ಗೋಕುಲ್ ಡೇರಿ ಚುನಾವಣೆಯಲ್ಲಿ ಮೋಸದ ಗೆಲುವು ಬಿಜೆಪಿಗೆ ಮುಳುವಾಗುವುದೇ?

Date:

ಮಹಾರಾಷ್ಟ್ರದ ಅತಿದೊಡ್ಡ ಡೇರಿಗಳಲ್ಲಿ ಒಂದಾದ ‘ಗೋಕುಲ್’ನ ನಿಯಂತ್ರಣ ಸಾಧಿಸಲು ಆಡಳಿತಾರೂಢ ‘ಮಹಾಯುತಿ’ ಮೈತ್ರಿಕೂಟ ಯಶಸ್ವಿಯಾಗಿದೆ. ಆದರೆ, ಪ್ರತಿಪಕ್ಷಗಳ ಎದುರು ಚುನಾವಣೆಯಲ್ಲಿ ಸೋತ ಕೆಲವೇ ವಾರಗಳಲ್ಲಿ ಸರ್ಕಾರಿ ಆದೇಶದ (ಸುಗ್ರೀವಾಜ್ಞೆ) ಮೂಲಕ ಅಧಿಕಾರ ಹಿಡಿದಿರುವುದು ಮಿತ್ರಪಕ್ಷಗಳಾದ ಬಿಜೆಪಿ ಮತ್ತು ಶಿವಸೇನೆ ಪಾಳಯದಲ್ಲೇ ಅಸಮಾಧಾನದ ಹೊಗೆಯಾಡಲು ಕಾರಣವಾಗಿದೆ.

- Advertisement -

ನವೆಂಬರ್ 10 ರಂದು ನಡೆದ ಡೇರಿ ಅಧ್ಯಕ್ಷರ ಚುನಾವಣೆಯಲ್ಲಿ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (NCP) ನಾಯಕ ರಾಜೇಶ್ ಪಾಟೀಲ್ ಅವರು 16-13 ಮತಗಳ ಅಂತರದಿಂದ ಆಯ್ಕೆಯಾಗಿದ್ದಾರೆ. ಅಕ್ಟೋಬರ್ 19 ರಂದು ನಡೆದಿದ್ದ ಆಡಳಿತ ಮಂಡಳಿ ಚುನಾವಣೆಯಲ್ಲಿ ‘ಮಹಾಯುತಿ’ ಮೈತ್ರಿಕೂಟವು 12-13 ಮತಗಳಿಂದ ಸೋಲು ಕಂಡಿತ್ತು. ಆದರೆ, ಇತ್ತೀಚೆಗಷ್ಟೇ ಸರ್ಕಾರವು ತಾನು ನಾಮನಿರ್ದೇಶನ ಮಾಡುವ ನಾಲ್ವರು ನಿರ್ದೇಶಕರಿಗೆ ‘ಮತದಾನದ ಹಕ್ಕು’ ಕಲ್ಪಿಸುವ ಸುಗ್ರೀವಾಜ್ಞೆಯನ್ನು ಜಾರಿಗೆ ತಂದಿತ್ತು. ಈ ಹೆಚ್ಚುವರಿ ಮತಗಳ ಬಲದಿಂದ ಆಡಳಿತಾರೂಢ ಮೈತ್ರಿಕೂಟವು ಈಗ ಡೇರಿಯ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸೋನಿಯಾ ಗಾಂಧಿ ಎಂಬ ಸೋಜಿಗ! ರಾಜಕೀಯ ನಾಯಕತ್ವದ ಹಿಂದಿನ...

