ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ವಳಗೇರಹಳ್ಳಿ ಗ್ರಾಮದಲ್ಲಿ ಜೂಜಾಡುತ್ತಿದ್ದ 12 ಜನರನ್ನು ಬಂಧಿಸಿರುವ ಪೊಲೀಸರು, ₹47,450 ನಗದನ್ನು ವಶಕ್ಕೆ ಪಡೆದಿದ್ದಾರೆ.
- Advertisement -
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ವಿದ್ಯುತ್ ತಂತಿ ತಗುಲಿ ರೈತ ಸಾವು
ಖಚಿತ ಮಾಹಿತಿ ಆಧರಿಸಿ ಸೆನ್ ಠಾಣೆಯ ಡಿವೈಎಸ್ಪಿ ಪರಮಶಿವಮೂರ್ತಿ ಅವರು ಡಿಎಆರ್ ವಾಹನ ಮತ್ತು ಸಿಬ್ಬಂದಿಯೊಂದಿಗೆ ಗ್ರಾಮದ ಚಿಕ್ಕಣ ಎಂಬುವವರಿಗೆ ಸೇರಿದ ತೆಂಗಿನ ತೋಟದಲ್ಲಿ ಜೂಜಾಡುತ್ತಿರುವವರ ಮೇಲೆ ದಾಳಿ ನಡೆಸಿ, ದೇವರಾಜು, ಸುನೀಲ್ ಕುಮಾರ್, ಮೋಹನ್ಕುಮಾರ್, ಮಹೇಶ, ರಂಗಸ್ವಾಮಿ, ಮುರುಳಿ, ಬೆಟ್ಟೇಗೌಡ, ಚಿಕ್ಕೇಗೌಡ, ಪ್ರದೀಪ್, ಚರಣ್, ಜಯರಂಗಶೆಟ್ಟಿ, ಸುರೇಶ್ ಬಂಧಿಸಲಾಗಿದೆ ಎನ್ನಲಾಗಿದೆ.




