ನಗರಸಭೆ ಆವರಣದ ಬಲ್ಡೋಟ ತೊಲಗಿಸಿ ಕೊಪ್ಪಳ-ಭಾಗ್ಯನಗರ ಉಳಿಸಿ 205ನೇ ದಿನದ ಧರಣಿಗೆ ʻಸ್ವಚ್ಛ ವಿಧಾನಸಭೆʼ ಅಭಿಯಾನದ ಪಾದಯಾತ್ರಿ ನಾಗರಾಜ ಕಲ್ಲಕುಟಗರ ಬೆಂಬಲಿಸಿದರು.
ಬಲ್ಡೋಟ ತೊಲಗಿಸಿ ಕೊಪ್ಪಳ-ಭಾಗ್ಯನಗರ ಉಳಿಸಿ ಹೋರಾಟದ ವೇದಿಕೆಯಲ್ಲಿ ಮಾತನಾಡಿ, “ಯಾವುದೇ ಕೆರೆ, ಸರೋವರ, ನದಿ, ಹಳ್ಳದ ಜಲಮೂಲಗಳನ್ನು ಕಂಪನಿಗಳಿಗೆ ಕೊಡಲು ಅನುಮತಿಯಿಲ್ಲ. ಬಲ್ಡೋಟ ಕಂಪನಿಗೆ ಬಸಾಪುರ ಗ್ರಾಮದ 44.35 ಎಕರೆ ಕೆರೆ ಕೊಡುವ ನಿರ್ಧಾರ ಸರಿಯಲ್ಲ. ಕೆರೆಯನ್ನು ಸರ್ಕಾರವೇ ವಾಪಸ್ ಪಡೆದು ಗ್ರಾಮದ ಸಮುದಾಯಕ್ಕೆ ಒಪ್ಪಿಸಬೇಕು. ಇಲ್ಲದಿದ್ದರೆ ಸಾರ್ನಿವಜನಿಕರೆ ಕೆರೆಗೆ ಕಟ್ಟಿದ ಕಾಂಪೌಂಡ್ ತೆರವು ಮಾಡಿ ಕೆರೆ ವಶಪಡಿಸಿಕೊಳ್ಳಬೇಕಾಗುತ್ತದೆ” ಎಂದು ಎಚ್ಚರಿಸಿದರು.
“ಕಾರ್ಖಾನೆ ಸ್ಥಾಪನೆ ಮಾಡುವಾಗ ಯಾವುದೇ ಜನವಸತಿ, ಪರಿಸರದ ಮೇಲೆ ಹಾನಿ ಮಾಡದಂತೆ ಕಟ್ಟಾಜ್ಞೆಗಳನ್ನು ವಿಧಿಸಿ ಅನುಮತಿ ಕೊಡಬೇಕು. ಕಾರ್ಖಾನೆ ಬಫರ್ ವಲಯ ಗುರುತಿಸಿ ಅಧಿಸೂಚನೆ ನೀಡಲಾದ ಜಾಗದಲ್ಲಿ ಮಾತ್ರ ಕಾರ್ಖಾನೆ ಸ್ಥಾಪಿಸಬೇಕು. ಇಲ್ಲಿ ತುಂಗಭದ್ರಾ ಜಲಾಶಯದ ತಟದಲ್ಲಿ ಕಾರ್ಖಾನೆಗಳ ಸ್ಥಾಪನೆಗೆ ಅಧಿಸೂಚನೆ ಹೊರಡಿಸದೆ ಹೇಗೆ ಅನುಮತಿ ಕೊಡಮಾಡಿದ್ದಾರೆ. ಈಗಾಗಲೇ ಸ್ಪಾಂಜ್ ಐರನ್, ಕೆಮಿಕಲ್ ಕಾರ್ಖಾನೆಗಳು ಎರಡು ದಶಕಗಳ ಕಾಲದಿಂದ ಮಾಲಿನ್ಯ ಉಗುಳಿದೆ. ಹಾನಿಗೊಳಗಾದ 22 ಹಳ್ಳಿಗಳ ಸಂತ್ರಸ್ತರ ಆರೋಗ್ಯ ಕಾಪಾಡುವುದು ಸರ್ಕಾರದ ಮೊದಲ ಆದ್ಯತೆಯಾಗಬೇಕು” ಎಂದು ಆಕ್ರೋಶ ಹೊರಹಾಕಿದರು.
ಧರಣಿಯಲ್ಲಿ ಪ್ರಧಾನ ಸಂಚಾಲಕರಾದ ಅಲ್ಲಮಪ್ರಭು ಬೆಟ್ಟದೂರು, ಸಂಚಾಲಕರಾದ ಮಲ್ಲಿಕಾರ್ಜುನ ಗೋನಾಳ, ನಿವೃತ್ತ ಉಪನ್ಯಾಸಕ ಶಂಭುಲಿಂಗಪ್ಪ ಹರಗೇರಿ, ಶಿವಾನಂದಯ್ಯ ಬೀಳಗಿಮಠ, ರಾಜಶೇಖರ ಏಳುಬಾವಿ, ನಿವೃತ್ತ ಅಂಚೆ ಅಧಿಕಾರಿ ರವಿ ಕಾಂತನವರ, ಎಸ್. ಮಹಾದೇವಪ್ಪ ಮಾವಿನಮಡು, ಶಿವಪ್ಪ ಜಲ್ಲಿ, ಶಿವಪ್ಪ ಜಲ್ಲಿ, ದುರಗಪ್ಪ ಕನಕಮನಿ, ಭೀಮಪ್ಪ ಯಲಬುರ್ಗಾ ಇದ್ದರು.
ಕೊಪ್ಪಳ | ಬಲ್ಡೋಟ ತೊಲಗಿಸಿ ಧರಣಿಗೆ ನಾಗರಾಜ ಕಲ್ಲಕುಟಗರ ಬೆಂಬಲ
ಪೋಸ್ಟ್ ಹಂಚಿಕೊಳ್ಳಿ:
ಪೋಸ್ಟ್ ಹಂಚಿಕೊಳ್ಳಿ:
This video cannot be played in your browser. Open the video directly
ಈ ಹೊತ್ತಿನ ಪ್ರಮುಖ ಸುದ್ದಿ
ವಿಡಿಯೋ