ದಿನೇಶ್ ಅಮೀನ್ ಮಟ್ಟು ಅವರು ಪ್ರಸ್ತಾಪಿಸಿದ ನಾಲ್ಕು ಆಯಾಮಗಳು ನನ್ನನ್ನು ವೈಯಕ್ತಿಕವಾಗಿ ಬಹಳವಾಗಿ ಪ್ರಭಾವಿಸಿದವು. ಸೋನಿಯಾ ಗಾಂಧಿ ಒಬ್ಬ ಮಹಿಳೆಯಾಗಿ, ಒಬ್ಬ ವಿಧವೆಯಾಗಿ, ಅಲ್ಪಸಂಖ್ಯಾತ ಕ್ರಿಶ್ಚಿಯನ್ ಧಾರ್ಮಿಕ ಹಿನ್ನೆಲೆಯ ಮಹಿಳೆಯಾಗಿ ಮತ್ತು ವಿದೇಶಿ...

ಬಿತ್ತನೆ ಗುರಿ ಅರ್ಧದಷ್ಟೂ ಮುಟ್ಟದ ಕೃಷಿ ಚಟುವಟಿಕೆ; ಜೋಳದ...

ಮುಂಗಾರು ಮಳೆ ಕೈಕೊಟ್ಟು ಬೆಳೆ ನಷ್ಟದಿಂದ ಕಂಗೆಟ್ಟ ಅನ್ನದಾತರಿಗೆ ಹಿಂಗಾರು ಹಂಗಾಮಿನಲ್ಲಾದರೂ ಮಳೆ ಆಸರೆಯಾಗಬಹುದು ಎಂಬ ನಿರೀಕ್ಷೆಯಿತ್ತು. ಆದರೆ ರೈತರ ಆ ನಿರೀಕ್ಷೆಯೂ ಹುಸಿಯಾಗಿದೆ. ಮುಂಗಾರಿನ ಬೆನ್ನಲ್ಲೇ ಹಿಂಗಾರು ಹಂಗಾಮಿನಲ್ಲೂ ಮಳೆ ಕೈಕೊಟ್ಟಿರುವುದರಿಂದ...

ಧಾರವಾಡದ ‘ಲಲಿತಕಲಾ ಅಕಾಡೆಮಿ’ಗೆ ದುಸ್ಥಿತಿ: ಕಲಾವಿದರಿಂದಲೇ ದೂರವಾದ ಪ್ರಾದೇಶಿಕ...

ಕಲಾವಿದರ ಬಹುದಿನಗಳ ಬೇಡಿಕೆಯಂತೆ ಸ್ಥಾಪನೆಯಾದ ಕೇಂದ್ರಕ್ಕೆ ಮೂರೇ ವರ್ಷಗಳಲ್ಲಿ ದುಸ್ಥಿತಿ; ಸಂಚಾಲಕರ ಏಕಪಕ್ಷೀಯ ಧೋರಣೆ, ಕಲಾವಿದರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದು ಹಾಗೂ ಕಲಾ ಚಟುವಟಿಕೆಗಳ ಕೊರತೆಯ ವಿರುದ್ಧ ಹಿರಿಯ ಕಲಾವಿದರ ಆಕ್ರೋಶ. ಸಲಹಾ ಸಮಿತಿ...

ಆದರೆ, ಈ ಬೆಳವಣಿಗೆಗಳು ಬಿಜೆಪಿಯ ವರ್ಚಸ್ಸಿಗೆ ಧಕ್ಕೆ ತರಬಹುದು ಮತ್ತು ಎನ್‌ಸಿಪಿಯನ್ನು (NCP) ನಂಬಲು ಸಾಧ್ಯವಿಲ್ಲ ಎಂಬ ಕಳವಳವು ಬಿಜೆಪಿ ಸ್ಥಳೀಯ ನಾಯಕರಲ್ಲಿ ಮೂಡಿದೆ. ಸಚಿವರು, ಪದಾಧಿಕಾರಿಗಳು ಹಾಗೂ ತಳಮಟ್ಟದ ಕಾರ್ಯಕರ್ತರು ಸೇರಿದಂತೆ ಹಲವು ಬಿಜೆಪಿ ನಾಯಕರನ್ನು ಮಾತನಾಡಿಸಿದಾಗ ಈ ಅಸಮಾಧಾನ ಹೊರಬಿದ್ದಿದೆ. ಇತ್ತ ಪಶ್ಚಿಮ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿರುವ ಈ ಡೇರಿಯ ರಾಜಕೀಯ ಬೆಳವಣಿಗೆಗಳು ಪಕ್ಷದ ಸಂಘಟನೆಯ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕ ಶಿವಸೇನೆ ನಾಯಕರಲ್ಲೂ ವ್ಯಕ್ತವಾಗಿದೆ.

