ಗದಗ | ರಾಜ್ಯೋತ್ಸವ ಪ್ರಶಸ್ತಿ ಸಮಿತಿಗೆ ಬಯಲಾಟ ಅಕಾಡೆಮಿ ಅಧ್ಯಕ್ಷರನ್ನೂ ನೇಮಕ ಮಾಡಲು ಆಗ್ರಹ

Date:

2025ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿಗೆ ಬಯಲಾಟ ಅಕಾಡೆಮಿ ಅಧ್ಯಕ್ಷರನ್ನೂ ನೇಮಕ ಮಾಡುವಂತೆ ಆಗ್ರಹಿಸಿ ಮಂಗಳವಾರ ಬಯಲಾಟ ಕಲಾವಿದರು ಗದಗ ಪಟ್ಟಣದಲ್ಲಿ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ಅವರಿಗೆ ಮನವಿ ಸಲ್ಲಿಸಿದರು.

- Advertisement -

ಸುತಾರ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಅಶೋಕ ಸುತಾರ ಮಾತನಾಡಿ, “ರಾಜ್ಯೋತ್ಸವ ಪ್ರಶಸ್ತಿಗೆ ಸಾಧಕರನ್ನು ಆಯ್ಕೆ ಮಾಡಲು ಸರ್ಕಾರ ಸಲಹಾ ಸಮಿತಿ ರಚಿಸಲಾಗಿದೆ. ಅದರಲ್ಲಿ ಕರ್ನಾಟಕ ರಾಜ್ಯದ ವಿವಿಧ ಅಕಾಡೆಮಿಗಳ ಅಧ್ಯಕ್ಷರು ಹಾಗೂ ಸಾಹಿತಿಗಳು ಹಾಗೂ ಜಾನಪದ, ರಂಗಭೂಮಿ, ಮಾಧ್ಯಮ ವಿಭಾಗ, ವೈದ್ಯಕೀಯ, ಸಂಗೀತ ನೃತ್ಯ, ಚಿತ್ರಕಲೆ, ನ್ಯಾಯಾಂಗ, ಕಿರುತೆರೆ, ಚಲನಚಿತ್ರ, ಕ್ರೀಡೆ, ವಿಜ್ಞಾನ, ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದ ಪದನಿಮಿತ್ಯ ಸದಸ್ಯರನ್ನು ಒಳಗೊಂಡಂತೆ ಎಲ್ಲ ವಿಭಾಗದ ತಜ್ಞರನ್ನು ಸಲಹಾ ಸಮಿತಿಯ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ’ ಎಂದು ತಿಳಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಗಾಡ್ಗೀಳ್‌, ಕಸ್ತೂರಿ ರಂಗನ್ ವರದಿಗಳು ಹೇಳುವುದೇನು? ವಿರೋಧವೇಕೆ?

ಪಶ್ಚಿಮ ಘಟ್ಟವನ್ನು ಉಳಿಸಬೇಕೆಂಬ ಪರಿಸರದ ಕೂಗು ಒಂದು ಕಡೆ, ಜನವಸತಿ–ಕೃಷಿ–ಜೀವನೋಪಾಯದ ಆತಂಕ ಮತ್ತೊಂದು ಕಡೆ. ಗಾಡ್ಗೀಳ್‌ನ ಕಠಿಣ ಸಂರಕ್ಷಣಾ ಶಿಫಾರಸುಗಳಿಂದ ಕಸ್ತೂರಿರಂಗನ್ ವರದಿವರೆಗೆ—ಪಶ್ಚಿಮ ಘಟ್ಟದ ಭವಿಷ್ಯವನ್ನು ರೂಪಿಸಿದ ಎರಡು ಪ್ರಮುಖ ವರದಿಗಳು ಏನು...

ವಂದೇ ಮಾತರಂ: ರಾಷ್ಟ್ರಗೌರವದ ಸಂಕೇತವೋ, ಚಿತ್ತ ಚದುರಿಸುವ ರಾಜಕೀಯ...

