ಬಾಗಲಕೋಟೆ | ಬೇಸಿಗೆಯ ಬೇಗೆಯ ನಿರಾಳವಾಗಿಸಿದ ಕೃಷ್ಣಾ

Date:

ಬಾಗಲಕೋಟೆ ಜಿಲ್ಲೆಯ ತೆರೆದಾಳ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನತೆಗೆ ಈ ಬಾರಿಯೂ ಬೇಸಿಗೆ ಅಂತ್ಯದವರೆಗೆ ಕುಡಿಯುವ ನೀರಿನ ಕೊರತೆ ಎದುರಾಗುವ ಸಾಧ್ಯತೆ ಕಡಿಮೆಯಿದ್ದು, ಕೃಷ್ಣ ನದಿಯಲ್ಲಿ ಈ ಬೇಸಿಗೆಗೆ ಬೇಕಾಗುವಷ್ಟು ನೀರು ಲಭ್ಯವಿದೆ ಎನ್ನಲಾಗಿದೆ.

ನದಿಯಲ್ಲಿ ನೀರಿನ ಹರಿವು ಉತ್ತಮವಾಗಿರುವುದರಿಂದ ತೀವ್ರ ಬೇಸಿಗೆಯ ದಿನಗಳಲ್ಲಿಯೂ ನೀರಿನ ದಾಹ ನೀಗಿಸಲು ಯಾವುದೇ ತೊಂದರೆ ಎದುರಾಗುವುದಿಲ್ಲ ಎಂಬ ವಿಶ್ವಾಸವನ್ನು ಅಧಿಕಾರಿಗಳು ಹಾಗೂ ನದಿ ತೀರದ ರೈತರು ವ್ಯಕ್ತಪಡಿಸಿದ್ದಾರೆ. ಕೃಷ್ಣೆಯ ನೀರಿನ ಲಭ್ಯತೆ ಈ ಭಾಗದ ಜನರಲ್ಲಿ ನೆಮ್ಮದಿ ಮೂಡಿಸಿದ್ದು, ಕುಡಿಯುವ ನೀರಿನ ಸಮಸ್ಯೆಯಿರದ ಬೇಸಿಗೆಯಿಂದ ಜನ ನಿರುಮ್ಮಳರಾಗಿದ್ದಾರೆ.

- Advertisement -

ಕೃಷ್ಣ ನದಿಯೇ ರಬಕವಿ-ಬನಹಟ್ಟಿ ನಗರ ಸಭೆ, ತೆರೆದಾಳ ಪುರಸಭೆ ಸೇರಿದಂತೆ ಅನೇಕ ಗ್ರಾಮಗಳ ಕುಡಿಯುವ ನೀರಿನ ಪ್ರಮುಖ ಜೀವ ನಾಡಿಯಾಗಿದೆ. ಬೇಸಿಗೆ ಆರಂಭವಾದಂದಿನಿಂದ ಇಲ್ಲಿಯವರೆಗೆ ನೀರು ಪೂರೈಕೆಯಲ್ಲಿ ಯಾವುದೇ ಗಂಭೀರ ವ್ಯತ್ಯಯ ಎದುರಾಗಿಲ್ಲ. ಆದರೆ, ಮೇಲ್ಮಟ್ಟದ ವಿದ್ಯುತ್ ವ್ಯತ್ಯಯದಿಂದ ಕೆಲ ಸಂದರ್ಭದಲ್ಲಿ ನೀರು ಸರಬರಾಜಿನಲ್ಲಿ ಅಲ್ಪ ಪ್ರಮಾಣದ ಅಡಚಣೆಯಾದರೂ ಸಹ ಒಟ್ಟಾರೆ ನೀರಿನ ಪೂರೈಕೆ ಸಮರ್ಪಕವಾಗಿ ಸಾಗುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ...

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು ಇದೇ ಮೊದಲೇನಲ್ಲ. ಕರಾವಳಿಯ ಜನತೆ ಇಂತಹ ಪ್ರಚೋದನಾತ್ಮಕ ನಡೆಗಳನ್ನು ತಿರಸ್ಕರಿಸಿ, ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲಬೇಕಾಗಿದೆ. ಕರಾವಳಿ ಕರ್ನಾಟಕವಾಗಲಿ...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ...

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್ ಅವರ ನಿರ್ಧಾರಗಳ ಕುರಿತು ಚುನಾವಣಾ ಆಯುಕ್ತರಾದ ಸುಖಬೀರ್‌ ಸಿಂಗ್‌ ಸಂಧು ಮತ್ತು...

