ಧಾರವಾಡ | ಕರೋಕೆ ಸಂಗೀತಗಾರರ ಪ್ರಯತ್ನ, ವಿಶ್ವಾಸವನ್ನು ನಾವೆಲ್ಲ ಮೆಚ್ಚಲೆಬೇಕು: ಸತೀಶ ತುರಮರಿ

Date:

ಕರೋಕೆ ಸಂಗೀತವು ಒಂದು ಸಂಗೀತ ಮಾಧ್ಯಮವಾಗಿ ಪರಿವರ್ತನೆಗೊಳ್ಳುತ್ತಿದ್ದು, ಕರೋಕೆ ಸಂಗೀತಗಾರರ ಪ್ರಯತ್ನ ಮತ್ತು ವಿಶ್ವಾಸವನ್ನು ನಾವೆಲ್ಲರೂ ಮೆಚ್ಚಲೆಬೇಕು. ಇವರೆಲ್ಲರೂ ಮುಂಬರುವ ದಿನಗಳಲ್ಲಿ ಕನ್ನಡ, ನಾಡು, ನುಡಿ ಹಾಗೂ ಜಾನಪದ, ಭಾವಗೀತೆ, ಹಂತಿಪದ ಇವುಗಳನ್ನು ಸಹ ಕಲಿತು ಹಾಡಬೇಕು. ಇಂತಹ ಕಾರ್ಯಕ್ರಮಗಳನ್ನು ಗ್ರಾಮೀಣ ಪ್ರದೇಶಗಲ್ಲಿ ಆಯೋಜಿಸಬೇಕು ಎಂದು ಕ.ವಿ.ವ. ಸಂಘದ ಕೋಶಾಧ್ಯಕ್ಷ ಸತೀಶ ತುರಮರಿ ಹೇಳಿದರು.

- Advertisement -

ಸಂಗೀತ ವರ್ಷಿಣಿ ಕಲಾ ಸಂಸ್ಥೆಯ ವತಿಯಿಂದ ಡಾ. ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಕರೋಕೆ ಸಂಗೀತ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದ ಅವರು, ಕರೋಕೆ ಸಂಗೀತಗಾರರು ಹುಟ್ಟಿನಿಂದ ಸಂಗೀತಾಭ್ಯಾಸ ಮಾಡಿರುವುದಿಲ್ಲ. ಅವರ ವೃತ್ತಿ ಜೀವನದೊಂದಿಗೆ ಸಂಗೀತವನ್ನು ಹವ್ಯಾಸವಾಗಿ ಕಲಿತು ಯಾವ ಗುರುಗಳಿಲ್ಲದೆ ತಾವೇ ಸ್ವತಃ ಮನೆಯಲ್ಲಿ ಸ್ಟುಡಿಯೋಗಳಿಗೆ ಹೋಗಿ ಹಾಡಿನ ಟ್ರ್ಯಾಕ್ ಮುಖಾಂತರ ಸಂಗೀತವನ್ನು ಕಲಿತು ಮೂಲ ಸಂಗೀತಗಾರರಗಿಂತ ಚೆನ್ನಾಗಿ ಹಾಡುತ್ತಾರೆ. ಅಲ್ಲಿಯ ಜನರಿಗೆ ಸಹ ಇದೊಂದು ಮನರಂಜನೆ ಕಾರ್ಯಕ್ರಮವಾಗುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಟ್ಟದಷ್ಟಾದ ಅತ್ಯಾಚಾರ ಪ್ರಕರಣಗಳು – ತೆವಳುತ್ತಿರುವ ನ್ಯಾಯದಾನ

ಪೊಲೀಸರೆಂದು ನಟಿಸಿ ಬೆದರಿಸುವುದು, ನಿರ್ಜನ ಪ್ರದೇಶಗಳಲ್ಲಿ ತೋಳಗಳಂತೆ ಕಾದು ಹಲ್ಲೆಗೈದು ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದೆಸೆಯುವುದು, ಕಿಂಚಿತ್ತೂ ಭಯವಿಲ್ಲದೆ ಕೃತ್ಯದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಲ್ಲದೆ, ಸಂತ್ರಸ್ತರ ಗುರುತು ಬಹಿರಂಗಪಡಿಸುವ ಪ್ರವೃತ್ತಿ...

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ ಕಲ್ಪಿತ ಬಲವನ್ನು ಮೀರಿ, ಬಸವಂತಪ್ಪ ಬೆಳೆಯಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ. ಪೌರಕಾರ್ಮಿಕರ ಮಗನಾಗಿ ಹುಟ್ಟಿ, ಸಚಿವ ಸ್ಥಾನದವರೆಗೆ ಬೆಳೆದವರು ಕೆ.ಎಸ್....

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ,...

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎದೆ ತಟ್ಟಿಕೊಳ್ಳುತ್ತಿದೆ. ಶತೃ ದೇಶವನ್ನು ಮಣಿಸುವುದು ಯಾರಿಗಾದರೂ ಹೆಮ್ಮೆಯೇ. ಆದರೆ, ದೇಶದ ಅಖಂಡತೆಗೆ ಅತಿ...

ಸಂಗೀತವರ್ಷಿಣಿಯ ಅಧ್ಯಕ್ಷೆ ವೀಣಾ ಪತ್ತಾರ ಅವರು ಸುಮಾರ 8 ವರ್ಷಗಳಿಂದ ರಾಜ್ಯದ ಎಲ್ಲ ಜಿಲ್ಲೆಗಳ ಪ್ರಸಿದ್ಧ ಕರೋಕೆ ಗಾಯಕರನ್ನು ಕರೆಯಿಸಿ ಇಲ್ಲಿ ಕಾರ್ಯಕ್ರಮ ನಡೆಸುತ್ತಿರುವುದು ಶ್ಲಾಘನೀಯವಾದುದು. ಈ ಕಾರ್ಯಕ್ರಮಕ್ಕೆ ಅವರ ಪತಿ ಅನಂತ ಪತ್ತಾರ ಅವರು ಬೆನ್ನೆಲುಬಾಗಿ ನಿಂತು ಸಹಾಯ ಸಹಕಾರ ನೀಡಿ ಕಾರ್ಯಕ್ರಮ ಯಶಸ್ಸಿಗೆ ಕಾರಣರಾಗಿದ್ದಾರೆ. ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದು ಸುಲಭವಲ್ಲ. ಎಂಟು ಹತ್ತು ದಿನಗಳ ಮೊದಲೇ ಸಂಗೀತಗಾರರ ಜೊತೆ ಮಾತನಾಡಿ, ಜೊತೆಗಾರರನ್ನು, ಯಾವ ಟ್ರ್ಯಾಕಿಗೆ ಹಾಡುತ್ತಾರೆ ಎನ್ನುವುದನ್ನು ಮೊದಲೇ ತಿಳಿದುಕೊಳ್ಳಬೇಕು. ಇಂತಹ ಕಾರ್ಯಕ್ರಮಗಳು ಮೇಲಿಂದ ಮೇಲೆ ಜರುಗಬೇಕು. ರಾಜ್ಯ ಮೂಲೆ ಮೂಲೆಯಿಂದ ಬಂದಂತಹ ಗಾಯಕರು ಅತ್ಯುತ್ತಮವಾಗಿ ಹಾಡಿದ್ದಾರೆ. ಅವರು ತಮ್ಮ ಖರ್ಚಿನಿಂದ ಬಂದು ಹಾಡುಗಳನ್ನು ಪ್ರಸ್ತುತಪಡಿಸಿರುವದು ಶ್ಲಾಘನೀಯ ಎಂದರು.

ಇದನ್ನೂ ಓದಿ ಧಾರವಾಡ | ಸರ್ಕಾರಿ ಶಾಲೆಗಳನ್ನು ಕೊಲ್ಲುವ ಕೆಪಿಎಸ್ ಮ್ಯಾಗ್ನೆಟ್ ನ್ನು ಖಂಡಿಸಿ ಪ್ರತಿಭಟನೆ

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೀಣಾ ಅನಂತ ಪತ್ತಾರ ವಹಿಸಿದ್ದರು. ಮಾರುತಿ ಬಡೆಣ್ಣವರ ಸ್ವಾಗತಿಸಿದರು. ಪ್ರಹ್ಲಾದ ಕಡೆಚೂರ ನಿರೂಪಿಸಿದರು. ಅನಂತ ಪತ್ತಾರ ವಂದಿಸಿದರು. ಕಾರ್ಯಕ್ರಮದಲ್ಲಿ ತಿಪ್ಪಣ್ಣ ಭಾಂಡಗೆ, ಸಂಜೀವ ಸಾಂಬ್ರಾಣಿ, ರಾಜಶ್ರೀ ಗುಂಡಮಿ, ಆನಂದ ಕಲ್ಲಾಪುರ ಸೇರಿದಂತೆ ಮುಂತಾದವರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೈಸೂರು | ಅ.13ರಂದು ಯುವ ದಸರಾ ಉದ್ಘಾಟಿಸಲಿರುವ ನಟ ಪ್ರಭುದೇವ್‌

2026ರ ಯುವ ದಸರಾ ಕಾರ್ಯಕ್ರಮವನ್ನು ಅಕ್ಟೋಬರ್ 13ರಂದು ಖ್ಯಾತ ನೃತ್ಯ ನಿರ್ದೇಶಕ...

ಯಾದಗಿರಿ–ಶಹಾಪುರ ಬೈಪಾಸ್‌ ರೈಲ್ವೆ ಮೇಲ್ಸೇತುವೆ, ಭೀಮಾ ನದಿ ಬ್ರಿಡ್ಜ್ ದುರಸ್ತಿಗೆ ಉಮೇಶ ಕೆ. ಮುದ್ನಾಳ ಆಗ್ರಹ

ಯಾದಗಿರಿ ನಗರದ ಗುರುಶಿಣಗಿ ಮೂಲಕ ಶಹಾಪುರಕ್ಕೆ ಸಂಪರ್ಕ ಕಲ್ಪಿಸುವ ಯಾದಗಿರಿ–ಶಹಾಪುರ ಬೈಪಾಸ್...

ಕೋಲಾರ | ಕಾರ್ಮಿಕರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಶಾಸಕರ ಆಪ್ತ ಸಹಾಯಕರಿಗೆ ಮನವಿ

ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸುವುದು, ತಡೆಹಿಡಿದಿರುವ ಕನಿಷ್ಠ ವೇತನ ಜಾರಿಗೊಳಿಸುವುದು, ಗುತ್ತಿಗೆ...