“ಕಾಮ್ರೇಡ್ ನಿತ್ಯಾನಂದ ಸ್ವಾಮಿ ಅಗಲಿಕೆ ಜನಪರ ಚಳುವಳಿಗೆ ದೊಡ್ಡ ನಷ್ಟವಾಗಿದೆ. ಅದನ್ನು ಭರಿಸುವ ನಾವು ನೀವು ಚಳುವಳಿ ಕೆಲಸ ಮಾಡಬೇಕು” ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಹಿರಿಯ ಮುಖಂಡ ಬಿ.ಎಸ್.ಸೊಪ್ಪಿನ್ ಹೇಳಿದರು.
ಹಾವೇರಿ ಪಟ್ಟಣದ ಭಗತ್ ಅಕಾಡೆಮಿಯಲ್ಲಿ ಎಸ್ಎಫ್ಐ, ಡಿವೈಎಫ್ಐ, ಸಿಐಟಿಯು, ಎಐಎಡ್ಲೂಯು, ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ-ಕಾಲೇಜ್ ಹೊರಗುತ್ತಿಗೆ ನೌಕರರ ಸಂಘಟನೆಗಳ ಸಹಯೋಗದಲ್ಲಿ ಕಾಮ್ರೇಡ್ ನಿತ್ಯಾನಂದ ಸ್ವಾಮಿಜಿಯವರ ಹಾಗೂ ಕೆ.ವಿ ರಾಯಚೂರು ಅವರ ಶ್ರದ್ಧಾಂಜಲಿ-ನುಡಿನಮನ ಕಾರ್ಯಕ್ರಮದಲ್ಲಿ ಅವರು ಭಾವಚಿತ್ರಕ್ಕೆ ಪುಷ್ಪ ನಮನ ಗೌರವ ಸಲ್ಲಿಸಿ ಮಾತನಾಡಿದರು.
“ನಿತ್ಯಾನಂದ ಸ್ವಾಮಿ ಅವರ ಕಾವಿದಾರಿಯಾಗಿದ್ರು ಸವದತ್ತಿ ಮಠದಿಂದ ಬಂದವರು. ಮಾರ್ಕ್ಸ್ವಾದಿ ಸಾಹಿತ್ಯ ಓದಿ ಮಾರ್ಕ್ಸ್ವಾದಿ ಸಿದ್ದಾಂತ ರೂಪಗೂಂಡರು. ಅವರು ಹೋದಕಡೆಯೆಲ್ಲ ಹೋರಾಟ ಮಾಡಿ ದೇವಸ್ಥಾನ ಹಾಗೂ ಚರ್ಚ್ ಮಸೀದಿ ಮುಂತಾದ ನಿಲಯಗಳಲ್ಲಿ ವಾಸವಾಗುತ್ತಿದ್ದರು. ಸಾಕಷ್ಟು ಕೂಲಿ ಕಾರ್ಮಿಕರಿಗೆ, ವಿದ್ಯಾರ್ಥಿಗಳಿಗೆ, ಉಪನ್ಯಾಸಕರಿಗೆ, ದೀನದಲಿತ ಅಸ್ಪೃಶ್ಯತೆಗೊಳಗಾದ ವ್ಯಕ್ತಿಗಳಿಗೆ, ರೈತ ಪರ ಜನರಿಗೆ ಹಾಗೂ ಬಡವರ ಅನ್ಯಾಯದ ವಿರುದ್ದ ಚಳುವಳಿಯನ್ನು ಗಟ್ಟಿ ಮಾಡಿದವರು” ಎಂದರು.
