೆ. ಈ ಲೆಕ್ಕಾಚಾರಕ್ಕೆ ಸುಪ್ರೀಂ ಕೋರ್ಟ್‌ನ ‘ಸರಳಾ ವರ್ಮಾ ಪ್ರಕರಣ (2009)’ದ ತೀರ್ಪು ಪ್ರಮುಖ ಆಧಾರವಾಗಿದೆ.

ಕುಟುಂಬದ ಆರ್ಥಿಕ ನಷ್ಟ  (Loss of Dependency) = ವಾರ್ಷಿಕ ನಿವ್ವಳ ಆದಾಯ * ಅನ್ವಯವಾಗುವ ಗುಣಕ

ಮೃತನ ತಿಂಗಳ ಸಂಪಾದನೆಯನ್ನು ಆಧಾರವಾಗಿಟ್ಟುಕೊಂಡು ವಾರ್ಷಿಕ ಆದಾಯ ಲೆಕ್ಕ ಹಾಕಲಾಗುತ್ತದೆ. ಒಂದು ವೇಳೆ ಆದಾಯದ ಖಚಿತ ದಾಖಲೆ ಇಲ್ಲದಿದ್ದರೆ, ಸರ್ಕಾರ ನಿಗದಿಪಡಿಸಿದ ಕನಿಷ್ಠ ವೇತನವನ್ನು ಪರಿಗಣಿಸಲಾಗುತ್ತದೆ. ವ್ಯಕ್ತಿ ಬದುಕಿದ್ದರೆ ತನ್ನ ಸ್ವಂತ ಖರ್ಚಿಗೆ ಬಳಸುತ್ತಿದ್ದ ಹಣವನ್ನು ಕಡಿತಗೊಳಿಸಲಾಗುತ್ತದೆ. 


ಅವಿವಾಹಿತರಾದರೆ ಆದಾಯದಲ್ಲಿ 50% (ಅರ್ಧ ಭಾಗ) ಕಡಿತ.

ಕುಟುಂಬದಲ್ಲಿ 2 ರಿಂದ 3 ಜನರಿದ್ದರೆ 33.33% (1/3 ಭಾಗ) ಕಡಿತ.

4 ರಿಂದ 6 ಜನರಿದ್ದರೆ 25% (1/4 ಭಾಗ) ಕಡಿತ.

 ಕಡಿತದ ನಂತರ ಉಳಿಯುವ ನಿವ್ವಳ ವಾರ್ಷಿಕ ಆದಾಯಕ್ಕೆ, ಮೃತರ ವಯಸ್ಸಿಗೆ ತಕ್ಕಂತೆ ನಿಗದಿತ ಗುಣಕವನ್ನು ಅಥವಾ ಮಲ್ಟಿಪ್ಲೈಯರ್ ರನ್ನ  ಗುಣಿಸಲಾಗುತ್ತದೆ. ಮೋಟಾರು ವಾಹನ ಅಪಘಾತ ಪರಿಹಾರ ಪ್ರಕರಣಗಳಲ್ಲಿ ಪರಿಹಾರವನ್ನು ಲೆಕ್ಕ ಹಾಕಲು ಮೃತರ ಅಥವಾ ಗಾಯಗೊಂಡವರ ವಯಸ್ಸಿಗೆ ಅನುಗುಣವಾಗಿ ಕೋರ್ಟ್‌ಗಳು ನಿರ್ದಿಷ್ಟ ಗುಣಕವನ್ನು ಬಳಸುತ್ತವೆ. ಇದರ ಅನ್ವಯ, 15 ರಿಂದ 25 ವರ್ಷ ವಯಸ್ಸಿನ ವ್ಯಕ್ತಿಗಳಿಗೆ ಅತ್ಯಂತ ಹೆಚ್ಚಿನ ಅಂದರೆ 18 ಗುಣಕವನ್ನು ಬಳಸಲಾಗುತ್ತದೆ. ನಂತರದ ವಯಸ್ಸಿನ ಗುಂಪುಗಳಲ್ಲಿ ಗುಣಕದ ಪ್ರಮಾಣವು ಈ ಕಡಿಮೆಯಾಗುತ್ತಾ ಹೋಗುತ್ತದೆ. 

