ಉತ್ತರ ಕರ್ನಾಟಕ | 2.5 ಲಕ್ಷ ಮಂದಿ ವಲಸೆ ಮತದಾರರ ಸಂಪರ್ಕಕ್ಕೆ ಮುಂದಾದ ಚುನಾವಣಾ ಆಯೋಗ

Date:

ಕಳೆದ ಎರಡು ತಿಂಗಳಲ್ಲಿ ಉತ್ತರ ಕರ್ನಾಟಕದ 14 ಜಿಲ್ಲೆಗಳಿಂದ ವಲಸೆ ಬಂದಿರುವ ಮತದಾರರ ಸಂಖ್ಯೆಯನ್ನು ರಾಜ್ಯ ಚುನಾವಣಾ ಆಯೋಗ ಕೇಳಿದೆ. ಗ್ರಾಮೀಣ ಪ್ರದೇಶಗಳಿಂದ ಜನರ ವಾರ್ಷಿಕ ವಲಸೆ ಸಾಮಾನ್ಯವಾಗಿ ಏಪ್ರಿಲ್‌ನಲ್ಲಿ ಪ್ರಾರಂಭವಾಗುತ್ತದೆ. ಆದರೆ ಇದೀಗ ಎದುರಾಗಿರುವ ಬರಗಾಲದಿಂದ ಈ ವರ್ಷ ಫೆಬ್ರವರಿಯಲ್ಲಿಯೇ ವಲಸೆ ಪ್ರಾರಂಭವಾಗಿದೆ.

ಚುನಾವಣಾ ಆಯೋಗದ ಅಂದಾಜಿನ ಪ್ರಕಾರ, ಉತ್ತರ ಕರ್ನಾಟಕದ ಪ್ರದೇಶದ ಸುಮಾರು 2,52,630 ಮಂದಿ ಅರ್ಹ ಮತದಾರರು ಉದ್ಯೋಗವನ್ನು ಹುಡುಕಿಕೊಂಡು ಇತರ ಸ್ಥಳಗಳಿಗೆ ವಲಸೆ ಹೋಗಿದ್ದಾರೆ. ಮತದಾನದ ಶೇಕಡಾವಾರು ಹೆಚ್ಚಿಸಲು ಚುನಾವಣೆಯ ಸಮಯದಲ್ಲಿ ಅವರನ್ನು ಕರೆತರಲು ಬಸ್ ವ್ಯವಸ್ಥೆ ಮಾಡಲು ಪ್ರಯತ್ನಿಸಲಾಗುವುದು” ಎಂದು ತಿಳಿಸಿದೆ.

“ಈಗ ಜಿಲ್ಲೆಯ ಸ್ವೀಪ್ ಸಮಿತಿಗಳ (ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಚುನಾವಣಾ ಭಾಗವಹಿಸುವಿಕೆ ಕಾರ್ಯಕ್ರಮ) ಅಧ್ಯಕ್ಷರಾಗಿರುವ ಸಿಇಒಗಳು ತಮ್ಮ ಮನೆಗಳಿಂದ ಸ್ಥಳಾಂತರಗೊಂಡ ಅರ್ಹ ಮತದಾರರ ಸಂಪರ್ಕ ಸಂಖ್ಯೆಯನ್ನು ಕೋರಿದ್ದಾರೆ. ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್ಒಗಳು) ಈಗಾಗಲೇ ಡೇಟಾವನ್ನು ಸಂಗ್ರಹಿಸಿದ್ದು, ವಲಸೆ ಮತದಾರರ ಸಂಪರ್ಕ ಸಂಖ್ಯೆಗಳು ದೊರೆತ ಬಳಿಕ ನಾವು ಅವರನ್ನು ಸಂಪರ್ಕಿಸಲು ಪ್ರಯತ್ನಿಸುತ್ತೇವೆ. ಮೇ 7ರಂದು ಮತ ಚಲಾಯಿಸುವಂತೆ ಮನವೊಲಿಸುತ್ತೇವೆ” ಎಂದು ಅಧಿಕಾರಿಯೊಬ್ಬರು ವಿವರಿಸಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ವಲಸೆ ಬಂದ ಮತದಾರರನ್ನು ಪಟ್ಟಿ ಮಾಡುವುದರ ಜತೆಗೆ, ಬಿಎಲ್ಒಗಳು ಮೃತ ಜನರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುತ್ತಾರೆ. ಮುಂದಿನ ಕೆಲವು ವಾರಗಳಲ್ಲಿ ತಿದ್ದುಪಡಿಗಳು ಮತ್ತು ಹೆಚ್ಚುವರಿ ಕೆಲಸಗಳನ್ನು ಮಾಡಲಾಗುವುದು. ವಲಸೆ ಬಂದ ಮತದಾರರ ಹತ್ತಿರದ ಸಂಬಂಧಿಕರನ್ನು ಬಿಎಲ್ಒಗಳು ಸಂಪರ್ಕಿಸುತ್ತಿದ್ದು, ಅವರು ಎಲ್ಲಿದ್ದಾರೆ ಮತ್ತು ಅವರನ್ನು ಹೇಗೆ ತಲುಪಬೇಕು ಎಂಬುದನ್ನು ತಿಳಿದುಕೊಳ್ಳುತ್ತಿದ್ದಾರೆ.