“ಎನ್‌ಸಿಪಿ ಒತ್ತಡಕ್ಕೆ ಮಣಿದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಅನಗತ್ಯವಾಗಿ ಈ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ ಎಂಬುದು ಪಕ್ಷದೊಳಗಿನ ಚರ್ಚೆಗಳ ಸಾರಾಂಶ. ಕೊನೆಗೆ ಬಿಜೆಪಿ ತೀವ್ರ ಮುಖಭಂಗ ಅನುಭವಿಸಬೇಕಾಯಿತು. ಇದರ ಲಾಭ ಪಡೆದ ಕಾಂಗ್ರೆಸ್, ಸ್ಥಳೀಯ ವಿಷಯವನ್ನು ‘ಮತ ಕಳ್ಳತನ’ ಎಂದು ಆರೋಪಿಸುವ ಮೂಲಕ ರಾಷ್ಟ್ರೀಯ ವಿಷಯವನ್ನಾಗಿ ಪರಿವರ್ತಿಸಿತು” ಎಂದು ಬಿಜೆಪಿಯ ಹಿರಿಯ ಪದಾಧಿಕಾರಿಯೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.

“ಗೋಕುಲ್ ಡೇರಿ ವಿಚಾರದಲ್ಲಿ, ಪಕ್ಷವು ತನ್ನ ಸ್ವಂತ ಪ್ರಭಾವವನ್ನು ಬಲಪಡಿಸಿಕೊಳ್ಳುವ ಬದಲು, ಮೈತ್ರಿಕೂಟದ ಒಗ್ಗಟ್ಟನ್ನು ಕಾಪಾಡಿಕೊಳ್ಳುವುದರತ್ತಲೇ ಹೆಚ್ಚು ಗಮನ ಹರಿಸಿದಂತೆ ಕಾಣುತ್ತಿದೆ” ಎಂದು ಮತ್ತೊಬ್ಬ ಹಿರಿಯ ಪದಾಧಿಕಾರಿ ಹೇಳಿದ್ದಾರೆ. “ಸಹಕಾರಿ ಸಂಸ್ಥೆಯೊಂದರ ಮೇಲೆ ಹಿಡಿತ ಸಾಧಿಸುವುದು ಮತ್ತು ಸ್ವಂತ ರಾಜಕೀಯ ಸಂಘಟನೆಯನ್ನು ಬಲಪಡಿಸಿಕೊಳ್ಳುವುದು ಎರಡು ವಿಭಿನ್ನ ಸಾಧನೆಗಳು. ಮಹಾಯುತಿ ಮೈತ್ರಿಕೂಟ ಇಲ್ಲಿ ಮೊದಲನೆಯದನ್ನು ಸಾಧಿಸಿದರೆ, ಬಿಜೆಪಿ ಎರಡನೆಯದರಲ್ಲಿ ವಿಫಲವಾಗಿದೆ,” ಎಂದು ಪಕ್ಷದ ಆಂತರಿಕ ಮೂಲವೊಂದು ವಿಶ್ಲೇಷಿಸಿದೆ.