ಇದನ್ನೂ ಓದಿ >ಚಿಕ್ಕಬಳ್ಳಾಪುರ |ಕೊಳಚೆ ನೀರು ಬೇಡ , ಕೃಷ್ಣ ನದಿಯ ಶುದ್ಧ ನೀರು ಚಿಕ್ಕಬಳ್ಳಾಪುರ ಜಿಲ್ಲೆಗೆ ಹರಿಸಿ : ಹರೀಶ್ ರೆಡ್ಡಿ

ತೆರೆದಾಳ ಜಾಕ್ ವೆಲ್‌ಗೆ ರಬಕವಿ ಹೆಸ್ಕಾಂ ಮುಖೇನ ವಿದ್ಯುತ್ ಪೂರೈಸಲಾಗುತ್ತದೆ. ಬೇಸಿಗೆ ಪೂರ್ಣಗೊಳ್ಳುವವರೆಗೂ ನದಿ ನೀರನ್ನು ಮಿತವಾಗಿ ಬಳಸುವ ಉದ್ದೇಶದಿಂದ ಇತ್ತೀಚಿನ ವಾರಗಳಲ್ಲಿ ಎರಡು ದಿನ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುತ್ತಿದೆ. ಹೀಗಾಗಿ ತೆರೆದಾಳಕ್ಕೆ ನದಿ ನೀರು ಪೂರೈಕೆಯಲ್ಲಿ ವ್ಯತಯವಾಗುತ್ತಿದೆ. ಆದರೆ ಪುರಸಭೆ ವ್ಯಾಪ್ತಿಯ ಕೊಳವೆ ಬಾವಿಗಳಲ್ಲಿ ಸಾಕಷ್ಟು ನೀರು ಲಭ್ಯವಿರುವುದರಿಂದ ನದಿ ನೀರು ಬಾರದಿದ್ದಾಗ ಬೋರ್ವೆಲ್ ನೀರು ಪೂರೈಕೆ ಮಾಡಲಾಗಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆ ವ್ಯಾಪ್ತಿಯ ಹಳಿಂಗಳಿ, ತಮದಡ್ಡಿ ಗ್ರಾಮಗಳು ಕೃಷ್ಣಾ ನದಿ ತಟದಲ್ಲಿಯೇ ಇರುವುದರಿಂದ ನೀರಿನ ಸಮಸ್ಯೆಗೆ ಒಳಗಾಗಿಲ್ಲ. ಸಸಾಲಹಟ್ಟಿ, ಕಾಲತಿಪ್ಪಿ, ಗೋಲಭಾವಿ, ಹನಗಂಡಿ ಹಾಗೂ ಯರಗಟ್ಟಿ ಗ್ರಾಮಗಳಲ್ಲಿ ಗ್ರಾಮಪಂಚಾಯಿತಿಯ ಕೊಳವೆ ಬಾವಿಗಳು ನೀರು ಪೂರೈಕೆ ಮಾಡುತ್ತಿವೆ. ಗೋಲ ಬಾವಿ ಗ್ರಾಮದ ಕೆರೆಗೆ ಘಟಪ್ರಭ ಎಡದಂಡೆ ಕಾಲುವೆ ಮೂಲಕ ಇತ್ತೀಚೆಗೆ ನೀರು ತುಂಬಿಸಲಾಗಿದೆ. ಇದರಿಂದ ಅಂತರ್ಜಲ ಮಟ್ಟವು ಸುಧಾರಿಸಿದೆ.

ಸದ್ಯ ಬೇಸಿಗೆ ಇರುವುದರಿಂದ ಸಹಜವಾಗಿಯೇ ಬೆಳೆಗಳಿಗೆ ಹೆಚ್ಚಿನ ಪ್ರಮಾಣದ ನೀರಿನ ಅಗತ್ಯವಿರುತ್ತದೆ. ಪಂಪ್ಸೆಟ್ ಬಳಸಿ ಕೃಷ್ಣಾ ನದಿಯ ನೀರನ್ನು ಬೆಳೆಗಳಿಗೆ ಹರಿಸುತ್ತಿರುವ ಪರಿಣಾಮ ನದಿ ದಡದಲ್ಲಿ ಪಂಪ್ಸೆಟ್ಟುಗಳ ಅಬ್ಬರವೂ ಜೋರಾಗಿದೆ. ಬೆಳೆಗಳನ್ನು ಸುಡುಬಿಸಿಲಿನಲ್ಲಿ ಒಣಗದಂತೆ ರಕ್ಷಿಸಿಕೊಳ್ಳಲು ರೈತರಿಗೆ ಬೇರೆ ಪರ್ಯಾಯವೂ ಇಲ್ಲದಂತಿದೆ.

