ತುಮಕೂರು | ದಲಿತರಿಗೆ ದೇವಾಲಯ ಪ್ರವೇಶ ಅಡ್ಡಿಪಡಿಸಿ ಜಾತಿ ನಿಂದನೆ: ಆರೋಪಿಯ ಬಂಧನ

Date:

ಮಾದಿಗ ಸಮುದಾಯದ ಕುಟುಂಬವೊಂದು ದೇವಾಲಯ ಪ್ರವೇಶ ಮಾಡಿದ್ದನ್ನು ಅಡ್ಡಿಪಡಿಸಿ ಬೆದರಿಕೆ ಹಾಕಿದ್ದಲ್ಲದೆ, ಜಾತಿ ನಿಂದನೆ ಮಾಡಿದ ಪ್ರಕರಣದಡಿ ಆರೋಪಿಯನ್ನು ತಮಕೂರು ಜಿಲ್ಲೆಯ ತುರುವೇಕೆರೆ ಠಾಣೆಯ ಪೊಲೀಸರು ಶನಿವಾರ ಬಂಧಿಸಿದ್ದಾರೆ.

- Advertisement -

ಕಿರುಕುಳಕ್ಕೊಳಗಾದ ರಂಗರಾಮು ಟಿ. ಎಂಬುವರು ನೀಡಿದ ದೂರಿನನ್ವಯ ರಾಜಣ್ಣ (65) ಎಂಬಾತನನ್ನು ಜಾತಿನಿಂದನೆ ಕಾಯ್ದೆಯಡಿ ಬಂಧಿಸಿ ಕಾನೂನು ಕ್ರಮ ಜರುಗಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ವಿರಾಟ್ ಕೊಹ್ಲಿ: ದಂತಕಥೆಯ ಪಯಣದ ಮತ್ತೊಂದು ಸುವರ್ಣ ಅಧ್ಯಾಯ

ಕ್ರಿಕೆಟ್ ಕೇವಲ ಒಂದು ಆಟವಲ್ಲ, ಅದೊಂದು ಜೀವಂತ ಭಾವನೆ ಎಂದು ನಂಬಿರುವ ಕೋಟ್ಯಂತರ ಭಾರತೀಯರಿಗೆ ವಿರಾಟ್ ಕೊಹ್ಲಿ ಕೇವಲ ಒಬ್ಬ ಆಟಗಾರನಲ್ಲ; ಬದಲಾಗಿ ಅದ್ಭುತ ಕಾವ್ಯದಂತಿರುವ ಒಂದು ಸುವರ್ಣ ಶಕೆ. ನವೆಂಬರ್ 5,...

‘ವಿಬಿ-ಜಿ ರಾಮ್‌ ಜಿ’ ಅನುಷ್ಠಾನದಲ್ಲಿ ಎಡವಟ್ಟು! ಕೂಲಿ ಸಿಗದೆ...

ಗ್ರಾಮೀಣ ಬಡ ಕುಟುಂಬಗಳಿಗೆ ಆಸರೆಯಾಗಬೇಕಿದ್ದ ‘ವಿಬಿ-ಜಿ ರಾಮ್ ಜಿ’ (VB-G RAM G) ಯೋಜನೆ, ಅನುಷ್ಠಾನದ ಎಡವಟ್ಟುಗಳಿಂದಾಗಿ ಗೊಂದಲದ ಗೂಡಾಗಿದೆ. ಕೆಲಸ ಮಾಡಿದರೂ ತಿಂಗಳುಗಟ್ಟಲೆ ಕೂಲಿ ಸಿಗದೆ ಬಡ ಕಾರ್ಮಿಕರು ಆರ್ಥಿಕ ಸಂಕಷ್ಟಕ್ಕೆ...

ಖಾಲಿಯಾಗುತ್ತಿವೆ ಉತ್ತರ ಕನ್ನಡದ ಹಳ್ಳಿಗಳು: 40ಕ್ಕೂ ಹೆಚ್ಚು ಗ್ರಾಮಗಳಲ್ಲಿ...

ಮಕ್ಕಳ ಗದ್ದಲ, ಕೃಷಿ ಚಟುವಟಿಕೆಯ ಹಿಗ್ಗು, ಹಬ್ಬ-ಹರಿದಿನಗಳ ಸಂಭ್ರಮದಿಂದ ಕಂಗೊಳಿಸುತ್ತಿದ್ದ ಹಳ್ಳಿಗಳು ಇವತ್ತು ನಿಶ್ಶಬ್ದವಾಗಿ ನಿಂತಿವೆ. ಪ್ರಕೃತಿಯ ಮಡಿಲಲ್ಲಿ ಕಟ್ಟಿಕೊಂಡಿದ್ದ ಬದುಕು ನಿಧಾನವಾಗಿ ಕರಗಿ ಹೋಗುತ್ತಿದೆ. ಊರು ತೊರೆದು ಪಟ್ಟಣ ಸೇರವುದು ಅನಿವಾರ್ಯವ...

ಇದನ್ನು ಓದಿದ್ದೀರಾ? ತುಮಕೂರು | ದಲಿತ ಚಳವಳಿಯ ನೇತಾರ ಬಂದಕುಂಟೆ ನಾಗರಾಜಯ್ಯ ನಿಧನ

ತುಯಲಹಳ್ಳಿ ಗ್ರಾಮದ ರಂಗರಾಮು ಟಿ. ಹಾಗೂ ಅವರ ಕುಟುಂಬ ಮಲ್ಲೂರು ಗ್ರಾಮದಲ್ಲಿರುವ ಶ್ರೀ ರಂಗನಾಥಸ್ವಾಮಿ ದೇವಾಲಯಕ್ಕೆ ಎ.18ರಂದು ಸಂಜೆ 5.30ರ ಸುಮಾರಿಗೆ ಪೂಜೆ ಮಾಡಿಸಲು ತೆರಳಿದ್ದು, ಈ ವೇಳೆ ದೇವಾಲಯದ ಜಗಲಿ ಮೇಲೆ ಕುಳಿತಿದ್ದ ಆರೋಪಿ ಮಲ್ಲೂರು ಗ್ರಾಮದ ರಾಜಣ್ಣ ಎಂಬಾತ ಆ ದಲಿತ ಕುಟುಂಬವನ್ನು, “ನೀವುಗಳು ಮಾದಿಗ ಜನಾಂಗದವರು ಏಕೆ ದೇವಸ್ಥಾನದ ಒಳಗೆ ಹೋಗಿದ್ದಿರಿ, ಈ ದೇವಸ್ಥಾನ ಊರಿನ ಛತ್ರನಾ, ಇದು ನಿಮ್ಮ ಮನೆಯ ಮುಂದಿನ ದೇವಸ್ಥಾನವಾ?, ಯಾವಾಗಲೂ ಕೆಳಗಿನ ನೀರು ಕೆಳಗೆ ಹರಿಯಬೇಕು, ಮೇಲಿನ ನೀರು ಮೇಲೆಯೇ ಹರಿಯಬೇಕು, ಎರಡು ನೀರು ಒಟ್ಟಿಗೆ ಹರಿಬಾರದು” ಎಂದು ನಿಂದಿಸಿರುವುದಾಗಿ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

“ನಮ್ಮ ಗ್ರಾಮದಲ್ಲಿ ಮೊದಲಿನಿಂದಲೂ ದಲಿತರಿಗೆ ದೇವಸ್ಥಾನ ಪ್ರವೇಶ ಕೊಡದಂತೆ ನಡೆಸಿಕೊಂಡು ಬಂದಿರುತ್ತಾರೆ. ಹಾಗೇ ನಡೆದುಕೊಂಡು ಹೋಗಬೇಕು, ದೇವಸ್ಥಾನದ ಒಳಗೆ ನಿಮ್ಮನ್ನು ಯಾರು ಬಿಟ್ಟಿದ್ದು, ನೀವು ದೇವಸ್ಥಾನಕ್ಕೆ ಹೋಗುವುದರಿಂದಲೇ ನಿಮ್ಮ ಆರೋಗ್ಯ ಹದಗೆಟ್ಟಿರುತ್ತದೆ” ಎಂದು ಆರೋಪಿಯು ನಿಂದನೆ ಮಾಡಿರುವುದಾಗಿ ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.

