ಸಾಲ ಪಾವತಿಸಿದರೂ ಆಸ್ತಿ ಪತ್ರ ನೀಡದ ಕೆನರಾ ಬ್ಯಾಂಕ್; ₹2 ಲಕ್ಷದೊಂದಿಗೆ ದಾಖಲೆ ವಾಪಸ್‌ ಕೊಡಲು ಹೈಕೋರ್ಟ್‌ ಸೂಚನೆ

Date:

ಸಾಲಬಾಧೆಯಿಂದ ಮೃತಪಟ್ಟಿದ್ದ ವ್ಯಕ್ತಿ ಅಡಮಾನವಿಟ್ಟಿದ್ದ ಜಮೀನು ಮತ್ತು ಮನೆ ಆಸ್ತಿಗಳ ಮೂಲ ದಾಖಲೆಗಳನ್ನು ಆತನ ತಂದೆಗೆ ಹಿಂದಿರುಗಿಸದ ಕೆನರಾ ಬ್ಯಾಂಕ್‌ಗೆ ಹೈಕೋರ್ಟ್‌ ದಂಡ ವಿಧಿಸಿದೆ. ಆ 2 ಲಕ್ಷ ರೂ. ದಂಡದ ಹಣವನ್ನುವೃದ್ಧ ತಂದೆಗೆ ನೀಡುವಂತೆ ನಿರ್ದೇಶಿಸಿದೆ.

- Advertisement -

ದಾವಣಗೆರೆಯ ಎಂಬಿ ಆಗ್ರೋ ಫುಡ್‌ ಇಂಡಸ್ಟ್ರೀಸ್‌ ಉದ್ದಿಮೆ ವ್ಯವಸ್ಥಾಪಕ ನಿರ್ದೇಶಕ ಅನಿಮೇಶ್ ಗೌಡ ಎಂಬವರು ಆಸ್ತಿ ಪತ್ರಗಳನ್ನು ಕೆನರಾ ಬ್ಯಾಂಕ್‌ನಲ್ಲಿ ಒತ್ತೆಯಿಟ್ಟು, ಸಾಲ ಪಡೆದುಕೊಂಡಿದ್ದರು. ಬಳಿಕ, ಅವರು ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡರು. ಅತನ ಸಾವಿನ ಬಳಿಕ, ಆತನ ತಂದೆ ಎಂ.ಬಿ ಶೇಖರಗೌಡ ಅವರೇ ಸಂಪೂರ್ಣ ಸಾಲದ ಮೊತ್ತ 20 ಕೋಟಿ ರೂ.ಗಳನ್ನು ‘ಒನ್‌ ಟೈಮ್ ಸೆಟಲ್‌ಮೆಂಟ್‌’ ಮೂಲಕ ಪಾವತಿಸಿದ್ದರು. ಆದರೂ, ಅವರಿಗೆ ಬ್ಯಾಂಕ್‌ ಆಸ್ತಿ ಪತ್ರಗಳನ್ನು ಹಿಂದಿರುಗಿಸಿರಲಿಲ್ಲ. ಸಾಲ ಪಡೆದಿದ್ದ ಮಗನಿಗೇ ದಾಖಲೆಗಳನ್ನು ಕೊಡುತ್ತೇವೆ. ತಂದೆಗಲ್ಲ ಎಂಬ ವಿಚಿತ್ರ ನಿಲುವನ್ನು ಬ್ಯಾಂಕ್‌ ತೆಗೆದುಕೊಂಡಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಿತ್ತನೆ ಗುರಿ ಅರ್ಧದಷ್ಟೂ ಮುಟ್ಟದ ಕೃಷಿ ಚಟುವಟಿಕೆ; ಜೋಳದ...

