ಧಾರವಾಡದ ಮುಸಲ್ಮಾನರು ಸ್ವಾತಂತ್ರ್ಯಕ್ಕಾಗಿ ಬಲಿದಾನವಾಗಿದ್ದಾರೆ: ಮಹದೇವ ಹೊರಟ್ಟಿ

Date:

ಡಾ. ಎಪಿಜೆ ಅಬ್ದುಲ್ ಕಲಾಂ ಸಂಘಟನೆ ಆಶ್ರಯದಲ್ಲಿ ಗಣರಾಜ್ಯೋತ್ಸವ ಅಂಗವಾಗಿ ಧಾರವಾಡದ ಟಿಪ್ಪು ಸುಲ್ತಾನ್ ವೃತ್ತದಲ್ಲಿ ಧ್ವಜಾರೋಹಣ ನೆರವೇರಿಸಿದರು. ಧ್ವಜಾರೋಹಣ ಕಾರ್ಯಕ್ರಮವನ್ನು ಬಸವಶಾಂತಿ ಮಿಷನ್ ನ ಅಧ್ಯಕ್ಷ ಮಹದೇವ ಹೊರಟ್ಟಿ ನಡೆಸಿಕೊಟ್ಟರು.

- Advertisement -

ಬಸವಶಾಂತಿ ಮಿಷನ್ ಅಧ್ಯಕ್ಷ ಮಹದೇವ ಹೊರಟ್ಟಿ ಮಾತನಾಡಿ, ಡಾ. ಎಪಿಜೆ ಅಬ್ದುಲ್ ಕಲಾಂ ಅವರಂತ ರಾಷ್ಟ್ರಪ್ರೇಮಿಗಳು ಮತ್ತೆ ಸಿಗುವುದು ಕಷ್ಟ. ರಾಧಾಕೃಷ್ಣನ್, ಜಾಕಿರ್ ಹುಸೇನ್, ಅಬ್ದುಲ್ ಕಲಾಂ ಈ ಮೂವರು ಒಳ್ಳೆಯ ರಾಷ್ಟ್ರಪತಿಗಳು. ಧಾರವಾಡದ ಮುಸಲ್ಮಾನರು ಗೋಲಿಬಾರಿನಲ್ಲಿ ಬಲಿದಾನ ಆಗಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಧಾರವಾಡದ ಕೊಡುಗೆ ಅಪಾರವಾಗಿದೆ. ಇಲ್ಲಿನ ಮುಸಲ್ಮಾನರು ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಎಂದರು. ಇಡೀ ಜಗತ್ತಿನಲ್ಲಿಯೇ ಅತಿಹೆಚ್ಚು ಅಪಘಾತ, ಬಾಲಾಪರಾಧ, ಅತ್ಯಾಚಾರ ಭಾರತದಲ್ಲಿ ಆಗುತ್ತವೆ. ಬಹುತೇಕ ಸಂಘಟನೆಗಳು ಕ್ರೂರಿಗಳ ಕೈಯಲ್ಲಿರುವುದು ದುರಂತ. ಇವತ್ತಿಗೂ ಹಳ್ಳಿಗಳಲ್ಲಿ ಅಸ್ಪೃಶ್ಯತೆ ಆಚರಣೆಯಲ್ಲಿದೆ. ನಾವೆಲ್ಲ ಹೊಸ ದೇಶ ಕಟ್ಟಲು ಧಾರವಾಡ ದಾರಿಯಾಗಬೇಕು. ದೇಶಕಟ್ಟುವ ಕೆಲಸ ಟಿಪ್ಪು ಸುಲ್ತಾನ್ ವೃತ್ತದಿಂದಲೇ ಪ್ರಾರಂಭವಾಗಲಿ ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ...

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ನ್ಯಾಯಾಧೀಶರಾಗಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಮೂಲದ ನವನೀತಮ್ 'ನವಿ' ಪಿಳ್ಳೈ (85) ಅವರಿಗೆ 2026ನೇ ಸಾಲಿನ...

ಉತ್ತರ ಕನ್ನಡ | ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ‘ಅಕ್ಕ...

