ಡಾ.ಬಾಬಾ ಸಾಹೇಬ ಅಂಬೇಡ್ಕರ್ ಆಶಯದಂತೆ ಸಂವಿಧಾನ ಬದ್ಧವಾಗಿ,ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿರುವ ಜಾತಿಗಳ ಜನಸಂಖ್ಯೆಗೆ ಅನುಗುಣವಾಗಿ ಒಳ ಮೀಸಲಾತಿ ಹಂಚಿಕೆ ಮಾಡಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಳೆದ 30ವರ್ಷಗಳಿಂದ ನಿರಂತರ ಜಿಲ್ಲಾ, ರಾಜ್ಯ ಮಟ್ಟದ ಸಂವಾದ,ಚರ್ಚಾಕೂಟ, ಸಮಾವೇಶ, ಮುತ್ತಿಗೆ,ಹಲವಾರು ರೀತಿ ಜನಪರ ಹೋರಾಟ ಹಾಗೂ ನ್ಯಾಯಾಲಯದ ಹೋರಾಟಕ್ಕೆ ರಾಷ್ಟ್ರೀಯ ವಿಷಯವಾಗಿ ಚಳುವಳಿ ಮಾಡಿದ ಪರಿಣಾಮ ದೇಶದ ಸರ್ವೋಚ್ಚ ನ್ಯಾಯಾಲಯದ ಸಂವಿಧಾನ ಪೀಠದಲ್ಲಿ ಒಳಮೀಸಲಾತಿ ಪರವಾಗಿ ತೀರ್ಪು ಬಂದಿದೆ ಎಂದು ಉಡಚಪ್ಪ ಮಳಗಿ ಹರ್ಷ ವ್ಯಕ್ತಪಡಿದರು.
ಹಾವೇರಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಮತ್ತು ಹಿಂದುಳಿದ ವರ್ಗ, ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ(ರಿ)ಯ ವತಿಯಿಂದ ದೇಶದ ಸರ್ವೋಚ್ಚ ನ್ಯಾಯಾಲಯದ ಸಂವಿಧಾನ ಪೀಠದಲ್ಲಿ ಒಳಮೀಸಲಾತಿ ಪರವಾಗಿ ತೀರ್ಪು ನೀಡಿದನ್ನು ಸ್ವಾಗತಿಸಿ ಸಿಹಿ ಹಂಚಿ ಡಿ ಎಸ್ ಎಸ್ ರಾಜ್ಯ ಸದಸ್ಯರಾದ ಉಡಚಪ್ಪ ಮಾಳಗಿ ಮಾತನಾಡಿದರು.
ಇಂತಹ ಐತಿಹಾಸಿಕ ತೀರ್ಪು ನೀಡಿದ ಸಂವಿಧಾನ ಪೀಠದ 7ಜನ ನ್ಯಾಯಾಧೀಶರಿಗೆ, ನ್ಯಾಯಾಲಯದಲ್ಲಿ ಹೋರಾಟ ನಡೆಸಿದ ಸಂಘಟನೆಗಳಿಗೆ, ಜನಪರ ಚಳುವಳಿಯಲ್ಲಿ ಭಾಗವಹಿಸಿದ ದಲಿತ ಚಳುವಳಿ ಹಾಗೂ ಇನ್ನಿತರ ಸಾಮಾಜಿಕ ಪರಿವರ್ತನೆಯ ಸಂಘಟನೆಗಳ ಎಲ್ಲ ಪದಾಧಿಕಾರಿಗಳಿಗೆ ಹಾಗೂ ಕಾರ್ಯಕರ್ತರಿಗೆ ಅಭಿನಂದನೆಗಳನ್ನು ಸಲ್ಲಿಸಲಾಗುವುದು ಎಂದು ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಗವಿಸಿದ್ದಪ್ಪ ದ್ಯಾಮಣ್ಣನವರ,ಎಂ ಆಂಜನೇಯ ಮಂಜಪ್ಪ ಮಾರೋಳ, ವೈ.ಎನ್.ಮಾಸೂರ, ಜಗದೀಶ್ ಹರಿಜನ,ಶಿವು ಮುದಿಮಲ್ಲಣ್ಣವರ, ಶ್ರೀಮತಿ ರೇಣುಕಾ ಬಡಕಣ್ಣವರ, ಮಂಜುನಾಥ್ ದೊಡ್ಡಮರಿಯಮ್ಮನವರ, ಮಹೇಶಪ್ಪ ಶಾಕಾರ, ಬಸವಣ್ಣಪ್ಪ ಅರಳಿಹಳ್ಳಿ, ಶಂಭುಲಿಂಗಪ್ಪ ದಿವಟರ, ಕೃಷ್ಣಕಾಂತ ಹೊಳಿಯಪ್ಪನವರ, ಮಂಜುನಾಥ್ ಮಾಸೂರ, ಹನಮಂತಪ್ಪ ಹೌಶಿ, ಗೀತಾ ಹಳೆಶಿಡೆನೂರ, ರತ್ನವ್ವ ದೊಡ್ಡಮನಿ ಇತರರು ಇದ್ದರು.
ವರದಿ : ಜಗದೀಶ ಹರಿಜನ, ಸಿಟಿಝನ್ ಜರ್ನಲಿಸ್ಟ್