2027ರಲ್ಲಿ ಮೂರು ದಿನಗಳ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆ: ಸಿಎಂ ಡಿ ಕೆ ಶಿವಕುಮಾರ್

Date:

ಕನ್ನಡಿಗರನ್ನು ವಿಶ್ವಮಟ್ಟದಲ್ಲಿ ಒಗ್ಗೂಡಿಸುವ ನಿಟ್ಟಿನಲ್ಲಿ ಮುಂದಿನ 2027ರಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಸಾಹಿತಿ ಡಾ. ಎಂ. ವೀರಪ್ಪ ಮೊಯಿಲಿ ಅವರ ನೇತೃತ್ವದಲ್ಲಿ ಮೂರು ದಿನಗಳ ಕಾಲ ‘ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ’ವನ್ನು ಆಯೋಜಿಸಲಾಗುವುದು. ಈ ಕುರಿತು ಮುಂದಿನ ಬಜೆಟ್‌ನಲ್ಲಿ ಅಗತ್ಯ ನಿರ್ಧಾರ ಕೈಗೊಳ್ಳಲಾಗುವುದು ಎಂದು ಡಿ.ಕೆ. ಶಿವಕುಮಾರ್ ಅವರು ಘೋಷಿಸಿದರು.

- Advertisement -

​ಮೈಸೂರಿನ ಊಟಿ ರಸ್ತೆಯಲ್ಲಿರುವ ಜೆಎಸ್‌ಎಸ್ ವಿದ್ಯಾಸಂಸ್ಥೆಯ ಆವರಣದಲ್ಲಿ ಬುಧವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಡಾ. ಎಂ. ವೀರಪ್ಪ ಮೊಯಿಲಿ ಅವರ “ವಿಶ್ವಸಂಸ್ಕೃತಿಯ ಮಹಾಯಾನ (ಸಂಪುಟ 4) – ಗದ್ಯ ಮಹಾಕಾವ್ಯ” ಕೃತಿಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ವಿದೇಶಗಳಲ್ಲಿಯೂ ನೆಲೆಸಿ ಕನ್ನಡಕ್ಕೆ ಅಪಾರ ಗೌರವ ನೀಡುತ್ತಿರುವ ಕನ್ನಡಿಗರನ್ನು ಒಂದೆಡೆ ಸೇರಿಸಿ, ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವ ಸ್ಪಷ್ಟ ಉದ್ದೇಶವನ್ನು ಸರ್ಕಾರ ಹೊಂದಿದೆ ಎಂದು ಅವರು ತಿಳಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಟ್ರಂಪ್‌ಗೆ ಮುಖಭಂಗ, ಯುರೋಪಿನಲ್ಲಿ ಆತಂಕ; ಜಗತ್ತಿನಲ್ಲಿ ಬದಲಾಗುತ್ತಿರುವ ಬಲಪಂಥೀಯ...

2026ರ ಅಮೆರಿಕ ಮತ್ತು ಬ್ರೆಜಿಲ್‌ನ ಚುನಾವಣಾ ಫಲಿತಾಂಶಗಳು ಜಾಗತಿಕ ಮಟ್ಟದಲ್ಲಿ ರಾಜಕೀಯ ಒಲವಿನ ಬದಲಾವಣೆಯನ್ನು ದೃಢಪಡಿಸಿವೆ. ಡೆಮಾಕ್ರಟರು ಸಾಧಿಸಿದ 255 ಹೌಸ್ ಮತ್ತು 54 ಸೆನೆಟ್ ಸ್ಥಾನಗಳ ಜಯ, ಹಾಗೂ ಬ್ರೆಜಿಲ್‌ನಲ್ಲಿನ ಅಧಿಕಾರ...

ಹೆಣ್ಣು-ಹಣ-ಚಾರಣ ಹಗರಣ: ಜಾಗತಿಕ ಚಿಪ್ ಸಾಮ್ರಾಜ್ಯದಲ್ಲಿ ಅಲ್ಲೋಲ ಕಲ್ಲೋಲ...

ಚಿಪ್ ಸಾಮ್ರಾಜ್ಯದ ಸಿಇಒ ಸುತ್ತ ಹೆಣೆದುಕೊಂಡಿರುವ ವಿವಾಹೇತರ ಸಂಬಂಧ, ಚೀನಿ ಚಾರಣ ಜಾಲ ಮತ್ತು ಭದ್ರತಾ ಆರೋಪಗಳು ಜಾಗತಿಕ ಮಾರುಕಟ್ಟೆಯನ್ನು ಅಲ್ಲೋಲಕಲ್ಲೋಲಗೊಳಿಸಿವೆ. ತಂತ್ರಜ್ಞಾನ ದೈತ್ಯರ ಒಳಸುಳಿಗಳೇನು? ಭಾರತದ ಡಿಜಿಟಲ್ ಹಾಗೂ ಸೆಮಿಕಂಡಕ್ಟರ್ ಭವಿಷ್ಯಕ್ಕೆ...