“ತೆರೆದಾಳ ಪುರಸಭೆ ವ್ಯಾಪ್ತಿಯಲ್ಲಿ 122 ಕೊಳವೆ ಬಾವಿಗಳು ಕಾರ್ಯ ನಿರ್ವಹಿಸುತ್ತಿವೆ. ನದಿ ನೀರು ಪೂರೈಕೆ ಸಕಾಲಕ್ಕೆ ಆಗದಿದ್ದರೂ ಕೊಳವೆ ಬಾವಿಗಳ ಮೂಲಕ ನೀರು ಸರಬರಾಜು ಸರಾಗವಾಗಿ ನಡೆಯುತ್ತಿದೆ. ದೇವರಾಜ ನಗರದಲ್ಲಿ ಸ್ವಲ್ಪ ಮಟ್ಟಿಗಿನ ಸಮಸ್ಯೆಯಿದೆ ಎಂಬ ಮಾತುಗಳು ಕೇಳಿ ಬಂದಿವೆ. ಈ ಮಧ್ಯೆ ಬೇಸಿಗೆ ಅವಧಿಯಲ್ಲಿ ನೀರು ಬಳಕೆ ಮಿತವಾಗಿರಲಿ” ಎನ್ನುವುದು ಅಧಿಕಾರಿಗಳ ಸಲಹೆ.

“ಕೃಷ್ಣ ನದಿಯಲ್ಲಿ ನೀರಿನ ಹರಿವು ಉತ್ತಮವಾಗಿದೆ ಆದ್ದರಿಂದ ಮೇ ಕೊನೆಯವರೆಗೂ ನೀರಿನ ಸಮಸ್ಯೆ ಎದುರಾಗುವುದಿಲ್ಲ. ಜೊತೆಗೆ ತೆರೆದಾಳದ 23 ವಾರ್ಡ್ಗಳಲ್ಲಿ ಕೊಳವೆ ಬಾವಿಗಳು ಕೂಡ ಇವೆ. ಬರ ನಿರ್ವಹಣೆ ಅಡಿಯಲ್ಲಿ 6 ಲಕ್ಷ ಅನುದಾನ ಕೂಡ ಮಂಜೂರಾಗಿದೆ” ಎಂದು ಪುರಸಭೆ ಮುಖ್ಯ ಅಧಿಕಾರಿ ಎಫ್ ಬಿ ಗಿಡ್ಡಿ ಹೇಳಿದ್ದಾರೆ.

ಒಟ್ಟಾರೆ ಈ ಬೇಸಿಗೆಯಲ್ಲಿ ತೆರೆದಾಳದ ಸಮಸ್ತ ನಾಗರಿಕರಿಗೆ ಕುಡಿಯುವ ನೀರಿನ ಸಂಕಷ್ಟ ಎದುರಾಗದು ಎನ್ನುವುದು ಅಧಿಕಾರಿಗಳು ಮತ್ತು ರೈತರ ಭರವಸೆ.

ರಮೇಶ್ ಎಸ್ ಹೊಸಮನಿ
ರಮೇಶ ಎಸ್ ಹೊಸಮನಿ
+ posts

ವಿಜಯಪುರ ಜಿಲ್ಲಾ ಸಂಯೋಜಕರು

ಪೋಸ್ಟ್ ಹಂಚಿಕೊಳ್ಳಿ:

ರಮೇಶ ಎಸ್ ಹೊಸಮನಿ
ರಮೇಶ ಎಸ್ ಹೊಸಮನಿ
ವಿಜಯಪುರ ಜಿಲ್ಲಾ ಸಂಯೋಜಕರು

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ ಅಮಾನವೀಯ ಕೊಲೆಗಡುಕರ ಬೆಂಬಲಕ್ಕೆ ನಿಂತ ಸಂಘಪರಿವಾರ

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ ಬಿಗಿಯಾಗುತ್ತಿರುವ ಬಿಕ್ಕಟ್ಟು!

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು...

ಮೋದಿ ಜನ್ಮದಿನದ ನಾಟಕದಲ್ಲಿ ಅಭಿನಯಿಸಲು ನಕಾರ; ವಿದ್ಯಾರ್ಥಿಗೆ ‘ಅಂಕ ಕಡಿತ’ದ ಬೆದರಿಕೆ

ಪ್ರಧಾನಿ ಮೋದಿ ಜನ್ಮದಿನದ ಅಂಗವಾಗಿ ಆಯೋಜಿಸಲಾಗಿರುವ ನಾಟಕದಲ್ಲಿ ಅಭಿನಯಿಸಲು ನಿರಾಕರಿಸಿದ ವಿದ್ಯಾರ್ಥಿಗಳಿಗೆ...