ಭಾರತದ ಯುವಜನತೆಯಲ್ಲಿ ರಾಹುಲ್ ಗಾಂಧಿಯವರ ವರ್ಚಸ್ಸು ಹೆಚ್ಚುತ್ತಿರುವುದನ್ನು ಗಮನಿಸಿ, ಇದೇ ಸಂಸತ್ ಕಲಾಪದಲ್ಲಿ, "ವಂದೇ ಮಾತರಂ" ವಿಷಯವನ್ನು ಮುನ್ನೆಲೆಗೆ ತಂದು, ಯುವಜನತೆಯ ಗಮನವನ್ನು ಬೇರೆಡೆ ಸೆಳೆಯುವ old trick ಮಾಡಲಾಗಿದೆ ಎಂಬುದು ಈ...

ಮುಂಗಾರು ಹಿನ್ನಡೆ, ಹಿಂಗಾರಿಗೆ ಕಂಟಕ: ದೇಶದಲ್ಲಿ 2027ರವರೆಗೆ ಬರಗಾಲದ ಆತಂಕ!

ಪ್ರಕೃತಿಯ ಏರುಪೇರುಗಳನ್ನು ಎದುರಿಸಲು ಸರ್ಕಾರಗಳು ತಕ್ಷಣದ ಆಪತ್ಕಾಲೀನ ಪರಿಹಾರ ಕ್ರಮಗಳಿಗೆ ಸೀಮಿತವಾಗದೆ, ದೀರ್ಘಕಾಲೀನ ಕಾರ್ಯತಂತ್ರಗಳನ್ನು ರೂಪಿಸುವುದು ಅತ್ಯಗತ್ಯ. ಮಣ್ಣಿನ ತೇವಾಂಶ ಸಂರಕ್ಷಣೆ, ನೀರಾವರಿ ವ್ಯಾಪ್ತಿಯ ವೈಜ್ಞಾನಿಕ ವಿಸ್ತರಣೆ, ಹವಾಮಾನ ಬದಲಾವಣೆಗೆ ಸ್ಥಿತಿಸ್ಥಾಪಕತ್ವ ಹೊಂದಿರುವ(Climate-resilient)...

“ಆದರೆ, ಉತ್ತರ ಕರ್ನಾಟಕದ ಗಂಡು ಕಲೆಯಾಗಿರುವ ಬಯಲಾಟಕ್ಕೆ ಸಂಬಂಧಿಸಿದಂತೆ ಯಾವೊಬ್ಬ ತಜ್ಞರು ಅಥವಾ ಬಯಲಾಟ ಅಕಾಡೆಮಿಯ ಅಧ್ಯಕ್ಷರನ್ನು 2024-25 ಹಾಗೂ 2025-26ನೇ ಸಾಲಿನಲ್ಲಿ ಸಲಹಾ ಸಮಿತಿಯ ಸದಸ್ಯರನ್ನಾಗಿ ನೇಮಕ ಮಾಡಿಲ್ಲ. ಇದರಿಂದ ಉತ್ತರ ಕರ್ನಾಟಕದ ಗಂಡು ಕಲೆಯಾದ ಬಯಲಾಟ ಕಲೆಗೆ ಹಾಗೂ ಕಲಾವಿದರಿಗೆ ಅವಮಾನಿಸಿದಂತೆ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಅವರು ತಕ್ಷಣವೇ ಈ ಲೋಪ ಸರಿಪಡಿಸಿ, ಬಯಲಾಟ ಅಕಾಡೆಮಿ ಅಧ್ಯಕ್ಷ ಕೆ.ಆ‌ರ್.ದುರ್ಗಾದಾಸ ಅವರನ್ನು ನೇಮಕ ಮಾಡಬೇಕು” ಎಂದು ಒತ್ತಾಯಿಸಿದರು.

ಇದನ್ನು ಓದಿದ್ದೀರಾ? ಬೀದರ್‌ ಜಿಲ್ಲೆಗೆ 14 ಕೆಪಿಎಸ್‌ ಶಾಲೆ ಮಂಜೂರು

ಮನವಿ ಸಂದರ್ಭದಲ್ಲಿ ಬಯಲಾಟ ಕಲಾವಿದರು ರಾಮಚಂದ್ರ ಅರ್ಕಸಾಲಿ, ಮನೋಜ್‌ಕುಮಾರ ಸುತಾರ, ಮಲ್ಲೇಶಗೌಡ ತಿಮ್ಮನಗೌಡ್ರ, ಶಂಕರಪ್ಪ ವಿ. ಬಡಿಗೇರ, ಸುಭಾಸ ಮಳಗಿ, ಸಿದ್ಧಲಿಂಗೇಶ್ವರ ಮುಳ್ಳಾಳ, ನಿಖಿತಾ ಸುತಾರ, ಸುಭಾಷ ಕದಡಿ, ರಂಗಪ್ಪ ಮಡ್ಡಿಕಾರ, ಬಾಳಪ್ಪ ಮನಗೂಳಿ, ಪ್ರಕಾಶ ಬೆಣಕಲ್ಲ, ಖಾಜೇಸಾಬ ನಾರಾಯಣಕೇರಿ, ವಿರುಪಾಕ್ಷಪ್ಪ ಕ್ಷೇತ್ರಿ, ಉಮೇಶ ನಾಯಕ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೋಲಾರ | ನರಸಾಪುರದಲ್ಲಿ ಸೆ.26ರಂದು ಪ್ರಜಾ ಸೇವೆ ಆಂದೋಲನ

ಒಂದೇ ಸೂರಿನಡಿ ಸಾರ್ವಜನಿಕರ ಅರ್ಜಿ ಹಾಗೂ ಅಹವಾಲುಗಳನ್ನು ಸ್ವೀಕರಿಸಿ, ಸಾಧ್ಯವಾದಷ್ಟು ಸ್ಥಳದಲ್ಲೇ...

ಕೆಜಿಎಫ್ | ಯುವಜನರ ಧ್ವನಿಗೆ ವೇದಿಕೆಯಾದ ಕೆಜಿಎಫ್‌ನ ಯುವಜನ ಮನ ಸಂಭ್ರಮೋತ್ಸವ

ಯುವಜನರಲ್ಲಿ ಮಾನಸಿಕ ಆರೋಗ್ಯದ ಕುರಿತು ಅರಿವು ಮೂಡಿಸುವುದು, ಸಂವಿಧಾನಿಕ ಮೌಲ್ಯಗಳನ್ನು ಬೆಳೆಸುವುದು...

ಬಾಗೇಪಲ್ಲಿ | ಸೆ.26ರಿಂದ ಪಟ್ಟಣದಲ್ಲಿ ಡಿವೈಎಫ್‍ಐ 13ನೇ ರಾಜ್ಯ ಯುವಜನ ಸಮ್ಮೇಳನ

ಬಾಗೇಪಲ್ಲಿ ಪಟ್ಟಣದಲ್ಲಿ ರಾಜ್ಯಮಟ್ಟದ 13 ನೇ ಯುವಜನ ಸಮ್ಮೇಳನ ತಾಲ್ಲೂಕು ಪಂಚಾಯತಿ...

ವಿಜಯಪುರ | ಜಿಲ್ಲೆಯ 4 ತಾಲೂಕುಗಳು ತೀವ್ರ ಬರಪೀಡಿತ: ಸಚಿವ ಎಂ.ಬಿ ಪಾಟೀಲ

ಕೇಂದ್ರ ಸರಕಾರದ ಬರ ನಿರ್ವಹಣಾ ಮಾನದಂಡಗಳನ್ನು ಆಧರಿಸಿ ವಿಜಯಪುರ ಜಿಲ್ಲೆಯ ಆಲಮೇಲ,...