ಬಿಜೆಪಿಯ ಹಿರಿಯ ಸಚಿವ ಚಂದ್ರಕಾಂತ್ ಪಾಟೀಲ್ ಮತ್ತು ಎನ್‌ಸಿಪಿಯ ಹಸನ್ ಮುಶ್ರಿಫ್ ಅವರ ಪ್ರಾಬಲ್ಯವೇ ಈ ಚುನಾವಣೆಯಲ್ಲಿ ಮೇಲುಗೈ ಸಾಧಿಸಿದ್ದು, ತಳಮಟ್ಟದ ನಾಯಕರನ್ನು ಕಡೆಗಣಿಸಲಾಗಿದೆ ಎಂದು ಸ್ಥಳೀಯ ಬಿಜೆಪಿ ನಾಯಕರು ಆರೋಪಿಸಿದ್ದಾರೆ. ಕಳೆದ ಅವಧಿಯಲ್ಲಿ ಗೋಕುಲ್ ನಿರ್ದೇಶಕಿಯಾಗಿದ್ದ ಬಿಜೆಪಿಯ ಶೌಮಿಕಾ ಮಹಾಡಿಕ್ ಅವರನ್ನು ಈ ಬಾರಿ ಕಡೆಗಣಿಸಿರುವ ಬಗ್ಗೆ ಅವರು ಬೆರಳು ಮಾಡಿದ್ದಾರೆ.

“ಐದು ವರ್ಷಗಳ ಕಾಲ ಶೌಮಿಕಾ ಮಹಾಡಿಕ್ ಒಕ್ಕೂಟದ ಕಾರ್ಯವೈಖರಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಎತ್ತಿದ್ದರು ಮತ್ತು ಸಹಕಾರಿ ವಲಯದಲ್ಲಿ ಬಿಜೆಪಿ ರಾಜಕೀಯ ನೆಲೆ ಕಂಡುಕೊಳ್ಳಲು ನೆರವಾಗಿದ್ದರು. ಆದರೆ ಚುನಾವಣಾ ಪ್ರಚಾರದ ವೇಳೆ ಅವರನ್ನು ಪಕ್ಷದ ಪ್ರಮುಖ ಸ್ಥಳೀಯ ಮುಖವಾಗಿ ಬಿಂಬಿಸಲಿಲ್ಲ,” ಎಂದು ಸ್ಥಳೀಯ ಬಿಜೆಪಿ ಪದಾಧಿಕಾರಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಾರಿ ಶೌಮಿಕಾ 121 ಮತಗಳ ಅಂತರದಿಂದ ಸೋಲು ಕಂಡಿದ್ದಾರೆ. ಸ್ಥಳೀಯ ನಾಯಕತ್ವವನ್ನು ಬೆಳೆಸುವ ಮತ್ತು ಸಬಲೀಕರಣಗೊಳಿಸುವಲ್ಲಿ ಬಿಜೆಪಿಯ ದೌರ್ಬಲ್ಯವನ್ನು ಇದು ಎತ್ತಿತೋರಿಸುತ್ತದೆ ಎಂದು ಕೆಲವು ನಾಯಕರು ಅಭಿಪ್ರಾಯಪಟ್ಟಿದ್ದಾರೆ.

ಈ ಬೆಳವಣಿಗೆಗಳ ಕುರಿತು ಪ್ರತಿಕ್ರಿಯಿಸಿರುವ ಎನ್‌ಸಿಪಿ ನಾಯಕ ಹಸನ್ ಮುಶ್ರಿಫ್, ಬಿಕ್ಕಟ್ಟನ್ನು ನಿವಾರಿಸಲು ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ಇದರಲ್ಲಿ ಬೇರೆ ಯಾವುದೇ ಹಿತಾಸಕ್ತಿಗಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. “ಈಗ ಈ ವಿಷಯ ಮುಕ್ತಾಯವಾಗಿದೆ,” ಎಂದಿರುವ ಅವರು, ಮೈತ್ರಿಕೂಟದಲ್ಲಿ ಬಿರುಕು ಮೂಡಿಸುವ ಪ್ರಯತ್ನಗಳು ನಡೆಯುತ್ತಿದ್ದು, ಮೂರು ಪಕ್ಷಗಳ ನಡುವೆ ಯಾವುದೇ ವಿವಾದಗಳು ಉಂಟಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದ್ದಾರೆ.

