ಜೈಲಿನಲ್ಲೇ ಘೋರ ಕೃತ್ಯ: ವಿಚಾರಣಾಧೀನ ಕೈದಿ ಮೇಲೆ 3 ಬಾರಿ ಸಾಮೂಹಿಕ ಅತ್ಯಾಚಾರ; ಜೈಲು ಅಧೀಕ್ಷಕ ಸೇರಿ 19 ಮಂದಿ ವಿರುದ್ಧ FIR

Date:

20 ವರ್ಷದ ವಿಚಾರಣಾಧೀನ ಕೈದಿಯೊಬ್ಬನಿಗೆ ಮಾದಕ ದ್ರವ್ಯ ಕುಡಿಸಿ, ಮೂರು ಬಾರಿ ಸಾಮೂಹಿಕವಾಗಿ ಅಸ್ವಾಭಾವಿಕ ಲೈಂಗಿಕ ದೌರ್ಜನ್ಯ ಎಸಗಿರುವ ಅತ್ಯಂತ ಹೇಯ, ಆಘಾತಕಾರಿ ಘಟನೆ ಜಾರ್ಖಂಡ್ ರಾಜಧಾನಿ ರಾಂಚಿಯ ಹೊತ್ವಾರ್‌ನಲ್ಲಿರುವ ಬಿರ್ಸಾ ಮುಂಡಾ ಕೇಂದ್ರ ಜೈಲಿನಲ್ಲಿ  ನಡೆದಿದೆ. ಭೀಕರ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಜೈಲು ಅಧೀಕ್ಷಕರು, ವಾರ್ಡ್ ಇನ್-ಚಾರ್ಜ್, ಜೈಲು ವೈದ್ಯಾಧಿಕಾರಿ ಹಾಗೂ 16 ಮಂದಿ ಕೈದಿಗಳ ವಿರುದ್ಧ ರಾಂಚಿಯ ಖೇಲ್‌ಗಾಂವ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

- Advertisement -

ಪ್ರಕರಣವೊಂದರಲ್ಲಿ ವಿಚಾರಣಾಧೀನ ಕೈದಿಯಾಗಿದ್ದ ಸಂತ್ರಸ್ತ ಯುವಕನ್ನು ನಿರ್ದೋಷಿಯೆಂದು ಘೋಷಿಸಿದ್ದ ನ್ಯಾಯಾಲಯವು, ಇದೇ ವರ್ಷದ ಜೂನ್ 12ರಂದು ಬಿಡುಗಡೆ ಮಾಡಿತ್ತು. ಜೈಲಿನಿಂದ ಹೊರಬಂದ ಯುವಕ, ತಾನು ಜೈಲಿನಲ್ಲಿದ್ದಾಗ ಎದುರಿಸಿದ್ದ ಭೀಕರ ದೌರ್ಜನ್ಯಗಳಿಂದಾಗಿ, ತೀವ್ರ ಮಾನಸಿಕ ಆಘಾತಕ್ಕೆ ಒಳಗಾಗಿದ್ದರು. ಸಾಕಷ್ಟು ದಿನಗಳ ಕಾಲ ಮೌನವಾಗಿದ್ದ ಸಂತ್ರಸ್ತ, ಇತ್ತೀಚೆಗೆ ತನ್ನ ಕುಟುಂಬದವರ ಬಳಿ ತನ್ನ ಮೇಲಾದ ಅಮಾನವೀಯ ದೌರ್ಜನ್ಯದ ಕುರಿತು ಹೇಳಿಕೊಂಡಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸೋನಿಯಾ ಗಾಂಧಿ ಎಂಬ ಸೋಜಿಗ! ರಾಜಕೀಯ ನಾಯಕತ್ವದ ಹಿಂದಿನ...

ದಿನೇಶ್ ಅಮೀನ್ ಮಟ್ಟು ಅವರು ಪ್ರಸ್ತಾಪಿಸಿದ ನಾಲ್ಕು ಆಯಾಮಗಳು ನನ್ನನ್ನು ವೈಯಕ್ತಿಕವಾಗಿ ಬಹಳವಾಗಿ ಪ್ರಭಾವಿಸಿದವು. ಸೋನಿಯಾ ಗಾಂಧಿ ಒಬ್ಬ ಮಹಿಳೆಯಾಗಿ, ಒಬ್ಬ ವಿಧವೆಯಾಗಿ, ಅಲ್ಪಸಂಖ್ಯಾತ ಕ್ರಿಶ್ಚಿಯನ್ ಧಾರ್ಮಿಕ ಹಿನ್ನೆಲೆಯ ಮಹಿಳೆಯಾಗಿ ಮತ್ತು ವಿದೇಶಿ...

ಬಿತ್ತನೆ ಗುರಿ ಅರ್ಧದಷ್ಟೂ ಮುಟ್ಟದ ಕೃಷಿ ಚಟುವಟಿಕೆ; ಜೋಳದ...

ಮುಂಗಾರು ಮಳೆ ಕೈಕೊಟ್ಟು ಬೆಳೆ ನಷ್ಟದಿಂದ ಕಂಗೆಟ್ಟ ಅನ್ನದಾತರಿಗೆ ಹಿಂಗಾರು ಹಂಗಾಮಿನಲ್ಲಾದರೂ ಮಳೆ ಆಸರೆಯಾಗಬಹುದು ಎಂಬ ನಿರೀಕ್ಷೆಯಿತ್ತು. ಆದರೆ ರೈತರ ಆ ನಿರೀಕ್ಷೆಯೂ ಹುಸಿಯಾಗಿದೆ. ಮುಂಗಾರಿನ ಬೆನ್ನಲ್ಲೇ ಹಿಂಗಾರು ಹಂಗಾಮಿನಲ್ಲೂ ಮಳೆ ಕೈಕೊಟ್ಟಿರುವುದರಿಂದ...

ಧಾರವಾಡದ ‘ಲಲಿತಕಲಾ ಅಕಾಡೆಮಿ’ಗೆ ದುಸ್ಥಿತಿ: ಕಲಾವಿದರಿಂದಲೇ ದೂರವಾದ ಪ್ರಾದೇಶಿಕ...

ಕಲಾವಿದರ ಬಹುದಿನಗಳ ಬೇಡಿಕೆಯಂತೆ ಸ್ಥಾಪನೆಯಾದ ಕೇಂದ್ರಕ್ಕೆ ಮೂರೇ ವರ್ಷಗಳಲ್ಲಿ ದುಸ್ಥಿತಿ; ಸಂಚಾಲಕರ ಏಕಪಕ್ಷೀಯ ಧೋರಣೆ, ಕಲಾವಿದರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದು ಹಾಗೂ ಕಲಾ ಚಟುವಟಿಕೆಗಳ ಕೊರತೆಯ ವಿರುದ್ಧ ಹಿರಿಯ ಕಲಾವಿದರ ಆಕ್ರೋಶ. ಸಲಹಾ ಸಮಿತಿ...

ಸಂತ್ರಸ್ತ ಯುವಕನ ಹೇಳಿಕೆಯ ಆಧಾರದ ಮೇಲೆ ಆತನ ತಂದೆ ನವೆಂಬರ್ 12ರಂದು ಖೇಲ್‌ಗಾಂವ್ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ದಾಖಲಿಸಿದ್ದಾರೆ. ದೂರಿನ ಪ್ರಕಾರ, ಜೈಲಿನಲ್ಲಿದ್ದ ಆರೋಪಿ ಕೈದಿಗಳ ಗುಂಪೊಂದು ಸಂತ್ರಸ್ತ ಯುವಕನನ್ನು ಗುರಿಯಾಗಿಸಿಕೊಂಡು ಮೂರು ಪ್ರತ್ಯೇಕ ಸಂದರ್ಭಗಳಲ್ಲಿ ಅತ್ಯಂತ ವಿಕೃತವಾಗಿ ಲೈಂಗಿಕ ದೌರ್ಜನ್ಯ ಎಸಗಿದೆ. ಮೊದಲ ಘಟನೆಯಲ್ಲಿ, ಆರೋಪಿ ಕೈದಿಗಳು ಯುವಕನಿಗೆ ಬಲವಂತವಾಗಿ ಸೀರೆ ಉಡಿಸಿ, ಮೇಕಪ್ ಮಾಡಿ ಮಹಿಳೆಯಂತೆ ವೇಷ ಹಾಕಿಸಿದ್ದರು. ನಂತರ ಆತನಿಗೆ ಪ್ರಜ್ಞೆ ತಪ್ಪುವಂತಹ ಅಮಲು ಪದಾರ್ಥವನ್ನು ಕುಡಿಸಿ, ವಾರ್ಡ್ ಸಂಖ್ಯೆ 3-Aಗೆ ಎಳೆದೊಯ್ದು ಸಾಮೂಹಿಕವಾಗಿ ಅಸ್ವಾಭಾವಿಕ ಲೈಂಗಿಕ ದೌರ್ಜನ್ಯ ನಡೆಸಿದ್ದರು. ಇದಾದ ಬಳಿಕ, ರಾಮನವಮಿ ಹಬ್ಬದ ಆಸುಪಾಸಿನಲ್ಲಿ ಮತ್ತೆ ಅದೇ ರೀತಿ ಯುವಕನಿಗೆ ಮಹಿಳೆಯ ವೇಷ ಹಾಕಿಸಿ, ಮಾದಕ ದ್ರವ್ಯ ನೀಡಿ ವಾರ್ಡ್ ಸಂಖ್ಯೆ 3ರಲ್ಲಿ ಎರಡನೇ ಬಾರಿಗೆ ಸಾಮೂಹಿಕ ಅತ್ಯಾಚಾರ ಎಸಗಲಾಗಿತ್ತು. ಮೂರನೇ ಬಾರಿ, ಸರಹುಲ್ ಹಬ್ಬದ ಸಂದರ್ಭದಲ್ಲೂ ಯುವಕನನ್ನು ವಾರ್ಡ್ ಸಂಖ್ಯೆ 4 ಮತ್ತು 5ರ ಸಮೀಪಕ್ಕೆ ಎಳೆದೊಯ್ದು ಬರ್ಬರವಾಗಿ ಲೈಂಗಿಕ ದೌರ್ಜನ್ಯ ಎಸಗಿತ್ತು ಎಂದು ಆರೋಪಿಸಲಾಗಿದೆ.

