ಕೊರಟಗೆರೆ | ಸರ್ಕಾರ ಪತ್ರಕರ್ತರಿಗೆ ಭದ್ರತೆಯನ್ನು ನೀಡಬೇಕಿದೆ : ಚಿ.ನಿ ಪುರುಷೋತ್ತಮ್

Date:

ಪ್ರಜಾಪ್ರಭುತ್ವದಲ್ಲಿ ಪತ್ರಿಕಾರಂಗ 4ನೇ ಅಂಗವಾಗಿ ಕಾರ್ಯನಿರ್ವಹಿಸುತ್ತಿದೆ. ಆದರೆ ಪತ್ರಕರ್ತರಿಗೆ ಮುಖ್ಯವಾಗಿ ಜೀವನಕ್ಕೆ ಭದ್ರತೆ ಇಲ್ಲದಿರುವುದು ವಿಷಾಧನೀಯ ಎಂದು ತುಮಕೂರು ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಚಿ.ನಿ ಪುರುಷೋತ್ತಮ್ ಬೇಸರ ವ್ಯಕ್ತಪಡಿಸಿದರು.

- Advertisement -

ಕೊರಟಗೆರೆ ತಾಲೂಕು ಕಾರ್ಯನಿರತ ಪತ್ರಕರ್ತರ ಕಚೇರಿಯಲ್ಲಿ ಹಿರಿಯ ಪತ್ರಕರ್ತ ಜಿ.ಎಲ್ ಸುರೇಶ್ ಅಕಾಲಿಕ ಮರಣದ ಹಿನ್ನೆಲೆ ಆಯೋಜಿಸಲಾದ ಸಂತಾಪ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ರಾಜ್ಯದಲ್ಲಿ ಯಾವುದೇ ಸರ್ಕಾರ ಬರಲಿ ಪತ್ರಕರ್ತರಿಗೆ ಮಾತ್ರ ಭದ್ರತೆ ಸಿಗುತ್ತಿಲ್ಲ. ಗ್ರಾಮೀಣ ಭಾಗದ ಪತ್ರಕರ್ತರು ವೃತ್ತಿಯನ್ನೇ ನಂಬಿ ಜೀವನ ನಡೆಸುತ್ತಿದ್ದಾರೆ. ಯಾರು ಸಹ ಪತ್ರಕರ್ತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಸರ್ಕಾರಕ್ಕೆ ಪತ್ರಕರ್ತರು ಕೇಳಿದ ಯಾವುದೇ ಬೇಡಿಕೆ ಈಡೇರಿಲ್ಲ ಎಂದು ಹೇಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಪತ್ರಕರ್ತರಿಗೆ ಆರೋಗ್ಯದಲ್ಲಿ ಏರುಪೇರು ಉಂಟಾದರೆ ಪತ್ರಕರ್ತರೇ ನೋಡಿಕೊಳ್ಳುತ್ತಿದ್ದೇವೆ. ರಾಜ್ಯದಲ್ಲಿ ಯಾವುದೇ ಪತ್ರಕರ್ತರು ನಿಧನ ಅಥವಾ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಸಹಕಾರಕ್ಕೆ ಸರ್ಕಾರ ನಿಲ್ಲಬೇಕಿದೆ. ಇತ್ತೀಚಿಗೆ ಕೊರಟಗೆರೆ ಹಿರಿಯ ಪತ್ರಕರ್ತ ಜಿ.ಎಲ್ ಸುರೇಶ್ ಅನಾರೋಗ್ಯಕ್ಕೆ ತುತ್ತಾಗಿರುವುದು ನಿಜಕ್ಕೂ ಶೋಚನೀಯ ಇದರಿಂದ ಸಂಘಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಕುಟುಂಬಕ್ಕೆ ದುಃಖ ಬರಿಸುವಂತಹ ಶಕ್ತಿ ನೀಡಲಿ ಎಂದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಇ ರಘುರಾಮ್ ಮಾತನಾಡಿ, ಪತ್ರಕರ್ತರ ಬದುಕು ಭದ್ರತೆಯಿಲ್ಲದ ಜೀವನ. ಆಗಾಗಿ ಪತ್ರಕರ್ತರು ವೃತ್ತಿಯ ಜೊತೆಗೆ ಆದಷ್ಟು ಆರೋಗ್ಯದ ಕಡೆ ಹೆಚ್ಚಿನ ನಿಗಾವಹಿಸಬೇಕಿದೆ. ಸರ್ಕಾರದಲ್ಲಿ ಪತ್ರಕರ್ತರ ಭದ್ರತೆಗಾಗಿ ಹಲವಾರು ಬೇಡಿಕೆಗಳನ್ನು ಇಟ್ಟಿದ್ದೇವು, ಅದು ಬೇಡಿಕೆಗಷ್ಟೆ ಸೀಮಿತವಾಗಿದೆ. ಕೂಡಲೇ ಸರ್ಕಾರ ಪತ್ರಕರ್ತರ ಜೀವನಕ್ಕೆ ಭದ್ರತೆ ನೀಡಬೇಕು. ಹಿರಿಯ ವಯಸ್ಸಿನಲ್ಲಿಯೂ ಜಿ.ಎಲ್ ಸುರೇಶ್‌ರವರು ಪತ್ರಿಕೆ ವಿತರಣೆಯ ಜೊತೆಗೆ ವರದಿಗಾರರಾಗಿಯು ಪತ್ರಿಕಾರಂಗಕ್ಕೆ ಸೇವೆ ಸಲ್ಲಿಸಿದ್ದು ಇವರು ನಿಧನದಿಂದ ಸಂಘಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಹೇಳಿದರು.

ತಾ. ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ವಿ ಪುರುಷೋತ್ತಮ್ ಮಾತನಾಡಿ, ಪರ್ತಕರ್ತರ ಜೀವನ ನಿಜಕ್ಕೂ ಕಷ್ಟಕರ. ಪತ್ರಕರ್ತರು ಎಷ್ಟೇ ಒತ್ತಡದಲ್ಲಿದರೂ ವೃತ್ತಿಯಲ್ಲಿ ಪ್ರಮಾಣಿಕ ಸೇವೆ ಸಲ್ಲಿಸುತ್ತಿದೆ. ನನ್ನ ಪತ್ರಿಕಾ ವೃತ್ತಿ ಜೀವನದಲ್ಲಿ ಸರ್ಕಾರದಿಂದ ಈವೆರಗೂ ಯಾವುದೇ ಭದ್ರತಾ ಸೌಲಭ್ಯ ಸಿಕ್ಕಿಲ್ಲ. ಪತ್ರಕರ್ತರು ಇತ್ತೀಚಿಗೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದು ಪತ್ರಕರ್ತರಿಗೆ ಸರ್ಕಾರದ ಭದ್ರತಾ ಸೌಲಭ್ಯ ಅವಶ್ಯಕವಾಗಿದೆ. ಹಿರಿಯ ಪತ್ರಕರ್ತರಾದ ಜಿ.ಎಲ್ ಸುರೇಶ್ ಸಂಘದ ಪ್ರತಿಯೊಬ್ಬರ ಜೊತೆಯೂ ವಿನಯದಿಂದಲೇ ನಡೆದುಕೊಳ್ಳುತ್ತಿದ್ದರು., ಅಕಾಲಿಕ ಮರಣವೊಂದಿ ಇಂದು ಅವರು ನಮ್ಮೊಂದಿಗೆ ಇಲ್ಲ ಎಂದು ವಿಷಾದವನ್ನು ವ್ಯಕ್ತಪಡಿಸಿದರು.

ತುಮಕೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ತಾಲೂಕು ಪತ್ರಕರ್ತರ ಸಂಘವು ಪರ್ತಕರ್ತ ಜಿ.ಎಲ್ ಸುರೇಶ್ ನಿಧನದ ಹಿನ್ನೆಲೆ ಸಂತಾಪ ಸೂಚಿಸಿ ಸಂಕಷ್ಟದ ಸಿಲುಕಿದ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡಲಾಯಿತು.

ಈ ಸಂದರ್ಭದಲ್ಲಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಸಿದ್ದಲಿಂಗಸ್ವಾಮಿ, ಕಾರ್ಯದರ್ಶಿ ರಂಗಧಾಮಯ್ಯ, ಜಿಲ್ಲಾ ನಿರ್ದೇಶಕರಾದ ಎನ್.ಮೂರ್ತಿ, ಯಶಸ್ ಕೆ.ಪದ್ಮನಾಬ್, ಹೆಚ್.ಎಸ್ ಪರಮೇಶ್, ರವೀಂದ್ರ, ಉಪಾಧ್ಯಕ್ಷ ಎಚ್.ಎನ್ ನಾಗರಾಜು, ಹಿರಿಯ ಪರ್ತಕರ್ತರಾದ ಎನ್.ಪದ್ಮನಾಬ್, ಸೊಗಡು ಶ್ರೀನಿವಾಸ್, ಉಮಾಶಂಕರ್, ರಮೇಶ್, ಡಿ.ಎಂ ರಾಘವೇಂದ್ರ, ಕಾರ್ಯದರ್ಶಿ ಸತೀಶ್, ಖಚಾಂಚಿ ಕೆ.ಬಿ ಲೋಕೇಶ್, ನಿರ್ದೇಶಕರಾದ ದೇವರಾಜ್, ಹರೀಶ್‌ಬಾಬು, ಮಂಜುನಾಥ್, ನರಸಿಂಹಮೂರ್ತಿ, ವಿಜಯ್‌ಶಂಕರ್, ಲಕ್ಷ್ಮೀಕಾಂತ, ಲಕ್ಷ್ಮೀಶ್, ಮಂಜುಸ್ವಾಮಿ, ಸತೀಶ್, ಮುತ್ತುರಾಜು, ಬಾಬುಖಾನ್ ಸೇರಿದಂತೆ ಇತರರು ಇದ್ದರು.

WhatsApp Image 2025 11 17 at 3.21.38 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ದೇವಸ್ಥಾನ ಕಟ್ಟೆ ಮೇಲೆ ಕುಳಿತಿದ್ದಕ್ಕೆ ಹಲ್ಲೆ ಅರೋಪ: ಐವರ ವಿರುದ್ಧ ಪ್ರಕರಣ ದಾಖಲು

ಲಿಂಗಸುಗೂರು ತಾಲೂಕಿನ ಈಚನಾಳ ಗ್ರಾಮದಲ್ಲಿ ಗದ್ದೆಮ್ಮ ದೇವಸ್ಥಾನದ ಕಟ್ಟೆ ಮೇಲೆ ಕುಳಿತಿದ್ದ...

ಸಕಲೇಶಪುರ | 25 ವರ್ಷ ನೆನಗುದಿಗೆ ಬಿದ್ದಿದ್ದ ಆಟೋ ನಿಲ್ದಾಣ ನಿರ್ಮಾಣ 

ಹಾಸನ ಜಿಲ್ಲೆ ಸಕಲೇಶಪುರ ಪಟ್ಟಣದ ಹಳೆ ಬಸ್ ನಿಲ್ದಾಣದ ಸಮೀಪ ಸ್ಥಳೀಯ...

ಕಾರವಾರ | ಗ್ರಾಮ ಆಡಳಿತ ಅಧಿಕಾರಿ ಪರೀಕ್ಷೆ ಸುಸೂತ್ರ: ಒಟ್ಟು 11,671 ಅಭ್ಯರ್ಥಿಗಳು ಹಾಜರು

ಕಾರವಾರ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ವತಿಯಿಂದ ಕಂದಾಯ ಇಲಾಖೆಯ ಗ್ರಾಮ...

ಹಾಸನ | ₹426 ಕೋಟಿ; ಹಾಸನ-ಬೇಲೂರು ಚತುಷ್ಪಥ ರಸ್ತೆ ಅಭಿವೃದ್ಧಿ ಯೋಜನೆ; ಸಂಸದ ಶ್ರೇಯಸ್ ಪಟೇಲ್ 

ಹಾಸನ ನಗರದಲ್ಲಿ ಸುದ್ದಿಗಾರರೊಂದಿಗೆ ಸಂಸದ ಶ್ರೇಯಸ್ ಪಟೇಲ್ ಮಾತನಾಡಿ, ಹಾಸನ -...