ಧಾರವಾಡ | ಡಾ. ಚನ್ನವೀರ ಜಣವಿ ಕನ್ನಡ ಕಾವ್ಯಲೋಕದ ಮುಕಟಮಣಿ: ಡಾ.ಕುಂ.ವೀರಭದ್ರಪ್ಪ

Date:

“ನಾಡೋಜ ಡಾ. ಚನ್ನವೀರ ಕಣವಿ ಕನ್ನಡ ಕಾವ್ಯಲೋಕದ ಮುಕಟಮಣಿಯಾಗಿ ಕನ್ನಡ ಸಾರಸ್ವತಲೋಕವನ್ನು ಶ್ರೀಮಂತಗೊಳಿಸಿದರು. ಧಾರವಾಡದ ಸಾಂಸ್ಕೃತಿಕ ಹಿರಿಮೆ ಹೆಚ್ಚಿಸಿದವರಲ್ಲಿ ಅವರು ಒಬ್ಬರು” ಎಂದು ಹಿರಿಯ ಸಾಹಿತಿ ನಾಡೋಜ ಡಾ.ಕುಂ.ವೀರಭದ್ರಪ್ಪ ಅಭಿಪ್ರಾಯಪಟ್ಟರು.

- Advertisement -

ಧಾರವಾಡ ಪಟ್ಟಣದ ಕರ್ನಾಟಕ ವಿದ್ಯಾವರ್ಧಕ ಸಂಘದ ಡಾ.ರಾ.ಹ.ದೇಶಪಾಂಡೆ ಸಭಾ ಭವನದಲ್ಲಿ ನಾಡೋಜ ಡಾ. ಚನ್ನವೀರ ಕಣವಿ ಮತ್ತು ಶ್ರೀಮತಿ ಶಾಂತಾದೇವಿ ಕಣವಿ ದತ್ತಿ ಅಂಗವಾಗಿ ಕನ್ನಡ ಯುವ ಲೇಖಕರಿಗಾಗಿ ಆಯೋಜಿಸಿದ್ದ ಕಾವ್ಯ ಮತ್ತು ಕಥೆ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭದಲ್ಲಿ `ಕಣವಿ ದಂಪತಿಗಳು’ ವಿಷಯ ಕುರಿತು ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಟ್ಟದಷ್ಟಾದ ಅತ್ಯಾಚಾರ ಪ್ರಕರಣಗಳು – ತೆವಳುತ್ತಿರುವ ನ್ಯಾಯದಾನ

ಪೊಲೀಸರೆಂದು ನಟಿಸಿ ಬೆದರಿಸುವುದು, ನಿರ್ಜನ ಪ್ರದೇಶಗಳಲ್ಲಿ ತೋಳಗಳಂತೆ ಕಾದು ಹಲ್ಲೆಗೈದು ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದೆಸೆಯುವುದು, ಕಿಂಚಿತ್ತೂ ಭಯವಿಲ್ಲದೆ ಕೃತ್ಯದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಲ್ಲದೆ, ಸಂತ್ರಸ್ತರ ಗುರುತು ಬಹಿರಂಗಪಡಿಸುವ ಪ್ರವೃತ್ತಿ...

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ ಕಲ್ಪಿತ ಬಲವನ್ನು ಮೀರಿ, ಬಸವಂತಪ್ಪ ಬೆಳೆಯಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ. ಪೌರಕಾರ್ಮಿಕರ ಮಗನಾಗಿ ಹುಟ್ಟಿ, ಸಚಿವ ಸ್ಥಾನದವರೆಗೆ ಬೆಳೆದವರು ಕೆ.ಎಸ್....

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ,...

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎದೆ ತಟ್ಟಿಕೊಳ್ಳುತ್ತಿದೆ. ಶತೃ ದೇಶವನ್ನು ಮಣಿಸುವುದು ಯಾರಿಗಾದರೂ ಹೆಮ್ಮೆಯೇ. ಆದರೆ, ದೇಶದ ಅಖಂಡತೆಗೆ ಅತಿ...

“ಡಾ. ಚನ್ನವೀರ ಕಣವಿಯವರದು ಶಿಸ್ತುಬದ್ಧ ಜೀವನ, ಮಂದ ಹಾಸವೆ ಅವರ ಜೀವನದ ವಿಶೇಷತೆ. ಅವರಲ್ಲಿದ್ದ ಕೌಟುಂಬಿಕ ನಿಷ್ಠೆ ಅಪಾರವಾದುದು. ಕಣವಿಯವರ  ಬಾಳಸಂಗಾತಿಯಾಗಿ ಶಾಂತಾದೇವಿಯವರು ಅವರ ಶ್ರೇಯಸ್ಸಿಗೆ ಕಾರಣರಾದವರಾಗಿದ್ದರು. ಕಣವಿಯವರು ಎಲ್ಲಾ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಿದ್ದರಿಂದ ಅವರೆಲ್ಲರೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯವಾಯಿತು” ಎಂದರು.

