ಹಾವೇರಿ | ರೈತರಿಗೆ ಬಿತ್ತನ ಬೀಜ, ಗೊಬ್ಬರ ಕೊರತೆಯಾಗದಂತೆ ವಿತರಿಸಲು ರೈತ ಸಂಘ ಮನವಿ

Date:

“ಹಾವೇರಿ ಜಿಲ್ಲೆಯಲ್ಲಿ ಮುಂಗಾರು ಬಿತ್ತನೆಗೆ ಉತ್ತಮ ಮಳೆ ಆಗಿರುವುದರಿಂದ ಬಿತ್ತನೆ ಕಾರ್ಯ ಚುರುಕುಗೊಂಡಿದೆ. ರೈತರಿಗೆ ಬಿತ್ತನೆ ಬೀಜ, ರಸ ಗೊಬ್ಬರ, ಭೂಮಿ ಉಳುವ ರೈತರ ಟ್ರಾಕ್ಟರ್ ಗಳಿಗೆ ಡೀಸೆಲ್ ಕೊರತೆಯಿಂದ ಜಿಲ್ಲೆಯ ವಿವಿಧ ಬಂಕಗಳಿಂದ ಡೀಸೆಲ್ ಸಿಗದೆ ರೈತರು ಪರದಾಡುವಂತಾಗಿದೆ. ಬಿತ್ತನೆ ಬೀಜ, ರಸಗೊಬ್ಬರ, ಮತ್ತು ಡೀಸೆಲ್ ಸಮರ್ಪಕ ವಾಗಿ ಪೂರೈಕೆ ಆಗುವಂತೆ ಮಾಡಬೇಕು” ಎಂದು ಅಖಿಲ ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ಹನುಮಂತಪ್ಪ ದೀವಿಗಿಹಳ್ಳಿ ಹೇಳಿದರು.

- Advertisement -

ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ಪಟ್ಟಣದಲ್ಲಿ ಅಖಿಲ ಕರ್ನಾಟಕ ರೈತ ಸಂಘ ವತಿಯಿಂದ “ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ, ಮತ್ತು ಡೀಸೆಲ್ ಸಮರ್ಪಕ ವಾಗಿ ಪೂರೈಕೆ, ವಿದ್ಯುತ್ ಖಾಸಗೀಕರಣ ವಿರೋಧಿಸಿ ಸೇರಿದಂತೆ ರೈತರ ವಿವಿಧ ಬೇಡಿಕೆಗಳ ಈಡೇರಿಸುವಂತೆ ತಹಶೀಲ್ದಾರರಿಗೆ ಮನವಿ ಸಲ್ಲಿಸಿ‌ ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಲೈಂಗಿಕ ಕಿರುಕುಳ ಆರೋಪಕ್ಕೆ ಜಾತಿದೌರ್ಜನ್ಯ ಗುರಾಣಿಯೇ? ಸಂತ್ರಸ್ತೆಯ ವಿರುದ್ಧ...

ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ ಸಮೀಪ ನಡೆದ ಪ್ರತಿಭಟನೆಯಲ್ಲಿ ಮೂವರು ಮಹಿಳಾ ಪತ್ರಕರ್ತೆಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಎದುರಿಸುತ್ತಿರುವ ದೆಹಲಿ ಪೊಲೀಸ್ ಸಹಾಯಕ ಆಯುಕ್ತ (ಎಸಿಪಿ)...

ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ: ಶಾಸಕ ಪ್ರದೀಪ್ ಈಶ್ವರ್...

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ತಾವು ರಾಜಕೀಯಕ್ಕೆ ಬರಲು ಮತ್ತು ಟಿಕೆಟ್ ಪಡೆಯಲು ಚಿಂತಾಮಣಿ ಶಾಸಕ ಹಾಗೂ ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರೇ ಕಾರಣ ಎಂದು ಬಹಿರಂಗವಾಗಿ ಹಲವಾರು...

ಬೆವರಿನ ಹಣಕ್ಕೆ ಮೋದಿ ಸರ್ಕಾರದ ಕಂಟಕ: ಹೊಸ ಪಿಎಫ್...

ತಮ್ಮದೇ ಬೆವರಿನ ಗಳಿಕೆ, ತುರ್ತು ಬದುಕಿನ ಆಸರೆ ಪಿಎಫ್. ಆದರೆ ಇಂದು ಆ ಹಣವನ್ನು ಪಡೆಯಲಾಗದೆ ಗಾರ್ಮೆಂಟ್ಸ್ ಕಾರ್ಮಿಕರು ಕಣ್ಣೀರು ಹಾಕುವಂತಾಗಿದೆ. ಬಟ್ಟೆ ಕಾರ್ಖಾನೆಗಳ ಶ್ರಮಿಕರ ಬದುಕಿಗೆ ಕೇಂದ್ರದ ಮೋದಿ ಸರ್ಕಾರದ ಹೊಸ...

“ಹಾವೇರಿ ಜಿಲ್ಲೆಯಲ್ಲಿ ರೈತರಿಗೆ ರಸ ಗೊಬ್ಬರ ದಾಸ್ತಾನು ಇದ್ದರೂ ಡಿ.ಎ.ಪಿ. ಯೂರಿಯಾದ ರಸ ಗೊಬ್ಬರ ಸಿಗುತ್ತಿಲ್ಲ. ಬಿತ್ತನೆ ಪ್ರಾರಂಭದಲ್ಲಿಯೇ ಸಕಾಲಕ್ಕೆ ಬೀಜ ರಸ ಗೊಬ್ಬರ ಡೀಸೆಲ್ ಪೂರೈಕೆ ಮಾಡಬೇಕು. ಕಳೆದ ವರ್ಷ ಮೆಕ್ಕೆಜೋಳ ಹೆಚ್ಚು ಬೆಳೆದು, ಅತಿಯಾದ ಮಳೆಯಿಂದ ಮತ್ತು ಕಳೆಯಿಂದ ಸರಿಯಾದ ಬೆಳೆ ಬರದೆ ಮತ್ತು ಸರಿಯಾದ ಮಾರುಕಟ್ಟೆ ದರ ಸಿಗದೆ ರೈತರು ಕಂಗಾಲಾಗಿದ್ದರು. ಈ ವರ್ಷ ಮೆಕ್ಕೆಜೋಳ ಕಡಿಮೆ ಮಾಡಿ ಈ ಬಾರಿ ಅತಿ ಹೆಚ್ಚು ಸೋಯಾಬೀನ್ ಬೀಜ ಖರೀದಿಗೆ ಮುಂದಾಗಿದ್ದಾರೆ. ರೈತರ ಬೇಡಿಕೆಗೆ ಅನುಗುಣವಾಗಿ ಸೋಯಾಬೀನ್ ಬೀಜ ವಿತರಣೆ ಮಾಡಬೇಕು” ಎಂದು ಒತ್ತಾಯಿಸಿದರು.

ಹಾವೇರಿ ಜಿಲ್ಲೆಯ ಒಟ್ಟು 3.54.570 ಹೆಕ್ಟೇರ್ ನಿವ್ವಳ ಬಿತ್ತನೆ ಕ್ಷೇತ್ರವಾಗಿದ್ದು ಮತ್ತು ಅರಣ್ಯ ಭೂಮಿ ಬಗರ್ ಹುಕುಂ, ಇತರೆ ಹೆಸರಿನಿಂದ ಕರೆಯುವ ಸರಕಾರದ ಭೂಮಿಯನ್ನು ಸಾಗುವಳಿ ಮಾಡಿದ ರೈತರ ಸಾವಿರಾರು ಕುಟುಂಬಗಳಿವೆ. ಒಟ್ಟು ಜಿಲ್ಲೆಯಲ್ಲಿ 25 ಸಾವಿರ ಹೆಕ್ಟೇರ್ ಭೂಮಿ ಉಳುಮೆ ಮಾಡಿ ಬೆಳೆ ಬೆಳೆಯುವ ರೈತಯುತರಿಗೆ ಹಕ್ಕು ಪತ್ರ ನೀಡಿಲ್ಲ. ಇಂತಹ ರೈತರಿಗೆ ರಸ ಗೊಬ್ಬರ, ಬೀಜಗಳನ್ನು ಸರ್ಕಾರ ಯಾವ ಆಧಾರದ ಮೇಲೆ ನೀಡುತ್ತಿದೆ, ಎಂಬುದರ ಬಗ್ಗೆ ಸ್ಪಷ್ಟವಾದ ಯಾವುದೇ ಆದೇಶವಿಲ್ಲ. ಈ ರೈತರು ದೇಶದ 140 ಕೋಟಿ ಜನರಿಗೆ ಆಹಾರ ಭದ್ರತೆ ಒದಗಿಸಿಸುವವರು. ಇವರಿಗೂ ಅನ್ಯಾಯ ಮಾಡದೇ ನ್ಯಾಯ ಒದಗಿಸಿ ಕೊಡಬೇಕು” ಎಂದು ಒತ್ತಾಯಿಸಿದರು.

ನ್ಯಾಯ ಬೆಲೆ ಅಂಗಡಿಯಲ್ಲಿ ಸರ್ವರ್ ಸಮಸ್ಯೆಯಿಂದ ಬಡವರು ದಿನವಿಡಿ ಕಾಯುತ್ತಿದ್ದಾರೆ. ಈ ಸಮಸ್ಯೆ ಬಗೆಹರಿಸಬೇಕು. ರಾಜ್ಯದಲ್ಲಿ ನಾಲ್ಕು ಬಾರಿ ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚು ಮಾಡಲಾಗಿದೆ. ದಿನ ಬಳಕೆ ವಸ್ತುಗಳ ಬೆಲೆ ಗಗನಕ್ಕೆ ಏರಿದೆ. ದಿನ ನಿತ್ಯ ದುಡಿಯುವ ವರ್ಗದ ಜನರ ಜೀವನ ಕಷ್ಟವಾಗಿದೆ. ತೈಲ ಮೇಲಿನ ತೆರಿಗೆಯಿಂದ ರಾಜ್ಯ ಸರ್ಕಾರಕ್ಕೆ ವರ್ಷಕ್ಕೆ 7000 ಕೋಟಿ ಆದಾಯವಿದೆ. ಆದ್ದರಿಂದ ತೈಲ ದರ ಕಡಿಮೆ ಮಾಡಬೇಕು” ಎಂದು ಒತ್ತಾಯಿಸಿದರು.

“ರಾಜ್ಯದಲ್ಲಿ ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಖಾಸಗೀಕರಣ ಮಾಡುತ್ತಿರುವು ಖಂಡನೀಯ. ಇದರಿಂದ ರೈತರ ಕೃಷಿ ಪಂಪಸೆಟ್, ಗೃಹಜ್ಯೋತಿ ಯೋಜನೆಗೆ, ನೇಮಕಾತಿ ಮಾಡುವಾಗ ಮೀಸಲಾತಿಯಲ್ಲಿ, ಗ್ರಾಮಗಳ ಕಡೆಗಣನೆ, ಕೇವಲ ಲಾಭದ ಚಿಂತೆ, ಸಾರ್ವಜನಿಕರ ಹಿತ ಚಿಂತನೆಯಿಂದ ಮತ್ತು ವಿದ್ಯುತ್ ಸ್ವಾತಂತ್ರ್ಯವನ್ನು ರಕ್ಷಿಸಲು ಖಾಸಗಿ ಕಂಪನಿಯವರಿಗೆ ಪರವಾನಿಗೆಯನ್ನು ನೀಡಬಾರದು. ಇದಕ್ಕೆ ತೀವ್ರ ವಿರೋಧ ವ್ಯಕ್ತ ಪಡಿಸುತ್ತೇವೆ” ಎಂದು ಆಗ್ರಹಿಸಿದರು.

ಮನವಿ ಸಂದರ್ಭದಲ್ಲಿ ಅಖಲ ಕರ್ನಾಟಕ ರೈತ ಸಂಘ ಮುಖಂಡರು ಚನ್ನಬಸಪ್ಪ ಜೀವನ್ನವರ, ಡಿ.ಡಿ.ಪಾಟೀಲ್, ಬಸವರಾಜ ಕೆಳಗಿನಮನಿ, ಚಂದ್ರಯ್ಯ ಮಠದ, ರವಿ ಎಸ್ ಮಾಳಗೇರ, ಹಾಲಪ್ಪ ಜಾಡರ್, ರವೀಚಂದ್ರ ಕೋಟಿಹಾಳ, ಹರೀಶ್ ದೀವಿಗಿಹಳ್ಳಿ, ಕೆ.ಪಿ.ಹುಡೇದ ಸೇರಿದಂತೆ ಅನೇಕರು ಉಪಸ್ಥತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ನೆಟ್‌ವರ್ಕ್ ಸಮಸ್ಯೆ ಬಗೆಹರಿಸಿ, ಗ್ರಾಹಕರಿಗೆ ಗುಣಮಟ್ಟದ ಸೇವೆ ನೀಡಿ: ಕೋಟ ಶ್ರೀನಿವಾಸ ಪೂಜಾರಿ

ಬಿ.ಎಸ್.ಎನ್.ಎಲ್. ಸಂಸ್ಥೆಯು ನೆಟ್‌ವರ್ಕ್ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಿ, ಖಾಸಗಿ ಟೆಲಿಕಾಂ ಕಂಪನಿಗಳಿಗೆ...

ಕಾರವಾರ | ಅಕ್ಟೋಬರ್ 16ರಂದು ಹಾರವಾಡದಿಂದ ಮಾಜಾಳಿವರೆಗೆ ಮೀನುಗಾರಿಕೆಗೆ ನಿರ್ಬಂಧ

ಕಾರವಾರ: ಗೌರವಾನ್ವಿತ ಉಪರಾಷ್ಟ್ರಪತಿ ಹಾಗೂ ರಾಜ್ಯಪಾಲರು ಅಕ್ಟೋಬರ್ 16ರಂದು ಉತ್ತರ ಕನ್ನಡ...

ಕೋಲಾರ | 108 ಆಂಬ್ಯುಲೆನ್ಸ್ ನೌಕರರ ನ್ಯಾಯಯುತ ಬೇಡಿಕೆ ಈಡೇರಿಸಿ: ಕೆ.ನಾರಾಯಣಗೌಡ

ಅಪತ್ಬಾಂಧವರೆಂದೇ ಕರೆಯಲಾಗುವ 108 ಆಂಬ್ಯುಲೆನ್ಸ್ ನೌಕರರ ವಿವಿಧ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವ...