ಮಂಡ್ಯದಲ್ಲೇ ಹೃದ್ರೋಗ ಆಸ್ಪತ್ರೆ; ಸ್ಥಳ ಪರಿಶೀಲನೆ ನಡೆಸಿದ ಡಾ. ದಿನೇಶ್

Date:

ಮಂಡ್ಯ ಜಿಲ್ಲೆಯ ಜನರಿಗೆ ಗುಣಮಟ್ಟದ ಹೃದ್ರೋಗ ಚಿಕಿತ್ಸಾ ಸೇವೆ ಸ್ಥಳೀಯವಾಗಿಯೇ ದೊರಕಿಸುವ ಉದ್ದೇಶದಿಂದ ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆಯ ಘಟಕವನ್ನು ಮಂಡ್ಯದಲ್ಲಿ ಸ್ಥಾಪಿಸಲು ಮುಂದಾಗಿದ್ದು, ಹಿನ್ನೆಲೆಯಲ್ಲಿ ಜಯದೇವ ಸಂಸ್ಥೆಯ ನಿರ್ದೇಶಕ ಡಾ. ದಿನೇಶ್ ಆಸ್ಪತ್ರೆ ನಿರ್ಮಾಣಕ್ಕೆ ನಿಗದಿ ಮಾಡಲಾದ ಸ್ಥಳ ಪರಿಶೀಲಿಸಿದರು.

- Advertisement -

ಮುಖ್ಯಮಂತ್ರಿ, ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್, ಜಿಲ್ಲಾ ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿ, ಮಂಡ್ಯ ವಿಧಾನ ಸಭಾ ಶಾಸಕ ಪಿ. ರವಿಕುಮಾರ್ ಅವರ ನಿರ್ದೇಶನದಂತೆ ಸ್ಥಳ ಪರಿಶೀಲನೆ ನಡೆಸಲಾಗಿದೆ ಎಂದು ತಿಳಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ರಾಜಕೀಯ ಪಕ್ಷಗಳಿಗೆ ಪ್ರವೇಶವಿಲ್ಲ: ಚುನಾವಣೆ ಬಹಿಷ್ಕರಿಸಿದ ಹೊನ್ನಗುಂಡಿ ಗ್ರಾಮಸ್ಥರು!

ಅದೆಷ್ಟೋ ಚುನಾವಣೆ ನಡೆದು ಹೋದವು, ಆದರೆ ನಮ್ಮೂರಿಗೆ ಮೂಲಭೂತ ಸೌಕರ್ಯಗಳಿಲ್ಲ. ಕನಿಷ್ಠ ಸೌಲಭ್ಯವಾದ ಡಾಂಬರ್ ರಸ್ತೆ ಕಾಣದೆ ಅದೆಷ್ಟೋ ವರ್ಷ ಕಳೆದಿದೆ. ನಮ್ಮ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿದೆ ಯಾವ ರಾಜಕೀಯ ಪಕ್ಷಗಳು...

ಪ.ಬಂಗಾಳ- SIR ಮೇಲ್ಮನವಿ | 19 ನ್ಯಾಯಾಧಿಕರಣಗಳ ದುರ್ಗತಿ-...

ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯ (ಎಸ್‌ಐಆರ್‌) ಮೇಲ್ಮನವಿಗಳ ಇತ್ಯರ್ಥಕ್ಕೆ ಸ್ಥಾಪಿಸಲಾದ 19 ನ್ಯಾಯಾಧಿಕರಣಗಳು ಸಾಲುಸಾಲು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿವೆ. ಕಾರ್ಯಭಾರ, ಕೆಂಪುಪಟ್ಟಿ ಆಡಳಿತದಿಂದ ನಿವೃತ್ತ ನ್ಯಾಯಮೂರ್ತಿಗಳ ರಾಜೀನಾಮೆ, ಸಿಬ್ಬಂದಿಯ ವೇತನ ವಿಳಂಬದ...

ಕೃಷಿಮೇಳ | ‘ಪ್ರಕೃತಿ ಕೊಡಾದೆಲ್ಲ ಒಳ್ಳೀದೆ ಇರ್ತೈತಿ, ಮನ್ಷಾನೇ...

"ಪ್ರಕೃತಿ ಮನುಷ್ಯನಿಗೆ ಕೊಡುವುದೆಲ್ಲವೂ ಒಳ್ಳೆಯದೇ ಇರುತ್ತದೆ, ಆದರೆ ಮನುಷ್ಯ ಪ್ರಕೃತಿಯನ್ನು ಮರೆತು ಏನೇನೋ ಹುಡುಕಿಕೊಂಡು ಹೊರಟಿದ್ದಾನೆ" ಇದು ತಲೆಮಾರುಗಳಿಂದ ಕಂಬಳಿ ನೇಯ್ದು ಬದುಕು ಕಟ್ಟಿಕೊಂಡಿರುವ ಕಂಬಳಿ ನೇಕಾರರ ಮನದಾಳ. ಅಜ್ಜ-ಮುತ್ತಜ್ಜರ ಕಾಲದಿಂದಲೂ ನಡೆದುಕೊಂಡು...

“ಮಂಡ್ಯ ಜಿಲ್ಲೆಯ ಪ್ರತಿಯೊಬ್ಬ ನಾಗರಿಕರಿಗೂ ಉತ್ತಮ ಆರೋಗ್ಯ ಸೇವೆ ಒದಗಿಸಬೇಕು ಎಂಬ ಸರ್ಕಾರದ ಆಶಯದಂತೆ ಜಯದೇವ ಸಂಸ್ಥೆಯ ಘಟಕ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ವೈದ್ಯಕೀಯ ಕಾಲೇಜು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸೇರಿದ ಜಾಗವನ್ನು ಪರಿಶೀಲಿಸಿದ್ದು, ಆಸ್ಪತ್ರೆ ಸ್ಥಾಪನೆಗೆ ಸೂಕ್ತವಾಗಿದೆ. ಈ ಕುರಿತು ನೀಲನಕ್ಷೆಯನ್ನು ಮೂರು-ನಾಲ್ಕು ದಿನಗಳಲ್ಲಿ ಸರ್ಕಾರಕ್ಕೆ ಸಲ್ಲಿಸಲಾಗುವುದು” ಎಂದು ತಿಳಿಸಿದರು.

“ಹೃದಯಾಘಾತದಂತಹ ತುರ್ತು ಸಂದರ್ಭಗಳಲ್ಲಿ ರೋಗಿಗಳಿಗೆ ತಕ್ಷಣ ಚಿಕಿತ್ಸೆ ದೊರೆಯುವುದು ಅತ್ಯಂತ ಮುಖ್ಯ. ಹೃದ್ರೋಗಿಗಳಿಗೆ ಮೈಸೂರು ಅಥವಾ ಬೆಂಗಳೂರಿಗೆ ತೆರಳುವ ಅನಿವಾರ್ಯತೆ ತಪ್ಪಿಸಿ, ಮಂಡ್ಯದಲ್ಲಿಯೇ ತುರ್ತು ಚಿಕಿತ್ಸೆ ಒದಗಿಸುವುದು ನಮ್ಮ ಪ್ರಮುಖ ಉದ್ದೇಶವಾಗಿದೆ. ಹೃದಯಾಘಾತ ಸಂಭವಿಸಿದ ಮೊದಲ 45 ನಿಮಿಷಗಳ ಗೋಲ್ಡನ್ ಅವರ್ ಅವಧಿಯಲ್ಲಿ ಸೂಕ್ತ ಚಿಕಿತ್ಸೆ ದೊರೆತರೆ ಅಮೂಲ್ಯ ಜೀವಗಳನ್ನು ಉಳಿಸಲು ಸಾಧ್ಯವಾಗುತ್ತದೆ” ಎಂದು ಹೇಳಿದರು.