“ಕಾ, ನಿತ್ಯಾನಂದ ಸ್ವಾಮಿ ಅವರ ಜೀವನದಲ್ಲಿ ಅನುಭವಿಸಿದ ಕಷ್ಟಕರ ಜೀವನವನ್ನು ನಡೆಸಿದ್ದಾರೆ. ಅವರ ಬಿಟ್ಟು ಜನರ ಕಷ್ಟದ ಜೊತೆಗೆ ನಾವು ನಿಲ್ಲೋಣ. ಜನರ ಕಷ್ಟಗಳನ್ನು ಭಾವನೆಗಳನ್ನು ನಾವು ಅರಿವು ಮೂಡಿಸಿಕೊಳ್ಳಬೇಕು. ಹಾಗೆ ಕೆ.ವಿ ರಾಯಚೂರು ಅವರು ಸವಣೂರ ತಾಲೂಕಿನ ಒಂದು ಪುಟ್ಟ ಗ್ರಾಮದಲ್ಲಿ ಉಪನ್ಯಾಸಕರಾಗಿದ್ದರು. ಅವರು ಸಾಕಷ್ಟು ಕಷ್ಟಗಳನ್ನು ಅನುಭವಿಸಿರುವರು. ನನ್ನ ಹಾಗೆ ಇರುವ ಶಿಕ್ಷಕರ ಕಷ್ಟವನ್ನು ಅನ್ಯಾಯದ ವಿರುದ್ಧ ಅವರು ಅನೇಕ ಹೋರಾಟಗಳನ್ನು ನಡೆಸಿರುವರು. ಶಾಲಾ ಶಿಕ್ಷಕರಾಗಿ ಶಿಕ್ಷಕರ ಸಂಘಟನೆಯನ್ನು ಕಟ್ಟಿ ಅವರ ಅನ್ಯಾಯದ ವಿರುದ್ಧ ಹೋರಾಡಿ ಜೈಲಿಗೆ ಹೋಗಿದ್ದರು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಹೋರಾಟ ಮಾಡಿ ಜೈಲು ಸೇರಿದರು” ಎಂದರು.
ರಾಜ್ಯ ಸರ್ಕಾರ ಗ್ಯಾಂರಟಿ ಯೋಜನೆ ಅನುಷ್ಠಾನ ಅಧ್ಯಕ್ಷರಾದ ವಿಜಯಕುಮಾರ್ ದೊಡ್ಡಮನಿ ಮಾತನಾಡಿ, “ಸಂಗಾತಿ ನಿತ್ಯಾನಂದ ಸ್ವಾಮಿ ಅವ್ರು ನನ್ನನ್ನು ಸಣ್ಣವಯಸ್ಸಿನಲ್ಲಿ ಕೂಲಿಕಾರ ಸಂಘಟನೆಯ ಹೋರಾಟದಲ್ಲಿ ತೊಡಗಿಸಿದರು. ನಿತ್ಯಾನಂದ ಸ್ವಾಮಿ ಅವ್ರು ಒಬ್ಬ ಮಾರ್ಗದರ್ಶಕರಾಗಿ ಗುರುಗಳಾಗಿ, ಪೋಷಕರಾಗಿ, ನಮ್ಮ ಬಡ ಜನರ ಜೀವನದಲ್ಲಿ ಆಗಿರುವಂತಹ ಕಷ್ಟಗಳ ಅನ್ಯಾಯದ ವಿರುದ್ಧವಾಗಿ ನಾವೆಲ್ಲರೂ ಹೋರಾಟದ ಮೂಲಕ ನಮ್ಮ ಕಷ್ಟಗಳನ್ನು ಬಗೆಹರಿಸುವ ಭರವಸೆಯನ್ನು ಅವರು ನೀಡುತ್ತಿದ್ದರು. ಒಂದು ಹೊತ್ತಿನ ಊಟಕ್ಕೂ ಕಷ್ಟಪಡುವ ಕಷ್ಟದ ದಿನಗಳು ಅವರು ಕಳೆದರೂ ಹಾಗೆ ಒಂದು ಊರಲ್ಲಿ ಹೋರಾಟವನ್ನು ಜಯಗೊಳಿಸಿದಾಗ ಆ ಊರಿನ ಜನರೆಲ್ಲರೂ ಅವರಿಗೆ ಒಂದು ಮನೆಯ ಒಂದು ಕುಟುಂಬದ ವ್ಯಕ್ತಿ ಅಂತ ಅವರೆಲ್ಲರೂ ಗುರುತಿಸಿಕೊಳ್ಳುತ್ತಿದ್ದರು. ಹೋರಾಟದ ಅನುಭವದ ರುಚಿಯನ್ನು ವೇದಿಕೆಯನ್ನು ಅವರು ನಮಗೆಲ್ಲರಿಗೂ ಸೃಷ್ಟಿಮಾಡುತ್ತಿದ್ದರು” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಮಾತನಾಡಿ, “ಕಾಮ್ರೇಡ್ ನಿತ್ಯಾನಂದ ಸ್ವಾಮಿ ಹೋರಾಟದ ಮೂಲಕ ಅವ್ರು ಚಳುವಳಿಯನ್ನು ಕಟ್ಟುವಂತಹ ಶಕ್ತಿ ಅವರಲ್ಲಿ ಇತ್ತು. ಓದುವುದರ ಮೂಲಕ ಚಳುವಳಿಯನ್ನು ಕಟ್ಟಬೇಕು ಎಂದು ನಮಗೆಲ್ಲರಿಗೂ ಓದಲಿಕ್ಕೆ ಅವರು ಹಣವನ್ನು ಕೊಟ್ಟರು. ಮುಂತಾದ ಕಷ್ಟಗಳಲ್ಲಿ ಅವರು ನಮಗೆಲ್ಲರಿಗೂ ಹೋರಾಟದ ಹಾದಿಯನ್ನು ತೋರಿಸಿಕೊಟ್ಟರು. ಹೋರಾಟದ ಹಾದಿಯ ಮೂಲಕ ಬಡ ಜನರ ಕಷ್ಟಬಂದಲ್ಲಿ ಅವರಿಗೆ ಅನ್ಯಾಯದ ವಿರುದ್ಧವಾಗಿ ನೀವು ನಿಲ್ಲಿ ಎಂದು ನಮಗೆಲ್ಲರಿಗೂ ತಿಳಿಸಿಕೊಟ್ಟವರು” ಎಂದರು.
ಈ ಸಂದರ್ಭದಲ್ಲಿ ಕಮ್ಯೂನಿಸ್ಟ್ ಪಕ್ಷ ಹಿರಯ ರುದ್ರಪ್ಪ ಜಾಬಿನ್, ಸಿಐಟಿಯು ಸಂಚಾಲಕರಾದ ಎ.ಕೆ.ಹೆಬ್ಬಸೂರ, ವಕೀಲ ಅಣ್ಣಪ್ಪ ಚಿಕ್ಕಣ್ಣನವರ, ಡಿವೈಎಫ್ಐ ರಾಜ್ಯ ಸಮಿತಿ ಸದಸ್ಯೆ ರೇಣುಕಾ ಕಹಾರ, ಎಸ್ಎಫ್ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್, ಬಿಎಸ್ಪಿ ಜಿಲ್ಲಾಧ್ಯಕ್ಷ ಎಮ್.ಕೆ.ಮಕಬೂಲ್, ಚುಟುಕು ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಗಂಗಯ್ಯ ಕುಲಕರ್ಣಿ, ಹಾಸ್ಟೆಲ್ ಹೊರಗುತ್ತಿಗೆ ನೌಕರ ಸಂಘದ ಶಾಂತಕ್ಕ ಗಡ್ಡಿಯವರ, ಗ್ರಾಮ ಪಂಚಾಯತಿ ನೌಕರ ಸಂಘದ ಮುಖಂಡ ಜಗದೀಶ್ ಕೋಟಿ ಮಾತನಾಡಿದರು.
ಡಿಹೆಚ್ಎಸ್ ಮುಖಂಡರಾದ ವೀರಣ್ಣ ಗಡ್ಡಿಯವರ, ಹಮಾಲಿ ಕಾರ್ಮಿಕ ಮುಖಂಡರಾದ ಹುಸೇನ್ ಸಾಬ್, ಎಸ್ಎಫ್ಐ ಮುಖಂಡರಾದ ಚೈತ್ರಾ ಕೊರವರ, ಕೃಷ್ಣ ನಾಯ್ಕ್, ಮಾರುತಿ ಲಂಕೆರ್, ನಾಗರಾಜ ಜಿ ಕೆ, ಧನುಷ್ ದೊಡ್ಡಮನಿ, ನಿಂಗರಾಜ ಪೂಜಾರ್, ವಾಸು ಮಹಾಕಾಳಿ, ವಿಠ್ಠಲ್ ಗೌಳಿ, ಅನ್ವಿಕಾ ಆರ್.ಬಿ, ಖುಷಿ ಕುಲಕರ್ಣಿ, ನಜೀರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಎಸ್ಎಫ್ಐ ಮುಖಂಡರಾದ ಅರುಣ್ ನಾಗವತ್ ಸ್ವಾಗತಿಸಿದರು, ನಾರಾಯಣ ಕಾಳೆ ನಿರೂಪಿಸಿದರು.