ಆರೋಪಿಯು “ದೇವಾಲಯದ ಗೋಡೆಯ ಮೇಲಿರುವ ತಹಸೀಲ್ದಾರರ ನೋಟಿಸನ್ನು ಕೂಡ ಅವಹೇಳನ ಮಾಡಿದ್ದು, ನೀವು ದೇವಸ್ಥಾನದ ಪ್ರವೇಶ ಮಾಡಿರುವುದು ತಪ್ಪಾಯಿತೆಂದು ದೇವಸ್ಥಾನದ ಹೊಸ್ತಿಲಿಗೆ ಬಿದ್ದು ಹೋಗಿ” ಎಂದು ಮಾನಸಿಕವಾಗಿ ಕಿರುಕುಳ ನೀಡಿದ್ದಾನೆ ಎಂದು ದೂರುದಾರರು ತಿಳಿಸಿದ್ದಾರೆ.

ಈ ಸಂಬಂಧ ಶನಿವಾರ ಮಧ್ಯಾಹ್ನ ಘಟನಾ ಸ್ಥಳಕ್ಕೆ ಡಿವೈಎಸ್ಪಿ ಓಂ ಪ್ರಕಾಶ್‌ಗೌಡ, ಕಂದಾಯ ಅಧಿಕಾರಿಗಳು ಹಾಗೂ ತುರುವೇಕೆರೆ ಠಾಣೆಯ ಪೊಲೀಸರು ಭೇಟಿ ನೀಡಿ ಮಹಜರು ನಡೆದಿದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವರ್ಷಗಳಿಂದ ನೀರಿಲ್ಲದೆ ಸೊರಗಿದ ಗ್ರಾಮ; ಹತಾಶೆಯಿಂದ ಊರನ್ನೇ ಬಿಕರಿಗಿಟ್ಟ ನಿವಾಸಿಗಳು

ಒಂದೆಡೆ ನೀರಾವರಿ ಯೋಜನೆ, ಇನ್ನೊಂದೆಡೆ ನೀರಿಗಾಗಿ ಪರದಾಡುವ ರೈತರು. ಯೋಜನೆ ಆರಂಭವಾಗಿ...

ವಿರಾಟ್ ಕೊಹ್ಲಿ: ದಂತಕಥೆಯ ಪಯಣದ ಮತ್ತೊಂದು ಸುವರ್ಣ ಅಧ್ಯಾಯ

ಕ್ರಿಕೆಟ್ ಕೇವಲ ಒಂದು ಆಟವಲ್ಲ, ಅದೊಂದು ಜೀವಂತ ಭಾವನೆ ಎಂದು ನಂಬಿರುವ...

ಬೆಂಗಳೂರು | ಆನೆ ದಾಳಿಗೆ ವಾಕಿಂಗ್ ತೆರಳಿದ್ದ ವ್ಯಕ್ತಿ ಬಲಿ

ಇಂದು ಮುಂಜಾನೆ ವಾಕಿಂಗ್ ತೆರಳಿದ್ದ ವ್ಯಕ್ತಿಯೊಬ್ಬರು ಆನೆ ದಾಳಿಗೆ ಮೃತಪಟ್ಟಿರುವ ಘಟನೆ...

ಅಮೆರಿಕದಲ್ಲಿ ಡೀಸೆಲ್ ರಫ್ತು ನಿಷೇಧದ ಚರ್ಚೆ; ಭಾರತದ ಮೇಲಾಗುವ ಪರಿಣಾಮವೇನು?

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ರಷ್ಯಾ-ಉಕ್ರೇನ್ ನಡುವಿನ ಸಂಘರ್ಷದಿಂದಾಗಿ ಜಾಗತಿಕ...