ಹಾವೇರಿ | ಮನಗೆದ್ದ ಎರಡು ನಾಟಕಗಳು: ಹಾಸ್ಟೇಲ್ ಹಾಸ್ಟೇಲ್ ಮತ್ತು ಮೂಕಿ ಟಾಕಿ 

Date:

ಹಾವೇರಿ ಗುರು ಭವನದಲ್ಲಿ ಎರಡು ದಿನಗಳ ಕಾಲ ಜರುಗಿದ ರಾಜ್ಯ ಮಟ್ಟದ ಹಾಸ್ಟೇಲ್ ವಿದ್ಯಾರ್ಥಿಗಳ ಸಮಾವೇಶದಲ್ಲಿ ವಿಚಾರದ ಜೊತೆಗೆ ರಂಜನೆಯನ್ನು ನೀಡುವ ಎರಡು ನಾಟಕಗಳು ಪ್ರದರ್ಶನಗೊಂಡವು. 

- Advertisement -

ಮೊದಲ ನಾಟಕ ‘ಹಾಸ್ಟೇಲ್ ಹಾಸ್ಟೇಲ್’ ನಾಟಕ ಈಗಿರುವ ವ್ಯವಸ್ಥೆಯಲ್ಲಿ ಅನುದಾನವನ್ನು ಹೆಚ್ಚಿಸುವ ಕುರಿತದ್ದಾಗಿತ್ತು. ‘ಬೇಕೆ ಬೇಕು ನ್ಯಾಯಾ ಬೇಕು’ ಎಂದು ಪ್ರತಿಭಟನೆಯೊಂದಿಗೆ ಆರಂಭವಾಗುವ ನಾಟಕ ನಂತರ ನಾನಾ ತಿರುವುಗಳನ್ನು ಪಡೆಯುತ್ತದೆ. ಅಲ್ಲಿಗೆ ಆಗಮಿಸಿದ ಪತ್ರಕರ್ತ ಪ್ರತಿಭಟನಾಕಾರರನ್ನು ಶಾಸಕರ ಬಳಿ ಕರೆದೊಯ್ದು ಸಮಸ್ಯೆಗಳ ಪರಿಹಾರಕ್ಕೆ ಹೊಸ ಆಯಾಮ ನೀಡುತ್ತಾನೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಟ್ಟದಷ್ಟಾದ ಅತ್ಯಾಚಾರ ಪ್ರಕರಣಗಳು – ತೆವಳುತ್ತಿರುವ ನ್ಯಾಯದಾನ

ಪೊಲೀಸರೆಂದು ನಟಿಸಿ ಬೆದರಿಸುವುದು, ನಿರ್ಜನ ಪ್ರದೇಶಗಳಲ್ಲಿ ತೋಳಗಳಂತೆ ಕಾದು ಹಲ್ಲೆಗೈದು ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದೆಸೆಯುವುದು, ಕಿಂಚಿತ್ತೂ ಭಯವಿಲ್ಲದೆ ಕೃತ್ಯದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಲ್ಲದೆ, ಸಂತ್ರಸ್ತರ ಗುರುತು ಬಹಿರಂಗಪಡಿಸುವ ಪ್ರವೃತ್ತಿ...

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ ಕಲ್ಪಿತ ಬಲವನ್ನು ಮೀರಿ, ಬಸವಂತಪ್ಪ ಬೆಳೆಯಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ. ಪೌರಕಾರ್ಮಿಕರ ಮಗನಾಗಿ ಹುಟ್ಟಿ, ಸಚಿವ ಸ್ಥಾನದವರೆಗೆ ಬೆಳೆದವರು ಕೆ.ಎಸ್....

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ,...

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎದೆ ತಟ್ಟಿಕೊಳ್ಳುತ್ತಿದೆ. ಶತೃ ದೇಶವನ್ನು ಮಣಿಸುವುದು ಯಾರಿಗಾದರೂ ಹೆಮ್ಮೆಯೇ. ಆದರೆ, ದೇಶದ ಅಖಂಡತೆಗೆ ಅತಿ...

ಶಾಸಕರು ಎಲ್ಲ ಸಮ್ಮಸ್ಯೆಗಳನ್ನು ಆಲಿಸಿ ಸಚಿವರ ಬಳಿ ಬೆಂಗಳೂರಿಗೆ ವಿದ್ಯಾರ್ಥಿ ಸಮೂಹವನ್ನು ಕರೆದೊಯ್ದಾಗ ಸಚಿವರು ‘ಈ ಬಜಟ್ಟಿನಲ್ಲಿ ಅನುದಾನ ಹೆಚ್ಚಿಸುವುದಾಗಿ’ ಭರವಸೆ ನೀಡುತ್ತಾರೆ. ಜೈ ಕಾರದೊಂದಿಗೆ ನಾಟಕ ಮುಕ್ತಾಯವಾಗುತ್ತದೆ. ನಾಟಕವನ್ನು ಸತೀಶ ಕುಲಕರ್ಣಿ ನಿರ್ದೇಶಿಸಿದ್ದರು.

