ಹಾವೇರಿ | ಕಾನೂನು ಪದವೀಧರರ ತರಬೇತಿಗಾಗಿ ಅರ್ಜಿ ಆಹ್ವಾನ

Date:

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಹಾವೇರಿ ಜಿಲ್ಲೆಯ ಹಿಂದುಳಿದ ವರ್ಗಗಳ ಕಾನೂನು ಪದವೀಧರರ ಕಾನೂನು ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.

- Advertisement -

ಅಭ್ಯರ್ಥಿಗಳು ಹಾವೇರಿ ಜಿಲ್ಲೆಯವರಾಗಿರಬೇಕು. ಒಟ್ಟು 08 ಹಿಂದುಳಿದ ವರ್ಗಗಳ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಪ್ರವರ್ಗ-1ರ ಅಭ್ಯರ್ಥಿಗಳ ವಾರ್ಷಿಕ ಆದಾಯ ರೂ.3.50ಲಕ್ಷ ಮತ್ತು ಪ್ರವರ್ಗ-2(ಎ), 3(ಎ),3(ಬಿ) ಅಭ್ಯರ್ಥಿಗಳಿಗೆ ವಾರ್ಷಿಕ ಆದಾಯ ರೂ.2.50ಲಕ್ಷಗಳಿಗಿಂತ ಕಡಿಮೆ ಇರಬೇಕು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ರಾಮನಿಗೆ ₹150 ಕೋಟಿ, ಸೀತೆಗೆ ₹12 ಕೋಟಿ! ಬಿಗ್...

₹4,000 ಕೋಟಿಯ ಬೃಹತ್ ಬಜೆಟ್‌ನ 'ರಾಮಾಯಣ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಹೊತ್ತಿನಲ್ಲಿ ಚಿತ್ರರಂಗದ ಅದೇ ಹಳೆ ಹಣೆಬರಹವೊಂದು ಚರ್ಚೆಗೆ ಸಿಕ್ಕಿದೆ. ರಾಮನ ಪಾತ್ರಕ್ಕೆ ₹150 ಕೋಟಿ, ರಾವಣನಿಗೆ ₹100 ಕೋಟಿ ಸಂಭಾವನೆ!...

ರಾಮಲೀಲಾ ಮೈದಾನದಲ್ಲಿ ವಿಪಕ್ಷಗಳ ಬಲಪ್ರದರ್ಶನ; ಬೀದಿ ಹೋರಾಟ ಬೇರುಮಟ್ಟದ...

ನವಂಬರ್ 1ರಂದು ದೆಹಲಿಯ ಐತಿಹಾಸಿಕ ರಾಮಲೀಲಾ ಮೈದಾನದಲ್ಲಿ ನಡೆದ ಪ್ರತಿಭಟನಾ ಸಮಾವೇಶವು ಭಾರತೀಯ ರಾಜಕಾರಣದಲ್ಲಿ ಮತ್ತೊಂದು ಮಹತ್ವದ ರಾಜಕೀಯ ಮೈಲಿಗಲ್ಲಾಗಿ ದಾಖಲಾಗಿದೆ. ಚುನಾವಣಾ ಆಕ್ರಮ, ಎಸ್‌ಐಆರ್ ಷಡ್ಯಂತ್ರದ ವಿರುದ್ಧ ಮತ್ತು ಮುಖ್ಯ ಚುನಾವಣಾ...

ಮಣಿಪುರವನ್ನು ಜನಾಂಗೀಯ ಘರ್ಷಣೆಯ ದಳ್ಳುರಿಗೆ ತಳ್ಳಿ ಕೈಚೆಲ್ಲಿದೆ ಮೋ-ಶಾ...