ಹೊರಗೆ ‘ರಾಮ’-ಒಳಗೆ ‘ನಾಥೂರಾಮ’: ಗಾಂಧೀಜಿಯವರ ತಾತ್ವಿಕತೆಯ ಮುಂದೆ ಬಲಪಂಥೀಯ...

ಗಾಂಧೀಜಿಯವರನ್ನು ವಿರೋಧಿಸುವ ರಾಜಕೀಯ ಪ್ರಯತ್ನಗಳು ಅವರ ವ್ಯಕ್ತಿತ್ವವನ್ನು ಕುಗ್ಗಿಸುವ ಬದಲು, ಅವರ ಆದರ್ಶಗಳ ಪ್ರಸ್ತುತತೆಯನ್ನು ಮತ್ತಷ್ಟು ಮುನ್ನೆಲೆಗೆ ತರುತ್ತಿವೆ. ಸತ್ಯ, ಅಹಿಂಸೆ, ಮಾನವೀಯತೆ, ಸಾಮಾಜಿಕ ಸಮಾನತೆ ಮತ್ತು ಗ್ರಾಮ ಸ್ವರಾಜ್ಯದ ಪರಿಕಲ್ಪನೆಗಳು ಇಂದಿಗೂ...

ರಾಜಕೀಯ ಮತ್ತು ಸಾಹಿತ್ಯದ ನಡುವಿನ ನಂಟನ್ನು ವಿಶ್ಲೇಷಿಸಿದ ಅವರು, “ಅಧಿಕಾರವನ್ನು ಬಳಸಿಕೊಂಡು ಜನರ ಬದುಕಿನಲ್ಲಿ ತಾತ್ಕಾಲಿಕ ಬದಲಾವಣೆ ತರಬಹುದು. ಆದರೆ, ಸಾಹಿತ್ಯದ ಮೂಲಕ ಜನರ ಆಲೋಚನೆ ಮತ್ತು ಮನಸ್ಸುಗಳನ್ನೇ ಬದಲಾಯಿಸಲು ಸಾಧ್ಯವಿದೆ. ರಾಜಕಾರಣಿಗಳು ಮತ್ತು ಅವರ ಹೆಸರುಗಳು ಕಾಲಕ್ರಮೇಣ ಮರೆಯಾಗಬಹುದು, ಆದರೆ ಸಾಹಿತಿಗಳು ಮತ್ತು ಅವರ ಚಿಂತನೆಗಳಿಗೆ ಸಾವಿಲ್ಲ. ಅಧಿಕಾರದ ಅವಧಿ ಸೀಮಿತವಾದರೂ ಸಾಹಿತ್ಯದ ಪ್ರಭಾವ ಶಾಶ್ವತವಾಗಿ ಉಳಿಯುತ್ತದೆ” ಎಂದು ಬಣ್ಣಿಸಿದರು.

​ಮನುಷ್ಯನಿಗೆ ಬದುಕಲು ಆಹಾರ ಎಷ್ಟು ಮುಖ್ಯವೋ, ಅಜ್ಞಾನ ದೂರಮಾಡಿ ಆತ್ಮತೃಪ್ತಿ ಹೊಂದಲು ಸಾಹಿತ್ಯ ಮತ್ತು ಕಲೆ ಕೂಡ ಅಷ್ಟೇ ಮುಖ್ಯ. ಅಭಿವೃದ್ಧಿಗೆ ಕೇವಲ ಸಂಪತ್ತು ಮಾತ್ರ ಸಾಲದು, ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಉತ್ತಮ ಮೌಲ್ಯಗಳೂ ಬೇಕು. ಎಲ್ಲಾ ಧರ್ಮಗಳು, ಭಾಷೆಗಳು, ಕಾವ್ಯ, ಶಾಯರಿ ಮತ್ತು ಸಂಗೀತದಲ್ಲಿ ಮಾನವೀಯತೆಯ ಅಂಶಗಳಿವೆ. ಮಾನವೀಯ ಮೌಲ್ಯಗಳನ್ನು ಬೆಸೆಯುವಲ್ಲಿ ಸಾಹಿತ್ಯ ಲೋಕದ ಪಾತ್ರ ಅನನ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

ವೀರಪ್ಪ ಮೊಯಿಲಿ ಅವರ ಬಹುಮುಖಿ ಸಾಧನೆಗಳನ್ನು ಸ್ಮರಿಸಿದ ಅವರು, “ರಾಜಕೀಯ ಮತ್ತು ಸಾಹಿತ್ಯ ಎರಡನ್ನೂ ಸಮರ್ಥವಾಗಿ ನಿಭಾಯಿಸುತ್ತಿರುವ ಮೊಯಿಲಿ ಅವರ ಸಾಧನೆ ವಿಶೇಷವಾದದ್ದು. ನಾಲ್ಕನೇ ತರಗತಿಯಲ್ಲಿದ್ದಾಗಲೇ ಕವಿತೆ ಬರೆಯುವ ಮೂಲಕ ಸಾಹಿತ್ಯದತ್ತ ಒಲವು ಬೆಳೆಸಿಕೊಂಡಿದ್ದ ಅವರು, ಈವರೆಗೆ 30ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಅವರ ‘ರಾಮಾಯಣ ಮಹಾನ್ವೇಷಣಂ’ ಕೃತಿಗೆ ಪ್ರತಿಷ್ಠಿತ ಸರಸ್ವತಿ ಸಮ್ಮಾನ್ ಪ್ರಶಸ್ತಿ ದೊರೆತಿರುವುದು ಹೆಮ್ಮೆಯ ವಿಷಯ. ಅವರಿಗೆ ಶೀಘ್ರವೇ ಜ್ಞಾನಪೀಠ ಸೇರಿದಂತೆ ಇನ್ನಷ್ಟು ಉನ್ನತ ಸಾಹಿತ್ಯ ಪ್ರಶಸ್ತಿಗಳು ಒಲಿಯಲಿ” ಎಂದು ಆಶಯ ವ್ಯಕ್ತಪಡಿಸಿದರು.

​ರಾಜಕೀಯವಾಗಿಯೂ ಮೊಯಿಲಿ ಅವರ ಕೊಡುಗೆ ಅಪಾರ. 1985ರಲ್ಲಿ ತಮ್ಮನ್ನೊಳಗೊಂಡಂತೆ ಎಚ್.ಎಂ.ರೇವಣ್ಣ, ರಾಮಲಿಂಗಾರೆಡ್ಡಿ ಅವರಂತಹ ಹಲವು ಯುವ ನಾಯಕರಿಗೆ ರಾಜೀವ್ ಗಾಂಧಿ ಅವರಿಂದ ಟಿಕೆಟ್ ಕೊಡಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಸಿಇಟಿ ವ್ಯವಸ್ಥೆ ಜಾರಿಗೆ ತರುವ ಮೂಲಕ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಕಡಿಮೆ ವೆಚ್ಚದಲ್ಲಿ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಶಿಕ್ಷಣ ದೊರೆಯುವಂತೆ ಮಾಡಿದರು. ಎತ್ತಿನಹೊಳೆ ಯೋಜನೆ ಅನುಷ್ಠಾನಕ್ಕೆ ಸಿದ್ದರಾಮಯ್ಯ ಅವರಿಗೆ ಪ್ರೇರಣೆ ನೀಡಿದವರಲ್ಲಿ ಮೊಯಿಲಿ ಪ್ರಮುಖರು. ಎಲೆಕ್ಟ್ರಾನಿಕ್ ಸಿಟಿ ಹಾಗೂ ಐಟಿ-ಬಿಟಿ ಕ್ಷೇತ್ರದ ಬೆಳವಣಿಗೆಯಲ್ಲೂ ಅವರ ಕೊಡುಗೆ ಸ್ಮರಣೀಯ ಎಂದು ಕೊಂಡಾಡಿದರು.

ಕನ್ನಡ ಭಾಷೆ ಮತ್ತು ನಾಡಧ್ವಜಕ್ಕೆ ಅಧಿಕೃತ ಮಾನ್ಯತೆ ನೀಡುವ ವಿಚಾರವಾಗಿಯೂ ಸರ್ಕಾರ ಬದ್ಧವಾಗಿದೆ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು. “ಈ ಹಿಂದೆ ಸಿದ್ದರಾಮಯ್ಯನವರು ಕನ್ನಡ ಧ್ವಜದ ವಿಚಾರವನ್ನು ಕೇಂದ್ರದ ಗಮನಕ್ಕೆ ತಂದಿದ್ದರು. ಸಂವಿಧಾನದಲ್ಲಿ ಇದಕ್ಕೆ ಯಾವುದೇ ನಿರ್ಬಂಧವಿಲ್ಲ. ಮುಂದಿನ ಅಧಿವೇಶನದಲ್ಲಿ ಈ ಬಗ್ಗೆ ಚರ್ಚಿಸಿ, ಅಗತ್ಯ ಕಾನೂನು ರೂಪಿಸಿ ಕನ್ನಡ ಭಾಷೆ ಹಾಗೂ ಬಾವುಟಕ್ಕೆ ವಿಶೇಷ ಗುರುತು ಹಾಗೂ ಗೌರವ ತಂದುಕೊಡುವುದು ನಮ್ಮ ಕಾಂಗ್ರೆಸ್ ಸರ್ಕಾರದ ಬದ್ಧತೆಯಾಗಿದೆ” ಎಂದು ಭರವಸೆ ನೀಡಿದರು.

ನೆಹರು, ಸೋನಿಯಾ ಗಾಂಧಿ, ಜೆ.ಎಚ್.ಪಟೇಲ್, ಎಂ.ಪಿ.ಪ್ರಕಾಶ್, ಬಂಗಾರಪ್ಪ, ಎಸ್.ಎಂ.ಕೃಷ್ಣ ಅವರ ಸಾಹಿತ್ಯ ಪ್ರೇಮವನ್ನು ಸ್ಮರಿಸಿದ ಅವರು, ತಾವೂ ಕೂಡ ನೀರಾವರಿ ಸಚಿವರಾಗಿದ್ದಾಗ ‘ನೀರಿನ ಹೆಜ್ಜೆ’ ಎಂಬ ಕೃತಿ ರಚಿಸಿದ್ದು, ಮುಂದಿನ ದಿನಗಳಲ್ಲಿ ಮಹಾತ್ಮ ಗಾಂಧೀಜಿಯವರ ಕುರಿತಾದ ಮತ್ತೊಂದು ಕೃತಿಯನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದರು. “ಕತ್ತಿಗಿಂತ ಲೇಖನಿ ಹರಿತ ಎಂಬಂತೆ ಸಮಾಜವನ್ನು ಬದಲಿಸುವ ಶಕ್ತಿ ಸಾಹಿತ್ಯಕ್ಕಿದೆ. ಸುತ್ತೂರು ಶ್ರೀಗಳು ನೂರಾರು ಬರಹಗಾರರನ್ನು ಪ್ರೋತ್ಸಾಹಿಸುತ್ತಿರುವುದು ಮತ್ತು ಸಾಹಿತ್ಯ, ಸಂಸ್ಕೃತಿಯ ಸಂರಕ್ಷಣೆಗೆ ಹಿರಿಯರು ನೀಡುತ್ತಿರುವ ಕೊಡುಗೆ ಅಪಾರ” ಎಂದು ನುಡಿದರು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

405 ದ್ವೇಷ ಪ್ರಕರಣ, 54 ಸಾವು, ಕೇವಲ 6 FIR: ದೇಶ ಬೆಚ್ಚಿಬೀಳಿಸುವಂತಿದೆ APCR ವರದಿ

ಭಾರತವು ವಿವಿಧತೆಯಲ್ಲಿ ಏಕತೆಯನ್ನು ಸಾರುವ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಹಾಗೂ ಶಾಂತಿಯ...

ಸೋನಿಯಾ ಗಾಂಧಿ ಆತ್ಮಕತೆಯಲ್ಲಿ ಅಣ್ಣಾ ಹಜಾರೆ ಹೋರಾಟದ ಬಗ್ಗೆ ಹೇಳಿರುವುದೇನು?

ಮಾಜಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನೂತನ ಆತ್ಮಕತೆ ‘ಬಿಲಾಂಗಿಂಗ್:...

​’ಸಣ್ಣಗಿದ್ದೀವಿ, ನಮಗೇನೂ ಆಗಲ್ಲ’ ಎನ್ನುವ ನಿರ್ಲಕ್ಷ್ಯ ಬೇಡ: ಕಡಿಮೆ ತೂಕವಿದ್ದರೂ ಹೃದಯಾಘಾತದ ಆತಂಕ!

ಬೊಜ್ಜು (obesity) ಹಾಗೂ ಅಧಿಕ ರಕ್ತದೊತ್ತಡ (hypertension) ಹೊಂದಿರುವವರು ಹೆಚ್ಚಿನ ಆರೋಗ್ಯದ...

ಈ ದಿನ ಸಂಪಾದಕೀಯ | ಬೆಳಕಿನ ಹಬ್ಬ ತರದಿರಲಿ ಹಲವರ ಬದುಕಿಗೆ ಕತ್ತಲೆ

ಅರಿವು ಹಾಗೂ ಅದರ ಸಂಕೇತವಾದ ಬೆಳಕಿನ ವಿಸ್ತರಣೆ ಆಗಬೇಕಿದ್ದ ದೀಪಾವಳಿಯು ಪ್ರತಿಷ್ಠೆಗೆ...