“೧೯೫೦ ದಶಕದಲ್ಲಿ ಸಾಹಿತಿಗಳು, ಕವಿಗಳು ಪಟ್ಟ ಪಾಡುಗಳು ಅನೇಕ. ಆದರೆ ಈಗಿನ ತಲೆಮಾರಿನ ಯುವ ಲೇಖಕರಿಗೆ ಅಂತಹ ಕಷ್ಟಗಳಿಲ್ಲ. ಯುವ ಲೇಖಕರಿಗೆ ಪ್ರತಿಭೆಯೆ ‘ಗಾಡ್ ಫಾದರ್’ ಆಗಬೇಕು. ಲೇಖಕರು ಕಷ್ಟಪಟ್ಟಷ್ಟು ಅವರಿಂದ ಉತ್ಕೃಷ್ಟ ಸಾಹಿತ್ಯ ರಚನೆ ಸಾಧ್ಯ. ಕಣವಿಯವರು ಬರೆದ ಸಾವಿರಾರು ಕಾವ್ಯಗಳಲ್ಲಿ ಉತ್ಕೃಷ್ಟತೆ ಇದೆ. ಬಹುಮಾನ ಬಾರದ ಕಾವ್ಯ ಹಾಗೂ ಕಥೆಗಳು ಅಲಕ್ಷಿಸದೆ ಅವೂ ಸಹ ಓದುವಂತಾಗಬೇಕು” ಎಂದು ಹೇಳಿದರು.

ಸಾಹಿತಿ ಡಾ. ಜಿ. ಎಂ. ಹೆಗಡೆ ಅವರು ಕಣವಿ ಹಾಗೂ ಶಿವರುದ್ರಪ್ಪನವರ ಸ್ನೇಹ ಕುರಿತು ಮಾತನಾಡಿ, “ಡಾ. ಚನ್ನವೀರ ಕಣವಿ ನಾಲ್ಕು ದಶಕಗಳಕಾಲ ಕಾವ್ಯ ಕೃಷಿ ಮಾಡಿದ್ದಾರೆ. ಜಿ. ಎಸ್. ಶಿವರುದ್ರಪ್ಪ ಹಾಗೂ ಡಾ. ಚನ್ನವೀರ ಕಣವಿ ಸಮಕಾಲಿನರಾಗಿದ್ದರೂ ಅವರಿಬ್ಬರ ಕಾವ್ಯ ರಚನಾ ಶೈಲಿ ವಿಭಿನ್ನವಾಗಿತ್ತು. ಅವರಿಬ್ಬರ ಸ್ನೇಹ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಕಣವಿಯವರು ಧಾರವಾಡದ ಸಾಂಸ್ಕೃತಿಕ ವಾತಾವರಣದಲ್ಲಿ ಬೆಳೆದು ಬಂದಿದ್ದರಿಂದ ಉತ್ಕೃಷ್ಠ ಕಾವ್ಯ ರಚನೆ ಸಾಧ್ಯವಾಯಿತು. ಚನ್ನವೀರ ಕಣವಿ ಹಾಗೂ ಜಿ.ಎಸ್. ಶಿವರುದ್ರಪ್ಪ ಇಬ್ಬರೂ ತಾವು ಬರೆದ ಕಾವ್ಯ ಕುರಿತು ಚರ್ಚಿಸುತ್ತಿದ್ದುದು ವಿಶೇಷ” ಎಂದರು.

ಸ್ಪರ್ಧೆಗೆ ಬಂದ ಕಾವ್ಯ ಕುರಿತು ಡಾ. ಎಂ. ಡಿ. ಒಕ್ಕುಂದ ಹಾಗೂ ಕಥಾ ಸ್ಪರ್ಧೆಗೆ ಬಂದ ಕಥೆಗಳ ಕುರಿತು ಶ್ರೀಧರ ಗಸ್ತಿ ಮಾತನಾಡಿದರು. ಡಾ. ಸುಮಿತ್ರಾ ಕಾಡದೇವರಮಠ ಕಣವಿಯವರ ಕವಿತೆ ಕುರಿತು ಹಾಡಿದರು.

ಸಂಘದ ಅಧ್ಯಕ್ಷರು ಚಂದ್ರಕಾಂತ ಗು. ಬೆಲ್ಲದ ಅವರು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಡಾ. ಶಿವಾನಂದ ಕಣವಿ ಉಪಸ್ಥಿತರಿದ್ದರು.

ನಾಡೋಜ ಚೆನ್ನವೀರ ಕಣವಿ ಕಾವ್ಯ ಸ್ಪರ್ಧೆಯಲ್ಲಿ  ಪ್ರಥಮ:ಮಣಿಕಂಠ ಗೊದಮನಿ ಮತ್ತು ರೈಹಾನಾ ಕೊಯ್ಲತ್ತಡ್ಕಮನೆ, ದ್ವಿತೀಯ : ಯಶಸ್ವಿನಿ ಎಂ. ಎನ್., ತೃತೀಯ : ಸುರೇಶ ಹಳ್ಳಿ ಮತ್ತು ಶ್ರೀಮತಿ ಶಾಂತಾದೇವಿ ಕಣವಿ ಕಥಾ ಸ್ಪರ್ಧೆಯಲ್ಲಿ ಪ್ರಥಮ : ಶ್ರೀಮತಿ ವಿದ್ಯಾಶ್ರೀ ಹಡಪದ, ಶ್ರೀಮತಿ ಶರೀಫಾ ಬೇಗಂ, ದ್ವಿತೀಯ : ಶ್ರೀ ಶಿವಕುಮಾರ ಚೆನ್ನಪ್ಪನವರ, ತೃತೀಯ : ಪೃಥ್ವಿರಾಜ್ ಟಿ. ಬಿ, ಬಹುಮಾನ ವಿಜೇತರಾದವರಿಗೆ ಗಣ್ಯರು ಅಭಿನಂದಿಸಿ ಗೌರವಿಸಲಾಯಿತು.

ವೀರಣ್ಣ ಒಡ್ಡೀನ ಸ್ವಾಗತಿಸಿದರು, ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಶೈಲಜಾ ತ. ಅಮರಶೆಟ್ಟಿ ನಿರೂಪಿಸಿದರು. ಡಾ. ಜಿನದತ್ತ ಅ. ಹಡಗಲಿ ವಂದಿಸಿದರು. ಕಾರ್ಯಕ್ರಮದಲ್ಲಿ ಪ್ರೊ. ಧನವಂತ ಹಾಜವಗೋಳ, ಪ್ರೊ. ಶಶಿಧರ ತೋಡಕರ, ಪ್ರೊ. ಮಾಲತಿ ಪಟ್ಟಣಶೆಟ್ಟಿ, ಶ್ರೀಮತಿ ಸುಜಾತಾ ಹಡಗಲಿ, ಪ್ರೊ. ಬಸಯ್ಯ ಶಿರೋಳ, ಶ್ರೀಮತಿ ಅನುರಾಧಾ ಸವದತ್ತಿ, ರವಿಶಂಕರ ಹಕಾರಿ, ಚಂದ್ರಮೌಳಿ ಕಣವಿ, ಕರಣಪ್ರಸಾದ ಕಣವಿ, ರಂಜನಾ ಗೋಧಿ ಸೇರಿದಂತೆ ಕಣವಿ ಪರಿವಾರದವರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | ಹಿಂದಿ ಭಾಷೆ-ಸಾಹಿತ್ಯದ ವಿವಿಧ ಆಯಾಮಗಳ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ

ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಹಿಂದಿ ಅಧ್ಯಯನ ವಿಭಾಗದ...

ವಿದ್ಯಾರ್ಥಿಗಳೊಂದಿಗೆ ನೇರ ಸಂವಾದ ನಡೆಸಿ ಸಮಸ್ಯೆಗಳ ಕುರಿತು ಮಾಹಿತಿ ಪಡೆದ ಸಚಿವರು

ಸಮಾಜ ಕಲ್ಯಾಣ ಇಲಾಖೆ ಸಚಿವ ಕೆ.ಎಚ್. ಮುನಿಯಪ್ಪ ಅವರು ಬೇತಮಂಗಲದಲ್ಲಿರುವ ಸಮಾಜ...

ವಿಜಯಪುರ | ಅರ್ಹ ಮತದಾರರ ಹಕ್ಕು ಕಸಿಯಲು ಬಿಡುವುದಿಲ್ಲ: ಎಂ ಬಿ ಪಾಟೀಲ

ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಸಂದರ್ಭದಲ್ಲಿ ಬಬಲೇಶ್ವರ ವಿಧಾನಸಭಾ ಕ್ಷೇತ್ರ...

ಮೈಸೂರು | ಅ.13ರಂದು ಯುವ ದಸರಾ ಉದ್ಘಾಟಿಸಲಿರುವ ನಟ ಪ್ರಭುದೇವ್‌

2026ರ ಯುವ ದಸರಾ ಕಾರ್ಯಕ್ರಮವನ್ನು ಅಕ್ಟೋಬರ್ 13ರಂದು ಖ್ಯಾತ ನೃತ್ಯ ನಿರ್ದೇಶಕ...