ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅದಾನಿ ಸಂಸ್ಥೆಯ ಲೂಟಿ ವಿರುದ್ಧ ಟ್ಯಾಕ್ಸಿ/ಕ್ಯಾಬ್ ಚಾಲಕ ಮಾಲಕರು ಕಳೆದ ಐದು ದಿನಗಳಿಂದ ಅನಿರ್ಧಿಷ್ಟವಾದಿ ಧರಣಿ ನಡೆಸುತ್ತಿದ್ದು, ಬುಧವಾರದಿಂದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುವ ಎಲ್ಲಾ ಟ್ಯಾಕ್ಸಿ ಕ್ಯಾಬ್ ಗಳನ್ನು ಬಂದ್ ಮಾಡಲು ತೀರ್ಮಾನಿಸಿದೆ.
ಈ ಕುರಿತು ಮಂಗಳೂರು ಅಂತಾರಾಷ್ಟ್ರೀಯ ವಾನ ನಿಲ್ದಾಣದ ಮುಂಭಾಗದಲ್ಲಿ ಧರಣಿ ನಿರತ ಸ್ಥಳದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ದ.ಕ ಉಡುಪಿ ಜಿಲ್ಲಾ ಟ್ಯಾಕ್ಸಿ ಮ್ಯಾನ್ ಮ್ಯಾಕ್ಸಿ ಕ್ಯಾಬ್ ಅಸೋಸಿಯೇಷನ್ ಅಧ್ಯಕ್ಷ ಮಾಜಿ ಶಾಸಕ ರಘುಪತಿ ಭಟ್ ” ಕಳೆದ ಐದು ದಿನಗಳಿಂದ ನಾವು ಧರಣಿ ನಡೆಸುತ್ತಿದ್ದೇವೆ. ಸೋಮವಾರದ ವರೆಗೆ ಅದಾನಿಗೆ ಗಡುವು ನೀಡಲಾಗಿದೆ. ಬಳಿಕ ತೀವ್ರ ಮಟ್ಟದ ಹೋರಾಟಕ್ಕೆ ನಾವು ಇಳಿಯಲಿದ್ದೇವೆ” ಎಂದು ಎಚ್ಚರಿಸಿದರು.
“ಸೋಮವಾರದಿಂದ ಎಲ್ಲಾ ಟ್ಯಾಕ್ಸಿ ಬಂದು ಮಾಡಿ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ. ಬುಧವಾರದಿಂದ ವಿಮಾನ ನಿಲ್ದಾಣಕ್ಕೆ ಯಾವುದೇ ಟ್ಯಾಕ್ಸಿ ಕ್ಯಾಬ್ ಗಳು ಬಾಡಿಗೆಗೆ ಬರಲ್ಲ. ಯಾರನ್ನು ಕೂಡಾ ಬರಲೂ ಬಿಡುವುದಿಲ್ಲ. ಗೊತ್ತಿಲ್ಲದೆ ಬಂದರೂ ವಿಮಾನ ನಿಲ್ದಾಣಕ್ಕೆ ಬರಲು ಬಿಡುವುದಿಲ್ಲ. ಪ್ರಯಾಣಿಕರು ತಮ್ಮ ಖಾಸಗಿ ವಾಹನದಲ್ಲಿ ಬರುವುದಿದ್ದಲ್ಲಿ ನಾವು ತಡೆಯುವುದಿಲ್ಲ” ಎಂದು ರಘುಪತಿ ಭಟ್ ತಿಳಿಸಿದರು.
“ಈ ಭಾಗದಲ್ಲಿ ಕಳ್ಳ ಟ್ಯಾಕ್ಸಿ ಮಾಡುವವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಂತಹವರನ್ನೂ ಪತ್ತೆ ಹಚ್ಚಿ ವಿಮಾನ ನಿಲ್ದಾಣದ ಹೊರಗಡೆ ತಡೆಯಲಾಗುವುದು. ಮಂಗಳವಾರ ಆಟೋ ರಿಕ್ಷಾ ಚಾಲಕರು ವಿಮಾನ ನಿಲ್ಧಾಣಕ್ಕೆ ಯಾವುದೇ ಬಾಡಿಗೆ ಬರಲ್ಲ. ಅಲ್ಲದೇ ಮಂಗಳವಾರದ ಬಳಿಕ ರಾಜ್ಯದ ಯಾವುದೇ ಟ್ಯಾಕ್ಸಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಬರುವುದಿಲ್ಲ” ದ ಕ ಉಡುಪಿ ಜಿಲ್ಲಾ ಟ್ಯಾಕ್ಸಿ ಮ್ಯಾನ್ ಮ್ಯಾಕ್ಸಿ ಕ್ಯಾಬ್ ಅಸೋಸಿಯೇಷನ್ ಅಧ್ಯಕ್ಷ ಮಾಜಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ.