ಉತ್ತರ ಕನ್ನಡ ಜಿಲ್ಲೆಯಲ್ಲಿ 'ಅಕ್ಕ ಕೆಫೆ' ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಗ್ರಾಮೀಣ ಮಹಿಳೆಯರು ಸ್ವಂತ ಉದ್ಯಮ ನಡೆಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮತ್ತು ಉದ್ಯಮಿಗಳಾಗಿ ಹೊರಹೊಮ್ಮಲು ಇದು ದಾರಿಮಾಡಿಕೊಟ್ಟಿದೆ. ಸಂಜೀವಿನಿ ಎನ್‌ಆರ್‌ಎಲ್‌ಎಂ ಯೋಜನೆಯಡಿ...

ಗ್ಯಾನೇಶ್ ಕುಮಾರ್ ವಿರುದ್ಧದ 20 ವರ್ಷಗಳ ಪ್ರಕರಣಕ್ಕೆ ಮರುಜೀವ;...

ಭಾರತದ ಮುಖ್ಯ ಚುನಾವಣಾ ಆಯುಕ್ತ (CEC) ಗ್ಯಾನೇಶ್‌ ಕುಮಾರ್ ವಿರುದ್ಧ 2006ರಲ್ಲಿ ದಾಖಲಾಗಿದ್ದ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣಕ್ಕೆ ಕೇರಳ ಸರ್ಕಾರ ಈಗ ಮರುಜೀವ ನೀಡಿದೆ. ಪ್ರಕರಣವನ್ನು ವಿಜಿಲೆನ್ಸ್ ತನಿಖೆಗೆ ಆದೇಶ ಹೊರಡಿಸಿದೆ....

ಧ್ವಜಾರೋಹಣದ ನಂತರ ಸಾಹಿತಿ ರಂಜಾನ್ ದರ್ಗಾ ಮಾತನಾಡಿ, ಭಾರತೀಯರಿಗೆ ರಾಜಕೀಯವಾಗಿ ನ್ಯಾಯ ಸಿಕ್ಕಿದೆಯೇ ಹೊರತು ಆರ್ಥಿಕ ಮತ್ತು ಸಾಮಾಜಿಕ ನ್ಯಾಯ ಸಿಕ್ಕಿಲ್ಲ. ಒಂದು ವೇಳೆ ಈ ನ್ಯಾಯ ಸಿಗದಿದ್ದರೆ ತುಳಿತಕ್ಕೆ ಒಳಗಾದ ಜನರು ಪ್ರಜಾಪ್ರಭುತ್ವವನ್ನೇ ಬುಡಮೇಲೆ ಮಾಡಬಹುದು ಎಂದು ಅಂಬೇಡ್ಕರ್ ಎಚ್ಚರಿಸಿದ್ದರು. ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಬಡತನ, ಅಸ್ಪೃಶ್ಯತೆ, ಜಾತಿಯತೆ ನಿರ್ಮೂಲನೆ ಆಗಿಲ್ಲ. ಕೋಮು ಸಂಘರ್ಷ ಮತ್ತು ಧ್ವೇಷ ಸಂಸ್ಕೃತಿ ಬೆಳೆಸುವ ದಿನಗಳು ಬಂದವು. ನಮ್ಮ‌ ದೇಶ ಸಮೃದ್ಧಿಯಿಂದ ಬೆಳೆಯಬೇಕು ಅಂದರೆ ನಾವು ಮೊದಲು ಮತ್ತು ಕೊನೆಗು ಭಾರತೀಯರಾಗಬೇಕು. ನಮ್ಮ‌ ಧರ್ಮಗಳನ್ನು ನಮ್ಮ‌ಮನೆಗಳಲ್ಲಿ ಆಚರಿಸೋಣ. ಆಚೇಗೆ ನಾವೆಲ್ಲ ಭಾರತೀಯರು ಎಂಬ ಅರಿವು ನಮ್ಮಲ್ಲಿರಬೇಕು. ನಮಗೆ ಪ್ರಜಾಪ್ರಭುತ್ವ ದೇವರು‌ಮತ್ತು ಸಂವಿಧಾನವೇ ಧರ್ಮಗ್ರಂಥವಾಗಿದೆ ಎಂದರು.

