ಧಾರವಾಡ | ಜೀವನದಲ್ಲಿ ಯಶಸ್ಸು ಸಾಧಿಸಲು ಕೌಶಲ್ಯ ಅಗತ್ಯ: ಪ್ರಶಾಂತ ಸುತಾರ

Date:

“ಕಲಿಕೆಯೊಂದಿಗೆ ಗಳಿಕೆಯಾಗಬೇಕಾದರೆ ಕೌಶಲಜ್ಞಾನ ಅಗತ್ಯವಾಗಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳ ಸಾಮರ್ಥ್ಯ ಅಳೆಯಲು ಅಂಕಗಳು ಪ್ರಮುಖ ಮಾನದಂಡವಾಗಲಾರವು. ಜೀವನದಲ್ಲಿ ಯಶಸ್ಸು ಸಾಧಿಸಲು ಕೌಶಲ್ಯ ಅಗತ್ಯವಾಗಿದೆ” ಎಂದು ಧಾರವಾಡದ ಜಿಟಿಟಿಸಿಯ ತರಬೇತುದಾರ ಪ್ರಶಾಂತ ಸುತಾರ ಹೇಳಿದರು.

- Advertisement -

ಧಾರವಾಡ ಪಟ್ಟಣದ ಕರ್ನಾಟಕ ವಿದ್ಯಾವರ್ಧಕ ಸಂಘದ ಶಿಕ್ಷಣ ಮಂಟಪವು ಸಮೀಪದ ಶಿರೂರ ಗ್ರಾಮದ ಎಸ್.ಜಿ. ಬಾಳನಗೌಡ್ರ ಸರಕಾರಿ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಎಸ್.ಎಸ್.ಎಲ್.ಸಿ. ನಂತರ ಮುಂದೇನು ? ವೃತ್ತಿ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹಾಲು, ಮೊಸರು, ದಿನಸಿ ದರ ಏರಿಕೆ ಬೆನ್ನಲ್ಲೇ ಬಸ್...

ಹಾಲು, ಮೊಸರು, ದಿನಸಿ ವಸ್ತುಗಳ ದರ ಹೆಚ್ಚಳದ ಹೊರೆಯ ನಡುವೆ, ಬಸ್ ಪ್ರಯಾಣವೂ ದುಬಾರಿಯಾದರೆ ಬದುಕು ಮತ್ತಷ್ಟು ದುಸ್ತರವಾಗಲಿದೆ. ಕರ್ನಾಟಕದಲ್ಲಿ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆ ಕುರಿತು ಸಾರ್ವಜನಿಕರಲ್ಲಿ ಅಸಮಾಧಾನದ ಹೊಗೆಯಾಡಿದ್ದು,...

ರಾಮನಿಗೆ ₹150 ಕೋಟಿ, ಸೀತೆಗೆ ₹12 ಕೋಟಿ! ಬಿಗ್...

₹4,000 ಕೋಟಿಯ ಬೃಹತ್ ಬಜೆಟ್‌ನ 'ರಾಮಾಯಣ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಹೊತ್ತಿನಲ್ಲಿ ಚಿತ್ರರಂಗದ ಅದೇ ಹಳೆ ಹಣೆಬರಹವೊಂದು ಚರ್ಚೆಗೆ ಸಿಕ್ಕಿದೆ. ರಾಮನ ಪಾತ್ರಕ್ಕೆ ₹150 ಕೋಟಿ, ರಾವಣನಿಗೆ ₹100 ಕೋಟಿ ಸಂಭಾವನೆ!...

ರಾಮಲೀಲಾ ಮೈದಾನದಲ್ಲಿ ವಿಪಕ್ಷಗಳ ಬಲಪ್ರದರ್ಶನ; ಬೀದಿ ಹೋರಾಟ ಬೇರುಮಟ್ಟದ...

ನವಂಬರ್ 1ರಂದು ದೆಹಲಿಯ ಐತಿಹಾಸಿಕ ರಾಮಲೀಲಾ ಮೈದಾನದಲ್ಲಿ ನಡೆದ ಪ್ರತಿಭಟನಾ ಸಮಾವೇಶವು ಭಾರತೀಯ ರಾಜಕಾರಣದಲ್ಲಿ ಮತ್ತೊಂದು ಮಹತ್ವದ ರಾಜಕೀಯ ಮೈಲಿಗಲ್ಲಾಗಿ ದಾಖಲಾಗಿದೆ. ಚುನಾವಣಾ ಆಕ್ರಮ, ಎಸ್‌ಐಆರ್ ಷಡ್ಯಂತ್ರದ ವಿರುದ್ಧ ಮತ್ತು ಮುಖ್ಯ ಚುನಾವಣಾ...

“ಇಂದು ನಿರುದ್ಯೋಗ ಸಮಸ್ಯೆಯಿಂದ ಅರ್ಹರಿಗೆ ಅರ್ಹ ಉದ್ಯೋಗ ಸಿಗುವುದಿಲ್ಲ. ವಿದ್ಯಾರ್ಥಿಗಳು ಪದವಿ ಹಾಗೂ ಸ್ನಾತಕೋತ್ತರ ಶಿಕ್ಷಣಕ್ಕೆ ಬೆನ್ನು ಬೀಳದೇ ಅಲ್ಪಾವಧಿ ಕೋರ್ಸಗಳನ್ನು ಆಯ್ಕೆ ಮಾಡಿಕೊಂಡು ಅಧ್ಯಯನ ಮಾಡಿದರೆ ನಿರುದ್ಯೋಗಿಗಳಾಗದೇ ಸ್ವಾವಲಂಭಿಯಾಗಿ ಜೀವನ ಸಾಗಿಸಬಹುದು. ಅಂಕಗಳ ಜೊತೆ  ವಿದ್ಯಾರ್ಥಿಗಳಲ್ಲಿ ವಿಭಿನ್ನ ಕೌಶಲ್ಯವಿದ್ದರೆ ಮಾತ್ರ ಯಶಸ್ಸು ಸಾಧಿಸಬಹುದು. ಈ ದಿಸೆಯಲ್ಲಿ ಧಾರವಾಡದ ಜಿಟಿಟಿಸಿ ತರಬೇತಿ ಸಂಸ್ಥೆಯು ಅನೇಕ ಅಲ್ಪಾವಧಿ ಕೋರ್ಸಗಳ ಅಧ್ಯಯನಕ್ಕೆ ಅವಕಾಶ ಕಲ್ಪಿಸಿದ್ದು, ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬೇಕು” ಎಂದು ಹೇಳಿದರು.

“ಭೂದಾನಿಗಳಾದ ಶಂಕರಗೌಡ ಬಾಳನಗೌಡ್ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, “ವಿದ್ಯಾರ್ಥಿಗಳಿಗೆ ಎಸ್.ಎಸ್.ಎಲ್.ಸಿ. ನಂತರ ಮುಂದೇನು ? ಎಂಬ ಗೊಂದಲ ಸಹಜ. ಶಿಕ್ಷಕರು ಆ ದೆಸೆಯಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯ ಮಾರ್ಗದರ್ಶನ ಮಾಡಬೇಕೆಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಮುಖ್ಯಾಧ್ಯಾಪಕ ಡಾ. ಭಾಗ್ಯಜ್ಯೋತಿ ಕೋಟಿಮಠ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಕೌಶಲ್ಯ ಇಲ್ಲದಿದ್ದರೆ ಎಷ್ಟೇ ಓದಿದರೂ ವ್ಯರ್ಥ. ಕೌಶಲ್ಯವಿದ್ದವರಿಗೆ ಮಾತ್ರ ಹೆಚ್ಚು ಉದ್ಯೋಗಾವಕಾಶಗಳು ಲಭಿಸುತ್ತವೆ” ಎಂದರು.

ಕ.ವಿ.ವ.ಸಂಘದ ಶಿಕ್ಷಣ ಮಂಟಪದ ಸಂಚಾಲಕ ವೀರಣ್ಣ ಒಡ್ಡೀನ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀದೇವಿ ಹೂಲಿಕಟ್ಟಿ ನಿರ್ವಹಿಸಿದರು. ಪ್ರಭುಲಿಂಗ ನರೇಗಲ್ಲ ವಂದಿಸಿದರು. ಕಾರ್ಯಕ್ರಮದಲ್ಲಿ ದ್ಯಾಮನಗೌಡ ಬಲ್ಲರವಾಡ, ಜಯಾ ನಾಗಸಮುದ್ರ, ನಾಗರಾಜ ಕಾಲವಾಡ, ಜಯಶ್ರೀ ಗುಡಗೇರಿ, ಬಸಮ್ಮ ಬಂಡೆಪ್ಪನವರ, ಶಿಕ್ಷಕರು ವಿದ್ಯಾರ್ಥಿ ವೃಂದ ಸೇರಿದಂತೆ ಅನೇಕರು ಭಾಗವಹಿಸಿದ್ದರು.

WhatsApp Image 2024 10 05 at 15.43.57 586b60ff min e1728123396595
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿ | ಹೆದ್ದಾರಿಯಲ್ಲಿ ಹೊತ್ತಿ ಉರಿದ ಕಾರು: ಸಾವಿನ ದವಡೆಯಿಂದ ಪಾರಾದ ಒಂದೇ ಕುಟುಂಬದ ನಾಲ್ವರು

ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಕಾರೊಂದು ಏಕಾಏಕಿ ಬೆಂಕಿಗೆ ಆಹುತಿಯಾಗಿ ಸಂಪೂರ್ಣ ಭಸ್ಮವಾಗಿರುವ...

ಕಲಬುರಗಿ | ಮೂರು ವರ್ಷದ ಬಾಲಕನ ಬಲಿ ಪಡೆದ ಲಾರಿ, ಪಂಚಾಯಿತಿ ವಿರುದ್ಧ ಜನರ ಆಕ್ರೋಶ

ಮೂರು ವರ್ಷದ ಬಾಲಕನ ಮೇಲೆ ಲಾರಿ ಹರಿದು ಮೃತಪಟ್ಟ ಘಟನೆ ಚಿಂಚೋಳಿ...

ಉಡುಪಿ | ಸಾರ್ವಜನಿಕರ ಸಮಸ್ಯೆಗಳಿಗೆ ನಿರ್ಲಕ್ಷ್ಯ ತೋರಿದರೆ ಕ್ರಮ: ಸಚಿವ ರಿಜ್ವಾನ್ ಅರ್ಷದ್

ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸರ್ಕಾರಿ ಕಚೇರಿಗಳಿಗೆ ಬಂದಾಗ ಅಧಿಕಾರಿಗಳು ಸಕಾರಾತ್ಮಕವಾಗಿ...

ಉಡುಪಿ | ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನ.3ರಿಂದ ನಿಷೇಧಾಜ್ಞೆ ಜಾರಿ

ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ...