ದಾವಣಗೆರೆ | ಜಗಳೂರು ತಾಲೂಕನ್ನು ಬರ ಪ್ರದೇಶಗಳ ಪಟ್ಟಿಗೆ ಸೇರಿಸಲು ಒತ್ತಾಯ: ಶಾಸಕ ದೇವೇಂದ್ರಪ್ಪ

Date:

ಮಳೆ ಕೊರೆತೆಯಿಂದ ಅನ್ನದಾತ ತತ್ತರಿಸಿದ್ದಾರೆ. ಜಗಳೂರು ತಾಲೂಕಿನಲ್ಲಿ 90% ಬೆಳೆ ಹಾನಿಯಾಗಿದೆ. ಬರ ಸಮೀಕ್ಷೆ ನೆಡೆಸಿ ತಾಲೂಕನ್ನು ಶಾಶ್ವತ ಬರ ಪೀಡಿತವೆಂದು ಘೋಷಿಸುವಂತೆ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌ ಮಲ್ಲಿಕಾರ್ಜನ್ ಮತ್ತು ಕಂದಾಯ ಸಚಿವ ಕೃಷ್ಣ ಭೈರೇಗೌಡರಿಗೆ ಮನವಿ ಮಾಡುತ್ತೇವೆ ಎಂದು ಶಾಸಕ ಬಿ ದೇವೇಂದ್ರಪ್ಪ ಭರವಸೆ ನೀಡಿದ್ದಾರೆ.

ಜಗಳೂರು ತಾಲೂಕಿನ ಗೊಲ್ಲರಟ್ಟಿ, ಭರಮಸಮುದ್ರ, ಮುನ್ನೂರು, ಬಿಳಿಚೋಡು, ಸೊಕ್ಕೆ ಸೇರಿದಂತೆ ಹಳ್ಳಿಗಳಲ್ಲಿ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಅಧಿಕಾರಿಗಳೊಂದಿಗೆ ಸಮೀಕ್ಷೆ ನಡೆಸಿ, ಅವರು ಮಾತನಾಡಿದರು. “ಜಗಳೂರು ತಾಲೂಕಿನಲ್ಲಿ 51% ಪ್ರದೇಶದಲ್ಲಿ ಮೆಕ್ಕೆಜೋಳ, ಶೇಂಗಾ, ರಾಗಿ, ಸೂರ್ಯಕಾಂತಿ, ತೊಗರಿ ಹೀಗೆ ವಿವಿಧ ರೀತಿಯಾಗಿ ಬಿತ್ತನೆ ಮಾಡಲಾಗಿದೆ. ಅಲ್ಲದೆ, ಆಗಸ್ಟ್‌ ಅಂತ್ಯಕ್ಕೆ 57 ಮಿ.ಮೀ. ವಾಡಿಕೆ ಮಳೆಯಾಗಬೇಕಿತ್ತು. ಆದರೆ, 15 ಮಿ.ಮೀ. ಮಳೆಯಾಗಿ 70% ಮಳೆ ಕೊರತೆಯಿಂದ ಪ್ರಮುಖ ಬೆಳೆಗಳಾದ ಮೆಕ್ಕೆಜೋಳ, ಶೇಂಗಾ, ಸೂರ್ಯಕಾಂತಿ, ಬೆಳೆಗಳ ವಿವಿಧ ಬೆಳೆಗಳು ಸಂಪೂರ್ಣ ಒಣಗಿವೆ” ಎಂದು ತಿಳಿಸಿದ್ದಾರೆ.

“ನಮ್ಮ ರೈತರು ಹಾಕಿದ್ದ ಬಂಡವಾಳವೂ ಮರಳಿ ಬಾರರೆ, ಸಾಲವನ್ನು ಹೊತ್ತಿಕೊಳ್ಳುವ ಪರಿಸ್ಥಿತಿ ಬಂದೊದಗಿದೆ. ಮಳೆ ಇಲ್ಲದೆ ಆಕಾಶದತ್ತ ಮುಗಿಲು ನೋಡಿ ರೈತರು ವಿಚಲಿತರಾಗಿದ್ದಾರೆ. ಕೃಷಿ ತೋಟಗಾರಿಕೆ ಮತ್ತು ತಾಲೂಕು ಆಡಳಿತದ ಅಧಿಕಾರಿಗಳು ಇಲ್ಲಿನ ನೈಜ್ಯ ಪರಿಸ್ಥಿತಿಯನ್ನು ಮೇಲಾಧಿಕಾರಿಗಳಿಗೆ ಮನವರಿಕೆ ಮಾಡಿಬೇಕು. ತೀವ್ರ ಬರ ಪ್ರವೇಶವೆಂದು ಘೊಷಿಸಲು ಕ್ರಮ ಕೈಳ್ಳುವಂತೆ ಸಚಿವರ ಗಮನಕ್ಕೆ ತರಲಾಗುವುದು” ಎಂದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಸಮೀಕ್ಷೆ ಕಾರ್ಯದಲ್ಲಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಿಥುನ್, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ತೋಟದಯ್ಯ. ಆರ್.ಐ ಧನಂಜಯ್,ಕೀರ್ತಿ, ಕೃಷಿ ಇಲಾಖೆ ಎ.ಡಿ.ಎ ಜೀವಿತಾ, ಪ್ರಸನ್ನ ಕುಮಾರ್‌, ವೆಂಕಟೇಶ್ ನಾಯ್ಕ
ಶಾಸಕರ ಆಪ್ತ ಸಹಾಯಕರಾದ ಶಿವಕುಮಾರ್, ಪಲ್ಲಾಗಟ್ಟಿ ಶೇಖರಪ್ಪ, ಮುಖಂಡರಾದ ಅನುಪ್ ರೆಡ್ಡಿ, ಜಗಳೂರು ಗೊಲ್ಲರಟ್ಟಿ ರಮೇಶ್,ಪ್ರಕಾಶ್ ರೆಡ್ಡಿ,ಹರೀಶ್ ಸೇರಿದಂತೆ ಅನೇಕರಿದ್ದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿ | ‘ಅಂಬೇಡ್ಕರ್ ಮತ್ತು ಗಾಂಧೀಜಿ – ಒಂದು ನದಿಯ ಎರಡು ದಡಗಳು’

ಬಾಬಾ ಸಾಹೇಬ್ ಅವರ 133ನೇ ಜಯಂತಿಯ ದಿನದಂದ ನಾವು ಹೆಚ್ಚೆಚ್ಚು ಎಷ್ಟೇ...

ಗದಗ | ದೊಡ್ಡೂರು ಗ್ರಾಮದಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ

ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ದೊಡ್ಡೂರ ಗ್ರಾಮದಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್...

ರಾಯಚೂರು | ಅಂಬೇಡ್ಕರ್ ಜಯಂತಿಯಂದು ಮಾಂಸ ಮಾರಾಟ ನಿಷೇಧ; ಖಂಡನೆ

ಡಾ. ಬಿ.ಆರ್ ಅಂಬೇಡ್ಕರ್ ಜಯಂತಿ ಹಿನ್ನೆಲೆ ಏಪ್ರಿಲ್ 14ರಂದು ರಾಯಚೂರು ಜಿಲ್ಲೆಯ...

ಮೋದಿ ಹೇಳಿದರೂ ಸ್ಪರ್ಧೆಯಿಂದ ಹಿಂದೆ ಸರಿಯಲ್ಲ ಎಂದ ಕೆ.ಎಸ್.ಈಶ್ವರಪ್ಪ

ರಾಜ್ಯ ಬಿಜೆಪಿಯ ವಿರುದ್ಧ ಬಂಡಾಯವೆದ್ದು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ...