ದಾವಣಗೆರೆ | ಅಂಬೇಡ್ಕರ್ ಭವನ ವಿಳಂಬ; ದಲಿತ ಮುಖಂಡರಿಂದ ಅಂಬೇಡ್ಕರ್ ಜಯಂತಿ ಬಹಿಷ್ಕಾರ

Date:

“ಹರಿಹರ ನಗರದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಭವನದ ಗುದ್ದಲಿ ಪೂಜೆಯನ್ನು ಬಸವ ಜಯಂತಿ ದಿನದಂದು ಮಾಡದೇ ಹೋದರೆ ದಲಿತ ಸಂಘಟನೆಗಳ‌, ಮುಖಂಡರ ನೇತೃತ್ವದಲ್ಲಿ ಹರಿಹರ ನಗರವನ್ನು ಬಂದ್ ಮಾಡಲಾಗುವುದು” ಎಂದು ತಾಲೂಕು ಆಡಳಿತದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ಬಹಿಷ್ಕಾರದ ವೇಳೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ದಲಿತ ಸಂಘರ್ಷ ಸಮಿತಿ ಸಂಚಾಲಕ ಪಿ.ಜೆ. ಮಹಾಂತೇಶ್ ತಿಳಿಸಿದರು.

ಹರಿಹರ ನಗರದ ಗುರುಭವನದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ 135ನೇ ಜಯಂತಿ ಆಚರಣೆ ಕಾರ್ಯಕ್ರಮವನ್ನು ಬಹಿಷ್ಕರಿಸಿದ ದಲಿತ ಮುಖಂಡರು, ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗುದ್ದಲಿ ಪೂಜೆ ವಿಳಂಬಕ್ಕೆ ಧಿಕ್ಕಾರ ಕೂಗಿದರು.

- Advertisement -
1004127517

ಈ ವೇಳೆ ಮಾತನಾಡಿದ ಮಹಾಂತೇಶ “ನಗರದ ಹಳೆ ಕೋರ್ಟ್ ಸ್ಥಳದಲ್ಲಿ ಡಾ.ಅಂಬೇಡ್ಕರ್ ರವರ ಭವನದ ನಿರ್ಮಾಣಕ್ಕೆ ಸರ್ಕಾ 2 ಕೋಟಿಗೆ ಅನುಮೋದನೆ ನೀಡಿ, ಮುಂಗಡವಾಗಿ 50 ಲಕ್ಷ ಅನುದಾನವನ್ನು ಬಿಡುಗಡೆ ಮಾಡಿದೆ. ಅಂಬೇಡ್ಕರ್ ಜಯಂತಿಯಂದು ಸಮುದಾಯ ಭವನದ ಕಾಮಗಾರಿಯನ್ನು ಆರಂಭಿಸುವಂತೆ ಮನವಿ ಮಾಡಲಾಗಿತ್ತು‌. ದಾವಣಗೆರೆಯಲ್ಲಿ ಶಾಸಕ ಬಿ‌.ಪಿ. ಹರೀಶ್ ರವರನ್ನು ಭೇಟಿ ಮಾಡಿ ಗಮನಕ್ಕೆ ತರಲಾಗಿತ್ತು. ಆದರೆ ಇಂದು ಗುದ್ದಲಿ ಪೂಜೆ ಮಾಡದೇ ಇರುವುದರಿಂದ ನಾವು ತಾಲೂಕು ಆಡಳಿತ ವತಿಯಿಂದ ನಡೆದ ಅಂಬೇಡ್ಕರ್ ರವರ ಜಯಂತಿ ಸಮಾರಂಭವನ್ನು ಬಹಿಷ್ಕಾರವನ್ನು ಹಾಕಿದ್ದೇವೆ. ಮುಂಬರುವ ಬಸವ ಜಯಂತಿ ದಿನದಂದು (20 ದಿನದ ನಂತರ) ಅಂಬೇಡ್ಕರ್ ಭವನಕ್ಕೆ ಗುದ್ದಲಿ ಪೂಜೆ ಮಾಡದೇ ಹೋದರೆ ತಾಲೂಕಿನ ಎಲ್ಲಾ ದಲಿತ ಸಂಘಟನೆಯವರೊಂದಿಗೆ ಮತ್ತು ಸಮಾಜದ ಜನರೊಂದಿಗೆ ಬೃಹತ್ ಪ್ರತಿಭಟನೆ ಮತ್ತು ಹರಿಹರ ಬಂದ್ ಮಾಡುವ ಮೂಲಕ ಉಗ್ರವಾದ ಹೋರಾಟ ಮಾಡಲಾಗುವುದು” ಎಂದು ಎಚ್ಚರಿಸಿದರು. 

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

ದಲಿತ ಮುಖಂಡ ಎಂ.ಬಿ. ಅಣ್ಣಪ್ಪ ಮಾತನಾಡಿ “ಅಧಿಕಾರಿಗಳು, ಜನ ಪ್ರತಿನಿದಿನಗಳ ಸಹಾಯದಿಂದ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಸರ್ಕಾರದಿಂದ 2 ಕೋಟಿ ಅನುದಾನ ನೀಡಲಾಗಿದೆ. ತಕ್ಷಣವೇ ಕಾಮಗಾರಿಯನ್ನು ಆರಂಭಿಸದೇ ಹೋದರೆ ಸರ್ಕಾರಕ್ಕೆ ಮುಂಗಡ ಹಣ ವಾಪಾಸ್ ಹೋಗುತ್ತದೆ. ಆದ್ದರಿಂದ ಶಾಸಕರು ಕೂಡಲೇ ಅಂಬೇಡ್ಕರ್ ಭವನ ನಿರ್ಮಾಣ ಗುದ್ದಲಿ ಪೂಜೆಗೆ ಮುಂದಾಗಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಗರಸಭೆ ಮಾಜಿ ಸದಸ್ಯ ಹನುಮಂತಪ್ಪ ಮಾತನಾಡಿ “ತಾಲೂಕಿನ ಮಾಜಿ ಶಾಸಕರಾದ ಹೆಚ್.ಎಸ್. ಶಿವಶಂಕರ್, ಎಸ್ ರಾಮಪ್ಪ ಮತ್ತು ಶಾಸಕ ಬಿ.ಪಿ‌ ಹರೀಶ್ ಎಲ್ಲರೂ ಸಹಕಾರ ಮಾಡಿದ್ದಾರೆ. ಹಿಂದೆ ನಮ್ಮ ಸಮಾಜದ ಮುಖಂಡರು ಪಕ್ಷಾತೀತವಾಗಿ ನಗರಸಭೆ ಸದಸ್ಯರು ಹತ್ತಿರ ಹೋಗಿ ಕೇಳಿದಾಗ ಹಳೆ ಕೋರ್ಟ್ ಜಾಗದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ನಗರಸಭೆ ಸರ್ವ ಸದಸ್ಯರು ಒಮ್ಮತದಿಂದ ಜಾಗ ನೀಡಿದ್ದಾರೆ. ಆದರೆ ಕೆಲವು ತಾಂತ್ರಿಕ ಕಾರಣದಿಂದ ವಿಳಂಬ ಆಗಿದೆ. ಇದನ್ನು ಶಾಸಕರು ಸರಿಪಡಿಸುವ ಮೂಲಕ ಆದಷ್ಟು ಬೇಗ ಗುದ್ದಲಿ ಪೂಜೆ ಮಾಡಲಿಕ್ಕೆ ಮುಂದಾಗಬೇಕು” ಎಂದು ಮನವಿ ಮಾಡಿದರು.

ವಿಜಯಕುಮಾರ್ ಮಾತನಾಡಿ “ನಾವು ಸರ್ಕಾರಿ ಕಾರ್ಯಕ್ರಮಕ್ಕೆ ಅಡ್ಡಿ ಮಾಡುತ್ತಿಲ್ಲ. ನಮ್ಮ ಹಕ್ಕನ್ನು ಕೇಳುತ್ತ ಇದ್ದೇವೆ‌. ಆದ್ದರಿಂದ ಶಾಸಕರು ಸಮಾಜದ ಹಿತ ದೃಷ್ಟಿಯಿಂದ ಮತ್ತು ಎಲ್ಲಾ ವರ್ಗದ ಜನರಿಗೆ ಉಪಯುಕ್ತ ಆಗುವಂತಹ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಮುಂದಾಗಬೇಕು” ಎಂದರು. 

ತಾಲೂಕು ಆಡಳಿತ ವತಿಯಿಂದ ಗುರುಭವನದಲ್ಲಿ ನಡೆದ ಡಾ. ಅಂಬೇಡ್ಕರ್ ಜಯಂತಿ ಸಮಾರಂಭದಲ್ಲಿ ಪಾಲ್ಗೊಳ್ಳಲು ದಲಿತ ಸಂಘಟನೆ ಮುಖಂಡರಿಗೆ ತಹಶೀಲ್ದಾರ್ ಸಂತೋಷ ಕುಮಾರ್, ಬಿಇಓ ಡಿ ದುರುಗಪ್ಪ, ಸಮಾಜ ಕಲ್ಯಾಣ ಇಲಾಖೆ ಹನುಮಂತಪ್ಪ ಲಮಾಣಿ ಮನವಿ ಮಾಡಿದರೂ ಸಹ ದಲಿತ ಸಂಘಟನೆ ಮುಖಂಡರು ಗುರುಭವನದ ಒಳಗೆ ಭಾಗಿಯಾಗದೇ ಹೊರಗಡೆ ಡಾ. ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಮ್ ರವರ ಭಾವಚಿತ್ರವನ್ನು ಇಟ್ಟು ಜಯಂತಿ ಆಚರಣೆ ಮಾಡಿದರು.

ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಉಪಚುನಾವಣೆ ಪ್ರಚಾರದಿಂದ ದೂರ ಉಳಿದಿದ್ದ ಕಾಂಗ್ರೆಸ್ ಎಂಎಲ್ಸಿ ಜಬ್ಬಾರ್ ಸಾಬ್ ಅಮಾನತು

ಈ ಸಂದರ್ಭದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯ ಸಂತೋಷ ನೋಟದವರ್, ಬಿಎಸ್ಪಿ ಹನುಮಂತಪ್ಪ, ದಲಿತ ಮಹಾಸಭಾ ಅಧ್ಯಕ್ಷ ಹೆಚ್. ದೇವೇಂದ್ರಪ್ಪ, ಡಿ.ಎಸ್.ಎಸ್. ಮಂಜುನಾಥ್ ಎಂ.. ವಾಸನ ಸುರೇಶ್, ಮಂಜುನಾಥ್ ಕೊಪ್ಪಳ, ಕೇಶವ, ಹೆಚ್.ಸುಧಾಕರ್.  ತಿಮ್ಮಣ್ಣ ಕಡ್ಲೆಗುಂದಿ, ಮಂಜುನಾಥ್ ನಡುವಿನ, ವಿಶ್ವನಾಥ ಮೈಲಾಳ, ಹರ್ಷವರ್ಧನ್ , ಸಚ್ಚಿನ್ ಕೊಂಡಜ್ಜಿ, ಇತರರು ಹಾಜರಿದ್ದರು .



eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬರಗಾಲದ ದಸರಾದಲ್ಲಿ ಕಂಬಳದ ಹಠ: ಜನಾಭಿಪ್ರಾಯಕ್ಕೆ ಬೆಲೆಯಿಲ್ಲವೇ?

ನೀರಿನ ಅಭಾವ, ಪರಿಸರ ನಾಶ, ಸಾರ್ವಜನಿಕ ಹಣದ ವೆಚ್ಚದ ನಡುವೆ ಸರ್ಕಾರದ...

‘ಸ್ಟಿಂಗ್ ಆಪರೇಷನ್’ ವಿವಾದ- ನನ್ನಿಂದಲೇ ತನಿಖೆ ಆರಂಭಿಸಿ: ಎಚ್.ಡಿ. ಕುಮಾರಸ್ವಾಮಿ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿಕೊಂಡು ವೀಡಿಯೊ ಬಿಡುಗಡೆ ಮಾಡಲು ಯತ್ನಿಸಲಾಗಿದೆ...

ಬಳ್ಳಾರಿ | ವರದಕ್ಷಿಣೆ ಕಿರುಕುಳಕ್ಕೆ ಮೂವರು ಬಲಿ

ಬಳ್ಳಾರಿಯಲ್ಲಿ ವರದಕ್ಷಿಣೆ ಕಿರುಕುಳ ತಾಳಲಾರದೆ ತಾಯಿಯೊಬ್ಬರು ತನ್ನ ಇಬ್ಬರು ಮಕ್ಕಳನ್ನು ತುಂಗಭದ್ರಾ...

ಶೃಂಗೇರಿ ಮತ ಎಣಿಕೆ ವಿಡಿಯೋ ನಾಪತ್ತೆ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ತರಾಟೆ

2023ರ ಚುನಾವಣೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಪ್ರಕ್ರಿಯೆಯ ವೀಡಿಯೋ...