“ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿದೆ. ಸರ್ಕಾರ ರೈತರರಿಗೆ ₹2500 ಪರಿಹಾರವನ್ನು ಕೊಡಬೇಕೆಂದು ನಿರ್ಧಾರ ಮಾಡಿದೆ. ಈ ಪರಿಹಾರದಿಂದ ರೈತರಿಗೆ ಒಂದು ಚೀಲ ಗೊಬ್ಬರವೂ ಬರುವುದಲ್ಲ. ರೈತರುಗೆ ಕಿಮ್ಮತ್ತು ಇಲ್ಲದಾಗಿದೆ. ಸರ್ಕಾರಗಳು ಕೂಡಲೇ 25 ರಿಂದ 30 ಸಾವಿರ ರೂಗಳನ್ನು ಪರಿಹಾರ ಕೊಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ” ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳಿ ಎಚ್ಚರಿಕೆ ನೀಡಿದರು.
ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕು ಭೋಗಾವಿ ಗ್ರಾಮದಲ್ಲಿ ಬುಧವರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ನಾಮಫಲಕ ಉದ್ಘಾಟನೆ ಹಾಗೂ ಜಾಗೃತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ರೈತ ಮುಖಂಡರು ಮಲ್ಲಿಕಾರ್ಜುನ್ ಬಳ್ಳಾರಿ ಅವರು ಮಾತನಾಡಿ, “ಹಾವೇರಿ ಜಿಲ್ಲೆಯನ್ನು ಬರಗಾಲ ಘೋಷಣೆ ಮಾಡಿದರೂ ಯಾವುದೇ ರೀತಿ ಪ್ರಯೋಜನವಾಗಿಲ್ಲ. ಆದಕಾರಣ ಸರ್ಕಾರಗಳು ಕೂಡಲೇ ಎಚ್ಚೆತ್ತುಕೊಂಡು ಕೆಲಸ ಮಾಡಬೇಕು” ಎಂದು ಎಚ್ಚರಿಕೆ ನೀಡಿದರು.
ಇನ್ನೊರ್ವ ರೈತ ಮುಖಂಡರಾದ ಮಾಲ್ತೇಶ್ ಪೂಜಾರ್ ಮಾತನಾಡಿ, “ಪ್ರತಿಯೊಂದು ಗ್ರಾಮ ಘಟಕದಲ್ಲಿ ರೈತ ಸಂಘ ಉದ್ಘಾಟನೆ ಆಗಬೇಕು. ಹೆಚ್ಚು ಯುವಕರು ಪಾಲ್ಗೊಳ್ಳಬೇಕು. ಇಲ್ಲದಿದ್ದರೆ ವ್ಯವಸಾಯ ನಶಿಸಿ ಹೋಗಬೇಕಾಗುತ್ತದೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷರು ಹೆಚ್ ಹೆಚ್ ಮುಲ್ಲಾ, ರೈತ ಮುಖಂಡರು ಪರಮೇಶಪ್ಪ ಬಾವಿ ತಾಲೂಕಾಧ್ಯಕ್ಷರು ಪ್ರಭುಗೌಡ ಪಾಟೀಲ್, ಗಂಗನಗೌಡ ಮಧುಗೌಡ, ಈರಪ್ಪ ಮಲ್ಲೂರ್, ಪರಮೇಶ್ ಪಾಟೀಲ್, ಯಶವಂತ್ ತಿಮ್ಮಕಾಪುರ, ಶಾಂತನಗೌಡ ಪಾಟೀಲ್, ವೀರೇಶ್ ಪೂಜಾರ್, ನವೀನ್ ಹೊಲ್ಲತ್ತಿ ಹಾಗೂ ಬಾಗಾವಿ ಗ್ರಾಮ ಘಟಕದ ಅಧ್ಯಕ್ಷರು ಮತ್ತು ಸರ್ವ ಸದಸ್ಯರ ರೈತ ಮುಖಂಡರು ಭಾಗವಹಿಸಿದ್ದರು.