26 ರಿಂದ 30 ವರ್ಷ: 17 ಗುಣಕ ಅಥವಾ ಮಲ್ಟಿಪ್ಲೈಯರ್ 

31 ರಿಂದ 35 ವರ್ಷ: 16 ಗುಣಕ ಅಥವಾ ಮಲ್ಟಿಪ್ಲೈಯರ್ 

36 ರಿಂದ 40 ವರ್ಷ: 15 ಗುಣಕ ಅಥವಾ ಮಲ್ಟಿಪ್ಲೈಯರ್ 

41 ರಿಂದ 45 ವರ್ಷ: 14 ಗುಣಕ ಅಥವಾ ಮಲ್ಟಿಪ್ಲೈಯರ್ 

46 ರಿಂದ 50 ವರ್ಷ: 13 ಗುಣಕ ಅಥವಾ ಮಲ್ಟಿಪ್ಲೈಯರ್ 

51 ರಿಂದ 55 ವರ್ಷ: 11 ಗುಣಕ ಅಥವಾ ಮಲ್ಟಿಪ್ಲೈಯರ್ 

56 ರಿಂದ 60 ವರ್ಷ: 9 ಗುಣಕ ಅಥವಾ ಮಲ್ಟಿಪ್ಲೈಯರ್ 

61 ರಿಂದ 65 ವರ್ಷ: 7 ಗುಣಕ ಅಥವಾ ಮಲ್ಟಿಪ್ಲೈಯರ್ 

ಸುಪ್ರೀಂ ಕೋರ್ಟ್‌ನ ಮಾರ್ಗದರ್ಶನದಂತೆ 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮೃತಪಟ್ಟರೆ, ಅವರಿಗೆ 15 ಗುಣಕವನ್ನು ಅನ್ವಯಿಸಲಾಗುತ್ತದೆ.

ಒಟ್ಟಾರೆಯಾಗಿ, ಹೈಕೋರ್ಟ್ ಪರಿಹಾರ ಮೊತ್ತವನ್ನು ₹5.45 ಲಕ್ಷದಿಂದ ₹8,25,500 ಕ್ಕೆ ಹೆಚ್ಚಿಸಿ ಆದೇಶಿಸಿದೆ. ಹೆಚ್ಚುವರಿ ಮೊತ್ತವಾದ ₹2,80,500 ಕ್ಕೆ ಅರ್ಜಿ ಸಲ್ಲಿಕೆಯಾದ ದಿನಾಂಕದಿಂದ ಹಣ ಪಾವತಿಯಾಗುವವರೆಗೆ ಶೇಕಡಾ 6 ರಷ್ಟು ವಾರ್ಷಿಕ ಬಡ್ಡಿ ನೀಡುವಂತೆಯೂ ಇನ್ಶೂರೆನ್ಸ್ ಕಂಪನಿಗೆ ಸೂಚಿಸಿದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸೋನಿಯಾ ಗಾಂಧಿ ಆತ್ಮಕತೆಯಲ್ಲಿ ಅಣ್ಣಾ ಹಜಾರೆ ಹೋರಾಟದ ಬಗ್ಗೆ ಹೇಳಿರುವುದೇನು?

ಮಾಜಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನೂತನ ಆತ್ಮಕತೆ ‘ಬಿಲಾಂಗಿಂಗ್:...

​’ಸಣ್ಣಗಿದ್ದೀವಿ, ನಮಗೇನೂ ಆಗಲ್ಲ’ ಎನ್ನುವ ನಿರ್ಲಕ್ಷ್ಯ ಬೇಡ: ಕಡಿಮೆ ತೂಕವಿದ್ದರೂ ಹೃದಯಾಘಾತದ ಆತಂಕ!

ಬೊಜ್ಜು (obesity) ಹಾಗೂ ಅಧಿಕ ರಕ್ತದೊತ್ತಡ (hypertension) ಹೊಂದಿರುವವರು ಹೆಚ್ಚಿನ ಆರೋಗ್ಯದ...

ಅಯೋಧ್ಯೆ ರಾಮಮಂದಿರ ದೇಣಿಗೆ ಕಳವು; ಎಲ್ಲಾ ಆರ್ಥಿಕ ಲೆಕ್ಕಪತ್ರ ಸಾರ್ವಜನಿಕಗೊಳಿಸಲು ಜೈರಾಮ್ ರಮೇಶ್ ಆಗ್ರಹ

ಅಯೋಧ್ಯೆಯ ರಾಮಮಂದಿರ ಕಾಣಿಕೆ ಮತ್ತು ದೇಣಿಗೆ ಹಣ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ...

ದೇಶದ ಜಲಾಶಯಗಳ ಸಂಗ್ರಹ ಕುಸಿತ; ಆಹಾರ, ವಿದ್ಯುತ್ ಉತ್ಪಾದನೆಯ ಮೇಲೆ ಭಾರೀ ಹೊಡೆತ- ಕಾದಿವೆಯೇ ಕೆಟ್ಟ ದಿನಗಳು?

ನೈರುತ್ಯ ಮುಂಗಾರಿನ ತೀವ್ರ ಅಭಾವದಿಂದಾಗಿ ದೇಶದ ಪ್ರಮುಖ ಜಲಾಶಯಗಳಲ್ಲಿ ನೀರಿನ ಸಂಗ್ರಹ...