ಕೆಪಿಸಿಸಿಯಲ್ಲಿ ಗುಂಪುಗಾರಿಕೆಗೆ ಬ್ರೇಕ್; ಸಂದರ್ಶನ ನಡೆಸಿ 112 ಕಾರ್ಯದರ್ಶಿಗಳ ನೇಮಕ: ಬಿ ಕೆ ಹರಿಪ್ರಸಾದ್

Date:

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯಲ್ಲಿ ಸಂಘಟನೆಯನ್ನು ಪುನರ್‌ರಚಿಸಿ, ಬಲಪಡಿಸಲು ಹೊಸ ರೀತಿಯ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗಿದೆ. ಸಂದರ್ಶನ ಪ್ರಕ್ರಿಯೆಯ ಮೂಲಕ ಒಟ್ಟು 112 ಕೆಪಿಸಿಸಿ ಕಾರ್ಯದರ್ಶಿಗಳನ್ನು ಆಯ್ಕೆ ಮಾಡಲಾಗಿದೆ. ಆಯ್ಕೆಯಾದ 112 ಕಾರ್ಯದರ್ಶಿಗಳಿಗೆ ತಲಾ ಎರಡು ವಿಧಾನಸಭಾ ಕ್ಷೇತ್ರಗಳ ಉಸ್ತುವಾರಿ ನೀಡಲಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಹೇಳಿದರು.

- Advertisement -

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ನಡೆದ ಮಾಧ್ಯಮಸಗೋಷ್ಠಿಯಲ್ಲಿ ಮಾತನಾಡಿದ ಬಿ ಕೆ ಹರಿಪ್ರಸಾದ್ ಅವರು, ಈ ಕಾರ್ಯದರ್ಶಿಗಳು ತಮಗೆ ವಹಿಸಿರುವ ಕ್ಷೇತ್ರಗಳಲ್ಲಿ ಒಂದೂವರೆ ವರ್ಷಗಳ ಕಾಲ ಪೂರ್ಣ ಪ್ರಮಾಣದಲ್ಲಿ ಸಂಘಟನಾ ಕೆಲಸ ಮಾಡಬೇಕು. 112 ಕಾರ್ಯದರ್ಶಿಗಳ ಜೊತೆಗೆ 112 ಕೋಆರ್ಡಿನೇಟರ್‌ಗಳನ್ನೂ ನೇಮಕ ಮಾಡಲಾಗುತ್ತದೆ. ಜಿಲ್ಲಾ ಮಟ್ಟದಲ್ಲಿಯೂ ವಿವಿಧ ಮುಖಂಡರನ್ನು ನೇಮಕ ಮಾಡುವ ಉದ್ದೇಶದಿಂದ ಸಂದರ್ಶನ ಪ್ರಕ್ರಿಯೆ ಮುಂದುವರಿಸಲಾಗಿದೆ ಎಂದು ತಿಳಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಡತನದ ಮಾಪನ ಮತ್ತು ವಾಸ್ತವ ಚಿತ್ರಣ: ಆಳ ಅಗಲ

ವಿಶ್ವಬ್ಯಾಂಕ್‌ನ ಬಡತನ ಮತ್ತು ಸಮಾನತೆಯ ಇತ್ತೀಚಿನ ವರದಿಯ ಪ್ರಕಾರ 2011ರಿಂದ 2023ರ ಅವಧಿಯಲ್ಲಿ ಭಾರತದಲ್ಲಿ ಅಂದಾಜು 49.6 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ. ಈ ವರದಿಯನ್ನು ಆಧರಿಸಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ...

