ರೋಣ ತಾಲೂಕಿನಲ್ಲಿ ಮಾನವ ದಿನಗಳ ಸೃಜನೆ ತುಂಬಾ ಕಡಿಮೆ ಇದೆ. ಮಾನವ ದಿನಗಳ ಸೃಜನೆಗೆ ಒತ್ತು ಕೊಟ್ಟು ಜನರಿಗೆ ಕೆಲಸ ಕೊಡದಿದ್ದರೆ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ” ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಮುಕುಲ್ ಜೈನ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಹಾಗೂ ವಿಬಿಜಿ-ರಾಮ್-ಜಿ ಸಿಬ್ಬಂದಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದರು.
ಗದಗ ಜಿಲ್ಲೆಯ ರೋಣ ಪಟ್ಟಣದ ತಾಲೂಕು ಪಂಚಾಯತ ಸಭಾ ಭವನದಲ್ಲಿ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿ, “ವಿಬಿಜಿ-ರಾಮ್-ಜಿ ಯೋಜನೆಯಡಿಯಲ್ಲಿ 125 ದಿನಗಳು ಜನರಿಗೆ ಕೆಲಸ ಕೊಡಲು ಸಾಕಷ್ಟು ಅವಕಾಶಗಳು ಇವೆ, ಏಕೆ ನೀವು ಆ ಅವಕಾಶಗಳನ್ನು ಜನರಿಗೆ ತಲುಪಿಸುತ್ತಿಲ್ಲಾ, ಯಾವುದೇ ನೆಪಗಳನ್ನು ಹೇಳದೇ ಜನರಿಗೆ ಕೆಲಸ ಒದಗಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ ಈ ಹಿನ್ನೆಲೆ ಪ್ರತಿಯೊಂದು ಗ್ರಾಮ ಪಂಚಾಯತಿ ಮಟ್ಟದಲ್ಲಿ ಈ ಯೋಜನೆಯಡಿಯಲ್ಲಿ ಕೆಲಸ ಕೊಡಬೇಕು ಇಲ್ಲದೆ ಹೋದರೆ ಶಿಸ್ತು ಕ್ರಮ ಕೈಗೊಳ್ಳಲಾಗುವದು” ಎಂದರು.
“ಇನ್ನು ಕೆಲಸ ಕೊಡದೇ ಇರಲು ಕಾರಣಗಳನ್ನು ಎನು? ಯಾಕೆ? ಎಂದು ಕೆಲವು ಪಿಡಿಓ ಗಳನ್ನು ನಿಲ್ಲಿಸಿ ವಿಷಯ ಕೇಳಿದ ಅವರು, ಸಾಮೂಹಿಕ ಕಾಮಗಾರಿಗಳು ತಮ್ಮ ಗ್ರಾಮ ಪಂಚಾಯತಿ ಕ್ರಿಯಾ ಯೋಜನೆಯಲ್ಲಿ ಇಲ್ಲದೇ ಹೋದರೆ ಕಾಮಗಾರಿ ಗಳನ್ನು ಗುರುತಿಸಿ ಹೆಚ್ಚುವರಿ ಕ್ರಿಯಾ ಯೋಜನೆಯನ್ನು ತಯಾರಿಸಿ ಕೊಡಿ, ಅದಕ್ಕೆ ಅನುಮೋದನೆ ದೊರೆತ ಕೂಡಲೇ ಕೆಲಸವನ್ನು ಪ್ರಾರಂಭೇಕು” ಎಂದು ಸೂಚನೆ ನೀಡಿದರು.
“ಪಂಚಾಯತ ರಾಜ್ ಇಲಾಖೆ ಇಂಜನಿಯರ ಪುರೋಹಿತ ಅವರಿಗೆ ಗ್ರಾಮ ಪಂಚಾಯತಿ ನೂತನ ಕಟ್ಟಡ ವಿಚಾರವಾಗಿ ಎಸ್ಟಿಮೇಟ್ ತಯಾರಿಸದ ಹಿನ್ನೆಲೆ ಇಲ್ಲ ಸಲ್ಲದ ಕಾರಣ ಹೇಳದೇ ನೀತಿ ಸಂಹಿತೆ ಬಳಿಕ ಟೆಂಡರ್ ಕರೆದು ಕೆಲಸ ಪ್ರಾರಂಭಿಸಲು ಗರಂ ಆದರು, ಇನ್ನು ಮಲ್ಲಾಪೂರ ಗ್ರಾಮದಲ್ಲಿ ಕೆಲಸ ಕೊಡದೇ ಇರುವ ಪಿಡಿಓ ಲಕ್ಷ್ಮೀ ಗೋಡಿ ಅವರಿಗೆ ಕಾರಣ ಕೇಳಿದ ಅವರು ನೀವು ಬಂದಾಗಿನಿಂದ 0% ಮಾನವ ದಿನಗಳು ಸೃಜನೆ ಆಗಿವೆ ಅಂತಾ ಗರಂ ಆದರು ಗ್ರಾಮ ಪಂಚಾಯತಿ ಮಟ್ಟದಲ್ಲಿ ಗ್ರಾಮ ಸಭೆಗಳನ್ನು ( ನಿತಿಸಂಹಿತೆ ) ಮುಗಿದ ಬಳಿಕ ನಿಯಮಾನುಸಾರ ಮಾಡಿ ಪಂಚತಂತ್ರದಲ್ಲಿ ಅಳವಡಿಸಬೇಕು” ಎಂದು ಸೂಚಿಸಿದರು.
“ಇನ್ನು ಸ್ವಚ್ಛ ಭಾರತ ಮಷಿನ್ ಅಡಿ ಎಲ್ಲಾ ಗ್ರಾಮ ಪಂಚಾಯತಿ ಯಲ್ಲಿ SWM ಘಟಕ ಇರಲೇ ಬೇಕು. ಯಾವ ಗ್ರಾಮ ಪಂಚಾಯತಿಯಲ್ಲಿ ಇಲ್ಲಾ, ಅದನ್ನು ಹೆಚ್ಚುವರಿ ಕ್ರೀಯಾ ಯೋಜನೆಯಡಿಯಲ್ಲಿ ಅಳವಡಿಸಿ ಕೊಳ್ಳಲು ತಿಳಿಸಿದರು. SWM ವಾಹನಕ್ಕೆ ಪ್ರತಿ ಗ್ರಾಮದಲ್ಲಿ ಮಹಿಳಾ ಚಾಲಕರು ಇರಬೇಕು. ಇಲ್ಲದಿದ್ದರೆ ಕೂಡಲೇ ತೆಗದುಕೊಳ್ಳಲು ಸೂಚಿಸಿದರು. ಇನ್ನುಳಿದ ವಿಷಯಗಳ ಕುರಿತು ಪರಿಶೀಲನೆ ನಡೆಸಿದ ಅವರು ಸಂಜೀವಿನಿ ಯೋಜನೆ, ಹೌಸಿಂಗ್, BRS, ವಸತಿ ಯೋಜನೆ, ಸಕಾಲ ಸೇರಿದಂತೆ ಹಲವು ವಿಷಯಗಳ ಕುರಿತು ಪ್ರಗತಿ ಪರಿಶೀಲನೆ ನಡೆಸಿ ಒಂದು ವಾರದ ಒಳಗೆ ಪ್ರಗತಿ ಸಾಧಿಸಲು ಸೂಚನೆ ನೀಡಿದರು.
ಕಾರ್ಯಕ್ರಮ ವನ್ನು ಸಹಾಯಕ ನಿರ್ದೇಶಕರಾದ (ಪಂಚಾಯತ ರಾಜ್) ಶಿವನಗೌಡ ಮೆಣಸಗಿ ಸ್ವಾಗತಿಸಿ ವಂದಿಸಿದರು, ಈ ಸಂದರ್ಭದಲ್ಲಿ ಮಾನ್ಯ ಉಪ ಕಾರ್ಯದರ್ಶಿಗಳಾದ ಸಿ, ಆರ್ ಮುಂಡರಗಿ,ಜಿಲ್ಲಾ ಯೋಜನಾ ನಿರ್ದೇಶಕರಾದ ಎಂ,ವ್ಹಿ, ಚಳಗೇರಿ, ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಚಂದ್ರಶೇಖರ ಬಿ ಕಂದಕೂರ, ತಾಲೂಕ ಪಂಚಾಯತ ಸಹಾಯಕ ಲೆಕ್ಕಾಧಿಕಾರಿಗಳಾದ ದೇವರಾಜ್ ಸಜ್ಜನಶೆಟ್ಟರ, ತಾಲೂಕ ಯೋಜನಾಧಿಕಾರಿಗಳಾದ ಸಿ.ಎಸ್ ನಿಲಗುಂದ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಜಿಲ್ಲಾ ಕಾರ್ಯಕ್ರಮ ಸಮನ್ವಯ ಅಧಿಕಾರಿಗಳು, ಜಿಲ್ಲಾ ಮಾಹಿತಿ ಶಿಕ್ಷಣ ಸಂವಹನ ಅಧಿಕಾರಿಗಳು ಸೇರಿದಂತೆ, ತಾಲೂಕ ವಿಬಿಜಿ-ರಾಮ್-ಜಿ ಸಿಬ್ಬಂದಿಗಳು, ಗ್ರಾಮ ಪಂಚಾಯತಿ ಸಿಬ್ಬಂದಿಗಳು ಸೇರಿದಂತೆ ಗ್ರಾಮಸ್ಥರು ಕೂಲಿ ಕಾರ್ಮಿಕರು ಹಾಜರಿದ್ದರು.





