ಕಲಬುರಗಿ | ₹1715.81 ಕೋಟಿ ವಿದ್ಯುತ್‌ ಶುಲ್ಕ ಬಾಕಿ ಉಳಿಸಿಕೊಂಡಿವೆ ಇಲಾಖೆಗಳು

Date:

ಗುಲ್ಬರ್ಗಾ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಜೆಸ್ಕಾಂ) ವ್ಯಾಪ್ತಿಯಲ್ಲಿನ ಸರ್ಕಾರದ ಹಲವು ಇಲಾಖೆಗಳು ₹1,715.81 ಕೋಟಿಯಷ್ಟು ವಿದ್ಯುತ್ ಶುಲ್ಕ ಬಾಕಿ ಉಳಿಸಿಕೊಂಡಿವೆ.

ವರಮಾನದ ಕೊರತೆಯಿಂದ ಪಾರಾಗಲು ರಾಜ್ಯದ ವಿದ್ಯುತ್ ಸರಬರಾಜು ಕಂಪನಿಗಳು(ಎಸ್ಕಾಂ) ದರ ಹೆಚ್ಚಳದ ಮೊರೆ ಹೋಗಿವೆ. ತಮ್ಮ ನಷ್ಟದ ಭಾರವನ್ನು ಗ್ರಾಹಕರ ಮೇಲೆ ಹೊರೆಸಿವೆ. ಆದರೆ, ಸರ್ಕಾರದ ಇಲಾಖೆಗಳಿಂದಲೇ ಸಕಾಲದಲ್ಲಿ ವಿದ್ಯುತ್ ಶುಲ್ಕ ಪಾವತಿ ಆಗುತ್ತಿಲ್ಲ. ಸಂಬಂಧ ಪಟ್ಟ ಇಲಾಖೆಗಳಿಗೆ ಪತ್ರ ಬರೆದರೂ ಶುಲ್ಕ ಮಾತ್ರ ಪಾವತಿಯಾಗುತ್ತಿಲ್ಲ.

ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್(ಜೆಸ್ಕಾಂ) ನೀಡಿದ ಮಾಹಿತಿ ಅನ್ವಯ, 2023ರ ಮಾರ್ಚ್‌ ಅಂತ್ಯದ ವೇಳೆಗೆ ಹಲವು ಇಲಾಖೆಗಳು ₹1,715.81 ಕೋಟಿ ವಿದ್ಯುಲ್ ಶುಲ್ಕ ಬಾಕಿ ಉಳಿಸಿಕೊಂಡಿವೆ. ಈ ಪೈಕಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯದ್ದೇ(ಆರ್‌ಡಿಪಿಆರ್‌) ಅತ್ಯಧಿಕ, ಅಂದರೆ ₹1,556.69 ಕೋಟಿಯಷ್ಟು ಬಾಕಿ ಇದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

2022 ಏಪ್ರಿಲ್‌ 1ರ ಅವಧಿಯಲ್ಲಿ ಆರ್‌ಡಿಪಿಆರ್‌ನ ಬಾಕಿ ಮೊತ್ತ ₹1,133.87 ಕೋಟಿ ಇತ್ತು. 2022–23ರ ಅವಧಿಯಲ್ಲಿ ₹506.17 ಕೋಟಿಯ ಸೇರ್ಪಡೆಯೊಂದಿಗೆ ₹1,640.04 ಕೋಟಿಗೆ ತಲುಪಿತು. ಒಂದು ವರ್ಷದ ಅವಧಿಯಲ್ಲಿ ₹83.35 ಕೋಟಿಯಷ್ಟು ಶುಲ್ಕ ಪಾವತಿಸಿ, ₹1,556.69 ಬಾಕಿ ಉಳಿಸಿಕೊಂಡಿದೆ.