ಸಮಾವೇಶಕ್ಕೆ ಆಗಮಿಸಿದ ಸುಮಾರು  ೩೦ ವಿದ್ಯಾರ್ಥಿಗಳು ನಾಟಕದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ಪತ್ರಕರ್ತರಾಗಿ ನಿಂಗಪ್ಪ ಆರೇರ್, ಶಾಸಕರಾಗಿ ಸತೀಶ ಕುಲಕರ್ಣಿ, ಸಚಿವರಾಗಿ ಬಸವರಾಜ ಪೂಜಾರ, ಆಪ್ತ ಕಾರ್ಯದರ್ಶಿಯಾಗಿ ನಾರಾಯಣ ಕಾಳೆ ಪ್ರಮುಖ ಪಾತ್ರಧಾರಿಗಳಾಗಿದ್ದರು.

ವಿದ್ಯಾರ್ಥಿ ನಾಯಕರಾಗಿ ಬಸವರಾಜ ಎಸ್. ರೇಣುಕಾ ಕಹಾರ, ಚೈತ್ರಾ ಕೊರವರ, ಅರುಣ ನಾಗವತ, ಧನುಶ್ ದೊಡ್ಡಮನಿ, ಪೂರ್ಣಿಮಾ ಡವಗಿ, ನಾಗರಾಜ ಕಾಯಕದ, ವಿಶ್ವ ಈಳಗೇರ, ಬೀರೇಶ, ಪವನ ಜಾಡರ, ಪ್ರಿಯಾಂಕ, ಭೂಮಿಕಾ ಮಾದರ, ಸಂಜನಾ ಆಡೂರ, ಕೀರ್ತಿ ಲಮಾಣಿ, ಪವಿತ್ರ ಬೆಳಕೇರಿ, ಭಾರತಿ, ಭರತ ಮಡಿವಾಳರ, ಮಾರುತಿ ಲಂಕೇರ, ಮಹೇಶ ಮರೋಳ, ವನಜಾಕ್ಷ ಬುಳ್ಳಮ್ಮನವರ, ಭವ್ಯ ಲಕರೆಡ್ಡಿ ಮುಂತಾದವರು ಅಭಿನಯಿಸಿದ್ದರು.  

ಇನ್ನೊಂದು ನಾಟಕ ಮೂಕಿ ಟಾಕಿ ಸಂಪೂರ್ಣ ಹಾಸ್ಯ ಮಯವಾಗಿತ್ತು. ಎಸ್.ಆರ್.ಎಸ್ ಕಲಾ ತಂಡದವರು ಅಭಿನಯಿಸಿದ ನಾಟಕದಲ್ಲಿ ಕೇವಲ ಮೂವರು ಪಾತ್ರಧಾರಿಗಳು. ಎ.ಎಸ್. ಮೂರ್ತಿ ಅವರು ಬರೆದ ನಾಟಕವು ಸಭಾಂಗಣದಲ್ಲಿ ಸೇರಿದ್ದ ಇನ್ನೂರಕ್ಕೂ ಹೆಚ್ಚು ವಿದ್ಯಾರ್ಥಿ ಸಮೂಹವನ್ನು ರಂಜಿಸಿತು. 

ನಾಯಕ ಶಂಕ್ರಪ್ಪ ( ಶಂಕರ ತುಮ್ಮಣ್ಣನವರ ) ತಪಸ್ಸು ಮಾಡಿ ಬ್ರಹ್ಮನನ್ನು ಸಾಕ್ಷಾತ್ಕರಿಸಿಕೊಳ್ಳುತ್ತಾನೆ. ‘ನನಗೊಂದು ಚಂದನ ಹೆಂಡತಿ ಬೇಕು’ ಎಂದು ವರ ಕೇಳುತ್ತಾನೆ. ಬ್ರಹ್ಮ ( ರಾಘವೇಂದ್ರ ಕಬಾಡಿ ) ತತಾಸ್ಥು ಎಂದು ಒಬ್ಬ ಚೆಲುವೆಯನ್ನು ( ಶ್ರೀಮತಿ ಶಶಿಕಲಾ ಅಕ್ಕಿ ) ಸೃಷ್ಠಿ ಮಾಡುತ್ತಾನೆ. ಖುಷಿಯಿಂದ ಶಂಕ್ರಪ್ಪ ಪ್ರೀತಿಸಲು ಹೋದಾಗ ಅವಳು ಮೂಕಿಯಾಗಿರುತ್ತಾಳೆ. ಅವಳನ್ನು ನಿರಾಕರಿಸಿದ ಶಂಕ್ರಪ್ಪ ಮತ್ತೆ ತಪಸ್ಸು ಮಾಡಿ ‘ಬಾಯಿ ಇರುವ ಟಾಕಿ ಹೆಂಡತಿ ಬೇಕು’ ಎಂದು ಕೇಳುತ್ತಾನೆ. 

ಟಾಕಿ ಹೆಂಡತಿ ಕಾರು ಬಂಗಲೆ, ಐಶಾರಾಮಿ ಬದುಕು ಬೇಕೆಂದು ಹಲವು ಶರತ್ತುಗಳನ್ನು ಹಾಕಿದಾಗ ಕಂಗಾಲಾದ ಶಂಕ್ರಪ್ಪ ಮತ್ತೆ ಬ್ರಹ್ಮನನ್ನು ತಪಸ್ಸು ಮಾಡಿ ಕರೆಯಿಸಿದಾಗ ‘ನನ್ನನ್ನು ಮೂಕ, ಕಿವುಡ, ಕುರುಡನನ್ನಾಗಿ’  ಮಾಡೆಂದು ಕೇಳುತ್ತಾನೆ. ಇದ್ದುದರಲ್ಲಿಯೇ ಸಂತೋಷ ಪಡಬೇಕು ಎಂಬ ಸಂದೇಶವನ್ನು ಬ್ರಹ್ಮ ಕೊನೆಯಲ್ಲಿ ಸಾರುತ್ತಾನೆ. ನಾಟಕವನ್ನು ರಾಘವೇಂದ್ರ ಕಬಾಡಿ ಅವರು ನಿರ್ದೇಶಿಸಿದ್ದರು. 

ಇದನ್ನು ಓದಿದ್ದೀರಾ? ಹಾವೇರಿ | SFI ರಾಜ್ಯ ಮಟ್ಟದ ಸಮಾವೇಶದ ಸಮಾರೋಪ; ಹೋರಾಟದ ಮೂಲಕ ಬದಲಾವಣೆ ಆಗಲಿ: ಪರಿಮಳ ಜೈನ್

ಎರಡು ಅತ್ಯುತ್ತಮ ಸಂದೇಶಗಳನ್ನು ನಾಟಕಗಳು ನೀಡುವಲ್ಲಿ ಯಶಸ್ವಿಯಾದವು. ಆರಂಭದಲ್ಲಿ ಶ್ರೀಮತಿ ಪರಿಮಳಾ ಜೈನ್, ಡಾ. ರಾಧಾ ರಂಗಭೂಮಿಯ ಅಗತ್ಯ ಕುರಿತು ಮಾತನಾಡಿದ್ದು ವಿದ್ಯಾರ್ಥಿ ಸಮೂದಾಯಕ್ಕೆ ಸಾಂಸ್ಕೃತಿಕ ಅರಿವೂ ಮುಖ್ಯ ಎಂಬ ಸಂದೇಶ ನೀಡಿದರು.

ಬರಹ : ಸಾಹಿತಿ ಸತೀಶ ಕುಲಕರ್ಣಿ

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ತೆರಿಗೆ ವಸೂಲಾತಿಯಲ್ಲಿ ಲೋಪ: ಇಬ್ಬರು ಪಿಡಿಓ ಅಮಾನತು, ಮೂವರು ಕರವಸೂಲಿಗಾರರ ವಜಾಕ್ಕೆ ವಿಚಾರಣೆ

ತೆರಿಗೆ ವಸೂಲಾತಿಯಲ್ಲಿ ನಿರ್ಲಕ್ಷ್ಯ ಹಾಗೂ ಕರ್ತವ್ಯ ಲೋಪ ಎಸಗಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ...

ಹಾವೇರಿ | ಪುಸ್ತಕ ಓದಿನ ಪರಂಪರೆಯನ್ನು ಮರು ಕಟ್ಟಬೇಕಾಗಿದೆ: ಶೋಭಾ ಜಾಗಟಗೇರಿ

"ಮುಷ್ಠಿಯಲ್ಲಿ ಇರುವ ಮೊಬೈಲ್ ಜೀವನ ಪಾಠವನ್ನ್ನು ಕಲಿಸುವುದಕ್ಕಿಂತ ದಾರಿ ತಪ್ಪಿಸುವ ಕೆಲಸ...

ಉತ್ತರ ಕನ್ನಡ | 3.24 ಲಕ್ಷ ಪಡಿತರ ಚೀಟಿ ಸದಸ್ಯರ ಇ-ಕೆವೈಸಿ ಬಾಕಿ; ಅಕ್ಟೋಬರ್ 20ರೊಳಗೆ ಪೂರ್ಣಗೊಳಿಸಲು ಮನವಿ

ಉತ್ತರ ಕನ್ನಡ ಜಿಲ್ಲೆಯ ಪಡಿತರ ಚೀಟಿಗಳಲ್ಲಿರುವ 5,69,044 ಸದಸ್ಯರು ಐದು ವರ್ಷಗಳ...

ಉಡುಪಿ | ಇಂದ್ರಾಳಿ ಮಂಚಿ ನೂರಾನಿ ಮಸೀದಿಗೆ ನೂತನ ಆಡಳಿತ ಸಮಿತಿ ರಚನೆ

ಉಡುಪಿ ತಾಲೂಕಿನ ಇಂದ್ರಾಳಿ ಮಂಚಿ ನೂರಾನಿ ಮಸೀದಿಯ ಆಡಳಿತ ಸಮಿತಿಗೆ ನೂತನ...