2026-27ನೇ ಶೈಕ್ಷಣಿಕ ಸಾಲಿಗೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದಲ್ಲಿರುವ ವಿವಿಧ ವಸತಿ ಶಾಲೆ ಹಾಗೂ ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅತಿಥಿ ಶಿಕ್ಷಕರು ಮತ್ತು ಉಪನ್ಯಾಸಕರನ್ನು ತಾತ್ಕಾಲಿಕವಾಗಿ ನೇಮಿಸಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.
ಅರ್ಹ ಅಭ್ಯರ್ಥಿಗಳು ಜೂನ್ 2ರೊಳಗೆ ಅಗತ್ಯ ದಾಖಲೆಗಳೊಂದಿಗೆ ಸಂಬಂಧಿಸಿದ ವಸತಿ ಶಾಲೆ, ಕಾಲೇಜು ಅಥವಾ ಸಮಾಜ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶೇಖರ್ ತಿಳಿಸಿದ್ದಾರೆ.
ಅತಿಥಿ ಶಿಕ್ಷಕರು ಹಾಗೂ ಉಪನ್ಯಾಸಕರನ್ನು ಸಂಘದ ನೇಮಕಾತಿ ನಿಯಮಗಳಲ್ಲಿ ನಿಗದಿಪಡಿಸಿರುವ ವಿದ್ಯಾರ್ಹತೆ, ಬೋಧನಾ ಕೌಶಲ್ಯ, ಸೇವಾನುಭವ ಹಾಗೂ ಆಂಗ್ಲ ಭಾಷಾ ಸಂವಹನ ಕೌಶಲ್ಯಗಳ ಆಧಾರದ ಮೇಲೆ ಮೆರಿಟ್ ಪಟ್ಟಿಯ ಮೂಲಕ ಆಯ್ಕೆ ಮಾಡಲಾಗುವುದು. ಅತಿಥಿ ಶಿಕ್ಷಕರ ಹುದ್ದೆಗಳಿಗೆ ಟಿಇಟಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಅಂತಹ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದಲ್ಲಿ ಇತರ ಅರ್ಹ ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ಪರಿಗಣಿಸಲಾಗುವುದು.
ಈ ಸುದ್ದಿ ಓದಿದ್ದೀರಾ?ಮೈಸೂರಿನಲ್ಲಿ ಎಸ್ಐಆರ್ ವಿರೋಧಿ ಒಕ್ಕೂಟದ ಪ್ರತಿಭಟನೆ: ಮತದಾರರ ಹಕ್ಕುಗಳ ರಕ್ಷಣೆಗೆ ನಾಲ್ಕು ಪ್ರಮುಖ ಆಗ್ರಹಗಳು
ನೇರ ನೇಮಕಾತಿ ಮೂಲಕ ಖಾಯಂ ಶಿಕ್ಷಕರು ಅಥವಾ ಉಪನ್ಯಾಸಕರು ಕರ್ತವ್ಯಕ್ಕೆ ಹಾಜರಾದಲ್ಲಿ, ಅಥವಾ ವರ್ಗಾವಣೆ ಹಾಗೂ ನಿಯೋಜನೆ ಆದೇಶದ ಮೇರೆಗೆ ಸಿಬ್ಬಂದಿ ನೇಮಕವಾದಲ್ಲಿ, ಅತಿಥಿ ಶಿಕ್ಷಕರು ಮತ್ತು ಉಪನ್ಯಾಸಕರ ಸೇವೆಯನ್ನು ತಕ್ಷಣವೇ ಸ್ಥಗಿತಗೊಳಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಈ ಸುದ್ದಿ ಓದಿದ್ದೀರಾ?ಮಂಡ್ಯ | ಅರ್ಹ ಮತದಾರರ ಹಕ್ಕು ರಕ್ಷಣೆಗೆ ಎಸ್ಐಆರ್ ಪ್ರಕ್ರಿಯೆಯಲ್ಲಿ ಸಮಗ್ರ ಬದಲಾವಣೆ ಅಗತ್ಯ: ಒಕ್ಕೂಟದ ಆಗ್ರಹ
ಅರ್ಜಿಗಳನ್ನು ಪಡೆಯಬಹುದಾದ ವಸತಿ ಶಾಲೆ/ ಕಾಲೇಜುಗಳ ವಿವರ:
- ಉಪ ನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಕೊಡಗು ಜಿಲ್ಲೆ, ಮಡಿಕೇರಿ ದೂ-08272-225531.
- ಮುರಾರ್ಜಿ ದೇಸಾಯಿ ವಸತಿ ಶಾಲೆ/ ಕಾಲೇಜು, ಬಸವನಹಳ್ಳಿ, ಕುಶಾಲನಗರ ತಾಲ್ಲೂಕು. ಮೊ-9845659909.
- ಮುರಾರ್ಜಿ ದೇಸಾಯಿ ವಸತಿ ಶಾಲೆ, ಕೂಡಿಗೆ, ಕುಶಾಲನಗರ ತಾಲ್ಲೂಕು. ಮೊ-9901267635.
- ಮುರಾರ್ಜಿ ದೇಸಾಯಿ ವಸತಿ ಶಾಲೆ, ಅಲೂರು ಸಿದ್ದಾಪುರ, ಸೋಮವಾರಪೇಟೆ ತಾಲ್ಲೂಕು. ಮೊ-9741958012.
- ಡಾ. ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ, ನಾಪೊಕ್ಲು, ಮಡಿಕೇರಿ ತಾಲ್ಲೂಕು. ಮೊ-9686597448.
- ಡಾ. ಬಿ.ಆರ್. ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆ, ತೊಳೂರು ಶೆಟ್ಟಳ್ಳಿ, ಸೋಮವಾರಪೇಟೆ ತಾಲ್ಲೂಕು. ಮೊ-9945707234.
- ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ, ಭಾಗಮಂಡಲ, ಮಡಿಕೇರಿ ತಾಲ್ಲೂಕು. ಮೊ-9611307646.
- ಮುರಾರ್ಜಿ ದೇಸಾಯಿ ಪದವಿ ಪೂರ್ವ ಕಾಲೇಜು, ಗರಗಂದೂರು, ಸೋಮವಾರಪೇಟೆ ತಾಲ್ಲೂಕು. ಮೊ-8105657451.
- ಮುರಾರ್ಜಿ ದೇಸಾಯಿ ವಸತಿ ಶಾಲೆ, ತಿತಿಮತಿ, ವಿರಾಜಪೇಟೆ ತಾಲ್ಲೂಕು. ಮೊ-7892795624.
- ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆ, ಹುದಿಕೇರಿ, ಪೊನ್ನಂಪೇಟೆ ತಾಲ್ಲೂಕು ಮೊ-8861572215.
- ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆ, ಸುಂಟಿಕೊಪ್ಪ, ಕುಶಾಲನಗರ ತಾಲ್ಲೂಕು. ಮೊ-9482359812.





