ಗೋಕರ್ಣ: ಹಾಪ್ಮೂನ್ ಬೀಚ್ನ ದಡದಲ್ಲಿ ನಿಲ್ಲಿಸಿದ್ದ ಜಲಸಾಹಸ ಕ್ರೀಡೆಗಳಿಗೆ ಬಳಸುವ ಎರಡು ಬೋಟ್ಗಳನ್ನು ದುಷ್ಕರ್ಮಿಗಳು ಹರಿದು ಹಾನಿಗೊಳಿಸಿದ್ದು, ಬೋಟ್ ಮಾಲೀಕರಿಗೆ ಸುಮಾರು ₹1.80 ಲಕ್ಷ ನಷ್ಟವಾಗಿದೆ.
ಅಘನಾಶಿನಿ ಗ್ರಾಮದ ಚಂದ್ರಕಾಂತ ಗೋವಿಂದ ಲಕ್ಕುಮನೆ (48) ಅವರು ಪ್ರವಾಸೋದ್ಯಮ ಇಲಾಖೆಯ ಟೆಂಡರ್ ಮೂಲಕ ಬನಾನಾ ಬೋಟ್ ಮತ್ತು ಬಂಪರ್ ಬೋಟ್ ಬಳಸಿ ಜಲಸಾಹಸ ಕ್ರೀಡೆ ನಡೆಸುತ್ತಿದ್ದರು. ಅಕ್ಟೋಬರ್ 11ರಂದು ಸಂಜೆ ಎರಡೂ ಬೋಟ್ಗಳಲ್ಲಿ ರೈಡ್ ನಡೆಸಿದ ಬಳಿಕ ಗೋಕರ್ಣ ಹಾಪ್ಮೂನ್ ಬೀಚ್ನ ದಡದಲ್ಲಿ ಬೋಟ್ಗಳನ್ನು ನಿಲ್ಲಿಸಿ ತೆರಳಿದ್ದರು.
ಈ ಸುದ್ದಿ ಓದಿದ್ದೀರಾ? ಕುಮಟಾ | ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾವಳಿ: ಅಕ್ಟೋಬರ್ 15 ರಿಂದ ಚಾಲನೆ
ಅಕ್ಟೋಬರ್ 11ರ ಸಂಜೆ 6 ಗಂಟೆಯಿಂದ ಅಕ್ಟೋಬರ್ 12ರ ಬೆಳಿಗ್ಗೆ 8 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಕಿಡಿಗೇಡಿಗಳು ಚೂಪಾದ ವಸ್ತುವಿನಿಂದ ಎರಡು ಬೋಟ್ಗಳನ್ನು ಚುಚ್ಚಿ ಹರಿದು ಹಾನಿಗೊಳಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದರಿಂದ ಅವರಿಗೆ ಸುಮಾರು ₹1.80 ಲಕ್ಷ ನಷ್ಟವಾಗಿದೆ ಎಂದು ಚಂದ್ರಕಾಂತ ಲಕ್ಕುಮನೆ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.




