ಗದಗ | ನಗರಕ್ಕೆ ಕನ್ಹೇರಿ ಸ್ವಾಮಿಯನ್ನು ಪ್ರವೇಶ ನಿರ್ಬಂಧಿಸುವಂತೆ‌ ಜಿಲ್ಲಾಧಿಕಾರಿಗೆ‌ ಮನವಿ

Date:

“ಗದಗ ಜಿಲ್ಲೆ ಐತಿಹಾಸಿಕ ಪರಂಪರೆಯುಳ್ಳ ಜಿಲ್ಲೆ. ಇಲ್ಲಿ ಎಲ್ಲ ಸಮಾಜದ ಜನ ಸೌಹಾರ್ದೇಯುತವಾಗಿ ಬದುಕಲು ಅನೇಕ ಹಿರಿಯರು ತ್ಯಾಗ ಮಾಡಿದ್ದಾರೆ. ಅಷ್ಟೇ ಅಲ್ಲದೇ ಗದಗ ನಗರದಲ್ಲಿ ವೀರನಾರಾಯಣ, ತ್ರಿಕೂಟೇಶ್ವರ, ಜುಮ್ಮಾ ಮಸೀದಿಗಳನ್ನು ಒಳಗೊಂಡಂತೆ ಪಂಚ ಕಮೀಟಿ ನೇತೃತ್ವದಲ್ಲಿ ಸೌಹಾರ್ದ ಕೂಟ ಸ್ಥಾಪಿಸಲಾಗಿದ್ದು, ಮುಂದುವರೆದು ಗದುಗಿನ ತೋಂಟದ ಸಿದ್ದಲಿಂಗ ಸ್ವಾಮಿಗಳ ಮಹತ್ಕಾರ್ಯಕ್ಕೆ ಕೋಮುಸೌಹಾರ್ದತೆಯ ಬಿರುದು ಸಹ ಗದುಗಿಗೆ ಒದಗಿದೆ. ಇಂತಹ ನಾಡಿನಲ್ಲಿ ಸಂವಿಧಾನ ವಿರೋಧಿ ಕನ್ಹೇರಿ ಸ್ವಾಮಿಯನ್ನು ನಗರಕ್ಕೆ ಪ್ರವೇಶ ನಿರ್ಬಂಧಿಸಬೇಕು” ಎಂದು ಎಲ್ಲ ಸಮಾನ ಮನಸ್ಕರು ಒತ್ತಾಯಿಸಿದರು.

- Advertisement -

ಗದಗ ಪಟ್ಟಣದ ಜಿಲ್ಲಾಡಳಿತದಲ್ಲಿ ಮೇ 31ರಂದು ಗದಗ ನಗರದಲ್ಲಿ ನಡೆಯುತ್ತಿರುವ ಹಿಂದೂ ಸಮಾವೇಶದಲ್ಲಿ ಸಂವಿಧಾನ ವಿರೋಧಿಯಾಗಿ ಮಾತನಾಡುವ ಕಾಡಸಿದ್ದೇಶ್ವರ ಮಠದ ಪೀಠಾಧಿಕಾರಿ ಕನ್ನೇರಿ ಸ್ವಾಮಿಯನ್ನು ಗದಗ ನಗರಕ್ಕೆ ನಿರ್ಬಂಧಿಸುವಂತೆ‌” ಸಮಾನ ಮನಸ್ಕರು‌ ಜಿಲ್ಲಾಧಿಕಾರಿಗಳಿಗೆ‌ ಇಂದು ಮನವಿ ಸಲ್ಲಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ...

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ನ್ಯಾಯಾಧೀಶರಾಗಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಮೂಲದ ನವನೀತಮ್ 'ನವಿ' ಪಿಳ್ಳೈ (85) ಅವರಿಗೆ 2026ನೇ ಸಾಲಿನ...

ಉತ್ತರ ಕನ್ನಡ | ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ‘ಅಕ್ಕ...

ಉತ್ತರ ಕನ್ನಡ ಜಿಲ್ಲೆಯಲ್ಲಿ 'ಅಕ್ಕ ಕೆಫೆ' ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಗ್ರಾಮೀಣ ಮಹಿಳೆಯರು ಸ್ವಂತ ಉದ್ಯಮ ನಡೆಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮತ್ತು ಉದ್ಯಮಿಗಳಾಗಿ ಹೊರಹೊಮ್ಮಲು ಇದು ದಾರಿಮಾಡಿಕೊಟ್ಟಿದೆ. ಸಂಜೀವಿನಿ ಎನ್‌ಆರ್‌ಎಲ್‌ಎಂ ಯೋಜನೆಯಡಿ...

“ಮಠಾಧೀಶರು ಗದಗಿನ ಹಿರಿಮೆಯನ್ನು ಹೆಚ್ಚಿಸಲು ಸಮಾಜಮುಖಿ ಕಾರ್ಯಗಳನ್ನು ಮಾಡಿದ್ದಾರೆ. ಬಸವಣ್ಣ, ಕನಕ, ವೀರನಾರಾಯಣ, ಪಂ. ಪಂಚಾಕ್ಷರಿಗವಾಯಿಗಳು, ಶಿರಹಟ್ಟಿಯ ಫಕೀರೇಶ್ವರ ಮಠ ಇನ್ನೂ ಹತ್ತಾರು ಮಠಮಾನ್ಯಗಳು ಗದುಗಿನ ಪರಿಸರವನ್ನು ಶರಣ ವಚನ ಧಾರೆಗಳಲ್ಲಿ ಕಟ್ಟಿದ್ದಾರೆ. ಇನ್ನು ಕಟ್ಟುತ್ತಿದ್ದಾರೆ. ಇಂತಹ ಭವ್ಯ ಇತಿಹಾಸವಿರುವ ಗದಗದಲ್ಲಿ ಇವತ್ತಿಗೂ ಯಾವುದೇ ಕೋಮು ಹಿಂಸೆಯಾಗಲಿ, ಕೋಮುದಳ್ಳುರಿಯಾಗಲಿ ನಡೆದಿಲ್ಲ. ಗದಗನ ಜನತೆ ಇಂತಹದಕ್ಕೆ ಯಾವತ್ತಿಗೂ ಅವಕಾಶ ಕೊಟ್ಟಿಲ್ಲ. ಕೋಮುಸೌಹಾರ್ದತೆಯನ್ನು ಕದಡಲು ಇಲ್ಲಿ ಅವಕಾಶ ಕೊಡಬಾರದು” ಎಂದು ಸಮಾನ ಮನಸ್ಕರು ಮನವಿ ಮಾಡಿದರು.

ಹಿರಿಯ ಸಾಹಿತಿ ಬಸವರಾಜ ಸೂಳಿಬಾವಿ ಮಾತನಾಡಿ, “ಈ ಹಿಂದೂ ಬೃಹತ್ ಸಮಾವೇಶಕ್ಕೆ ಮುಖ್ಯ ಭಾಷಣಕಾರರಾಗಿ ಮಹಾರಾಷ್ಟ್ರದ ಕಾಡಸಿದ್ದೇಶ್ವರ ಕನ್ನೇರಿ ಸ್ವಾಮಿಗಳು ಬರುತ್ತಿದ್ದಾರೆ. ಇವರು ಹೋದಲ್ಲೆಲ್ಲ ಅಶಾಂತಿಯನ್ನು ಉಂಟುಮಾಡುವ ಮಾತುಗಳನ್ನು ಆಡುತ್ತಾರೆ. ಈಗಾಗಲೇ ಇವರನ್ನು ವಿಜಯಪುರ, ಬಾಗಲಕೋಟೆ, ಧಾರವಾಡ ಜಿಲ್ಲೆಯಲ್ಲಿ ಇವರು ಬರುವುದನ್ನು ನಿಷೇಧಿಸಿದ್ದರು.ಇವರು ಒಂದು ಧರ್ಮವನ್ನು ಗುರಿಯಾಗಿಸಿಕೊಂಡು ಪ್ರಚೋದನಕಾರಿ ಭಾಷಣ ಮಾಡುತ್ತಾರೆ.ಇಡೀ ಸಂವಿಧಾನದ ಆಶಯದ ವಿರುದ್ಧ ಚಟುವಟಿಕೆ ಮಾಡುವುದರಿಂದ ಇವರನ್ನು 31 ನೇ ದಿನಾಂಕದಂದು ಗದುಗಿನಲ್ಲಿ ನಡೆಯುವ ಹಿಂದೂ ಸಮಾವೇಶಕ್ಕೆ ಅನುಮತಿ ನಿರಾಕರಿಸಿ ಅವರನ್ನು ಗದಗ ಜಿಲ್ಲೆಯ ಪ್ರವೇಶವನ್ನು ನಿಧಿಸಬೇಕು” ಒತ್ತಾಯಿಸಿದರು.