ಉತ್ತರ ಕರ್ನಾಟಕ ಹೋರಾಟ‌ ಸಮಿತಿಯ ಲಕ್ಷ್ಮಣ ಬಕ್ಕಾಯಿ ಮಾತನಾಡಿ, ಈ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಸಬ್ ಕಾ ಸಾತ್, ಸಬ್ ಕಾ ವಿಕಾಸ ಎಂದು ಹೇಳುತ್ತಾರೆ. ಆದರೆ ನಮ್ಮ ದೇಶದ 80% ಜನರು ವಿದೇಶದಲ್ಲಿ ದುಡಿಯುತ್ತಿದ್ದಾರೆ. ಈ ದೇಶದಲ್ಲಿ ದಮನಿತರು, ನೊಂದವರು, ತುಳಿತಕ್ಕೊಳದವರಿಗೆ ವಾಸಮಾಡಲು ಒಂದು ಮನೆ ಸಹಿತ ಇಲ್ಲದಂತಾಗಿದೆ. ಭಾರತ ಬಡತನದತ್ತ ಮುಖಮಾಡಿರುವಾಗ ನೀವು ಹೇಗೆ ವಿಶ್ವಗುರುವಾಗುತ್ತೀರಿ? ಪ್ರಧಾನಿಗಳೇ ಎಂದು ಗುಡುಗಿದರು.

ಈ ಸಂದರ್ಭದಲ್ಲಿ ಮಾಜಿ ಸೈನಿಕರು, ಹಬೀಬ್, ಮಹಮ್ಮದ್ಅಲಿ ಗುಡೂಭಾಯಿ, ಮಹಿಳೆಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿ | ಇಸ್ಪೀಟ್ ಜೂಜಾಟ: 5 ಮಂದಿ ಬಂಧನ; ₹2,040 ನಗದು ಜಪ್ತಿ

ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟ ಆಡುತ್ತಿದ್ದ ಐವರು ಆರೋಪಿಗಳನ್ನು ರಾಘವೇಂದ್ರ ನಗರ...

ಕೊಪ್ಪಳ | ಬರಗಾಲದಲ್ಲಿ ಸ್ಥಳೀಯರಿಗೆ ಹೆಚ್ಚಿನ ಕೆಲಸ ನೀಡಿ, ವಾರದೊಳಗೆ ಕೂಲಿ ಪಾವತಿಸಿ: ಡಿಸಿಎಂ ಪರಮೇಶ್ವರ

ತೀವ್ರ ಬರಗಾಲವಿರುವ ಕಾರಣ ವಿಬಿ ಜಿ ರಾಮ್‌ಜಿ ಯೋಜನೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ...

ಕಲಬುರಗಿ | ಬೆಣ್ಣೂರ ಬಿ ಗ್ರಾಮಕ್ಕೆ ಪ್ರತ್ಯೇಕ ಬಸ್‌ ಸೌಲಭ್ಯಕ್ಕೆ ವಿದ್ಯಾರ್ಥಿಗಳ ಆಗ್ರಹ

ಕಾಳಗಿ ತಾಲೂಕಿನ ಬೆಣ್ಣೂರ ಬಿ ಗ್ರಾಮಕ್ಕೆ ಸಮರ್ಪಕ ಬಸ್‌ ಸಂಚಾರವಿಲ್ಲದೆ ಕಳೆದ...

ಯಾದಗಿರಿ | ‘ಬೆಂಕಿ ಹಚ್ಚುತ್ತೇನೆ’ ಹೇಳಿಕೆ ಶಾಸಕರ ಘನತೆಗೆ ತಕ್ಕುದಲ್ಲ: ಮಂಜುನಾಥ ಮೇತ್ರಿ

ಅಕ್ರಮ ಮರಳು ಸಾಗಾಟ ಹಾಗೂ ಓವರ್‌ಲೋಡ್ ಟಿಪ್ಪರ್‌ಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸುವುದು...