ಕುರಿ ಮೇಯಿಸುತ್ತಲೇ ನೀಟ್‌ನಲ್ಲಿ ಅಮೋಘ ಸಾಧನೆ: ಕೊಪ್ಪಳ ವಿದ್ಯಾರ್ಥಿ ಬದುಕಿನ ಯಶೋಗಾಥೆ ಇಲ್ಲಿದೆ ಓದಿ

Date:

ʼನಮ್ಮ ಸಾಧನೆಗೆ ಬಡತನ ಅಡ್ಡಿಯಲ್ಲ, ಛಲವೇ ಮುಖ್ಯʼ ಎಂಬುದಕ್ಕೆ ಕುರಿ ಮೇಯಿಸುತ್ತಲೇ ಓದಿ ನೀಟ್‌ನಲ್ಲಿ ಉತ್ತಮ ಅಂಕ ಗಳಿಸಿರುವ ಪುಟ್ಟರಾಜ ಅವರ ಬದುಕಿನ ಕ್ಷಣಗಳೇ ಸಾಕ್ಷಿ. ಅವರ ಸಾಧನೆಯು ಇತರರಿಗೆ ಮಾದರಿಯಾಗಿ, ಅನೇಕ ಯುವಜನರು ಓದಿನತ್ತ ಆಕರ್ಷಿತರಾಗುವಂತೆ ಮಾಡುತ್ತಿದೆ. 

ಕೊಪ್ಪಳ ಜಿಲ್ಲೆಯ ಹನುಮನಹಳ್ಳಿ ಗ್ರಾಮದಲ್ಲಿ ಕುರಿ ಮೇಯಿಸುವ, ಹೊಲದಲ್ಲಿ ಕೃಷಿ ಕೆಲಸ ಮಾಡುವ ಒಬ್ಬ ಯುವಕನ ಕಣ್ಣಲ್ಲಿ ಬಡವರಿಗೆ ವೈದ್ಯನಾಗಿ ಸೇವೆ ಮಾಡುವ ಒಂದು ಕನಸಿದೆ. ಆ ಕನಸಿನ ಛಲವೇ ಅವನನ್ನು ಇಂದು ದೇಶದ ಟಾಪ್ ರ‍್ಯಾಂಕ್‌ಗಳಿಗೆ ಕರೆದೊಯ್ದಿದೆ. ಈಗ ಇಡೀ ದೇಶಾದ್ಯಂತ ಸುದ್ದಿಯಾಗಿದ್ದಲ್ಲದೇ ಇತರರಿಗೂ ಮಾದರಿಯಾಗಿದ್ದಾರೆ ವಿದ್ಯಾರ್ಥಿ ಪುಟ್ಟರಾಜ.

- Advertisement -

NEET (UG) 2026 ಪರೀಕ್ಷೆಯಲ್ಲಿ ಪುಟ್ಟರಾಜ ಅವರು ಎಸ್‌ಟಿ ವಿಭಾಗದಲ್ಲಿ ದೇಶದ 694ನೇ ರ‍್ಯಾಂಕ್ ಪಡೆದಿದ್ದಾರೆ. ಒಟ್ಟು 720 ಅಂಕಗಳಿಗೆ 511 ಅಂಕಗಳನ್ನು ಗಳಿಸಿ ಈ ಸಾಧನೆ ಮಾಡಿದ್ದಾರೆ. ಇದು ಕೇವಲ ಒಂದು ರ‍್ಯಾಂಕ್ ಅಲ್ಲ – ದುಡಿಮೆ, ಕಷ್ಟ, ಛಲ ಮತ್ತು ಸಮರ್ಪಣೆಯ ಸಾಕ್ಷಿ.
ಪುಟ್ಟರಾಜ ಕೇವಲ ನೀಟ್‌ನಲ್ಲಿ ಮಾತ್ರ ಗೆಲುವು ಸಾಧಿಸಿಲ್ಲ; ಪಿಯುಸಿ ಸೈನ್ಸ್ ವಿಭಾಗದಲ್ಲಿ ಶೇ.98ರಷ್ಟು ಅಂಕಗಳನ್ನು ಪಡೆದು ತಮ್ಮ ಬುದ್ಧಿಶಕ್ತಿಯನ್ನು ಈಗಾಗಲೇ ಸಾಬೀತುಪಡಿಸಿದ್ದರು. ಈ ಎರಡು ಸಾಧನೆಗಳು ಅವರನ್ನು ರಾಜ್ಯ ಮತ್ತು ದೇಶಾದ್ಯಂತ ಸುದ್ದಿಯಾಗಿಸಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ದೇವಾ: ಸಂಗೀತ ಲೋಕದ ‘ತೇನಿಸೈ ತೆಂಡ್ರಲ್’

ಅಪಾರ ಶ್ರಮ, ನಿರಂತರ ಅಧ್ಯಯನ ಹಾಗೂ ಸತತ ಪ್ರಯತ್ನಗಳಿಂದ ಸಂಗೀತ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆ ನೀಡಿ, ಭಾರಿ ಜನಪ್ರಿಯತೆ ಗಳಿಸಿದರೂ ಸದಾ ವಿನಯ ಮತ್ತು ಸರಳತೆ ದೇವಾ ಅವರಲ್ಲಿ ಎದ್ದು ಕಾಣುತ್ತಿತ್ತು. ಇಂತಹ...

ಜಿರಳೆ ಪ್ರತಿಕೃತಿ ದಹನದ ನೆಪದಲ್ಲಿ ಯುವ ದನಿಯನ್ನು ಹತ್ತಿಕ್ಕುವ...

ದೆಹಲಿಯ ಪೀತಾಂಪುರದಲ್ಲಿ ಮಂಗಳವಾರ ನಡೆದ ದಸರಾ ಆಚರಣೆಯು ಈ ಬಾರಿ ಧಾರ್ಮಿಕ ಶ್ರದ್ಧೆಗಿಂತ ಹೆಚ್ಚಾಗಿ ಆಡಳಿತಾರೂಢ ಬಿಜೆಪಿ ಸರ್ಕಾರದ ಅಹಂಕಾರ ಮತ್ತು ಯುವಜನ ವಿರೋಧಿ ಮನಸ್ಥಿತಿಯ ನೇರ ಪ್ರದರ್ಶನವಾಗಿ ಮಾರ್ಪಟ್ಟಿತು. ರಾವಣ, ಕುಂಭಕರ್ಣ...

ಪಶ್ಚಿಮ ಪದವೀಧರರ ಕ್ಷೇತ್ರ: ಭದ್ರಕೋಟೆ ಮರುಹಿಡಿಯಲು ಕಾಂಗ್ರೆಸ್ ಯತ್ನ;...

ಪಶ್ಚಿಮ ಪದವೀಧರರ ಕ್ಷೇತ್ರದಿಂದ ವಿಧಾನ ಪರಿಷತ್ ಚುನಾವಣಾ ಕಾವು ಗರಿಗೆದರಿದೆ. ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳ ನಡುವೆ ಜಿದ್ದಾಜಿದ್ದಿಗೆ ವೇದಿಕೆ ಸಜ್ಜಾಗಿದೆ. ಒಂದು ಕಾಲದಲ್ಲಿ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಪಶ್ಚಿಮ ಪದವೀಧರರ ಕ್ಷೇತ್ರವೀಗ ಬಿಜೆಪಿಯ...

ಹಿನ್ನೆಲೆ ಮತ್ತು ಸಂಘರ್ಷ

ಹನುಮನಹಳ್ಳಿ ಗ್ರಾಮದ ಸಾಮಾನ್ಯ ಕುಟುಂಬದಿಂದ ಬಂದ ಪುಟ್ಟರಾಜ ಅವರ ದಿನಚರ್ಯೆ ಸಾಮಾನ್ಯ ವಿದ್ಯಾರ್ಥಿಗಳಂತೆ ಇರಲಿಲ್ಲ. ಬೆಳಿಗ್ಗೆ ಕುರಿ ಮೇಯಿಸುವುದು, ಹೊಲದಲ್ಲಿ ಕೆಲಸ ಮಾಡುವುದು ಮತ್ತು ಮನೆಯ ಜವಾಬ್ದಾರಿಗಳ ನಡುವೆಯೇ ಪುಸ್ತಕಗಳನ್ನು ತೆಗೆದುಕೊಂಡು ಓದುತ್ತಿದ್ದರು. ವಿದ್ಯುತ್ ಸೌಲಭ್ಯ ಇಲ್ಲದ ಕಾರಣ ರಾತ್ರಿ ದೀಪದ ಬೆಳಕಿನಲ್ಲಿ ಅಥವಾ ಸೌರ ದೀಪ, ಟಾರ್ಚ್‌ಗಳ ಸಹಾಯದಿಂದ ಓದುತ್ತಿದ್ದ ದೃಶ್ಯಗಳು ಅನೇಕರಿಗೆ ಪ್ರೇರಣೆಯಾಗಿವೆ.

ʼಬಡವರಿಗೆ ಆರೋಗ್ಯ ಸೇವೆ ಒದಗಿಸಲು ವೈದ್ಯನಾಗಬೇಕುʼ ಎಂಬ ಅಚಲವಾದ ಗುರಿ ಅವರನ್ನು ಎಂದಿಗೂ ಹಿಂದೆ ಸರಿಯದಂತೆ ಮಾಡಿತು. ಕೋಚಿಂಗ್ ಸೆಂಟರ್‌ಗಳಿಗೆ ಹೋಗಲು ಸಾಧ್ಯವಿಲ್ಲದಿದ್ದರೂ, ಸ್ವಯಂ ಅಧ್ಯಯನ, ಉಚಿತ ಆನ್‌ಲೈನ್ ಸಂಪನ್ಮೂಲಗಳು ಮತ್ತು ಶಿಕ್ಷಕರ ಮಾರ್ಗದರ್ಶನದಲ್ಲಿ ಅವರು ತಯಾರಾದರು.

ಕುರಿ ಕಾಯುತ್ತಿರುವುದು

ಪುಟ್ಟರಾಜ ಪ್ರಾಥಮಿಕ ಶಿಕ್ಷಣ ಮುಗಿದದ್ದು ಹನುಮನಹಳ್ಳಿ ಸರ್ಕಾರಿ ಶಾಲೆಯಲ್ಲಿ. ಆ ನಂತರ 6ರಿಂದ 10ನೇ ತರಗತಿವರೆಗೆ ಬೇವೂರಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಓದಿದ ಅವರು, ಪಿಯು ಶಿಕ್ಷಣವನ್ನು ಶ್ರೀರಾಮನಗರದ ವಿದ್ಯಾನಿಕೇತನ ಶಾಲೆಯಲ್ಲಿ ಮುಗಿಸಿದರು. ರಜೆ ಬಂದರೆ ಕುರಿ ಕಾಯುವುದು, ಹೊಲದ ಕೆಲಸ ಮಾಡುವುದು, ಊರುಗಳಲ್ಲಿ ಬೊರ್ ವೆಲ್ ಕೆಟ್ಟರೆ ರಿಪೇರಿ ಮಾಡುವುದು ಪುಟ್ಟರಾಜ ಅವರ ಕಾಯಕ. ಆದರೆ ಪುಟ್ಟರಾಜ ತಮ್ಮ ಕನಸನ್ನು ಎಂದಿಗೂ ಬಿಟ್ಟಿರಲಿಲ್ಲ. ರಾಜ್ಯ ಸಿಇಟಿಯಲ್ಲೂ ಭಾರೀ ಸಾಧನೆ ಮಾಡಿದ್ದು, ಈಗ ನೀಟ್ ಪರೀಕ್ಷೆಯಲ್ಲಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಕುರಿ ಮೇಯಿಸಿ, ಕೆಲಸ ಮಾಡುತ್ತ ಇಂತಹ ಸಾಧನೆ ಹೇಗೆ ಸಾಧ್ಯವಾಯಿತೆಂದು ಸ್ವತಃ ಪುಟ್ಟರಾಜ ಅವರೇ ಈದಿನ.ಕಾಮ್ ಜತೆಗೆ ಮನಬಿಚ್ಚಿ ಮಾತಾಡಿದ್ದಾರೆ.

“ರಜೆ ಬಂದಾಗೆಲ್ಲ ಹೊಲದಲ್ಲಿ ನನ್ನ ತಂದೆ ತಾಯಿಗೆ ಸಹಾಯ ಮಾಡುತ್ತಿದ್ದೆ. ಚಿಕ್ಕಪ್ಪನ ಜತೆ ಕುರಿ ಕಾಯೋಕೆ ಹೋಗ್ತಿದ್ದೆ. ನನಗೆ ಟೀಚರ್ಸ್, ಪೇರೆಂಟ್ಸ್ ತುಂಬಾ ಸಪೋರ್ಟ್ ಮಾಡಿದ್ದಾರೆ. ಇದರಿಂದಾಗಿಯೇ ಎಸ್‌ಟಿ ಕ್ಯಾಟಗರಿಯಲ್ಲಿ 694 ರ‍್ಯಾಂಕ್ ಪಡೆದಿದ್ದು, ಡಾಕ್ಟರ್ ಆಗಬೇಕು ಎಂಬುದು ನನ್ನ ಕನಸು. ನಾನು ವೈದ್ಯನಾಗಿ ಜನರಿಗೆ ಸಹಾಯ ಮಾಡಬೇಕು ಮತ್ತು ನಮ್ಮ ಕುಟುಂಬದಲ್ಲಿ ವೈದ್ಯರಿಲ್ಲ. ನಾನು ವೈದ್ಯನಾಗಿ ಬಡ ಜನರಿಗೆ ಉತ್ತಮ ಚಿಕಿತ್ಸೆ ನೀಡಬೇಕು‌ ಎಂಬುದು ನನ್ನ ಆಸೆ ಮತ್ತು ಕನಸು” ಎಂದು ಪುಟ್ಟರಾಜು ಹೇಳಿದ್ದಾರೆ.

ಮತ್ತೊಂದೆಡೆ, ಪುಟ್ಟರಾಜ ಅವರದ್ದು ಬಡತನದ ಕುಟುಂಬ. ಕೃಷಿಯೇ ಕುಟುಂಬದ ಮೂಲ ಆಧಾರ. ಊರು ಬಿಟ್ಟು ಹೊಲದಲ್ಲೇ ವಾಸವಾಗಿರುವ ಈ ಕುಟುಂಬ ರಾತ್ರಿ ವಿದ್ಯುತ್ ಬೆಳಕನ್ನೇ ನೋಡಿಲ್ಲ. ಕತ್ತಲಲ್ಲಿ ದೀಪದ ಬೆಳಕಿನಲ್ಲಿ ಓದಿದ್ದಾರೆ. ವಸತಿ ಶಾಲೆಯಿಂದ ಮನೆಗೆ ಬಂದಾಗ ಮೊಬೈಲ್ ಟಾರ್ಚ್‌ನಲ್ಲಿ ಸ್ಟಡಿ ಮಾಡಿದ್ದನ್ನು ಕುಟುಂಬ ನೆನೆದು ಭಾವುಕವಾಯಿತು. ಎಷ್ಟೇ ಕಷ್ಟ ಎದುರಾದರೂ ಸರಿ ಓದಿ ಸಾಧಿಸಬೇಕೆಂಬ ಛಲದ ಬೆನ್ನತ್ತಿದ ಪುಟ್ಟರಾಜ ಈಗ ಸಾಧನೆಯ ಶಿಖರ ಏರಿದ್ದು, ಇಡೀ ಕುಟುಂಬಸ್ಥರಿಗೆ ಹೆಮ್ಮೆ ಎನಿಸಿದೆ.

ಈ ಕುರಿತು ಮಾತನಾಡಿರುವ ಪುಟ್ಟರಾಜು ತಂದೆಯವರು ಮಾತನಾಡಿ, “ನನ್ನ ಮಗನ ಸಾಧನೆಗೆ ಬಹಳ ಹೆಮ್ಮೆ ಎನ್ನಿಸುತ್ತದೆ. ಅವನು ಖಾಲಿ ಇದ್ದರೆ ಸುಮ್ಮನೆ ಕೂರುತ್ತಿದ್ದಿಲ್ಲ. ಆರೇಳು ವರ್ಷದವನಿದ್ದಾಗಲೇ ಅವರ ಚಿಕ್ಕಪ್ಪನ ಜತೆ ಕುರಿ ಮೇಯಿಸೋಕೆ ಹೋಗ್ತಿದ್ದ. ಈಗ ಅವನ ಸಾಧನೆ ನೋಡಿ ಇಡೀ ಊರಿನ ಜನರೆಲ್ಲ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ” ಎಂದರು.

ನೀಟ್‌ ಅಭ್ಯರ್ಥಿ ಪುಟ್ಟರಾಜ

ಮತ್ತೊಂದೆಡೆ, ಪುಟ್ಟರಾಜು ಅವರ ಚಿಕ್ಕಪ್ಪ ಸುರೇಶ್ ಮಾತನಾಡಿ, “ಪುಟ್ಟರಾಜು ಯಾವಾಗಲೂ ಸುಮ್ಮನೆ ಕೂರುತ್ತಿರಲಿಲ್ಲ. ದಿನವಿಡೀ ನಮ್ಮ ಜತೆಗೆ ಕುರಿ ಮೇಯಿಸಿ ರಾತ್ರಿ ಬಂದು ಮೊಬೈಲ್ ಟಾರ್ಚ್‌ ಬೆಳಕಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ. ಅದನ್ನೆಲ್ಲ ಈಗ ನೆನೆಸಿಕೊಂಡರೆ ತುಂಬಾ ಖುಷಿಯಾಗುತ್ತದೆ” ಎಂದು ಹರ್ಷ ವ್ಯಕ್ತಪಡಿಸಿದರು.

ಪುಟ್ಟರಾಜ ಅವರ ತಾತ ಸೋಮಲಿಂಗಪ್ಪ ಮಾತನಾಡಿ, “ನಾವು ಏನೇ ಕೆಲಸ ಹೇಳಿದರೂ ಅವನು ತನ್ನ ಕನಸು ಬಿಟ್ಟಿರಲಿಲ್ಲ. ಎಲ್ಲೇ ಹೋದರೂ ಕೈಯಲ್ಲಿ ಬುಕ್ ಹಿಡಿದುಕೊಂಡೇ ಇರುತ್ತಿದ್ದ. ಒಂದು ಎಕರೆ ಹೊಲ ಮಾರಿದರೂ ಚಿಂತೆಯಿಲ್ಲ. ಅವನು ಎಷ್ಟೇ ಓದಿದರೂ ಓದಿಸೋಕೆ ನಾವು ಸಿದ್ಧ” ಎಂದು ಹೇಳಿಕೊಂಡರು.

ಬಡತನದಲ್ಲಿ ಹುಟ್ಟಿ ಬೆಳೆದು, ರಾತ್ರಿ ವಿದ್ಯುತ್ ಬೆಳಕನ್ನೇ ಕಾಣದ ಮನೆಯಲ್ಲಿದ್ದು ಓದಿ ಸಾಧಿಸುವುದು ಸುಮ್ಮನೆ ಅಲ್ಲ. ಟೈಂ ಸಿಕ್ಕರೆ ಪಾರ್ಟಿ, ಮೋಜು ಮಸ್ತಿಯಲ್ಲಿ ತೊಡಗುವ ಯುವ ಪೀಳಿಗೆಗೆ ಈ ಯುವಕನ ಸಾಧನೆ ಮಾದರಿ. ಛಲವಿದ್ದರೆ ಏನು ಬೇಕಾದರೂ ಸಾಧಿಸಬಹುದು, ಎಷ್ಟೇ ಕಷ್ಟವಾದರೂ ಗುರಿ ಮುಟ್ಟಬಹುದು ಎನ್ನುವುದಕ್ಕೆ ಯುವಕ ಪುಟ್ಟರಾಜನ ಯಶೋಗಾಥೆಯೇ ಸಾಕ್ಷಿ. ಇವರ ಯಶೋಗಾಥೆಯಲ್ಲಿ ಕುಟುಂಬದ ಹೋರಾಟ, ತಾಯಿ-ತಂದೆಯ ತ್ಯಾಗ ಹಾಗೂ ಶಿಕ್ಷಕರ ಪಾತ್ರವೂ ಮಹತ್ವದ್ದು.

ಇದನ್ನೂ ಓದಿದ್ದೀರಾ? ಮೈಸೂರು | ಮಳೆ ಕೈ ಕೊಟ್ಟರೂ ಕೈ ಹಿಡಿದ ತಂಬಾಕು ಕೃಷಿ

ಪುಟ್ಟರಾಜ ಅವರು ಉತ್ತಮ ವೈದ್ಯಕೀಯ ಕಾಲೇಜಿನಲ್ಲಿ MBBS ಪೂರ್ಣಗೊಳಿಸಿ, ತಮ್ಮ ಗ್ರಾಮ ಮತ್ತು ಸುತ್ತಮುತ್ತಲಿನ ಬಡವರಿಗೆ ಸೇವೆ ಸಲ್ಲಿಸುವ ಯೋಜನೆ ಹೊಂದಿದ್ದಾರೆ. ಈಗ ಅವರ ಸಾಧನೆಯು ಇತರ ಗ್ರಾಮೀಣ ಯುವಜನರಿಗೆ ʼಏನೂ ಬೇಡ, ಸಾಧಿಸುವ ಛಲವಿದ್ದರೆ ಸಾಕುʼ ಎಂಬ ಸಂದೇಶ ನೀಡುತ್ತಿದೆ. ʼನಮ್ಮ ಸಾಧನೆಗೆ ಬಡತನ ಅಡ್ಡಿಯಲ್ಲ, ಛಲವೇ ಮುಖ್ಯʼ ಎಂಬುದಕ್ಕೆ ಕುರಿ ಮೇಯಿಸುತ್ತಲೇ ಓದಿ ನೀಟ್‌ನಲ್ಲಿ ಉತ್ತಮ ಅಂಕ ಗಳಿಸಿರುವ ಪುಟ್ಟರಾಜ ಅವರ ಬದುಕಿನ ಕ್ಷಣಗಳೇ ಸಾಕ್ಷಿ. ಅವರ ಸಾಧನೆಯು ಇತರರಿಗೆ ಮಾದರಿಯಾಗಿ, ಅನೇಕ ಯುವಜನರು ಓದಿನತ್ತ ಆಕರ್ಷಿತರಾಗುವಂತೆ ಮಾಡುತ್ತಿದೆ.

WhatsApp Image 2026 04 20 at 18.37.37 e1776691850820
ವಿಜಯಕುಮಾರ್ ಎಂ
+ posts

ವಿಜಯನಗರ ಕೋಆರ್ಡಿನೇಟರ್‌

ಪೋಸ್ಟ್ ಹಂಚಿಕೊಳ್ಳಿ:

ವಿಜಯಕುಮಾರ್ ಎಂ
ವಿಜಯಕುಮಾರ್ ಎಂ
ವಿಜಯನಗರ ಕೋಆರ್ಡಿನೇಟರ್‌

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

SIR ವಿರೋಧಿ ಪ್ರತಿಭಟನಾಕಾರರ ವಿರುದ್ಧ ಕ್ರಮ; ಸರ್ಕಾರದ ಧೋರಣೆ ವಿರುದ್ಧ 20 ದೇಶಗಳಲ್ಲಿ ಪ್ರತಿಭಟನೆ

ಭಾರತದಲ್ಲಿ ಮತದಾರರ ಪಟ್ಟಿಯಿಂದ ಕೋಟ್ಯಂತರ ಜನರ ಹೆಸರುಗಳನ್ನು ಕೈಬಿಟ್ಟಿರುವುದು ಹಾಗೂ ಮುಖ್ಯ...

ದೆಹಲಿ ಏರ್‌ಪೋರ್ಟ್‌ನಲ್ಲಿ ಪಂಜಾಬ್ ಸಿಎಂ ಭಗವಂತ್ ಮಾನ್ 3 ಗಂಟೆ ವಶಕ್ಕೆ, 50 ಸಾವಿರ ರೂ.ದಂಡ!

ಪ್ಯಾರಿಸ್‌ನಿಂದ ಹಿಂದಿರುಗುತ್ತಿದ್ದ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರನ್ನು ಭಾನುವಾರ ದೆಹಲಿ...

ಚಾಮರಾಜನಗರದಲ್ಲಿ ಅ.24ರಿಂದ ಅಂತಾರಾಷ್ಟ್ರೀಯ ಬೌದ್ಧ ಮಹಾ ಸಮ್ಮೇಳನ

ಬುದ್ಧನ ಕರುಣೆ, ಸಮಾನತೆ, ಸಹಬಾಳ್ವೆ ಹಾಗೂ ಬಹುತ್ವದ ಸಂದೇಶವನ್ನು ಜನರಿಗೆ ತಲುಪಿಸುವ...

SBI ಮೇಲೆ ಸೈಬರ್ ದಾಳಿ: ಸಾವಿರಾರು ಗ್ರಾಹಕರ ಸೂಕ್ಷ್ಮ ವಿವರ ಡಾರ್ಕ್ ವೆಬ್‌ನಲ್ಲಿ ಬಹಿರಂಗ!

ಭಾರತೀಯ ಸ್ಟೇಟ್ ಬ್ಯಾಂಕ್ (SBI) ಮೇಲೆ ಸೈಬರ್ ದಾಳಿ ನಡೆದಿದ್ದು, ಸುಮಾರು...