“ಹೀಗಾಗಿ ಮೇ 31 ರಂದು ನಡೆಯುವ ಹಿಂದೂ ಸಮಾವೇಶಕ್ಕೆ ನಮ್ಮದು ಯಾವುದೇ ತಕರಾರು ಇಲ್ಲ, ಆ ಸಮಾವೇಶ ಪ್ರತಿಭಟನೆ ಭಾರತ ದೇಶದ ನಾಗರಿಕರ ಹಕ್ಕು. ಆದರೆ ಹಿಂದುತ್ವ ಸಮಾವೇಶದಲ್ಲಿ ಬಳಕೆ ಮಾಡಿಕೊಳ್ಳುತ್ತಿರುವ ಶಿವಶರಣರ ಹೆಸರಿನಲ್ಲಿ ನಡೆಯುವ ಸಮಾವೇಶಕ್ಕೆ ನಮ್ಮ ವಿರೋಧವಿದೆ” ಎಂದರು.

ಜಾಗತಿಕ ಲಿಂಗಾಯತ ಮಹಾಸಭಾ ಮುಖಂಡರು ಅಶೋಕ ಬರಗುಂಡಿ ಮಾತನಾಡಿ, “12ನೇ ಶತಮಾನದಲ್ಲಿ ಬಸವಣ್ಣನವರ ಸಮ್ಮುಖದಲ್ಲಿ ನಡೆದ ವಚನ ಚಳುವಳಿ ಈ ನೆಲದ ಎಲ್ಲ ವರ್ಗದ ಕಾಯಕ ಜೀವಿಗಳ ನೇತೃತ್ವದಲ್ಲಿ ಅನುಭವ ಮಂಟಪ ಸ್ಥಾಪಿಸಲಾಗಿತ್ತು. ಈ ಅನುಭವ ಮಂಟಪದಲ್ಲಿ ಎಲ್ಲ ವರ್ಗದ ಶರಣ ಶರಣೆಯರು ತಮ್ಮ ತಮ್ಮ ಆಲೋಚನೆಗಳ ಪರಸ್ಪರ ಚರ್ಚಿಸುತ್ತಿಜದ್ದರು. ಆ ಮೂಲಕ ವಚನಗಳ ರಚನೆಯನ್ನು ಮಾಡಿ ಸಮಾಜಕ್ಕೆ ಉತ್ತಮ ಸಂದೇಶಗಳಾಗಿ ಕೊಡುತ್ತಿದ್ದರು” ಎಂದರು.

“ಇಂತಹ ತತ್ವವನ್ನು ಅರಿಯದ ಜನ, ಹಿಂದುತ್ವ ಸಮಾವೇಶ ಹೆಸರಿನಲ್ಲಿ ಶರಣರ ತತ್ವಗಳನ್ನು ತಪ್ಪಾಗಿ ಅರ್ಥೈಸಿಕೊಂಡು ಮನವಾದಿಗಳ, ಪ್ರಜಾಪ್ರಭುತ್ವ ವಿರೋಧಿಗಳ ಸಮಾನತೆಯ ವೈರಿಗಳ ಬಲೆಗೆ ಬಿದ್ದು ಗದುಗಿನ ಜನಸಮುದಾಯವನ್ನು ತಪ್ಪುದಾರಿಗೆ ಎಳೆಯಲು ಯತ್ನಿಸುತ್ತಿದ್ದಾರೆ. ಸಂವಿಧಾನ ಒಪ್ಪದ ಈ ನೆಲದ ಕಾನೂನಿಗೆ ಗೌರವ ನೀಡದ ಅಸಮಾನತೆಯನ್ನು ಮತ್ತೆ ಸ್ಥಾಪಿಸುವ ಹುನ್ನಾರ ಹೊಂದಿರುವ ಕನ್ನೇರಿ ಸ್ವಾಮಿಯನ್ನು ಗದಗ ನಗರಕ್ಕೆ ಬರದಂತೆ ನಿಷೇಧ ಹೇರಬೇಕೆಂದು ಗದುಗಿನ ಎಲ್ಲ ಸಮಾನತೆ ಬಯಸುವ ಎಲ್ಲ ಮನಸ್ಸುಗಳ ಒತ್ತಾಯವಾಗಿದೆ” ಎಂದು ಹೇಳಿದರು.

ಮನವಿ ಸಂದರ್ಭದಲ್ಲಿ ಸಮಾನತೆಗಾಗಿ ನಾವು ಮುಖಂಡರು ಎಸ್.ಎನ್.ಬಳ್ಳಾರಿ, ರಮೇಶ ಕೋಳೂರು, ಶರೀಫ್ ಬಿಳಿಯಲಿ‌ಮುತ್ತು ಬಿಳಿಯಲಿ, ಪರಶು ಕಾಳೆ, ರಾಮಚಂದ್ರ ಹಂಸನೂರು, ಶೇಖಣ್ಣ ಕವಳಿಕಾಯಿ, ಅನಿಲ್ ಕಾಳೆ ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆಡಳಿತದಲ್ಲಿ ಪಾರದರ್ಶಕತೆಗೆ ಮಾಹಿತಿ ಹಕ್ಕು ಕಾಯ್ದೆ ಪ್ರಮುಖ ಅಸ್ತ್ರ: ಹಣಮಂತ ಶಿಂದೆ

ಮಾಹಿತಿ ಹಕ್ಕು ಕಾಯ್ದೆಯ ಪರಿಣಾಮಕಾರಿ ಬಳಕೆ, ಆಡಳಿತದಲ್ಲಿ ಪಾರದರ್ಶಕತೆ ಹಾಗೂ ಸಾಮಾಜಿಕ...

ಯತ್ನಾಳ್ ವಿರುದ್ಧ ಹೊರ್ತಿ ವಾಗ್ದಾಳಿ; ಅರ್ಜಿ ವಾಪಸ್ ಪಡೆದ ಹಿಂದಿನ ಸತ್ಯ ಬಹಿರಂಗಪಡಿಸಲು ಸವಾಲು

ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕುವಂತೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಬರೆದಿರುವ...

ಆರೋಗ್ಯ ಸುರಕ್ಷತೆಗೆ ಆದ್ಯತೆ ನೀಡಿ: ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ

ಕೊಡಗು ಜಿಲ್ಲೆಯಲ್ಲಿ ಡೆಂಗ್ಯೂ, ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಅಗತ್ಯ...

ಉಡುಪಿ | ಯುವಜನರೇ, ನಿರಂತರ ಪರಿಶ್ರಮದಿಂದ ಯಶಸ್ಸಿನ ಮೆಟ್ಟಿಲೇರಿ: ಪ್ರಕಾಶ್ ಶೆಟ್ಟಿ

ಯುವಜನರು ನಿರಂತರ ಪ್ರಯತ್ನದ ಮೂಲಕ ಜೀವನದಲ್ಲಿ ಒಂದೊಂದೇ ಮೆಟ್ಟಿಲು ಏರುತ್ತಾ ಸಾಗಿದರೆ...