“ಅನೇಕ ಬಾರಿ, ರಾಜಕೀಯ ಪಕ್ಷಗಳು ರಾಜ್ಯ ಮತ್ತು ದೇಶದ ವಲಸೆ ಮತದಾರರಿಗೆ ಬಸ್ಸುಗಳು, ಪಾರ್ಟಿಗಳು ಮತ್ತು ಉಡುಗೊರೆಗಳನ್ನು ವ್ಯವಸ್ಥೆ ಮಾಡುತ್ತವೆ. ಉದಾಹರಣೆಗೆ, ರಾಜಕೀಯ ಪಕ್ಷವೊಂದು ಚುನಾವಣೆಗೆ ಸ್ವಲ್ಪ ಮೊದಲು ಗೋವಾದಲ್ಲಿ ಉತ್ತರ ಕರ್ನಾಟಕದ ವಲಸಿಗರಿಗೆ ಅದ್ದೂರಿ ಔತಣಕೂಟವನ್ನು ಏರ್ಪಡಿಸಿತ್ತು. ಈ ಬಾರಿ, ಚುನಾವಣಾ ಆಯೋಗ ಮತ್ತು ಸ್ಥಳೀಯ ಆಡಳಿತವು ಮತದಾರರನ್ನು ಮರಳಿ ಕರೆತರಲು ಬಸ್ಸುಗಳನ್ನು ವ್ಯವಸ್ಥೆ ಮಾಡುತ್ತದೆ” ಎಂದು ಅಧಿಕಾರಿ ಹೇಳಿದರು.

ಈ ಸುದ್ದಿ ಓದಿದ್ದೀರಾ? ವಿಜಯಪುರ | ಮಹಿಳಾ ವಿವಿಯಲ್ಲಿ ಅಕ್ರಮ; ಇಪಿಎಫ್‌ ಹಣ ಹಾಕದೆ ವಂಚನೆ ಆರೋಪ

“ಎಲ್ಲ ಕಾರ್ಮಿಕರನ್ನು ಸಂಪರ್ಕಿಸುವುದು ಆಡಳಿತಕ್ಕೆ ಸುಲಭದ ಕೆಲಸವಲ್ಲ. ಆಯೋಗವು ವಿವಿಧ ಮಾಧ್ಯಮಗಳ ಮೂಲಕ ಮತದಾನ ಜಾಗೃತಿ ಅಭಿಯಾನಗಳನ್ನು ಕೈಗೊಳ್ಳಲಿದೆ. ಉದಾಹರಣೆಗೆ, ಬಳ್ಳಾರಿ ಜಿಲ್ಲೆಯಲ್ಲಿ ಸುಮಾರು 15,000 ಮಂದಿ ವಲಸೆ ಮತದಾರರಿದ್ದರೆ. ಕೊಪ್ಪಳ ಜಿಲ್ಲೆಯಲ್ಲಿ ಸುಮಾರು 45,000 ಮಂದಿ ವಲಸೆ ಮತದಾರರಿದ್ದಾರೆ. ಗದಗ, ರಾಯಚೂರು ಮತ್ತು ಕಲಬುರಗಿಯ ಸಂಖ್ಯೆಗಳನ್ನು ಸಂಗ್ರಹಿಸಲಾಗುತ್ತಿದೆ. ಬೇಸಿಗೆಯಲ್ಲಿ ಅತಿ ಹೆಚ್ಚು ವಲಸೆ ಬರುವ ತಾಂಡಾಗಳಿಗೆ (ಕುಗ್ರಾಮಗಳು) ಬಿಎಲ್ಒಗಳು ಭೇಟಿ ನೀಡುತ್ತಾರೆ. ಹಳ್ಳಿಗಳು ಮತ್ತು ಇತರ ಪ್ರದೇಶಗಳಲ್ಲಿ ಬೀದಿ ನಾಟಕಗಳನ್ನು ಆಯೋಜಿಸುವ ಮೂಲಕ ಜಾಗೃತಿ ಮೂಡಿಸಲಾಗುವುದು” ಎಂದು ಅಧಿಕಾರಿ ಹೇಳಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | ಮೋದಿ ದುರಾಡಳಿತ ಕೊನೆಗಾಣಿಸಬೇಕು: ಅಪ್ಪಾಸಾಹೇಬ ಯರನಾಳ

ಮೋದಿ ಹಿಟ್ಲರ್ ಶಾಹಿ ಆಡಳಿತ ಕೊನೆಗೊಳ್ಳುವ ಸಮಯ ಬಂದಿದೆ, ಮೋದಿ ಈ...

ತುಮಕೂರು | ಸ್ಟ್ರಾಂಗ್ ರೂಮ್ ಪರಿಶೀಲಿಸಿದ ಜಿಲ್ಲಾಧಿಕಾರಿ

ತುಮಕೂರು ಲೋಕಸಭಾ ಕ್ಷೇತ್ರದ ಚುನಾವಣೆ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಕ್ಷೇತ್ರ ವ್ಯಾಪ್ತಿಗೆ ಒಳಪಡುವ...

ಚಿಕ್ಕಬಳ್ಳಾಪುರ | ಅನುಚಿತ ಪ್ರಭಾವ, ಲಂಚ, ಭ್ರಷ್ಟಾಚಾರ ಪ್ರಕರಣದಡಿ ಕೆ.ಸುಧಾಕರ್ ವಿರುದ್ಧ ಎಫ್‌ಐಆರ್

ಚುನಾವಣೆಯಲ್ಲಿ ಮತದಾರರಿಗೆ ಲಂಚ ನೀಡಲು ಮನೆಯೊಂದರಲ್ಲಿ ಅಕ್ರಮವಾಗಿ ಹಣ ದಾಸ್ತಾನು ಮಾಡಿದ್ದ...

ದ್ವಿತೀಯ ಪಿಯುಸಿ ಪರೀಕ್ಷೆ-2 ಏಪ್ರಿಲ್ 29 ರಿಂದ ಆರಂಭ

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಕಳೆದ ತಿಂಗಳಷ್ಟೇ ಪಿಯುಸಿ...