ನಗರಾಭಿವೃದ್ಧಿ ಇಲಾಖೆ(ಯುಡಿಡಿ) ₹110.48 ಕೋಟಿ, ಸಣ್ಣ ನೀರಾವರಿ ಇಲಾಖೆ ₹23.12 ಕೋಟಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ(ಬಹುಗ್ರಾಮ ಯೋಜನೆ; ಆರ್‌ಡಿಡಬ್ಲ್ಯು ಮತ್ತು ಎಸ್‌ಡಿ) ಇಲಾಖೆ ₹17.65, ಬೃಹತ್‌ ನೀರಾವರಿ ಇಲಾಖೆ ₹1.78 ಕೋಟಿ, ರಾಜ್ಯ ಮತ್ತು ಕೇಂದ್ರ ಸರ್ಕಾರದ ಇತರೆ ಇಲಾಖೆಗಳು ಕ್ರಮವಾಗಿ ₹5.57 ಕೋಟಿ ಹಾಗೂ ₹38 ಲಕ್ಷದಷ್ಟು ಶುಲ್ಕ ಪಾವತಿಸಬೇಕಿದೆ. ವಾಣಿಜ್ಯ ಮತ್ತು ಕೈಗಾರಿಕೆ(ಸಿ ಅಂಡ್ ಐ) ಇಲಾಖೆ ₹15 ಲಕ್ಷ ಬಾಕಿ ಉಳಿಸಿಕೊಂಡಿದೆ.

ಜೆಸ್ಕಾಂ ವ್ಯಾಪ್ತಿಯ ಕಲಬುರಗಿ ಜಿಲ್ಲೆಯ ಹಲವು ಇಲಾಖೆಗಳು ₹322.73 ಕೋಟಿ, ಯಾದಗಿರಿ– ₹68.89, ಬೀದರ್– ₹402.16, ಬಳ್ಳಾರಿ– ₹192.24 ಕೋಟಿ, ವಿಜಯನಗರ– ₹347.95 ಕೋಟಿ, ರಾಯಚೂರು– ₹270.22 ಕೋಟಿ ಹಾಗೂ ಕೊಪ್ಪಳ– ₹62.99 ಕೋಟಿಯಷ್ಟು ವಿದ್ಯುತ್ ಶುಲ್ಕ ಕಟ್ಟಬೇಕಿದೆ.

“ಜನಸಾಮಾನ್ಯರು ಶುಲ್ಕ ಕಟ್ಟದಿದ್ದರೆ ಜೆಸ್ಕಾಂ ಸಿಬ್ಬಂದಿ ಬಂದು ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತಾರೆ. ಸರ್ಕಾರಿ ಇಲಾಖೆಗಳು ನೂರಾರು ಕೋಟಿ ಶುಲ್ಕ ಪಾವತಿಸಲು ಹಿಂದೇಟು ಹಾಕುತ್ತಿದ್ದರೂ ಯಾವುದೇ ಕ್ರಮ ಏಕೆ ತೆಗೆದುಕೊಳ್ಳುತ್ತಿಲ್ಲ? ನಷ್ಟದಿಂದ ಹೊರಬರಲು ಸಾಮಾನ್ಯ ಗ್ರಾಹಕರ ಮೇಲೆ ದರ ಏರಿಕೆಯ ಬರೆ ಹಾಕುವುದು ಎಷ್ಟು ಸರಿ” ಎಂದು ಗ್ರಾಹಕ ಸಂತೋಷ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಹಾಸನ | ವಿದ್ಯುತ್‌ ಬಿಲ್‌ ಕೇಳಿದ್ದಕ್ಕೆ ಸಿಬ್ಬಂದಿ ಮೇಲೆ ಹಲ್ಲೆ

“ಕೆಲವು ಇಲಾಖೆಗಳಿಗೆ ಸಕಾಲಕ್ಕೆ ಬಾರದ ಅನುದಾನದಿಂದಾಗಿ ಜೆಸ್ಕಾಂಗೆ ವಿದ್ಯುತ್ ಶುಲ್ಕ ಪಾವತಿ ಆಗುತ್ತಿಲ್ಲ. ಸಂಬಂಧಪಟ್ಟ ಇಲಾಖೆಗಳಿಗೆ ಆಗಾಗ ಪತ್ರ ಬರೆಯಲಾಗುತ್ತಿದೆ” ಎಂದು ಜೆಸ್ಕಾಂ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹಲವು ಇಲಾಖೆಗಳು ಜೆಸ್ಕಾಂಗೆ ಪಾವತಿಸಬೇಕಾದ ವಿದ್ಯುತ್ ಶುಲ್ಕದ ಅಂಕಿಅಂಶ(₹ ಕೋಟಿ)

ಇಲಾಖೆಗಳು2022 ಏ.1ರ ಬಾಕಿ(ಕೋಟಿ)2022-23ರ ಶುಲ್ಕ2022-23ರ ಪಾವತಿ
ಆರ್‌ಡಿಪಿಆರ್1133.87506.17; 83.351556.69
ಯುಡಿಡಿ79.83252.04; 221.39110.48
ಸಿ ಅಂಡ್‌ ಐ0.13 0.64; 0.620.15
ಸಣ್ಣ ನೀರಾವರಿ18.0210.54; 5.4423.12
ಬೃಹತ್‌ ನೀರಾವರಿ 2.1116.81; 17.151.78
ಆರ್‌ಡಿಡಬ್ಲ್ಯೂ
ಅಂಡ್‌ ಎಸ್‌ಡಿ
8.2318.01; 8.6017.65
ರಾಜ್ಯ ಸರ್ಕಾರದ
ಇತರೆ
4.3715.38; 14.175.57
ಕೇಂದ್ರ ಸರ್ಕಾರದ
ಇತರೆ
0.935.11; 5.660.38
ಒಟ್ಟು1247.49824.70; 356.381715.81

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಲೋಕಸಭಾ ಚುನಾವಣೆ | ಮತದಾನ ಮಾಡಲು ವಿಕಲಚೇತನರು, ಹಿರಿಯ ನಾಗರಿಕರಿಗೆ ಸೌಲಭ್ಯ

ರಾಜ್ಯದಲ್ಲಿ ಏಪ್ರಿಲ್ 26ರಂದು ಮೊದಲ ಹಂತದ ಲೋಕಸಭಾ ಚುನಾವಣೆ ನಡೆಯಲಿದೆ. ಈ...

ಲೋಕಸಭಾ ಚುನಾವಣೆ; ಕರ್ತವ್ಯದಲ್ಲಿರುವ ಬಹುತೇಕ ನೌಕರರಿಗೆ ಸಿಗದ ಅಂಚೆ ಮತದಾನ

ಲೋಕಸಭಾ ಚುನಾವಣೆಯ ಕರ್ತವ್ಯಕ್ಕೆ ತೆರಳುವ ಬಹುತೇಕ ಸೇವಾ ಸಿಬ್ಬಂದಿಗಳು ಈ ಬಾರಿ...

ಹಾಸನ ಪೆನ್‌ಡ್ರೈವ್‌ ಪ್ರಕರಣ: ನಾಲ್ವರು ಸಂತ್ರಸ್ತೆಯರು ಆತ್ಮಹತ್ಯೆಗೆ ಯತ್ನ

ಹಾಸನದ ಪೆನ್‌ಡ್ರೈವ್‌ ಪ್ರಕರಣ ದಿನದಿಂದ ದಿನಕ್ಕೆ ಜಿಲ್ಲಾದ್ಯಂತ ಆತಂಕ ಹೆಚ್ಚಿಸ್ತಾ ಇದೆ....

ಬೆಂಗಳೂರು | ಲೋಕಸಭಾ ಚುನಾವಣೆ : ಮಸ್ಟರಿಂಗ್ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಜಿಲ್ಲಾ ಚುನಾವಣಾಧಿಕಾರಿ

2024ರ ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆ, ಜಿಲ್ಲಾ ಚುನಾವಣಾಧಿಕಾರಿ ಹಾಗೂ ಬೃಹತ್...