ಮುಂಗಾರು ಹಂಗಾಮಿನಲ್ಲಿ ಬೆಳೆ ಹಾನಿಗೊಳಗಾದ ರೈತರಿಗೆ ಪರಿಹಾರ ವಿತರಿಸುವ ಪ್ರಕ್ರಿಯೆ ಆರಂಭವಾಗಿದ್ದು, ಮೊದಲ ಹಂತದಲ್ಲಿ ಧಾರವಾಡ ಜಿಲ್ಲೆಯ 47,002 ರೈತರಿಗೆ ₹11.75 ಕೋಟಿ ಪರಿಹಾರ ಪಾವತಿಸಲು ಅನುಮೋದನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಸ್ನೇಹಲ್ ತಿಳಿಸಿದ್ದಾರೆ.
ಜಿಲ್ಲೆಯ ಒಟ್ಟು 44,400 ಹೆಕ್ಟೇರ್ ಪ್ರದೇಶದ ಬೆಳೆ ಹಾನಿಗೆ ಸಂಬಂಧಿಸಿದಂತೆ ಮೊದಲ ಕಂತಿನ ಪರಿಹಾರ ವಿತರಿಸಲಾಗುತ್ತಿದೆ. ಪ್ರಸ್ತುತ ಪ್ರತಿ ರೈತರಿಗೆ ಗರಿಷ್ಠ ₹2,500ರ ವರೆಗೆ ಪರಿಹಾರ ನೀಡಲು ನಿರ್ಧರಿಸಲಾಗಿದೆ.
ಕೇಂದ್ರ ಸರ್ಕಾರದಿಂದ ಎನ್ಡಿಆರ್ಎಫ್ ಅನುದಾನ ಬಿಡುಗಡೆಯಾಗುವ ನಿರೀಕ್ಷೆಯಿದ್ದು, ಸದ್ಯಕ್ಕೆ ಮೊದಲ ಕಂತಿನ ಹಣ ಪಾವತಿಸಲಾಗುತ್ತಿದೆ.ತಾಲೂಕುವಾರು ಪರಿಹಾರದ ವಿವರ
ಧಾರವಾಡ: 1,408 ರೈತರಿಗೆ ₹2.85 ಕೋಟಿ
ಅಳ್ನಾವರ: 958 ರೈತರಿಗೆ ₹23.95 ಲಕ್ಷ
ಹುಬ್ಬಳ್ಳಿ: 6,373 ರೈತರಿಗೆ ₹1.58 ಕೋಟಿ
ಹುಬ್ಬಳ್ಳಿ ನಗರ: 1,525 ರೈತರಿಗೆ ₹38.12 ಲಕ್ಷ
ಕಲಘಟಗಿ: 6,944 ರೈತರಿಗೆ ₹1.73 ಕೋಟಿ
ಕುಂದಗೋಳ: 9,790 ರೈತರಿಗೆ ₹2.44 ಕೋಟಿ
ನವಲಗುಂದ: 6,739 ರೈತರಿಗೆ ₹1.69 ಕೋಟಿ
ಅಣ್ಣಿಗೇರಿ: 3,247 ರೈತರಿಗೆ ₹81.17 ಲಕ್ಷ
ರೈತರ ಆಧಾರ್ ಸಂಖ್ಯೆ ಜೋಡಣೆಯಾಗಿರುವ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಪರಿಹಾರದ ಹಣ ಜಮೆ ಮಾಡಲಾಗುತ್ತದೆ. ಪರಿಹಾರ ಪಾವತಿ ಹಾಗೂ ಸಂಬಂಧಿತ ಮಾಹಿತಿಗಾಗಿ ರೈತರು ತಮ್ಮ ವ್ಯಾಪ್ತಿಯ ತಹಶೀಲ್ದಾರ್ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.