ಮುಂಗಾರು ಮಳೆ ಕೈಕೊಟ್ಟು ಬೆಳೆ ನಷ್ಟದಿಂದ ಕಂಗೆಟ್ಟ ಅನ್ನದಾತರಿಗೆ ಹಿಂಗಾರು ಹಂಗಾಮಿನಲ್ಲಾದರೂ ಮಳೆ ಆಸರೆಯಾಗಬಹುದು ಎಂಬ ನಿರೀಕ್ಷೆಯಿತ್ತು. ಆದರೆ ರೈತರ ಆ ನಿರೀಕ್ಷೆಯೂ ಹುಸಿಯಾಗಿದೆ. ಮುಂಗಾರಿನ ಬೆನ್ನಲ್ಲೇ ಹಿಂಗಾರು ಹಂಗಾಮಿನಲ್ಲೂ ಮಳೆ ಕೈಕೊಟ್ಟಿರುವುದರಿಂದ...

ಧಾರವಾಡದ ‘ಲಲಿತಕಲಾ ಅಕಾಡೆಮಿ’ಗೆ ದುಸ್ಥಿತಿ: ಕಲಾವಿದರಿಂದಲೇ ದೂರವಾದ ಪ್ರಾದೇಶಿಕ...

ಕಲಾವಿದರ ಬಹುದಿನಗಳ ಬೇಡಿಕೆಯಂತೆ ಸ್ಥಾಪನೆಯಾದ ಕೇಂದ್ರಕ್ಕೆ ಮೂರೇ ವರ್ಷಗಳಲ್ಲಿ ದುಸ್ಥಿತಿ; ಸಂಚಾಲಕರ ಏಕಪಕ್ಷೀಯ ಧೋರಣೆ, ಕಲಾವಿದರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದು ಹಾಗೂ ಕಲಾ ಚಟುವಟಿಕೆಗಳ ಕೊರತೆಯ ವಿರುದ್ಧ ಹಿರಿಯ ಕಲಾವಿದರ ಆಕ್ರೋಶ. ಸಲಹಾ ಸಮಿತಿ...

ಗದಗ | ವರದಕ್ಷಿಣೆ ಮುಟ್ಟದ, ಒಗ್ಗಟ್ಟು ಬಿಡದ ತುಂಬು...

ಆಧುನಿಕತೆ ಬೆಳೆದಂತೆಲ್ಲ ಸಮಾಜದಲ್ಲಿ ಅವಿಭಕ್ತ ಕುಟುಂಬಗಳು ಕಣ್ಮರೆಯಾಗಿ ವಿಭಕ್ತ ಕುಟುಂಬಗಳ ಸಂಖ್ಯೆಗಳು ಹೆಚ್ಚಾಗುತ್ತಿವೆ. ನಾವು ನಮ್ಮವರು ಎನ್ನುವ ಭಾವನೆಗಳು ಮರೆಯಾಗುತ್ತಿರುವ ಹೊತ್ತಿನಲ್ಲಿ ನಂಬಿಕೆ, ವಿಶ್ವಾಸ, ಪ್ರೀತಿಯ ತಳಗಹದಿಯ ಮೇಲೆ ಇಂದಿಗೂ ಜಾಲವಾಡಗಿ ಅವಿಭಕ್ತ...

ಬ್ಯಾಂಕ್‌ ವಿರುದ್ಧ ಎಂ.ಬಿ.ಶೇಖರಗೌಡ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಪೀಠ, ವೃದ್ಧನಿಗೆ 2 ಲಕ್ಷ ರೂ. ಹಣದ ಜೊತೆಗೆ, ದಾಖಲೆಗಳನ್ನು ಹಿಂದಿರುಗಿಸವಂತೆ ಮೂಲ ದಾಖಲೆಗಳನ್ನು ಹಿಂದಿರುಗಿಸುವಂತೆ ಕೆನರಾ ಬ್ಯಾಂಕ್‌ಗೆ ನಿರ್ದೇಶನ ನೀಡಿದೆ.

ವಿಚಾರಣೆಯ ಸಮಯದಲ್ಲಿ ಕೆನರಾ ಬ್ಯಾಂಕ್‌ನ ವಕೀಲರು, “ತಂದೆ ಮೂಲ ಸಾಲಗಾರರಲ್ಲ, ಆದ್ದರಿಂದ ದಾಖಲೆಗಳನ್ನು ಅವರಿಗೆ ಹಿಂತಿರುಗಿಸಲಾಗುವುದಿಲ್ಲ. ಆದರೆ ನ್ಯಾಯಾಲಯವು ನಿರ್ದೇಶನ ನೀಡಿದರೆ ಹಿಂತಿರುಗಿಸಲಾಗುವುದು” ಎಂದು ಹೊಸ ವಾದವನ್ನು ಮುಂದಿಟ್ಟಿದ್ದರು.

ಆದರೆ, ಕೇವಲ ನಿರ್ದೇಶನವನ್ನು ನೀಡಲು ಸಾಧ್ಯವಿಲ್ಲ ಎಂದಿರುವ ನ್ಯಾಯಾಲಯ, “ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದು ತಿಳಿದಿದೆ. ಮಗನ ಸಾವಿನ ಹಿನ್ನೆಲೆಯಲ್ಲಿ ತಂದೆಗೆ ಒಟಿಎಸ್ ನೀಡಿದ ಬ್ಯಾಂಕ್, ದಾಖಲೆಗಳನ್ನು ಮಾತ್ರ ಮೂಲ ಸಾಲಗಾರನಿಗೆ ಹಿಂದಿರುಗಿಸಲು ಬಯಸಿದೆ. ಬ್ಯಾಂಕ್‌ನ ಈ ಕ್ರಮ ನ್ಯಾಯಾಲಯದ ಆತ್ಮಸಾಕ್ಷಿಗೆ ಆಘಾತ ತಂದಿದೆ” ಎಂದು ಹೇಳಿದೆ.

ಬ್ಯಾಂಕ್‌ನ ವರ್ತನೆಯು ಖಾಸಗಿ ಲೇವಾದೇವಿದಾರನ ವರ್ತನೆಯಂತೆಯೇ ಇದೆ. ಅದೂ ಸಹ, ಸಂಪೂರ್ಣ ಮೊತ್ತವನ್ನು ಸ್ವೀಕರಿಸಿದ ನಂತರವೂ, ಮೂಲ ಸಾಲಗಾರ ಇಲ್ಲವೆಂಬುದು ಗೊತ್ತಿದ್ದರೂ ದಾಖಲೆಗಳನ್ನು ಮೂಲ ಸಾಲಗಾರನಿಗೇ ಹಿಂದಿರುಗಿಸುತ್ತೇವೆ ಎಂಬುದು ಗ್ರಹಿಕೆಗೆ ಮೀರಿದ್ದಾಗಿದೆ ಮತ್ತು ವಿಚಿತ್ರವಾಗಿದೆ” ಎಂದು ನ್ಯಾಯಾಲಯ ಅಸಮಧಾನ ವ್ಯಕ್ತಪಡಿಸಿದೆ.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಪಾದಚಾರಿಗಳ ಮೇಲೆ ಉರುಳುವ ಭೀತಿಯಲ್ಲಿ ಅಪಾಯಕಾರಿ ತೆಂಗಿನ ಮರ

ಉಡುಪಿ ನಗರದ ಸಿಟಿ ಬಸ್ ನಿಲ್ದಾಣದಿಂದ ಸರ್ವಿಸ್ ಬಸ್ ನಿಲ್ದಾಣವನ್ನು ಸಂಪರ್ಕಿಸುವ...

ಗದಗ | ನ. 27ರಂದು ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ  ನವೆಂಬರ್ 27 ರಂದು ಮಧ್ಯಾಹ್ನ 3 ಗಂಟೆಗೆ...

ಗದಗ | ನ. 16ರಂದು ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ

ಗದಗ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯನ್ನು ನವೆಂಬರ್...

ಉಡುಪಿ | ನೇಜಾರು ನಾಲ್ವರ ಹತ್ಯೆ ಪ್ರಕರಣಕ್ಕೆ ಮೂರು ವರ್ಷ: ನ್ಯಾಯದ ನಿರೀಕ್ಷೆಯಲ್ಲಿ ಸಂತ್ರಸ್ತ ಕುಟುಂಬ

ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ನೇಜಾರಿನಲ್ಲಿ ನಡೆದ...