ಗೋಕುಲ್ ಡೇರಿ 2024-25ನೇ ಸಾಲಿನಲ್ಲಿ ಅಂದಾಜು 4,000 ಕೋಟಿ ರೂ. ವಾರ್ಷಿಕ ವಹಿವಾಟು ನಡೆಸಿದೆ. ಇದರ ಜಾಲವು 1,810 ಹಳ್ಳಿಗಳಲ್ಲಿನ 8,009 ಗ್ರಾಮ-ಮಟ್ಟದ ಪ್ರಾಥಮಿಕ ಸಂಘಗಳ ಮೂಲಕ ಸುಮಾರು 4.41 ಲಕ್ಷ ಹಾಲು ಉತ್ಪಾದಕರನ್ನು ಸಂಪರ್ಕಿಸುತ್ತದೆ. ಇದು ಅತ್ಯಂತ ಮಹತ್ವದ ಆರ್ಥಿಕ ಹಾಗೂ ರಾಜಕೀಯ ಸಂಸ್ಥೆಯಾಗಿದ್ದು, ಈ ಭಾಗದಲ್ಲಿ ಪಕ್ಷದ ಕಾರ್ಯಕರ್ತರ ಅಸಮಾಧಾನವನ್ನು ಬಿಜೆಪಿ ನಿರ್ಲಕ್ಷಿಸುವಂತಿಲ್ಲ.

“ಗೋಕುಲ್ ಡೇರಿಯೊಂದಿಗೆ ಸುಮಾರು ಐದು ಲಕ್ಷ ಹಾಲು ಉತ್ಪಾದಕರು ಸಂಪರ್ಕ ಹೊಂದಿದ್ದಾರೆ. ಇವರ ಹಿತಾಸಕ್ತಿಗಳಿಗೆ ಧಕ್ಕೆ ತರುವುದು ನಮ್ಮ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರಬಹುದು. ಇದು ಮಹಾರಾಷ್ಟ್ರದಾದ್ಯಂತ ಆಡಳಿತ ಮೈತ್ರಿಕೂಟವು ಒಂದು ಸೋಲನ್ನೂ ಸಹಿಸಿಕೊಳ್ಳಲಾರದು ಮತ್ತು ಡೇರಿಯ ನಿಯಂತ್ರಣಕ್ಕಾಗಿ ಯಾವುದೇ ಮಟ್ಟಕ್ಕಾದರೂ ಹೋಗಲು ಸಿದ್ಧವಿದೆ ಎಂಬ ತಪ್ಪು ಸಂದೇಶವನ್ನು ರವಾನಿಸಬಹುದು” ಎಂದು ಶಿವಸೇನೆ ನಾಯಕರೊಬ್ಬರು ಕಳವಳ ವ್ಯಕ್ತಪಡಿಸಿದ್ದಾರೆ.

“ಒಂದು ವೇಳೆ ಬಿಜೆಪಿ ಮತ್ತು ಆಡಳಿತ ಮೈತ್ರಿಕೂಟವು ಗೋಕುಲ್ ಅನ್ನು ಕಿತ್ತುಕೊಂಡು ಗುಜರಾತ್ ಮೂಲದ ಅಮುಲ್‌ನಂತಹ ದೊಡ್ಡ ಸಹಕಾರಿ ಸಂಸ್ಥೆಗೆ ಹಸ್ತಾಂತರಿಸಲು ಬಯಸಿದೆ ಎಂಬ ಸಂದೇಶ ಹೋದರೆ, ಅದು ‘ಮರಾಠಿ ಅಸ್ಮಿತೆ’ಯ (ಹೆಮ್ಮೆಯ) ಪ್ರಶ್ನೆಯಾಗಿ ಹೊರಹೊಮ್ಮಬಹುದು. ಇದು ಪಕ್ಷಕ್ಕೆ ನುಂಗಲಾರದ ತುತ್ತಾಗಬಹುದು,” ಎಂದು ಮತ್ತೊಬ್ಬ ನಾಯಕ ಹೇಳಿದ್ದಾರೆ. ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಕೂಡ ಈ ವಿಚಾರದಲ್ಲಿ ಮಧ್ಯಪ್ರವೇಶಿಸಲು ಒಲವು ತೋರಿರಲಿಲ್ಲ ಎಂದು ಹಿರಿಯ ಶಿವಸೇನೆ ನಾಯಕರೊಬ್ಬರು ತಿಳಿಸಿದ್ದಾರೆ.

ಗೋಕುಲ್ ಡೇರಿಯ ಮೇಲಿನ ನಿಯಂತ್ರಣ ಸಾಧಿಸಲು ಮಹಾಯುತಿ ಮೈತ್ರಿಕೂಟ ಕಂಡುಕೊಂಡ ವಾಮಮಾರ್ಗವು, ಸ್ಥಳೀಯವಾಗಿ ಮಿತ್ರಪಕ್ಷಗಳ ಕಾರ್ಯಕರ್ತರು ಮತ್ತು ನಾಯಕರ ನಡುವೆ ಅಸಮಾಧಾನದ ಜ್ವಾಲೆಯನ್ನು ಹೊತ್ತಿಸಿದ್ದು, ಮುಂಬರುವ ದಿನಗಳಲ್ಲಿ ಇದು ಮೈತ್ರಿಕೂಟದ ರಾಜಕೀಯ ಸಮೀಕರಣಗಳ ಮೇಲೆ ಎಂತಹ ಪರಿಣಾಮ ಬೀರಲಿದೆ ಕಾದು ನೋಡಬೇಕಿದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸೋನಿಯಾ ಗಾಂಧಿ ಎಂಬ ಸೋಜಿಗ! ರಾಜಕೀಯ ನಾಯಕತ್ವದ ಹಿಂದಿನ ಮಹಿಳೆಯ ಸವಾಲುಗಳು ಮತ್ತು ಆತ್ಮಸ್ಥೈರ್ಯದ ಪಯಣ

ದಿನೇಶ್ ಅಮೀನ್ ಮಟ್ಟು ಅವರು ಪ್ರಸ್ತಾಪಿಸಿದ ನಾಲ್ಕು ಆಯಾಮಗಳು ನನ್ನನ್ನು ವೈಯಕ್ತಿಕವಾಗಿ...

ಗಾಂಧಿ ಕುಟುಂಬದ ಬಗ್ಗೆ ವಿವಾದಾತ್ಮಕ ಪೋಸ್ಟ್: ಕಂಗನಾ ವಿರುದ್ಧ FIR ದಾಖಲು!

ಗಾಂಧಿ ಕುಟುಂಬದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಮತ್ತು ಪ್ರಚೋದನಕಾರಿ ಪೋಸ್ಟ್...

ಗುಜರಾತ್‌ನಲ್ಲಿ ಭೀಕರ ಜಾತಿ ದೌರ್ಜನ್ಯ: ಕಳ್ಳತನದ ಶಂಕೆಯ ಮೇಲೆ ದಲಿತ ಯುವಕನ ಹತ್ಯೆ

ಕಳ್ಳತನದ ಶಂಕೆಯ ಮೇಲೆ ದಲಿತ ಯುವಕ ಮತ್ತು ಆತನ ಸ್ನೇಹಿತನನ್ನು ಅಪಹರಿಸಿ,...

ಬೀದರ್‌ | ನಮ್ಮ ನಾಡಿನ ಸಂಸ್ಕೃತಿಯ ತಾಯಿಬೇರು ಜಾನಪದ: ಹಾವಗಿರಾವ ಮೈಲಾರೆ

ಜಾನಪದವು ನಮ್ಮ ನಾಡಿನ ಸಂಸ್ಕೃತಿ, ಪರಂಪರೆ ಹಾಗೂ ನೆಲಮೂಲದ ಬದುಕಿನ ಪ್ರತಿಬಿಂಬವಾಗಿದೆ....