ಈ ಲೇಖನ ಓದಿದ್ದೀರಾ?: ಟ್ರಂಪ್‌ ಸೊಕ್ಕು ಮುರಿದ ಅಮೆರಿಕನ್ನರು; ಸರ್ವಾಧಿಕಾರದ ಮದಕ್ಕೆ ಜನಾದೇಶದ ಪೆಟ್ಟು!

ಸಂತ್ರಸ್ತ ಯುವಕ ತನ್ನ ಮೇಲೆ ನಡೆಯುತ್ತಿದ್ದ ಈ ದೌರ್ಜನ್ಯದ ಕುರಿತು ಜೈಲಿನ ವಾರ್ಡ್ ಇನ್-ಚಾರ್ಜ್‌ಗೆ ಲಿಖಿತ ದೂರು ನೀಡಿದ್ದರೂ, ಯಾವುದೇ ಕ್ರಮ ಕೈಗೊಂಡಿರಿಲ್ಲ. ಬದಲಾಗಿ, ಆ ದೂರಿನ ಪತ್ರವನ್ನು ಹರಿದು ಹಾಕಿ ಯುವಕನ ಮೇಲೆಯೇ ಹಲ್ಲೆ ನಡೆಸಲಾಗಿತ್ತು ಎಂದೂ ಆರೋಪಿಸಲಾಗಿದೆ.

ಅಲ್ಲದೆ, ದೌರ್ಜನ್ಯದಿಂದ ಯುವಕನಿಗೆ ತೀವ್ರ ನೋವು ಮತ್ತು ಗಾಯಗಳಾಗಿದ್ದರೂ ಜೈಲು ಆಸ್ಪತ್ರೆಯ ವೈದ್ಯಾಧಿಕಾರಿಗಳು ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡಲು ನಿರಾಕರಿಸಿದ್ದಾರೆ. ಜೂನ್ 12ರಂದು ಯುವಕ ಜೈಲಿನಿಂದ ಬಿಡುಗಡೆಯಾಗುವ ಸಂದರ್ಭದಲ್ಲಿ ನಿಯಮಾನುಸಾರ ನಡೆಸಬೇಕಾದ ಕಡ್ಡಾಯ ವೈದ್ಯಕೀಯ ತಪಾಸಣೆಯನ್ನೂ ಮಾಡದೆ ಜೈಲು ಅಧಿಕಾರಿಗಳು ಕರ್ತವ್ಯ ಲೋಪ ಎಸಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸೋನಿಯಾ ಗಾಂಧಿ ಎಂಬ ಸೋಜಿಗ! ರಾಜಕೀಯ ನಾಯಕತ್ವದ ಹಿಂದಿನ ಮಹಿಳೆಯ ಸವಾಲುಗಳು ಮತ್ತು ಆತ್ಮಸ್ಥೈರ್ಯದ ಪಯಣ

ದಿನೇಶ್ ಅಮೀನ್ ಮಟ್ಟು ಅವರು ಪ್ರಸ್ತಾಪಿಸಿದ ನಾಲ್ಕು ಆಯಾಮಗಳು ನನ್ನನ್ನು ವೈಯಕ್ತಿಕವಾಗಿ...

ಗಾಂಧಿ ಕುಟುಂಬದ ಬಗ್ಗೆ ವಿವಾದಾತ್ಮಕ ಪೋಸ್ಟ್: ಕಂಗನಾ ವಿರುದ್ಧ FIR ದಾಖಲು!

ಗಾಂಧಿ ಕುಟುಂಬದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಮತ್ತು ಪ್ರಚೋದನಕಾರಿ ಪೋಸ್ಟ್...

ಗುಜರಾತ್‌ನಲ್ಲಿ ಭೀಕರ ಜಾತಿ ದೌರ್ಜನ್ಯ: ಕಳ್ಳತನದ ಶಂಕೆಯ ಮೇಲೆ ದಲಿತ ಯುವಕನ ಹತ್ಯೆ

ಕಳ್ಳತನದ ಶಂಕೆಯ ಮೇಲೆ ದಲಿತ ಯುವಕ ಮತ್ತು ಆತನ ಸ್ನೇಹಿತನನ್ನು ಅಪಹರಿಸಿ,...

ಬೀದರ್‌ | ನಮ್ಮ ನಾಡಿನ ಸಂಸ್ಕೃತಿಯ ತಾಯಿಬೇರು ಜಾನಪದ: ಹಾವಗಿರಾವ ಮೈಲಾರೆ

ಜಾನಪದವು ನಮ್ಮ ನಾಡಿನ ಸಂಸ್ಕೃತಿ, ಪರಂಪರೆ ಹಾಗೂ ನೆಲಮೂಲದ ಬದುಕಿನ ಪ್ರತಿಬಿಂಬವಾಗಿದೆ....