“ಆಸ್ಪತ್ರೆಯ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಕನಿಷ್ಠ 5 ಎಕರೆ ಜಾಗದ ಅಗತ್ಯವಿದೆ. ಅಗತ್ಯ ಜಾಗ ಲಭ್ಯವಾದಲ್ಲಿ 250 ಹಾಸಿಗೆಗಳ ಆಸ್ಪತ್ರೆಯನ್ನು ನಿರ್ಮಿಸುವ ಉದ್ದೇಶವಿದೆ. ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕ (ಐಸಿಯು), ಹೃದ್ರೋಗ ತೀವ್ರ ನಿಗಾ ಘಟಕ (ಎಂಐಸಿಯು), ಕ್ಯಾತ್ ಲ್ಯಾಬ್ ಹಾಗೂ ಶಸ್ತ್ರಚಿಕಿತ್ಸಾ ಕೊಠಡಿಗಳ (ಒಟಿ) ಸಂಕೀರ್ಣ ಸೇರಿದಂತೆ ಆಧುನಿಕ ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಸಲಾಗುವುದು” ಎಂದು ತಿಳಿಸಿದರು.

“ಈ ಯೋಜನೆ ಅನುಷ್ಠಾನಕ್ಕೆ ಸ್ಥಳೀಯ ಶಾಸಕ ರವಿಕುಮಾರ್ ಅವರು ಸಹಕಾರ ನೀಡುತ್ತಿದ್ದಾರೆ. ಸರ್ಕಾರದ ಮಾರ್ಗದರ್ಶನ, ಜನಪ್ರತಿನಿಧಿಗಳ ಸಹಕಾರದೊಂದಿಗೆ ಮುಂದಿನ ಪ್ರಕ್ರಿಯೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ, ಮಂಡ್ಯ ಜಿಲ್ಲೆಯ ಜನರಿಗೆ ಉತ್ತಮ ಹೃದ್ರೋಗ ಚಿಕಿತ್ಸಾ ಸೇವೆ ಒದಗಿಸಲು ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಆಸ್ಪತ್ರೆಯ ಸಿಇಒ ನಾಗರಾಜು ಪ್ರಭಾಕರ್, ಮೋಹನ್ ರಾಜ್ ಮಂಡ್ಯ ನರಸಿಂಹಸ್ವಾಮಿ ಹಾಗೂ ಶಿವಕುಮಾರ್ ಸೇರಿದಂತೆ ಹಲವರು ಇದ್ದರು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ.ಬಂಗಾಳ- SIR ಮೇಲ್ಮನವಿ | 19 ನ್ಯಾಯಾಧಿಕರಣಗಳ ದುರ್ಗತಿ- ಬೀಳುತ್ತ, ಏಳುತ್ತ, ಕುಂಟುತ್ತ, ತೆವಳುತ್ತ ಸಾಗಿವೆಯೇಕೆ?

ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯ (ಎಸ್‌ಐಆರ್‌) ಮೇಲ್ಮನವಿಗಳ ಇತ್ಯರ್ಥಕ್ಕೆ ಸ್ಥಾಪಿಸಲಾದ...

ಆಶಾ ಕಾರ್ಯಕರ್ತೆಯರ ಬೇಡಿಕೆಯ ಮೊತ್ತ ‘ಬಹಳ ದೊಡ್ಡದು’ ಎನ್ನುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ

ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನವೆಂಬರ್ 17ರಿಂದ ಅಹೋರಾತ್ರಿ ಅನಿರ್ದಿಷ್ಟಾವಧಿ ಹೋರಾಟ ನಡೆಸುತ್ತಿರುವ...

ಬೀದರ್‌ | ರಾಜೋತ್ಸವ ಪ್ರಶಸ್ತಿ ಪುರಸ್ಕೃತೆ ಶಾಂತಬಾಯಿ ಕಾಂಬಳೆ ಅವರೊಂದಿಗೆ ಸಂವಾದ

ಬಿದ್ರಿ ಕರಕುಶಲ ಕಲಾ ಕ್ಷೇತ್ರದಲ್ಲಿ ಪ್ರಸಕ್ತ ಸಾಲಿನಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ...

ಗದಗ | ಬರ ಪರಿಸ್ಥಿತಿ ಎದುರಿಸಲು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಜಿಲ್ಲಾಧಿಕಾರಿ ಸಿ. ಎನ್. ಶ್ರೀಧರ್

"ಜಿಲ್ಲೆಯಲ್ಲಿ ಉಂಟಾಗಬಹುದಾದ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸುವ ನಿಟ್ಟಿನಲ್ಲಿ ಕುಡಿಯುವ ನೀರಿನ...