ಮ್ಯಾನ್ಮಾರ್‌ನೊಂದಿಗೆ ಸುಮಾರು 400 ಕಿಲೋಮೀಟರ್ ಗಡಿ ಹಂಚಿಕೊಳ್ಳುವ ಈಶಾನ್ಯ ಭಾರತದ ಗಡಿ ರಾಜ್ಯ ಮಣಿಪುರದಲ್ಲಿ ಶತಮಾನಗಳಿಂದ ಬೆಳೆದು ಬಂದಿದ್ದ ಸೌಹಾರ್ದತೆಯ ಬೇರುಗಳನ್ನು ಸಂಪೂರ್ಣವಾಗಿ ಕೊಳೆತು ಹೋಗಲು ಕೇಂದ್ರ ಸರ್ಕಾರ ಬಿಟ್ಟಂತಿದೆ. 2023ರಿಂದ ನಡೆಯುತ್ತಿರುವ...

ತರಬೇತಿಯ ಅವಧಿ 4 ವರ್ಷಗಳಾಗಿದ್ದು, ತರಬೇತಿಗೆ ಆಯ್ಕೆಗೊಂಡ ಅಭ್ಯರ್ಥಿಗಳಿಗೆ ತರಬೇತಿ ಅವಧಿಯಲ್ಲಿ ಮಾಹೆಯಾನ ರೂ.4000/-ರಂತೆ ತರಬೇತಿ ಭತ್ಯೆ ನೀಡಲಾಗುವುದು. ಜಿಲ್ಲಾ ಮಟ್ಟದ ಆಯ್ಕೆ ಸಮಿತಿಯಿಂದ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಪ್ರವರ್ಗ-1ರ ಅಭ್ಯರ್ಥಿಗಳ ವಯಸ್ಸು ಅರ್ಜಿ ಸ್ವೀಕರಿಸುವ ಕೊನೆಯ ದಿನಾಂಕಕ್ಕೆ 40ವರ್ಷ ಹಾಗೂ ಇತರೆ ಪ್ರ-ವರ್ಗಗಳ ಅಭ್ಯರ್ಥಿಗಳ ವಯಸ್ಸು 38ವರ್ಷ ಮೀರಿರಬಾರದು. ತರಬೇತಿಗೆ ಅರ್ಜಿಯನ್ನು ಸಲ್ಲಿಸಲು ನಿಗದಿ ಪಡಿಸಿರುವ ಕೊನೆಯ ದಿನಾಂಕಕ್ಕೆ ಹಿಂದೆ 2ವರ್ಷದೊಳಗ ಕಾನೂನು ಪದವಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

ಆಯ್ಕೆಯಾದ ಅಭ್ಯರ್ಥಿಗಳನ್ನು ಜಿಲ್ಲಾ ಪಬ್ಲಿಕ್ ಪ್ರಾಸಿಕ್ಯೂಟರ್/ ಸರ್ಕಾರಿ ವಕೀಲರು ಅಥವಾ 20ವರ್ಷಗಳ ವಕೀಲ ವೃತ್ತಿಯಲ್ಲಿ ಅನುಭವವುಳ್ಳ ಯಾವುದೇ ವಕೀಲರ ಅಧೀನದಲ್ಲಿ ತರಬೇತಿಗೆ ನಿಯೋಜಿಸಲಾಗುವುದು.

ಎಸ್.ಎಸ್.ಎಲ್.ಸಿ ಕಾನೂನು ಪದವಿಯಲ್ಲಿ ಪಡೆದ ಅಂಕಪಟ್ಟಿಗಳು, ಪಾಸಿಂಗ್ ಸರ್ಟಿಫಿಕೇಟ್, ಜಾತಿ ಹಾಗೂ ಆದಾಯ ಪ್ರಮಾಣ ಪತ್ರ, ಕರ್ನಾಟಕ ವಕೀಲರ ಪರಿಷತ್ತಿನಲ್ಲಿ (ಸ್ಟೇಟ್ ಬಾರ್ ಕೌನ್ಸಿಲ್) ನೊಂದಾಯಿತ ಪ್ರಮಾಣ ಪತ್ರ, ಜಿಲ್ಲಾ/ತಾಲೂಕು ವಕೀಲರ ಸಂಘದಲ್ಲಿ (ಬಾರ್ ಅಸೋಷಿಯೇಷನ್) ನೊಂದಾಯಿತ ಪ್ರಮಾಣ ಪತ್ರ ಅಗತ್ಯ ದಾಖಲೆಗಳೊಂದಿಗೆ ಭರ್ತಿ ಮಾಡಿದ ಅರ್ಜಿಯನ್ನು ಜಿಲ್ಲಾ ಅಧಿಕಾರಿಗಳು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾಡಳಿತ ಭವನ, ಬಿ-ಬ್ಲಾಕ್, ರೂಂ.ನಂ.26 ಹಾವೇರಿ ಈ ವಿಳಾಸಕ್ಕೆ ದಿನಾಂಕ 20-11-2026 ರೊಳಗಾಗಿ ಸಲ್ಲಿಸಬೇಕು.

ಅಪೂರ್ಣ ಹಾಗೂ ನಿಗದಿ ಪಡಿಸಿದ ದಿನಾಂಕ ಮೀರಿ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಧಿಕಾರಿಗಳ ಕಾರ್ಯಾಲಯ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಜಿಲ್ಲಾಡಳಿತ ಭವನ, ಬಿ-ಬ್ಲಾಕ್, ರೂಂ.ನಂ.26 ಹಾವೇರಿ (ದೂರವಾಣಿ ಸಂಖ್ಯೆ:08375-249008) ಈ ವಿಳಾಸದಲ್ಲಿ ಸಂಪರ್ಕಿಸಬಹುದೆಂದು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

WhatsApp Image 2024 10 05 at 15.43.57 586b60ff min e1728123396595
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | ಕಂದಗಲ್ ರಂಗಮಂದಿರದಲ್ಲಿ ಮಕ್ಕಳಿಂದ ಕನ್ನಡ ಗೀತೆಗಳ ಆಕರ್ಷಕ ನೃತ್ಯ ಪ್ರದರ್ಶನ

ವಿಜಯಪುರದಲ್ಲಿ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ನಡೆದ...

ಬಾಗಲಕೋಟೆ | ಗೆಜೆಟೆಡ್ ಪ್ರೊಬೇಷನರ್ ಪರೀಕ್ಷೆಗೆ ಸಿದ್ಧತೆ; 17 ಕೇಂದ್ರಗಳಲ್ಲಿ 7,362 ಅಭ್ಯರ್ಥಿಗಳು ಭಾಗಿ

ಗೆಜೆಟೆಡ್ ಪ್ರೊಬೇಷನರ್ ಗ್ರೂಪ್‌ ಎ, ಬಿ ವೃಂದದ ಹುದ್ದೆಗಳ ನೇಮಕಾತಿಗಾಗಿ ನವೆಂಬರ್...

ಬಾಗಲಕೋಟೆ | ಸಾರಿಗೆ ಇಲಾಖೆಯ ಆನ್‌ಲೈನ್ ಸೇವೆ ಪಡೆಯಲು ಮಧ್ಯವರ್ತಿಗಳು ಬೇಕಿಲ್ಲ

ಸಾರಿಗೆ ಇಲಾಖೆಯ ಪ್ರಮುಖ ಸೇವೆಗಳನ್ನು ಸಾರ್ವಜನಿಕರು ಯಾವುದೇ ಮಧ್ಯವರ್ತಿಗಳ ನೆರವಿಲ್ಲದೆ ನೇರವಾಗಿ...

ಶಿವಮೊಗ್ಗ | ಕಾರಾಗೃಹದ ಆವರಣಕ್ಕೆ ನಿಷೇಧಿತ ವಸ್ತುಗಳನ್ನು ಎಸೆಯಲು ಯತ್ನ: ಓರ್ವ ಆರೋಪಿಯ ಬಂಧನ

ಶಿವಮೊಗ್ಗದ ಸೋಗಾನೆ ಕೇಂದ್ರ ಕಾರಾಗೃಹದ ಆವರಣಕ್ಕೆ ನಿಷೇಧಿತ ವಸ್ತುಗಳನ್ನು ಎಸೆಯಲು ಯತ್ನಿಸಿದ...