ಗಾಂಧೀಯ ‘ರಾಮ’-ಮನುವಾದಿಗಳ ‘ಶ್ರೀರಾಮ’ನಲ್ಲ

ಸಮಾನತೆಯ ರಾಮರಾಜ್ಯಕ್ಕೂ, ವರ್ಣಾಶ್ರಮದ ರಾಜಕಾರಣಕ್ಕೂ ಇರುವ ವ್ಯತ್ಯಾಸವೇನು? ಗಾಂಧೀಜಿಯವರ ಪಾಲಿಗೆ ರಾಮ ಎಂದರೆ ಸತ್ಯ, ಅಹಿಂಸೆ, ಪ್ರೀತಿ ಮತ್ತು ಸರ್ವಧರ್ಮ ಸಮಭಾವದ ಸಂಕೇತ; ಅಂಬೇಡ್ಕರ್ ಅವರ ವಿಮರ್ಶೆಯಲ್ಲಿ ಪುರಾಣದ ರಾಮನ ಆಡಳಿತದಲ್ಲಿ ಜಾತಿ...

ಮಂಡೇಲ ನೇತೃತ್ವದಲ್ಲಿ ಗುಲಾಮಗಿರಿ – ವರ್ಣಭೇದ ನೀತಿ ವಿರುದ್ಧ...

ನೆಲ್ಸನ್ ಮಂಡೇಲಾ ಅವರಂತಹ ಮಹಾನ್ ನಾಯಕರು ಕಟ್ಟಿದ್ದ ಈ ಪಕ್ಷ ದಾರಿ ತಪ್ಪಿದ್ದಾದರೂ ಹೇಗೆ ಎಂಬ ಪ್ರಶ್ನೆಗೆ ರಾಜಕೀಯ ತಜ್ಞರು ಸ್ಪಷ್ಟ ಕಾರಣಗಳನ್ನು ನೀಡಿದ್ದಾರೆ. ಆಡಳಿತಶಾಹಿಯ ಭ್ರಷ್ಟಾಚಾರ, ಮಿತಿಮೀರಿದ ಬಡತನ, ನಿರುದ್ಯೋಗ, ಮತ್ತು...

ಇದನ್ನೂ ಓದಿ: ನಗರ ಪ್ರಾಧಿಕಾರಗಳ ಒಕ್ಕೂಟದ ನಿಯೋಗದಿಂದ ಕೆಪಿಸಿಸಿ ಅಧ್ಯಕ್ಷ ಬಿ. ಕೆ. ಹರಿಪ್ರಸಾದ್ ಭೇಟಿ

ಎಲ್ಲಾ ಅರ್ಜಿದಾರರನ್ನು ಸಂದರ್ಶನ ಮಾಡುವ ಜವಾಬ್ದಾರಿಯನ್ನು ಹಿರಿಯ ನಾಯಕರ ನೇತೃತ್ವದ ಸಮಿತಿಗೆ ವಹಿಸಲಾಗಿತ್ತು. ಈ ಸಂದರ್ಶನ ಸಮಿತಿಯಲ್ಲಿ ಡಾ. ಜಿ. ಪರಮೇಶ್ವರ್, ದಿನೇಶ್ ಗುಂಡೂರಾವ್, ಬಿ.ಎಲ್. ಶಂಕರ್, ಎಚ್.ಕೆ. ಪಾಟೀಲ್, ತುಕಾರಾಂ, ಲೋಕಸಭಾ ಸದಸ್ಯರು, ನಜೀರ್ ಅಹಮದ್ ಹಾಗೂ ರಾಣಿ ಸತೀಶ್ ಸೇರಿದಂತೆ ಹಿರಿಯ ನಾಯಕರು ಇದ್ದರು

“ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಮಾದರಿಯಲ್ಲೇ ಕರ್ನಾಟಕದಲ್ಲಿಯೂ ಕೆಪಿಸಿಸಿ ಕಾರ್ಯದರ್ಶಿಗಳ ನೇಮಕಾತಿಗೆ ಪಾರದರ್ಶಕ ವಿಧಾನ ಅನುಸರಿಸಲಾಗಿದೆ. ಅಖಿಲ ಭಾರತ ಕಾಂಗ್ರೆಸ್ ಸಮಿತಿಯು ದೇಶಾದ್ಯಂತ ಸುಮಾರು 800 ಮಂದಿಯನ್ನು ಆಹ್ವಾನಿಸಿ, ಕಾರ್ಯದರ್ಶಿ ಹುದ್ದೆಗಳಿಗೆ ಸಂದರ್ಶನ ನಡೆಸಿ ಈಗಾಗಲೇ ಪಟ್ಟಿ ಸಿದ್ಧಪಡಿಸಲಾಗಿದೆ. ಇದೇ ಮಾದರಿಯಲ್ಲಿ ಕೆಪಿಸಿಸಿ ಕಾರ್ಯದರ್ಶಿಗಳ ನೇಮಕಾತಿಗೆ ಬಹಿರಂಗವಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ರಾಜ್ಯದಾದ್ಯಂತ ಒಟ್ಟು 920 ಅರ್ಜಿಗಳು ಸಲ್ಲಿಕೆಯಾಗಿವೆ. ಈ ಪೈಕಿ ಬೆಂಗಳೂರಿನಿಂದಲೇ 308 ಅರ್ಜಿಗಳು ಸಲ್ಲಿಕೆಯಾಗಿರುವುದು ವಿಶೇಷ” ಎಂದರು.

“ಇಂತಹ ಬಹಿರಂಗ ಸಂದರ್ಶನ ಮತ್ತು ಅರ್ಜಿ ಆಹ್ವಾನ ಪ್ರಕ್ರಿಯೆಯನ್ನು ಕಾಂಗ್ರೆಸ್ ಪಕ್ಷದಲ್ಲಿ ಮೊದಲ ಬಾರಿಗೆ ಅನುಸರಿಸಲಾಗುತ್ತಿದೆ. ಅರ್ಜಿಗಳ ಸಂಖ್ಯೆಯನ್ನು ಗಮನಿಸಿದಾಗ ಪಕ್ಷದ ಕಾರ್ಯಕರ್ತರಲ್ಲಿ ಸಂಘಟನಾ ಕೆಲಸ ಮಾಡಲು ಅಪಾರ ಉತ್ಸಾಹ ಮತ್ತು ಆಸಕ್ತಿ ಇರುವುದು ಸ್ಪಷ್ಟವಾಗಿದೆ. ರಾಜಕೀಯ ಪಕ್ಷದ ಸಂಘಟನೆ ಮಾಡುವಾಗ ಹಲವು ವಿಧಾನಗಳನ್ನು ಅನುಸರಿಸಲಾಗುತ್ತದೆ. ಆದರೆ ಈ ಬಾರಿ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸುವ ಹೊಸ ಪ್ರಯತ್ನ ಮಾಡಲಾಗಿದೆ” ಎಂದು ತಿಳಿಸಿದರು.

“ಯಾವುದೇ ಗುಂಪುಗಾರಿಕೆ, ವ್ಯಕ್ತಿಗತ ಇಷ್ಟಾನಿಷ್ಟಗಳು ಅಥವಾ ಲೈಕ್ಸ್ ಅಂಡ್ ಡಿಸ್ಲೈಕ್ಸ್‌ಗಳಿಗೆ ಅವಕಾಶ ನೀಡದೆ, ನಿಜವಾಗಿ ಕೆಲಸ ಮಾಡುವ ಸಾಮರ್ಥ್ಯ ಇರುವವರನ್ನು ಆಯ್ಕೆ ಮಾಡುವುದು ಈ ಪ್ರಕ್ರಿಯೆಯ ಉದ್ದೇಶವಾಗಿದೆ. ಈ ಹೊಸ ನೇಮಕಾತಿ ವಿಧಾನದಿಂದ ಪಕ್ಷದ ಸಂಘಟನೆ ಬಲಗೊಳ್ಳಲಿದೆ ಎಂಬ ವಿಶ್ವಾಸವಿದೆ” ಎಂದರು.

ಕಲಬುರಗಿ ವಿಭಾಗದ ಸಂದರ್ಶನ ಪ್ರಕ್ರಿಯೆ ನಡೆಸಲಾಗುವುದು. ಕಲಬುರಗಿ ವಿಭಾಗದ ವ್ಯಾಪ್ತಿಗೆ ಬರುವ ಬೀದರ್, ರಾಯಚೂರು, ಕಲಬುರಗಿ, ಬಳ್ಳಾರಿ, ಬಳ್ಳಾರಿ ಗ್ರಾಮಾಂತರ, ವಿಜಯನಗರ, ಯಾದಗಿರಿ ಮತ್ತು ಕೊಪ್ಪಳ ಜಿಲ್ಲೆಗಳಿಂದ ಒಟ್ಟು ಸುಮಾರು 111 ಅರ್ಜಿಗಳು ಸಲ್ಲಿಕೆಯಾಗಿವೆ. ಕಲಬುರಗಿ ವಿಭಾಗದ ಎಲ್ಲಾ ಅರ್ಜಿದಾರರ ಸಂದರ್ಶನ ನಡೆಸಿ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ. ಈ ಪ್ರಕ್ರಿಯೆಯ ಉದ್ದೇಶ ಮತ್ತು ವಿವರಗಳನ್ನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ತಿಳಿಸುವ ಉದ್ದೇಶದಿಂದ ಈ ಮಾಹಿತಿ ಹಂಚಿಕೊಳ್ಳಲಾಗಿದೆ ಎಂದು ತಿಳಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇಮಕಾತಿ ಸಂಘಟನಾ ಪುನರ್‌ರಚನೆಯ ಭಾಗವಾಗಿ ಈಗಾಗಲೇ ಎಲ್ಲಾ ವೀಕ್ಷಕರು (Observers) ಬ್ಲಾಕ್ ಮಟ್ಟಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಪ್ರತಿ ಬ್ಲಾಕ್‌ಗೆ ಯಾರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಬಹುದು ಎಂಬ ಕುರಿತು ವೀಕ್ಷಕರು ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: ಆರ್‌ಎಸ್‌ಎಸ್ ಮತ್ತು ಪಾಕಿಸ್ತಾನ ಸಂಬಂಧದ ಬಗ್ಗೆ ತನಿಖೆಯಾಗಬೇಕು: ಬಿ.ಕೆ ಹರಿಪ್ರಸಾದ್

ಈ ಪ್ರಕ್ರಿಯೆಯನ್ನು ಅಕ್ಟೋಬರ್ 31ರೊಳಗೆ ಪೂರ್ಣಗೊಳಿಸುವಂತೆ ಸೂಚಿಸಲಾಗಿತ್ತು. ಇದೀಗ ನವೆಂಬರ್ ತಿಂಗಳವರೆಗೆ ಅವಧಿ ವಿಸ್ತರಿಸಲಾಗಿದೆ. ಆದಷ್ಟು ಬೇಗ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರನ್ನು ನೇಮಕ ಮಾಡಲಾಗುವುದು. ಬ್ಲಾಕ್ ಕಾಂಗ್ರೆಸ್ ಸಮಿತಿಗಳ ಪದಾಧಿಕಾರಿಗಳ ಪಟ್ಟಿಯನ್ನೂ ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ತಿಳಿಸಿದರು.

ಒಟ್ಟು 112 ಕಾರ್ಯದರ್ಶಿಗಳಿಗೆ ತಲಾ ಎರಡು ವಿಧಾನಸಭಾ ಕ್ಷೇತ್ರಗಳ ಜವಾಬ್ದಾರಿ ನೀಡಲಾಗುತ್ತದೆ. ಪ್ರತಿಯೊಬ್ಬ ಕಾರ್ಯದರ್ಶಿಯೂ ತಮಗೆ ವಹಿಸಿದ ಎರಡು ಕ್ಷೇತ್ರಗಳಲ್ಲಿ ಒಂದೂವರೆ ವರ್ಷಗಳ ಕಾಲ ನಿರಂತರವಾಗಿ ಸಂಘಟನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಇವರ ಜೊತೆಗೆ 112 ಕೋಆರ್ಡಿನೇಟರ್‌ಗಳೂ ಕಾರ್ಯನಿರ್ವಹಿಸಲಿದ್ದಾರೆ. ಕಾರ್ಯದರ್ಶಿಗಳು ಮತ್ತು ಕೋಆರ್ಡಿನೇಟರ್‌ಗಳ ಮೂಲಕ ತಳಮಟ್ಟದಿಂದ ಪಕ್ಷದ ಸಂಘಟನೆಯನ್ನು ಬಲಪಡಿಸುವುದು ನಮ್ಮ ಗುರಿಯಾಗಿದೆ ಎಂದರು.

ಪಕ್ಷದ ಸದಸ್ಯರಾಗಿರಬೇಕು ಎನ್ನುವ ನಿಯಮವಿದೆಯೇ ಎಂದಾಗ, “ಕಾರ್ಯದರ್ಶಿ ಆಗುವವರು ಕನಿಷ್ಠ 5 ವರ್ಷವಾದರೂ ಪಕ್ಷದ ಸದಸ್ಯತ್ವ‌ ಪೂರ್ಣಗೊಳಿಸಿರುತ್ತಾರೆ” ಎಂದರು. ಹಾಗೆಯೇ “ಈ ರೀತಿಯ ಹೊಸ ಪ್ರಕ್ರಿಯೆ ಏಕೆ ಎಂದು ಕೇಳಿದಾಗ, “ಕಚೇರಿಯಲ್ಲಿ ಆಯ್ಕೆ ಮಾಡುವ ಬದಲು ಜನರ ನಡುವೆ ಇರುವವರನ್ನು ನಾವು ಆಯ್ಕೆ ಮಾಡುತ್ತಿದ್ದೇವೆ. 2029 ರ ಚುನಾವಣೆ ತನಕ ಇವರು ಕೆಲಸ ಮಾಡಬೇಕಾಗುತ್ತದೆ. ಪ್ರಸ್ತುತ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಇದನ್ನು ಮಾಡಲಾಗುತ್ತಿದೆ” ಎಂದು ಮಾಹಿತಿ ನೀಡಿದರು.

ಇದು ಬಿಕೆ ಹರಿಪ್ರಸಾದ್ ಅವರ ಹೊಸ ಆಲೋಚನಯೇ‌ ಇದು ಎಂದು ಕೇಳಿದಾಗ, ‌”ಕೆಲಸ ಮಾಡುವವರೆಲ್ಲರೂ ಒಂದಾಗಿ ಕೆಲಸ ಮಾಡಬೇಕು. ಓಬಿಸಿ ಪರಿಶಿಷ್ಟ‌ಜಾತಿ, ಪಂಗಡಗಳು ಶೇ 33 ರಷ್ಟು ಮಹಿಳೆಯರಿಗೂ ಮೀಸಲಾತಿ ಇರುತ್ತದೆ” ಎಂದರು. ನಿಗಮ ಮಂಡಳಿ ಸದಸ್ಯರ ನೇಮಕಾತಿ ಬಗ್ಗೆ ಕೇಳಿದಾಗ, “ಎರಡನೇ ಪಟ್ಟಿ ಬಂದ ಬಳಿಕ ಇದು ಸಂಪೂರ್ಣವಾಗಲಿದೆ. ಈಗ ಮೊದಲನೇ ಪಟ್ಟಿ ಬಿಡುಗಡೆ‌ ಮಾಡಲಾಗಿದೆ” ಎಂದರು.  

ಬೆಂಗಳೂರಿನ‌ ಕಾರ್ಯಕರ್ತರಿಗೆ ಅನ್ಯಾಯವಾಗಿದೆ ಎಂದಾಗ, “ಇದು ಇನ್ನು ಮೊದಲನೇ ಪಟ್ಟಿ. ನಂತರ‌ ಸಂಪುರ್ಣವಾಗಿ ಹುದ್ದೆಗಳ ಪಟ್ಟಿ ನೀಡಲಾಗುವುದು. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ದೇವರುಗಳು. ಇವರ ಶ್ರಮದಿಂದ ಕಾಂಗ್ರೆಸ್ ಪಕ್ಷ ಆಧಿಕಾರಕ್ಕೆ ಬಂದಿದೆ” ಎಂದರು. ಕಾರ್ಯಾಧ್ಯಕ್ಷರು ಬದಲಾವಣೆ ‌ಆಗುತ್ತಾರೆಯೇ ಎಂದಾಗ, “ಸಂದರ್ಭ ಬಂದಾಗ ಇದರ ಬಗ್ಗೆ ಮಾತನಾಡುತ್ತೇನೆ” ಎಂದು ತಿಳಿಸಿದರು.

ಸೋನಿಯಾ ಗಾಂಧಿಯವರ ಪುಸ್ತಕದ ಬಗ್ಗೆ ಬಿಜೆಪಿಯವರ  ಟೀಕೆ ಬಗ್ಗೆ ಕೇಳಿದಾಗ, ‌”ಅವರು ಗಳು ಮುಸ್ಸಲೋನಿ ಲೆನ್ಸ್ ಹಾಕಿಕೊಂಡು ನೋಡುತ್ತಿದ್ದಾರೆ. 56 ಇಂಚಿನ ಎದೆಯ ಪುಸ್ತಕವನ್ನ 56 ಜನ ಓದುವವರು ಇರಲಿಲ್ಲ. ಇದೇ 17 ರಂದು ಮಧ್ಯಾಹ್ನ 12 ಗಂಟೆಗೆ ಪುಸ್ತಕ ಅನಾವರಣಗೊಳ್ಳಲಿದೆ ಎಂದರು.
 
ಹಿರಿಯೂರು ಉಪ ಚುನಾವಣೆ ಘೋಷಣೆಯಾಗದ ಬಗ್ಗೆ ಕೇಳಿದಾಗ, “ನಾವು ಚುನಾವಣೆಗೆ ತಯಾರಿದ್ದೇವೆ. ಇದರ ಬಗ್ಗೆ ಚುನಾವಣಾ ಆಯೋಗ ಮಾತನಾಡಬೇಕು” ಎಂದರು. ಅಲ್ಪಸಂಖ್ಯಾತ, ದಲಿತ ಸಂಘಟನೆಗಳ ವಚನ ಭ್ರಷ್ಟ ಹೋರಾಟದ ಬಗ್ಗೆ ಕೇಳಿದಾಗ, “ನಾವು ಕೊಟ್ಟ ಮಾತನ್ನು ಈಡೇರಿಸುತ್ತೇವೆ. 2022 ರಲ್ಲಿ ಹೇಗಿತ್ತೋ ಅದೇ ತರಕ್ಕೆ ಮತಾಂತರ ಬಿಲ್ ಅನ್ನು ಜಾರಿಗೆ ತರಲಾಗುವುದು. ಭಾರತವನ್ನು ಪ್ರತಿನಿಧಿಸುವ ಪಕ್ಷ ಕಾಂಗ್ರೆಸ್. ಜಾತಿ ಧರ್ಮದ ಮೇಲೆ ನಾವು ನಿಂತಿಲ್ಲ‌. ಎಲ್ಲರ ಅನಿಸಿಕೆ ಅಭಿಪ್ರಾಯಗಳನ್ನು ನಾವು ಆಲಿಸುತ್ತೇವೆ ಎಂದು ತಿಳಿಸಿದರು.

ಬಿಜೆಪಿಯನ್ನ ನೀವು ಕೋಮುವಾದಿ ಎಂದು ಕರೆಯಲು ಆಗುವುದಿಲ್ಲ ಎಂದು ಕೇಳಿದಾಗ, “ಪಕ್ಷ ಕೋಮುವಾದಿ ಅಲ್ಲ. ಕೆಲವೊಬ್ಬ ಸದಸ್ಯರು ಇರಬಹುದು. ಬಿಜೆಪಿಯವರಂತೆ ನಾವು ಸುಳ್ಳು ಹೇಳುವುದಿಲ್ಲ. ಕೋಮುವಾದ ಮಾಡುವುದಿಲ್ಲ. ಮತೀಯ ದ್ಚೇಷಿಗಳು, ಚಡ್ಡಿಗಳು” ಎಂದರು.

ಕೆ‌ ಎನ್ ರಾಜಣ್ಣ, ರಾಜೇಂದ್ರ ಅವರನ್ನು ಹೊರ ಕಳುಹಿಸಲಾಗುವುದೇ ಎಂದಾಗ, “ಅವರು ಬಹಿರಂಗವಾಗಿ ಮಾತನಾಡುತ್ತಾರೆ. ಹೊರಗೆ ಹೋಗಿ ಎಂದು ನಾವು ಯಾರು ಹೇಳುವುದಿಲ್ಲ. ಅವರನ್ನು ನಾವು ಉಳಿಸಿಕೊಳ್ಳುತ್ತೇವೆ. ಆಂತರಿಕ ವಿಚಾರವನ್ನ ನಾನು ಹಾಗೂ ಸಿಎಂ ಇಬ್ಬರೇ ಮಾತನಾಡೋದು. ಮೂರನೇಯವರು ಮಾತನಾಡುವಂತಿಲ್ಲ” ಎಂದು ಹೇಳಿದರು. 

ಮಾಧ್ಯಮಗೋಷ್ಠಿಯಲ್ಲಿ ಕೆಪಿಸಿಸಿ ಉಪಾಧ್ಯಕ್ಷರಾದ ನಾರಾಯಣಸ್ವಾಮಿ, ಮಾಜಿ ಸಚಿವೆ ರಾಣಿ ಸತೀಶ್, ಮಾಜಿ ಪರಿಷತ್ ಸದಸ್ಯ ಹಾಗೂ ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷರಾದ ರಮೇಶ್ ಬಾಬು, ಮಾಜಿ ಮೇಯರ್ ರಾಮಚಂದ್ರಪ್ಪ ಇದ್ದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಜ್ರೀವಾಲ್, ಪುತ್ರಿಗೆ ಜೀವಬೆದರಿಕೆ: ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ 7 ಕೋಟಿ ರೂ.ಗೆ ಬೇಡಿಕೆ

ದೆಹಲಿಯ ಮಾಜಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ...

ಈ ದಿನ ಸಂಪಾದಕೀಯ | ಸಾರ್ವಜನಿಕ ಸಭ್ಯತೆ ಹಿನ್ನೆಲೆಗೆ; ಚಾಕು-ಚೂರಿ ಸಂಸ್ಕೃತಿ ಮುನ್ನೆಲೆಗೆ!

ಸಮಾಜಕ್ಕೆ ಇಂದು ಬೇಕಿರುವುದು ಚಾಕು-ಚೂರಿ ಹಿಡಿಯುವ ಕೈಗಳಲ್ಲ, ಕೈಕುಲುಕಿ ಸಮಸ್ಯೆ ಬಗೆಹರಿಸುವ...

ನವೆಂಬರ್ 21ರಿಂದ ಶಿವಮೊಗ್ಗ ವಿಮಾನ ನಿಲ್ದಾಣದಿಂದ ವಿಮಾನ ಹಾರಾಟ ಸ್ಥಗಿತ ಸಾಧ್ಯತೆ!

ಶಿವಮೊಗ್ಗ ವಿಮಾನ ನಿಲ್ದಾಣದಿಂದ ವಿಮಾನಯಾನ ಸೇವೆ ಸ್ಥಗಿತಗೊಳ್ಳುವ ಆತಂಕ ಎದುರಾಗಿದೆ. ವಿಮಾನಗಳ...